Saturday, September 24, 2016

ಲಾರಿ ಡಿಕ್ಕಿ ವ್ಯಕ್ತಿ ದುರ್ಮರಣ: 
 
     ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಡಿಕ್ಕಿಯಾಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ದಿನಾಂಕ 23-09-2016 ರಂದು ಮಯ 12-35 ಪಿಎಂ ಗೆ ಕುಶಾಲನಗರದ ನಿವಾಸಿ ತಮ್ಮಯ್ಯ ಎಂಬವರು ಕುಶಾಲನಗರದ ಐಬಿ ಜಂಕ್ಷನ್ ನಿಂದ ಟಾಪ್ಕೊ ಜ್ಯೂವೆಲರಿ ಅಂಗಡಿ ಕಡೆ ರಸ್ತೆ ದಾಟುತ್ತಿರುವಾಗ ಮೈಸೂರು ಕಡೆಯಿಂದ ಒಂದು ಈಚರ್ ಮಿನಿ ಲಾರಿ ನಂ ಕೆ 12 ಎ 553 ಲಾರಿಯನ್ನು ಅದರ ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ತಮ್ಮಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ತಮ್ಮಯ್ಯನವರು ಗಂಬೀರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸ್ಕೂಟರಿಗೆ ಜೀಪು ಡಿಕ್ಕಿ ಮಹಿಳೆಗೆ ಗಾಯ:

     ಮಹಿಳೆಯೊಬ್ಬರು ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಜೀಪೊಂದು ಡಿಕ್ಕಿಯಾಗಿ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕ್ಲಬ್ ಮಹೇಂದ್ರ ಗೇಟಿನ ಮುಂದುಗಡೆ ದಿನಾಂಕ 23-9-2016 ರಂದು ರಾತ್ರಿ 8-50 ಗಂಟೆಗೆ ಕ್ಲಬ್ ಮಹೇಂದ್ರದ ಉದ್ಯೋಗಿಯಾಗಿರುವ ದಿಶಾ ರೈ ಎಂಬವರು ಕೆಲಸ ಮುಗಿಸಿಕೊಂಡು ತಮ್ಮ ಬಾಪ್ತು ಕೆಎ-12ಎಲ್-8518 ರ ಸ್ಕೂಟರ್ ನಲ್ಲಿ ಮಡಿಕೇರಿ ಕಡೆಗೆ ಹೋಗುವಾಗ ಕ್ಲಬ್ ಮಹೇಂದ್ರ ಗೇಟಿನ ಎದುರು ಮಡಿಕೇರಿ ಕಡೆಯಿಂದ ಕೆಎ-12ಝಡ್-4854 ರ ಜೀಪನ್ನು ಅದರ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ದಿಶಾ ರೈ ರವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಅಕ್ರಮ ಲಾಟರಿ ಮಾಟಾಟ:
 
     ವ್ಯಕ್ತಿಯೊಬ್ಬರು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಆದಾರದ ಮೇರೆಗೆ ವಿರಾಜಪೇಟೆ ನಗರ ಠಾಣಾಧಿಕಾರಿಯವರು  ವಿರಾಜಪೇಟೆ ನಗರದ ತಾಲೋಕು ಕಚೇರಿ ಬಳಿ ಪರಿಶೀಲಿಸಿ ಅಪರಾಧವನ್ನು ಪತ್ತೆಹಚ್ಚುವ ಸಲುವಾಗಿ  ಮುಂಚಿತವಾಗಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಬೈಕ್ ಕಳವು ಪ್ರಕರಣ ದಾಖಲು:
 
     ಮನೆಯ ಮುಂದೆ ನಿಲ್ಲಿಸಿದ್ದ ಬೈಕೊಂದನ್ನು ಕಳ್ಳರು ಕಳವು ಮಾಡಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.   ಫಿರ್ಯಾದಿ ಸಿ.ವಿ. ರಂಜಿತ್ ಎಂಬವರು ಎಮ್ಮೆಮಾಡು ಗ್ರಾಮದ ಹುಸೇನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು  ದಿನಾಂಕ 22-9-2016 ರಂದು  ರಾತ್ರಿ ತಾನು ವಾಸವಾಗಿರುವ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ್ದು, ಮಾರನೇ ದಿನ ಬೆಳಗ್ಗೆ  6-00 ಗಂಟೆ ಸಮಯದಲ್ಲಿ  ನೋಡಿದಾಗ ನಿಲ್ಲಿಸಿದ್ದ ಬೈಕ್ ಇಲ್ಲದೆ ಇದ್ದು, ರಾತ್ರಿ ರಯಾರೋ ಕಳ್ಳರು ಸದರಿ ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.