ಸೈಕಲ್ಗೆ ರಿಕ್ಷಾ ಡಿಕ್ಕಿ.
ಸೈಕಲ್ ಸವಾರನೋರ್ವನಿಗೆ ರಿಕ್ಷಾ ಡಿಕ್ಕಿಯಾದ ಘಟನೆ ಕುಶಾಲನಗರದ ಮುಳ್ಳುಸೋಗೆ ಬಳಿ ನಡೆದಿದೆ. ದಿನಾಂಕ 03/09/2016ರಂದು ಮುಳ್ಳುಸೋಗೆ ನಿವಾಸಿ ನಂಜುಂಡೇಗೌಡ ಎಂಬವರು ಅವರ ಬಾಪ್ತು ಸೈಕಲ್ನಲ್ಲಿ ಕುಶಾಲನಗರ ಕಡೆಯಿಂದ ಬರುತ್ತಿರುವಾಗ ಕೆಎ-12-ಎ-9480ರ ಆಟೋರಿಕ್ಷಾವನ್ನು ಅದರ ಚಾಲಕ ಮಂಜು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಂಜುಂಡೇಗೌಡರಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ ಪರಿಣಾಮ ನಂಜುಂಡೇಗೌಡರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಪರಸ್ಪರ ಕಾರು ಡಿಕ್ಕಿ
ಪರಸ್ಪರ ಕಾರುಗಳೆರಡು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 02/09/2016ರಂದು ಸಂಜೆ ವೇಳೆ ವಿರಾಜಪೇಟೆ ನಿವಾಸಿ ಉದ್ದಪಂಡ ಅಪ್ಪಣ್ಣ ಎಂಬವರು ಅವರ ಕೆಎ-12-ಜೆಡ್-7849ರ ಕಾರಿನಲ್ಲಿ ಅಮ್ಮತ್ತಿ ಕಡೆ ಹೋಗುತ್ತಿರುವಾಗ ಅಮ್ಮತ್ತಿಯ ಕಡೆಯಿಂದ ಸಂಪತ್ ಸುಬ್ಬಯ್ಯ ಎಂಬವರು ಅಮ್ಮತ್ತಿ ಕಡೆಯಿಂದ ಅವರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಪ್ಪಣ್ಣನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಪ್ಪಣ್ಣನವರ ಕಾರಿಗೆ ಜಖಂ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಿಕ್ಷಾಕ್ಕೆ ಕಾರು ಡಿಕ್ಕಿ
ರಿಕ್ಷಾವೊಂದಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯಗಳಾದ ಗಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 02/09/2016ರಂದು ರಾತ್ರಿ ವೇಳೆ ಪೊನ್ನಂಪೇಟೆ ನಿವಾಸಿ ವಿ.ಪಿ.ಸಂತೋಷ್ ಎಂಬವರು ಅವರ ರಿಕ್ಷಾದಲ್ಲಿ ಪೊನ್ನಂಪೇಟೆಯ ಕೃಷ್ಣ ಕಾಲೋನಿ ನಿವಾಸಿಗಳಾದ ಆಲ್ಫೋನ್ಸ್ ಬಾಬು ಮತ್ತು ಅವರ ಪತ್ನಿ ಗ್ರೇಸಿ ಎಂಬವರನ್ನು ಕರೆದುಕೊಂಡು ಹೋಗುತ್ತಿರುವಾಗ ಕಾನೂರು ಕಡೆ ತಿರುಗುವ ಜಂಕ್ಷನ್ನಿಂದ ಮುಂದುಗಡೆ ಹಿಂಭಾಗದಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಆಲ್ಫೋನ್ಸ್ ಬಾಬು ಮತ್ತು ಗ್ರೇಸಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.