Thursday, October 20, 2016

ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮ ಹತ್ಯೆ    
     ವಿರಾಜಪೇಟೆ ತಾಲೂಕಿನ ಕಂಡಂಗಾಲ ಗ್ರಾಮದ ಅಪ್ಪಂಡೆರಂಡ ಪೊನ್ನಪ್ಪನವ್ರ ಲೈನ್ ಮನೆಯಲ್ಲಿ ವಾಸವಿರುವ ಶ್ರೀಮತಿ ರಾಜಮ್ಮ ನವರಿಗೆ ವಿಪರೀತ ಮದ್ಯಪಾನ ಮಾಡು ಅಬ್ಯಾಸವಿದ್ದು ದಿನಾಂಕ 18-10-2016 ರಂದು ವಿಪರೀತ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ರಾತ್ರಿ ಸಮಯದಲ್ಲಿ ಮನೆಯ ಕೋಣೆಯ ಬಿಟ್ಟಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಯಹತ್ಯೆ ಮಾಡಿಕೊಂಡಿರುವುದಾಗಿ ಪತಿ ಜೇನುಕುರುಬರ ರಾಜುರವ್ರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
 ಬೈಕ್ ಕಳವು ಪ್ರಕರಣ 
    ಮನೆಯ ಮುಂದೆ ನಿಲ್ಲಿಸಿದ ಮೋಟಾರು ಸೈಕಲನ್ನು ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ನಗರದ  ಗಾಂದೀನಗರದಲ್ಲಿ ನಡೆದಿದೆ. ದಿನಾಂಕ 17-10-2016 ರಂದು ಪಾಪಯ್ಯನವರ ಮನೆಗೆ ಬಂದುಗಳಾದ ಸಿಂಗನಹಳ್ಳಿ ಗ್ರಾಮದ ಜೀವನ್‌ ರವರು ಬಂದು ಅವರ ಬಾಪ್ತು ಕೆ.ಎ-43-ಹೆಚ್-7265 ರ ಮೋಟಾರು ಸೈಕಲನ್ನುಮನೆಯ ಮುಂದೆ ನಿಲ್ಲಿಸಿ ಬೆಂಗಳೂರಿಗೆ ಹೋಗಿದ್ದು ಪಾಪಯ್ಯನವರು ದಿನಾಂಕ 18-10-2016 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕ್ಲುಲ್ಲಕ ಕಾರಣಕ್ಕೆ ಹಲ್ಲೆ
     ದಿನಾಂಕ 18-10-2016 ರಂದು ಸೋಮವಾರಪೇಟೆಯ ಚೌಡ್ಲು ಗ್ರಾಮದಲ್ಲಿ ಸುಧಾ ಮತ್ತು ಸುರೇಶ್‌ರವರು ಪಿಕ್ ಜೀಪಿನಲ್ಲಿ ಬಂದು ಉದಯಕುಮಾರ್‌ ರವರ  ಮನೆಯಹತ್ತಿರ ನಿಲ್ಲಿಸಿದ್ದು, ಸುನಿಲ್‌ಕುಮಾರ್‌ರವರು ತನ್ನ ಕಾರನ್ನು ಹೊರ ತೆಗೆಯಬೇಕಾದ್ದರಿಂದ ಸ್ವಲ್ಪಆಚೆ ನಿಲ್ಲಿಸಿ ಎಂದು ಹೇಳಿದಾಗ ಸುಧಾ ಮತ್ತು ಸುರೇಶ್ ರವರು ಸುನಿಲ್‌ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ವಾಹನದಲ್ಲಿದ್ದ ಕತ್ತಿಯನ್ನು ತೆಗೆದು ಕಡಿಯಲು ಹೋಗಿ  ಸುನಿಲ್ ಕುಮಾರ್ ರವರನ್ನು ತಳ್ಳಿ ಬೀಳಿಸಿ ಗಾಯಪಡಿಸಿರುವುದಾಗಿ ಕೊಟ್ಟ ದೂರಿಗೆ ಸೋಮವಾರಪೇಟೆ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆ ಪ್ರಕರಣ
     ಸೋಮವಾರಪೇಟೆಯ ನಿವಾಸಿ ಅನಿಲ್‌ರವರು  ತನ್ನ ಸಂಸಾರದೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ದಿನಾಂಕ 10-10-2016 ರಂದು ಸೋಮವಾರಪೇಟೆಯ ತನ್ನ ಮನೆಗೆ ಬಂದಿದ್ದು, ನಂತರ ಮೈಸೂರಿಗೆ ಮದುವೆಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದು, ದಿನಾಂಕ 11-10-2016 ರಂದು ಆತನ ಪತ್ನಿ ಮೊಬೈಲ್‌ನಲ್ಲಿ ಸಂಪರ್ಕಿಸಿ ವಿಚಾರಿಸಿದಾಗ ಬೆಂಗಳೂ ರಿಗೆ ಬರುತ್ತಿರುವುದಾಗಿ ತಿಳಿಸಿದ್ದು, ಆದರೆ ದಿನಾಂಕ 19-10-2016 ರ ವರೆಗೂ ಬೆಂಗಳೂರಿಗೂ ಹೋಗದೇ ಮನೆಗೂ ಬಾರದೇ ಇದ್ದು, ಆತನು ಮೊಬೈಲ್ ಸಂಪರ್ಕಕ್ಕೂ ಸಿಗದೇ ಇದ್ದು ಕಾಣೆಯಾದ ಮಗನನ್ನು ಪತ್ತೆಹಚ್ಚಿಕೊಡಬೇಕೆಂದು ಶಿವರಾಜುರವರು ಕೊಟ್ಟ ದೂರಿಗೆ ಸೋಮವಾರಪೇಟೆ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 
ಅಪಘಾತ ಪ್ರಕರಣ
     ಮೋಟಾರು  ಸೈಕಲಿಗೆ ಹಿಂಬದಿಯಿಂದ  ಇನ್ನೊಂದು ಮೋಟಾರು ಸೈಕಲ್ ಡಿಕ್ಕಿಪಡಿಸಿ ಗಾಯವಾದ ಪ್ರಕರಣ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ತಾಕೇರಿ  ಗ್ರಾಮದ ನಿವಾಸಿ ದಿನೇಶ್‌ರವರು ದಿನಾಂಕ 15-10-2016 ರಂದು ಸಮಯ 3-00 ಪಿ ಎಂ ಗೆ ಕೆಎ-12-ಕೆ-3550ರ ಪಲ್ಸ್ ರ್ ಮೋಟಾರು ಸೈಕಲಿನಲ್ಲಿ ಧನುರವರೊಂದಿಗೆ  ಮನೆಗೆ ಹೋಗುತ್ತಿರುವಾಗ ಜ್ಞಾನ ವಿಕಾಶ ಶಾಲೆಯ ಹತ್ತಿರ ಹಿಂಬದಿಯಿಂದ ಬಂದ ಕೆಎ-51-ವೈ-6283 ರ ಪಲ್ಸ್ ರ್ ಮೋಟಾರು ಸೈಕಲನ್ನು ಅದರ ಚಾಲಕ  ತೇಜಸ್ ರವರು  ಅತೀ ವೇಗ  ಹಾಗೂ ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ್ದು ದಿನೇಶ  ಮತ್ತು ತೇಜಸ್ ರವರಿಗೆ ಗಾಯಗಳಾಗಿದ್ದು ದಿನೇಶ್ ರವರು ನೀಡಿದ  ದೂರಿಗೆ ಸೋಮವಾರಪೇಟೆ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
      ಮನೆಯ ಮಲಗುವ ಕೋಣೆಯಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಹಾಕತ್ತೂರು ಗ್ರಾಮದ ಹುಲಿತಾಳದಲ್ಲಿ  ನಡೆದಿದೆ. ಮೃತ ಗಣೇಶ ರವರು ತನ್ನ ತಂದೆಯೊಂದಿಗೆ  ವಾಸವಾಗಿದ್ದು ಆಚಾರಿ ಕೆಲಸ ಮಾಡುತ್ತಿದ್ದು, ಪ್ರತಿ ದಿನವೂ ಮದ್ಯಪಾನ ಮಾಡುವ ಚಟವಿದ್ದು, ದಿನಾಂಕ 18-10-2016 ರಂದು ರಾತ್ರಿ ಊಟ ಮಾಡಿ 9-00  ಗಂಟೆಗೆ ತನ್ನ ಕೋಣೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 19-10-2016 ರಂದು ಬೆಳಿಗ್ಗೆ 9-00  ಗಂಟೆಯಾದರೂ  ಮಗ ಏಳದೇ ಇದ್ದುದ್ದರಿಂದ ಕೋಣೆಯ ಬಾಗಿಲನ್ನು ತೆರೆದು  ನೋಡಿದಾಗ ಮಗ  ಗಣೇಶನು ನೈಲಾನ್ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ಮಗನು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಂದೆ ವಾಸಪ್ಪನವರು ಕೊಟ್ಟ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.