Sunday, September 25, 2016

ಆತ್ಮಹತ್ಯೆ ಪ್ರಕರಣ

                  ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಠಾಣೆ ವ್ಯಾಪ್ತಿಯಲ್ಲಿ ದಂಪತಿಗಳ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿದ್ದು ಮೃತರ ಪೈಕಿ ಮಹಿಳೆಗೆ ಸಂಬಂಧಿಸಿದ ವಾರೀಸುದಾರರು ಯಾರಾದರೂ ಜಿಲ್ಲೆಯಲ್ಲಿದ್ದರೆ ಹೊಸೂರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಪ್ರಕರಣದ ವಿವರ ಇಂತಿದೆ. ಹೊಸೂರು ನಗರದ ಅಣ್ಣಾನಗರದ ನಿವಾಸಿಯಾಗಿದ್ದ ನಂದಕುಮಾರ್‌ ಮತ್ತು ಅವರ ಪತ್ನಿ ಸುಶೀಲಾ ಯಾನೆ ಗೌರಮ್ಮ ಎಂಬ ದಂಪತಿಗಳು ದಿನಾಂಕ 16/09/2016ರಂದು ಹೊಸೂರಿನ ಕೃಷ್ಣಪ್ಪನಗರದ ಬಳಿ ರೈಲ್ವೇ ಹಳಿಯ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪೈಕಿ ಸುಶೀಲಾರವರ ವಾರೀಸುದಾರರು ಪತ್ತೆಯಾಗಿರುವುದಿಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಸದ್ರಿ ಮಹಿಳೆಯ ಸಂಬಂಧಿಕರು ಯಾರಾದರೂ ಕೊಡಗು ಜಿಲ್ಲೆಯಲ್ಲಿದ್ದಲ್ಲಿ ಹೊಸೂರು ಠಾಣಾಧಿಕಾರಿಗಳನ್ನು ದೂರವಾಣಿ ಸಂಖ್ಯೆ 04344222634  ರಲ್ಲಿ ಸಂಪರ್ಕಿಸುವಂತೆ  ಕೋರಲಾಗಿದೆ. 

ಮರಕ್ಕೆ ಜೀಪು ಡಿಕ್ಕಿ
                     ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಮರಕ್ಕೆ ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ಕತ್ತಲೆ ಕಾಡು ಎಂಬಲ್ಲಿ ನಡೆದಿದೆ. ಮರಗೋಡು ನಿವಾಸಿ ಪುರುಷೋತ್ತಮ ಎಂಬವರ ಪಿಕ್‌ಅಪ್‌ ಜೀಪು ಸಂಖ್ಯೆ ಕೆಎ-12-ಬಿ-0074ರ ಚಾಲಕ ಹೇಮಂತ್‌ ಎಂಬಾತನು ದಿನಾಂಕ 22/09/2016ರಂದು ಕಡಗದಾಳು ಬಳಿಯ ಕತ್ತಲೆಕಾಡಿಗೆ ಜೀಪನ್ನು ತೆಗೆದುಕೊಂಡು ಹೋಗಿದ್ದು  ಕತ್ತಲೆಕಾಡಿನ ಬಳಿ ದನ ಅಡ್ಡ ಬಂತೆಂದು ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ಆತನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಸಿಲ್ವರ್‌ ಮರದ ದಿಮ್ಮಿಗೆ ಡಿಕ್ಕಿಯಾದ ಪರಿಣಾಮ ಜೀಪಿಗೆ  ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
                     ಪಾದಚಾರಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 24/09/2016ರಂದು ವಿರಾಜಪೇಟೆಯ ಶಾಂತಿನಗರ ನಿವಾಸಿ ಶ್ರೀಮತಿ ಸಪೂರಾ ಎಂಬಾಕೆಯು ನಗರದ ಸರ್ಕಾರಿ ಬಸ್‌ ನಿಲ್ದಾನದ ಬಳಿ ರಸ್ತೆಯನ್ನು ದಾಟುತ್ತಿರುವಾಗ ದೊಡ್ಡಟ್ಟಿ ಚೌಕಿಯ ಕಡೆಯಿಂದ ಕೆಎ-03-ಎಂಡಿ-2301ರ ಆಲ್ಟೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಪೂರಾರವರಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.