Wednesday, September 28, 2016


ಮರಳು ಕಳ್ಳತನ
                ನಾಪೋಕ್ಲು ಪೊಲೀಸ್ ಠಾಣಾಧಿಕಾರಿಯವರಾದ ಬಿ. ಎಸ್. ವೆಂಕಟೇಶ್ ಮತ್ತು ಸಿಬ್ಬಂದಿಯವರು ದಿನಾಂಕ 27-08-2016 ರಂದು ಕಕ್ಕಬ್ಬೆ ಹೊಳೆಯಿಂದ ಕಬ್ಬಿಣದ ತೆಪ್ಪ ಬಳಸಿ ಕುಂಜಿಲ ಗ್ರಾಮದ ಮಹಮ್ಮದಾಲಿ ಎಂಬುವವರು ಮರಳು ತೆಗೆದು ಕಳ್ಳತನ ಮಾಡುತ್ತಿರುವಾಗ ದಾಳಿ ನಡೆಸಿದಾದ ಆರೋಪಿಯು ಓಡಿ ಹೋಗಿದ್ದು ಮರಳು ತೆಗೆಯಲು ಉಪಯೋಗಿಸಿದ ತೆಪ್ಪವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಿಷ ಸೇವಿಸಿ ವಿಧ್ಯಾರ್ಥಿ ಆತ್ಮಹತ್ಯೆ 
                 ತ್ಯಾಗತ್ತೂರು ಗ್ರಾಮದ ರಾಜೇಶ್ವರಿ ಎಂಬುವವರ ಮಗನಾದ 15 ವರ್ಷ ರಾಜಪಾಂಡಿ ಎಂಬುವವನು ಹೊಟ್ಟೆ ನೋವಿನಿಂದ ನರಳುತ್ತಿದ್ದು ದಿನಾಂಕ 19-08-2016 ವಿಷ ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಈ ದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಕಾರಿಗೆ ಬಸ್ಸು ಡಿಕ್ಕಿ
                  ಚಿರಾಟ್ಟ ಚಿಟ್ಟಾರಿ ಕಡವು ಕಣ್ಣೂರು ಜಿಲ್ಲೆ, ಕೇರಳ ರಾಜ್ಯದ ಜಂಶೀರ್‌ ಎಂಬುವವರು ತನ್ನ ಸ್ನೇಹಿತರಾದ ಮುಫ್‌ಶೀರ್‌, ಸಾಜೀರ್‌ , ಇಸ್ಮಾಹಿಲ್‌, ಅಸ್ಕರ್‌ ಎಂಬುವವರೊಂದಿಗೆ ಕೊಡಗಿಗೆ ಪ್ರವಾಸ ಬಂದಿದ್ದು ಈ ದಿನ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಟೈಗರ್‌ ಹಿಲ್‌ ರೆಸಾರ್ಟ್‌ ಬಳಿ ಎದುರುಗಡೆಯಿಂದ ಕೆಎ-18-ಎಫ್‌-493 ರ ಕೆ.ಎಸ್‌.ಆರ್‌.ಟಿ.ಸಿ ಬಸ್ಸನ್ನು ಅದರ ಲಕ್ಷ್ಮಿಶ್‌ರವರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದವರಿಗೆಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ
                       ಕುಶಾಲನಗರದ ಒಂಕಾರ ಬಡಾವಣೆಯ ನಿವಾಸಿಯಾದ ಪುಟ್ಟಸ್ವಾಮಿ ಎಂಬುವವರು ತನ್ನ ಸ್ನೇಹಿತ ಸತೀಶ ಎಂಬವರನ್ನು ಕುಶಾಲನಗರದಿಂದ ಅವರ ಮನೆಗೆ ಸೋಮವಾರಪೇಟೆಗೆ ಬಿಟ್ಟು ಬರಲು ತಮ್ಮ ಬಾಪ್ತು ಮೋಟಾರು ಸೈಕಲಿನಲ್ಲಿ ಕೂಡಿಗೆ ಮಾರ್ಗವಾಗಿ ಹೋಗುತ್ತಿರುವಾಗ ಮದಲಾಪುರದ 5ನೇ ಮೈಲ್ ಕಲ್ಲು ಸರ್ಕಲ್ ಬಳಿ ತಲುಪುವಾಗ್ಗೆ ಸಮಯ ರಾತ್ರಿ ಸುಮಾರು 10.00 ಗಂಟೆಗೆ ಮೋಟಾರು ಸೈಕಲಿನಲ್ಲಿ ಪೆಟ್ರೋಲ್ ಖಾಲಿಯಾಗಿ ನಿಂತು ಹೋಗಿ ರಸ್ತೆ ಬದಿಯಲ್ಲಿ ನಿಂತಿರುವಾಗ್ಗೆ ಸೋಮವಾರಪೇಟೆ ಕಡೆಯಿಂದ KA12 Q 3129 ರ ಸ್ಕೂಟರಿನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ರವಿ ಎಂಬವರೊಂದಿಗೆ ಮದಲಾಪುರದ ವಾಸಿ ಲೋಕೇಶ್ ಎಂಬವರು ಪುಟ್ಟಸ್ವಾಮಿಯವರೊಂದಿಗೆ ಜಗಳ ತೆಗೆದು ಸೂಳೆ ಮಕ್ಕಳೆ ರಾತ್ರಿ ನಿಮಗೇನು ಕೆಲಸ ಎಂದು ಅವ್ಯಾಚ್ಯ ಶಬ್ಧಗಳಿಂದ ಬೈಯ್ದು ಕೈಯ್ಯಲ್ಲಿದ್ದ ಕತ್ತಿಯಿಂದ ಸತೀಶ್ ರವರ ಮೇಲೆ ಹಲ್ಲೆ ಮಾಡಿ ಪುಟ್ಟಸ್ವಾಮಿಯವರನ್ನು ಕಾಲಿನಿಂದ ಒದ್ದು ನೋವುಂಟುಪಡಿಸಿದ್ದು ಈ ಬಗ್ಗೆ ನೀಡಿದ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಪಾದಾಚಾರಿಗೆ ಬೈಕ್ ಡಿಕ್ಕಿ
                    ಹೆಬ್ಬಾಲೆ ಗ್ರಾಮದ ಶ್ರೀಮತಿ ವೃಷಭಾವತಿ ಎಂಬವರು ಬೆಳಿಗ್ಗೆ 05.30 ಗಂಟೆಗೆ ತಮ್ಮ ಸಂಗಡಿಗರೊಂದಿಗೆ ಮುಖ್ಯ ರಸ್ತೆಯಲ್ಲಿ ಹೆಬ್ಬಾಲೆ ಕಡೆಯಿಂದ ಕೂಡಿಗೆ ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಹುಲುಸೆ ಗ್ರಾಮದ ಹತ್ತಿರ ತಲುಪುವಾಗ ಹಿಂಬಾಗದಿಂದ ಬಂದ ಕೆಎ 13 ಇಬಿ 2616 ರ ಮೋಟಾರು ಸೈಕಲಿನ ಸವಾರನು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ವೃಷಭಾವತಿಯವರಿಗೆ ಡಿಕ್ಕಿಪಡಿಸಿ ತಲೆಗೆ ಜಖಂಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ನಂತರ ತಿಳಿಯಲಾಗಿ ಡಿಕ್ಕಿಪಡಿಸಿದ ಮೋಟಾರು ಸೈಕಲ್ ಸವಾರ ಕೊಣನೂರಿನ ಕಾಡನೂರು ಗ್ರಾಮದ ಕೆ.ಕೆ.ಜಗಧೀಶ್ ಎಂಬುವವರಾಗಿದ್ದು ಪಿರ್ಯಾದಿಯವರ ತಮ್ಮ ಸತೀಶ್ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.