Thursday, September 1, 2016

ಬಸ್ ಡಿಕ್ಕಿ ಸ್ಕೂಟಿ ಸವಾರ ಸಾವು:
     ಬಸ್ಸು ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಸವಾರ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೋಕು ಕೊಪ್ಪ ಗ್ರಾಮದ ನಿವಾಸಿ ಪ್ರಭು@ ಪಳಂಗಪ್ಪ ಎಂಬವರು ದಿನಾಂಕ 28-8-2016 ರಂದು ತಮ್ಮ ಸ್ಕೂಟಿಯಲ್ಲಿ ಕುಶಾಲನಗರದಿಂದ ಕೊಪ್ಪ ಕಡೆ ಹೋಗುತ್ತಿದ್ದಾಗ ಕುಶಾಲನಗರ ಪಟ್ಟಣಕಡೆಗೆ ಹೋಗುತ್ತಿದ್ದ ಬಸ್ಸೊಂದು ಡಿಕ್ಕಿ ಯಾದ ಪರಿಣಾಮ ಪ್ರಭುರವರು ಗಾಯಗೊಂಡಿದ್ದು, ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಬಗ್ಗೆ ಮೈಸೈರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸದರಿಯವರು ದಿನಾಂಕ 31-8-2016 ರಂದು ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಜೂಜು, ಪ್ರಕರಣ ದಾಖಲು:

     ಕುಶಾಲನಗರ ಠಾಣಾ ಉಪ ನಿರೀಕ್ಷಕರಾದ ಶ್ರೀ ಜಗದೀಶ್ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ 39-8-2016 ರಂದು ರಾತ್ರಿ 12.15 ಗಂಟೆಗೆ ಸಿಬ್ಬಂದಿಯೊಂದಿಗೆ ಕುಶಾಲನಗರ ಪಟ್ಟಣದ ಪ್ರೆಸ್ಟೀಜ್ ಹೋಟೇಲ್ ಹತ್ತಿರ ದಾಳಿ ಮಾಡಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಿದ್ದ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಅಕ್ರಮ ಗಾಂಜಾ ವಶ:

     ಕುಶಾಲನಗರ ಠಾಣಾಧಿಕಾರಿಯಾದ ಶ್ರೀ ಜಗದೀಶ್ ರವರಿಗೆ ದೊರೆತ ಖಚಿತ ಮಾಹಿತಿ ಆದಾರದ ಮೇರೆಗೆ ದಿನಾಂಕ 31-8-2016 ರಂದು ಬೆಳಗ್ಗೆ 10-45 ಗಂಟೆಗೆ ಸಿಬ್ಬಂದಿಯೊಂದಿಗೆ ಕುಶಾಲನಗರ ಠಾಣಾ ಸರಹದ್ದಿನ ಮಾದಪಟ್ಟಣ ಗ್ರಾಮದ ಸರಕಾರಿ ಪಾಲಿಟಿಕ್ನಿಕ್ ಕಾಲೇಜಿನ ಗೇಟಿನ ಬಳಿ ಹೋಗಿ ಸದರಿ ಗೇಟಿನ ಮುಂಬಾಗದಲ್ಲಿರುವ ಸುಲೈಮಾನ್ ಎಂಬ ವ್ಯಕ್ತಿಯ ಪಾನ್ ಬೀಡಾ ಅಂಗಡಿಯ ಪಕ್ಕದ ಖಾಲಿ ಜಾಗದಲ್ಲಿ ಮೂರು ಜನ ವ್ಯಕ್ತಿಗಳು ನಿಂತಿದ್ದು ಅವರುಗಳನ್ನು ಸುತ್ತುವರೆದು ಪರಿಶೀಲಿಸಾಗಿ ಅಭಿಷೇಕ್.ಜಿ ಎಂಬವರಲ್ಲಿ 50 ಗ್ರಾಂ ಗಾಂಜಾಸೊಪ್ಪು, ಜಾಕ್ಸನ್.ಕೆ.ಜೆ. ಎಂಬವರ ಬಳಿ 100 ಗ್ರಾಂ ಮತ್ತು ಭರತ್.ಬಿ. ಎಂಬ ವ್ಯಕ್ತಿಯ ಬಳಿ 50 ಗ್ರಾಂ ಗಾಂಜಾ ಸೊಪ್ಪು ಇರುವುದು ಕಂಡುಬಂದಿದ್ದು ಅಲ್ಲದೆ ಸದರಿ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸದರಿ ವ್ಯಕ್ತಿಗಳು ಇಟ್ಟುಕೊಂಡಿದ್ದು ಕಂಡುಬಂದಿದ್ದು, ಸದರಿ ಗಾಂಜಾ ಸೊಪ್ಪನ್ನು ಹಾಗು ವ್ಯಕ್ತಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಗೆ ಮಾರುತಿ ವ್ಯಾನ್ ಡಿಕ್ಕಿ:

     ದಿನಾಂಕ 31.08.2016 ರಂದು ಸಮಯ 06:15 ಗಂಟೆಗೆ ಫಿರ್ಯಾದಿ ಬಿ.ಪಿ. ದಿನೇಶ್ ಮತ್ತು ರಕ್ಷಿತ್ ಎಂಬವರು ಮೋಟಾರ್ ಸೈಕಲ್ ನಂ ಕೆಎ12 ಎಲ್ 0654 ರಲ್ಲಿ ಶನಿವಾರಸಂತೆ ಕಡೆಯಿಂದ ಕುಶಾಲನಗರದ ಕಡೆಗೆ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಬಾಣಾವಾರ ಜಂಕ್ಷನ್ ತಲುಪಿದಾಗ ಸೋಮವಾರಪೇಟೆ ಕಡೆಯಿಂದ ಕೊಣನೂರು ಕಡೆಗೆ ಬರುತ್ತಿದ್ದ ಮಾರುತಿ ಓಮಿನಿ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿ ದಿನೇಶ್ ಮತ್ತು ರಕ್ಷಿತ್ ರವರಿಗೆ ರಕ್ತಗಾಯಗಳಾಗಿದ್ದು, ಸೋಮವಾರಪೇಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಕೂಟಿಗೆ ಜೀಪು ಡಿಕ್ಕಿ, ಇಬ್ಬರಿಗೆ ಗಾಯ:

    ವಿರಾಜಪೇಟೆ ತಾಲೋಕು ಬಾಳುಗೋಡು ಗ್ರಾಮದ ನಿವಾಸಿ ಎಲ್. ರಾಮು ಎಂಬವರು ದಿನಾಂಕ 31-08-2016 ರಂದು ಸ್ಕೂಟಿಯಲ್ಲಿ ಪ್ರತಾಪ್ ಎಂಬವರನ್ನು ಕೂರಿಸಿಕೊಂಡು ವಿರಾಜಪೇಟೆಯಿಂದ ಪೆರಂಬಾಡಿ ಕಡೆ ಹೋಗುತ್ತಿರುವಾಗ್ಗೆ ಸಮಯ 7-45 ಪಿ.ಎಂ.ಗೆ ಆರ್ಜಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆ.ಎ.21-739 ರ ಜೀಪು ಚಾಲಕನು ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿ ಎಲ್. ರಾಮು ಹಾಗೂ ಹಿಂಬದಿ ಸವಾರ ಪ್ರತಾಪ್ ರಸ್ತೆಯ ಮೇಲೆ ಬಿದ್ದು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.