Tuesday, September 13, 2016

ಪಾದಚಾರಿಗೆ ಬೈಕ್ ಡಿಕ್ಕಿ:     ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕೊಂದು ಡಿಕ್ಕಿಯಾಗಿ ಸದರಿ ವ್ಯಕ್ತಿ ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ತಾಲೋಕು ಮುರ್ನಾಡು ನಿವಾಸಿ ಪಿ.ಎಂ. ಮೋಹನ್ ರವರು ದಿನಾಂಕ 12-9-2016 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಮುರ್ನಾಡು ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಶಾಂತ್ ಎಂಬ ವ್ಯಕ್ತಿ ಮೋಟಾರ್ ಸೈಕಲ್ ನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿಪಡಿಸಿದ ಪರಿಣಾಮ ಪಿ.ಎಂ. ಮೋಹನ್ ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ:


      ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ವಳಗುಂದ ಗ್ರಾಮದ ನಿವಾಸಿ ಜೇನುಕುರುಬರ ರಾಜು ಎಂಬವರ ಪತ್ನಿ 60 ವರ್ಷದ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-9-2016 ರಂದು ವಳಗುಂದ ಗ್ರಾಮದಲ್ಲಿ ಒಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಬಸ್ ಚಾಲಕನ ಮೇಲೆ ಹಲ್ಲೆ:

     ವಾಹನ ಹೋಗುವ ದಾರಿಯ ವಿಚಾರದಲ್ಲಿ ಕೆಎಸ್ಆರ್ ಟಿಸಿ ಬಸ್ ಚಾಲಕನ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಕರ್ವವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ದೂರು ದಾಖಲಾಗಿದೆ. ಡಿ.ಎ. ವೆಂಕಟೇಶ್ ಎಂಬವರು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಚಾಲಕನಾಗಿದ್ದು ದಿನಾಂಕ 12-9-2016 ರಂದು ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಬಸ್ಸನ್ನು ಚಾಲಿಸಿಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ಎದುರುಗಡೆಯಿಂದ ಕಾರಿನಲ್ಲಿ ಬಂದು ಬಸ್ ನ್ನು ತಡೆದು ನಿಲ್ಲಿಸಿ ದಾರಿಗಾಗಿ ಜಗಳ ಮಾಡಿದ್ದು, ನಂತರ ಸಮಯ 16-30 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಬಂದು ಫಿರ್ಯಾದಿ ಡಿ.ಎ. ವೆಂಕಟೇಶ್ ರವರ ಮೇಲೆ ಹಲ್ಲೆ ಮಾಡಿ ಕರ್ವವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.