Thursday, September 8, 2016

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

     ಸೋಮವಾರಪೇಟೆ ತಾಲೂಕು ಮಲ್ಲೂರು ಗ್ರಾಮದ ನಿವಾಸಿ ನೀಲಕಂಠೇಶ್ ಎಂಬವರು ದಿನಾಂಕ 07/09/16 ರಂದು ಬೆಳಿಗ್ಗೆ 8;30 ಗಂಟೆಗೆ ಮಂತ್ರಾಲಯ ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದು ಕುಶಾಲನಗರ ಪರಂಪರ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಮಾನಸಿಕ ಬೇಸರದಿಂದ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಅವರ ಪತ್ನಿ ಶ್ರೀಮತಿ ವಿನೋದ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಜೂಜು ಪ್ರಕರಣ ದಾಖಲು:

     ಕುಶಾಲನಗರ ಗ್ರಾಮಾಂತರ ಠಾಣಾ ಪಿ.ಎಸ್.ಐ. ಜೆ.ಇ. ಮಹೇಶ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ ದಿನಾಂಕ 7-9-2016 ರಂದು ಮಲ್ಲೇನಹಳ್ಳಿ ಗ್ರಾಮದಲ್ಲಿ ಸಿಬ್ಬಂದಿಯೊಂದಿಗೆ ಸುಮಾರು 7 ಮಂದಿ ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿದ್ದರವರ ಮೇಲೆ ದಾಳಿ ನಡೆಸಿ, ಜೂಜಾಟಕ್ಕೆ ಬಳಸಿದ ರೂ.950/- ಗಳನ್ನು ಹಾಗು ಜೂಟಾಟಕ್ಕೆ ಉಪಯೋಗಿಸಿದ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಟೋ ರಿಕ್ಷಾ ಅವಘಡ:

     ದಿನಾಂಕ 7-9-2016 ರಂದು ಪಿರ್ಯಾದಿ ಬಸವನತ್ತೂರು ಗ್ರಾಮದ ನಿವಾಸಿ ಜಯಣ್ಣ ಎಂಬವರು ದೇವರಾಜು ಎಂಬುವವರೊಂದಿಗೆ ಬಸವನತ್ತೂರು ಗ್ರಾಮದ ಆನೆಕೆರೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಕೆ.ಎ.12-9680 ರ ಆಟೊವನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಅವಘಡಕ್ಕೀಡಾಗಿ ಸದರಿ ಆಟೋ ಜಖಂ ಗೊಂಡಿದ್ದು, ಈ ಸಂಬಂಧ ಫಿರ್ಯಾದಿ ಜಯಣ್ಣನವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಶ್ರೀಗಂಧದ  ಮರ ಕಳ್ಳತನಕ್ಕೆ ಯತ್ನ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬೊಳ್ಳೂರು ಗ್ರಾಮದಲ್ಲಿ ದಿನಾಂಕ 7-9-2016 ರಂದು ನಾಲ್ಕು ಮಂದಿ ಆರೋಪಿಗಳು ಗುಡ್ಡೆಹೊಸೂರು ಗ್ರಾಮದ ನಿವಾಸಿ ಫಿರ್ಯಾದಿ ಸಿ.ಆರ್. ವಿನೋದ್ ಎಂಬವರ ಬಾಪ್ತು ತೋಟದಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಕುಯ್ಯಲು ಯತ್ನಿಸುತ್ತಿದ್ದಾಗ ಸದರಿ ಆರೋಪಿಗಳನ್ನು ಫಿರ್ಯಾದಿ ಸಿ.ಆರ್. ವಿನೋದ್ ಹಾಗು ಸಂಗಡಿಗರು ಸೇರಿ ಅವರುಗಳನ್ನು ಹಿಡಿದು ಕುಶಾಲನಗರ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಆಟೋಗೆ ಕಾರು ಡಿಕ್ಕಿ ಬಾಲಕಿ ಸಾವು:

     ಗೋಣಿಕೊಪ್ಪ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ನಿವಾಸಿ ಶ್ರೀಮತಿ ಶೃತಿರವರು ದಿನಾಂಕ 7-9-2016 ರಂದು ಬೆಳಿಗ್ಗೆ 8-30 ಗಂಟೆಗೆ ತಮ್ಮ ತಾಯಿ ಲಕ್ಷ್ಮಿ ಹಾಗೂ ಮಗಳು ಐಶ್ವರ್ಯರವರೊಂದಿಗೆ ಗೋಣಿಕೊಪ್ಪದಲ್ಲಿರುವ ಪ್ಲೇ ಹೋಂಗೆ ಮಗಳನ್ನು ಬಿಟ್ಟು ಕೂಲಿಕೆಲಸಕ್ಕೆ ಹೋಗಲು ಹಾತೂರು ಕಡೆಯಿಂದ ಬಂದ ಆಟೋ ರಿಕ್ಷಾದಲ್ಲಿ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಬಿಳಿ ಬಣ್ಣದ ಕೆಎಲ್ 13 ಆರ್ 5314 ರ ಕಾರಿನ ಚಾಲಕ ಸದರಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿ ಚಾಲಿಸಿಕೊಂಡು ಬಂದು ಫಿರ್ಯಾದಿ ಶ್ರೀಮತಿ ಶೃತಿಯವರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ನಂ ಕೆಎ 12 ಬಿ 3081 ಗೆ ಡಿಕ್ಕಿ ಪಡಿಸಿದ್ದರಿಂದ ಆಟೋ ರಿಕ್ಷಾ ಜಖಂಗೊಂಡು ಫಿರ್ಯಾದಿಯವರು ಮಗಳಾದ ಐಶ್ವರ್ಯಳು ತೀವ್ರವಾಗಿ ಗಾಯಗೊಂಡಿದ್ದು ಆಕೆಯನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ್ಗೆ ಆಕೆಯು ಮೃತಪಟ್ಟಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.