Saturday, September 17, 2016


ಮಹಿಳೆಗೆ ಬೈಕ್ ಡಿಕ್ಕಿ, ಗಾಯ:

     ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕೊಂಡಿ ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ. ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಶ್ರೀಮತಿ ಗೌರಿ ಎಂಬವರು ದಿನಾಂಕ 17-09-2016 ರಂದು ಸಮಯ ಬೆಳಿಗ್ಗೆ 09.00 ಗಂಟೆಗೆ ಯಡೂರು ಶಾಲೆಯ ಹತ್ತಿರ ನಡೆದುಕೊಂಡು ಕೆಲಸಕ್ಕೆ ಹೋಗುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಕ್ಯೂ- 8038 ರ ಮೋಟಾರ್ ಸೈಕಲ್ ಸವಾರ ಸದರಿ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಶ್ರೀಮತಿ ಗೌರಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೌರಿಯವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ವರದಿಯಾಗಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ದೇವರಪುರ ಗ್ರಾಮದಲ್ಲಿರುವ ಹೊಸಳ್ಳಿ ಟಾಟಾ ಎಸ್ಟೇಟ್ ನಲ್ಲಿ ವಾಸವಾಗಿರುವ ಶ್ರೀಮತಿ ಅಮಲ ಎಂಬವರ ಗಂಡ ಸುಂದರ್ ರಾಜ್ (38) ಎಂಬವರು ಕೆಲವು ಸಮಯದಿಂದ ಬದ್ದಿ ಭ್ರಮಣೆಗೊಂಡು ಆಗಿಂದಾಗ್ಗೆ ಯಾರಿಗೂ ಹೇಳದೆ ಮನೆಯಿಂದ ಹೊರಗಡೆ ಹೋಗಿ ವಾಪಾಸ್ಸು ಬರುತ್ತಿದ್ದು ಹಾಗೆಯೇ ದಿನಾಂಕ 14-9-2016 ರಂದು ಸದರಿ ವ್ಯಕ್ತಿ ಮನೆಯಿಂದ ಹೋಗಿದ್ದು ಮತ್ತೆ ಹಿಂತಿರುಗಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.