Wednesday, September 21, 2016


ಅಕ್ರಮ ಮರಳು ಸಾಗಾಟ, 6 ಲಾರಿಗಳು ಪೊಲೀಸ್ ವಶಕ್ಕೆ:


     ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಶ್ರೀ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರ ಮಾರ್ಗದರ್ಶನದಂತೆ  ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸರು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳ ಮೇಲೆ ದಾಳಿ ಮಾಡಿ 6 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್. ಪ್ರದೀಪ್ ನವರಿಗೆ ದಿನಾಂಕ 18-9-2016 ರಂದು ಬೆಳಗಿನ ಜಾವ ದೊರೆತ ಮಾಹಿತಿ ಆದಾರದ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಯೊಂದಿಗೆ  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಸಂಪಾಜೆ ಬಳಿಯ ಅರೆಕಲ್ಲು ರಸ್ತೆಯ ಬದಿಯಲ್ಲಿರುವ ದೇವಿಪ್ರಸಾದ್ ಎಂಬರಿಗೆ ಸೇರಿದ ಜಾಗದಲ್ಲಿ ಟಿಪ್ಪರ್ ಲಾರಿ ನಂ. ಕೆಎ-21 ಬಿ-2947,  ಕೆಎ-21 ಬಿ-347,  ಕೆಎ-21 ಬಿ-448,  ಕೆಎ-21 ಬಿ-2567,  ಕೆಎ-21 ಬಿ-3379 ಮತ್ತು  ಕೆಎ-12 ಬಿ-3706 ಗಳಲ್ಲಿ  ಅಕ್ರಮವಾಗಿ ಮರಳನ್ನು ತುಂಬಿಸಿ  ಸಾಗಾಟ ಮಾಡಲು ನಿಲ್ಲಿಸಿದ್ದನ್ನು ಪತ್ತೆ ಹಚ್ಚಿ ಲಾರಿಗಳನ್ನು  ಸುತ್ತುವರಿಯುವಷ್ಟರಲ್ಲಿ  ಲಾರಿ ಚಾಲಕರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದು,  ಅಕ್ರಮವಾಗಿ ಮರಳು ತುಂಬಿದ 6 ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
      ಹಾಗೆಯೇ ದಿನಾಂಕ 20-09-2016 ರಂದು 3.30 ಪಿ.ಎಂ.ಗೆ ಮಡಿಕೇರಿ ಗ್ರಾಮಾಂತರ ಠಾಣಾ  ಕ್ರೈಂ ಪಿ.ಎಸ್.ಐ. ರವರಿಗೆ  ದೊರೆತ ಮಾಹಿತಿಯ ಮೇರೆಗೆ ಸಂಪಾಜೆ ಉಪಠಾಣಾ ಸಿಬ್ಬಂದಿಯೊಂದಿಗೆ ಸಂಪಾಜೆಯ ಅರಣ್ಯ  ತಪಾಸಣಾ ಗೇಟ್ ಬಳಿ ವಾಹನಗಳನ್ನು ಪರಿಶೀಲನೆ ಮಾಡುತ್ತಿರುವಾಗ ಸುಳ್ಯದ ಕಡೆಯಿಂದ  ಬಂದ  ಕೆಎ-21-ಬಿ-0567 ರ ಲಾರಿಯನ್ನು ಪರಿಶೀಲಿಸಿ, ಸದ್ರಿ ಲಾರಿಯಲ್ಲಿ  ಸರಕಾರ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಹೋಗುತ್ತಿದ್ದುದನ್ನು ಪತ್ತೆಹಚ್ಚಿ, ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
     ಜಿಲ್ಲೆಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ನಡೆಯುತ್ತಿದ್ದು,  ಜಿಲ್ಲೆಯಲ್ಲಿ ಈ ರೀತಿಯ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಈ ಕೆಳಕಾಣಿಸಿದ  ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ತಿಳಿಸಲಾಗಿದೆ.
                              ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ: 9480804901.