Friday, September 9, 2016

ಅಕ್ರಮ ಜೂಜಾಟ, ಐವರ ಬಂಧನ
                      ಅಕ್ರಮವಾಗಿ ಜೂಜಾಡುತ್ತಿದ್ದ ಐವರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 08/09/2016ರಂದು ಕೂಡ್ಲೂರು ಗ್ರಾಮದ ಕಾವೇರಿ ಹೊಳೆಯ ಬಳಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವ ಕುರಿತು ಮಾಹಿತಿ ಪಡೆದ ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಜೆ.ಇ.ಮಹೇಶ್‌ರವರು ಸಿಬ್ಬಂದಿಗಳೊಂದಿಗೆ ರಾತ್ರಿ ಸುಮಾರು 8 ಗಂಟೆ ವೇಳೆಯಲ್ಲಿ ಧಾಳಿ ನಡೆಸಿದಾಗ ಕೂಡ್ಲೂರು ಗ್ರಾಮದ ಕಾವೇರಿ ನದಿ ದಂಡೆಯ ಬಳಿ ಅದೇ ಗ್ರಾಮದವರಾದ ಕಾರ್ತಿಕ್‌ ಕೆ.ಎಸ್‌., ಮಂಜು, ವಿಜುಕುಮಾರ್‌, ರವಿಕುಮಾರ್‌ ಮತ್ತು ಸುಂದರನಗರ ನಿವಾಸಿ ನಾಗೇಶ ಎಂಬವರು ಅಕ್ರಮವಾಗಿಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿದ್ದು, ಜೂಜಾಟಕ್ಕೆ ಉಪಯೋಗಿಸಿದ ರೂ. 5,190/- ನಗದು ಹಣ ಮತ್ತು ಇಸ್ಪೇಟು ಎಲೆಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್‌ ಕಳವು
                    ನಿಲ್ಲಿಸಿದ್ದ ಸ್ಕೂಟರ್‌ ಒಂದನ್ನು ಕಳವು ಮಾಡಿದ ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ದಿನಾಂಕ 08/09/2016ರಂದು ಅಪರಾಹ್ನ 01:00 ಗಂಟೆಗೆ ದುಂಡಳ್ಳಿ ನಿವಾಸಿ ಡಿ.ಆರ್‌. ನಾರಾಯಣಾಚಾರ್‌ ಎಂಬವರು ಅವರ ಪತ್ನಿಯ ಬಾಪ್ತು ಕೆಎ-12-ಕ್ಯು-1663ರ ಸ್ಕೂಟರಿನಲ್ಲಿ ಶನಿವಾರಸಂತೆಗೆ ಬಂದು ನಗರದ ಬೈಪಾಸ್‌ ರಸ್ತೆಯ ಬಳಿ ಇರುವ ಗಣೇಶ್‌ ಹಾರ್ಡ್‌ವೇರ್‌ ಅಂಗಡಿಯ ಬಳಿ ನಿಲ್ಲಿಸಿ ಅಂಗಡಿಗೆ ಹೋಗಿದ್ದು ಅರ್ದ ಗಂಟೆಯ ಬಳಿಕ ವಾಪಾಸು ಬಂದು ನೋಡುವಾಗ ನಿಲ್ಲಿಸಿದ್ದ ಸ್ಕೂಟಟ್‌ ಕಾಣೆಯಾಗಿದ್ದು ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗಂಡಸು ಕಾಣೆ ಪ್ರಕರಣ
                   ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದ ವ್ಯಕ್ತಿಯೊಬ್ಬ ಕಾಣೆಯಾಗಿರುವ ಪ್ರಕರಣ ಪೊನ್ನಂಪೇಟೆ ಬಳಿಯ ಬೇಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 22/08/2016ರಂದು ಬೇಗೂರು ನಿವಾಸಿ ಚೋಡುಮಾಡ ಗಣಪತಿ ಎಂಬವರ ಲೈನು ಮನೆಯಲ್ಲಿ ವಾಸವಿರುವ ಜೇನು ಕುರುಬರ ಮಣಿ ಎಂಬಾತನು ಸಂಬಂಧಿಕರ ಮನೆಗೆ ಹೋಗಿ ಬರುವುದಾಗಿ ಪತ್ನಿ ಗೌರಿಗೆ ಹೇಳಿ ಹೋಗಿದ್ದು ಮನೆಗೆ ಹಿಂತಿರುಗಿ ಬಾರದಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಚಿನ್ನಾಭರಣ ಮತ್ತು ಇತರೆ ವಸ್ತು ಕಳವು 
                      ಕಾರಿನಲ್ಲಿಟ್ಟಿದ್ದ ಅಪಾರ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ಕಳವು ಮಾಡಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 08/09/2016ರಂದು ವಿರಾಜಪೇಟೆ ನಗರದ ವಿಜಯನಗರ 2ನೇ ಹಂತದ ನಿವಾಸಿ ಶಿಬಾ ಪಿ ದಾಸ್‌ ಎಂಬವರು ಅವರ ಮಾರುತಿ ಕಾರಿನಲ್ಲಿ ತಾಯಿ ರೋಸಮ್ಮ, ಮಗ ಅಲೋಕ್‌, ಕೆಲಸದಾಕೆ ಮೀನಾ ಮತ್ತು ನೆರೆಮನೆಯ ಕ್ರಿಸ್ಟೀನಾ ಎಂಬವರೊಂದಿಗೆ ವಿರಾಜಪೇಟೆ ನಗರದ ಸೈಂಟ್‌ ಆನ್ಸ್‌ ಚರ್ಚ್‌ಗೆ ಬಂದು ಚರ್ಚ್‌ ಬಳಿ ಕಾರು ನಿಲ್ಲಿಸಿ  ಅವರ ವ್ಯಾನಿಟಿ ಬ್ಯಾಗನ್ನು ಅದರೊಳಗಿದ್ದ ಚಿನ್ನಾಭರಣಗಳು, ದಾಕಲೆಗಳು ಮತ್ತು ಮೊಬೈಲ್‌ ಫೋನ್‌ಗಳ ಸಮೇತ ಕಾರಿನಲ್ಲಿಟ್ಟು ಕಾರಿನ ಬಾಗಿಲು ಲಾಕ್‌ ಮಾಡದೆ ಚರ್ಚ್‌ ಕಾರ್ಯಕ್ರಮಕ್ಕೆ ಹೋಗಿದ್ದು ಕಾರ್ಯಕ್ರಮ ಮುಗಿಸಿ ವಾಪಾಸು ಬಂದು ನೋಡುವಾಗ ಕಾರಿನ ಬಾಗಿಲು ತೆರೆದಿದ್ದು, ಕಾರಿನಲ್ಲಿದ್ದ ಚಿನ್ನಾಭರಣ ಮತ್ತು ದಾಖಲೆಗಳ ಸಮೇತ ವ್ಯಾನಿಟಿ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಚಿನ್ನಾಭರಣ ಮತ್ತು ಮೊಬೈಲ್‌ ಫೋನ್‌ಗಳ ಮೊತ್ತ ಒಟ್ಟು ರೂ. 94,000/- ಗಳಾಗಬಹುದೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.