Thursday, September 15, 2016

ಹಣದ ವಿಚಾರದಲ್ಲಿ ವಂಚನೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಗದ್ದೆಹಳ್ಳ ಗ್ರಾಮದ ನಿವಾಸಿ ಶ್ರೀಮತಿ ಕಮುರುನ್ನಿಸಾ ರವರು ಹಣದ ಅವಶ್ಯಕತೆ ಇದ್ದುದರಿಂದ ದಿನಾಂಕ 28.05.2016ರ ಹಿಂದಿನ ದಿನಗಳಲ್ಲಿ ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಶ್ರೀಮತಿ ಹೇಮಾವತಿ ಎಂಬವರಿಂದ ರೂ.1,00,000 ಗಳನ್ನು ಪಡೆದುಕೊಂಡಿದ್ದು ಆ ವೇಳೆ ಒಟ್ಟು 9 ಸಹಿಮಾಡಿದ ಖಾಲಿ ಚೆಕ್ ಗಳನ್ನು ಸದರಿಯವರಿಗೆ ನೀಡಿದ್ದು , ಪಿರ್ಯಾದಿ ಶ್ರೀಮತಿ ಕಮುರುನ್ನಿಸಾ ತಾನು ಪಡೆದ ಬಡ್ಡಿಸಮೇತವಾಗಿ ಶ್ರೀಮತಿ ಹೇಮಾವತಿಯವರಿಗೆ ಹಣವನ್ನು ಹಿಂತಿರುಗಿಸಿದ್ದು, ಫಿರ್ಯಾದಿಯವರು ಹಣ ಪಡೆಯುವ ಸಂದರ್ಭದಲ್ಲಿ ನೀಡಿದ ಚೆಕ್ ಗಳನ್ನು ಫಿರ್ಯಾದಿಗೆ ನೀಡದೇ ಶ್ರೀಮತಿ ಹೇಮಾವತಿಯರು ಇನ್ನು 4 ಮಂದಿಯೊಂದಿಗೆ ಸೇರಿ ಚೆಕ್ ಗಳನ್ನು ಬ್ಯಾಂಕ್ ಗೆ ನೀಡಿ ಬೌನ್ಸ್ ಮಾಡಿ ಪಿರ್ಯಾದಿಯ ಮೇಲೆ ಅಪವಾದ ಹೊರಿಸಿದ್ದಲ್ಲದೆ ಪಿರ್ಯಾದಿಯವರ ಒಪ್ಪಂದ ಪತ್ರಕ್ಕೆ ವಿರುದ್ದವಾಗಿ ವರ್ತಿಸಿ ಮೋಸ ಮಾಡಿರುವುದಾಗಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಮೇರೆಗೆ ಮಾನ್ಯ ನ್ಯಾಯಾಲಯದ ನಿರ್ದೇಶನದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಜೂಜು ಪೊಲೀಸ್ ದಾಳಿ:

    ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ರವರು ದಿನಾಂಕ 14/09/2016 ರಂದು ಹಗಲು ರೌಂಡ್ಸ್ ಕರ್ತವ್ಯದಲ್ಲಿರುವಾಗ್ಗೆ ಕೂಡ್ಲೂರು ಗ್ರಾಮದ ಪ್ರೌಡಶಾಲೆಯ ಹಿಂಭಾಗ ಮೈದಾನದಲ್ಲಿ ಇಸ್ಪಿಟು ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಕೂಡ್ಲೂರು ಗ್ರಾಮದ ಪ್ರೌಡಶಾಲೆಯ ಹಿಂಭಾಗ ಮೈದಾನಕ್ಕೆ ದಾಳಿ ಮಾಡಿ 8 ಜನರು ಅಕ್ರಮವಾಗಿ ಇಸ್ಪೀಟು ಎಲೆಗಳನ್ನು ಬಳಸಿ ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿದ್ದುದನ್ನು ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ಸಾಮಾಗ್ರಿಗಳನ್ನು ಮತ್ತು ನಗದು ರೂ.3,700/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ ಬೈಕ್ ಸವಾರನ ದುರ್ಮರಣ:

    ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಜೆ. ಗವಿಸ್ವಾಮಿ ಎಂಬವರು ದಿನಾಂಕ 14-9-2016 ರಂದು 16-30 ಗಂಟೆಗೆ ಅವರ ಸ್ನೇಹಿತ ಬಸವರಾಜು ರವರೊಂದಿಗೆ ಬೈಕ್ ನಂಬರ್ ಕೆಎ-45-ಯು-8535 ರ ಬಜಾಜ್ ಡಿಸ್ಕವರ್ ನಲ್ಲಿ ಸ್ನೇಹಿತ ಪೆರಂಬಾಡಿಯ ಪ್ರಕಾಶ್ ರವರ ಮನೆಗೆ ಹೋಗಿ ಓಣಂ ಹಬ್ಬ ಮುಗಿಸಿಕೊಂಡು ಅದೇ ಬೈಕಿನಲ್ಲಿ ವಾಪಾಸ್ಸು ವಿರಾಜಪೇಟೆಗೆ ಕಡೆಗೆ ಬರುತ್ತಿರುವಾಗ್ಗೆ, ಪೆರಂಬಾಡಿ ಸೇತುವೆಯ ಪಕ್ಕ ಬಸವರಾಜು ರವರು ಬೈಕನ್ನು ಚಾಲಿಸಿಕೊಂಡು ಬರುತ್ತಿದ್ದಾಗ, ಎದುರುಗಡೆಯಿಂದ ಆಟೋ ರಿಕ್ಷಾ ನಂಬರ್ ಕೆಎ-12-ಬಿ-1887 ರ ಚಾಲಕ ಕೇಶವ ಎಂಬುವರು ಆಟೋವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಓಡಿಸಿಕೊಂಡು ಬಂದು ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ ಬಸವರಾಜು ರವರು ಗಾಬರಿಯಿಂದ ದಿಡೀರನೇ ಬೈಕ್ ಗೆ ಬ್ರೇಕ್ ಹಾಕಿ ನಿಲ್ಲಿಸಲು ಪ್ರಯತ್ನಿಸಿದಾಗ ಬೈಕ್ ಆಯಾ ತಪ್ಪಿ ರಸ್ತೆ ಬಿದ್ದ ಪರಿಣಾಮ ಫಿರ್ಯಾದು ಗವಿಸ್ವಾಮಿಯವರಿಗೆ ಗಾಯವಾಗಿದ್ದು ಬೈಕ್ ಸವಾರ ಬಸವರಾಜುರವರ ತಲೆಗೆ, ಮುಖಕ್ಕೆ ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.