Wednesday, September 7, 2016

ಅಕ್ರಮ ಜೂಜು ಪ್ರಕರಣ ದಾಖಲು:

     ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಪರಶಿವ ಮೂರ್ತಿಯವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ 7-9-2016 ರಂದು ಸದರಿಯವರು ಸಿಬ್ಬಂದಿಗಳೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ಚಿಕ್ಕಕೊಳತ್ತೂರು ಗ್ರಾಮದ ಸಿ.ಎನ್. ಬೆಳ್ಳಿಯಪ್ಪ ರವರ ಮನೆಯ ಪಕ್ಕದ ಗಣಪತಿ ಪೆಂಡಾಲ್ ನ ಮುಂಭಾಗದಲ್ಲಿ ಐದಾರು ಜನರು ಅಕ್ರಮವಾಗಿ ಅಂದರ್ ಬಹಾರ್ ಜೂಜಾಡುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಗಳು ಹಾಗೂ ಜೂಜಾಟವಾಡಲು ಪಣವಾಗಿ ಇಟ್ಟುಕೊಂಡಿದ್ದ ರೂ 14,260/- ನಗದು ಹಣ, ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಮುಂದಿನ ಕ್ರಮ ಮೈಗೊಂಡಿದ್ದಾರೆ.