Monday, October 24, 2016

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                   ದಿನಾಂಕ 22-10-2016 ರಂದು ಸಮಯ 3-00 ಪಿ ಎಂ ಗೆ ಸೋಮವಾರಪೇಟೆಯ ಮಂಕ್ಯ ಗ್ರಾಮದ ನಿವಾಸಿ ಕಾಳಪ್ಪರವರು ತನ್ನ ಕುಟುಂಬದವರೊಂದಿಗೆ ಗದ್ದೆಯ ಬಳಿಯಲ್ಲಿ ನಾಗದೇವರ ದೇವಾಲಯದ ಕೆಲಸ ಮಾಡಿಕೊಂಡಿರುವಾಗ್ಗೆ ಅಲ್ಲಿಗೆ ಅದೇ ಗ್ರಾಮದ ರಮೇಶ್, ವಿನು, ಜಗದೀಶ ಮತ್ತು ಜ್ಯೋತಿರವರು ಹೋಗಿ ದಿನಾಂಕ 04-09-2016 ರಂದು ಮನೆ ಕಟ್ಟಲು ತಳಪಾಯದ ಪೂಜೆ ಮಾಡಿಸಿದ ವಿಚಾರದಲ್ಲಿ ಜಗಳ ತೆಗೆದು ಆಶ್ಲೀಲ ಶಬ್ದಗಳಿಂದ ಬೈದು ದೊಣ್ಣೆಯಿಂದ ಕಾಳಪ್ಪರವರಿಗೆ ಹೊಡೆದು ಗಾಯಪಡಿಸಿದ್ದು, ಈ ಬಗ್ಗೆ ಕಾಳಪ್ಪನವರು ನೀಡಿದ ದೂರಿಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ

                  ಗೋಣಿಕೊಪ್ಪ ಠಾಣಾ ಸರಹದ್ದಿನ ಹರಿಶ್ಚಂದ್ರಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ದಿನಾಂಕ 22-10-2016 ರಂದು ತಿತಿಮತಿಯ ನಿವಾಸಿ ಪಂಜರಿಎರವರ ನಾಗರವರು ಚೆನ್ನಂಗೊಲ್ಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ರಾತ್ರಿಯಾದ ಕಾರಣ ಗೋಣಿಕೊಪ್ಪದ ಹರಿಶ್ಚಂದ್ರಪುರದಲ್ಲಿರುವ ಜಮ್ಮಡ ಜಯಂತ್ ರವರ ಲೈನು ಮನೆಯಲ್ಲಿ ವಾಸವಿರುವ ಅವರ ತಮ್ಮನ ಮನೆಗೆ ಹೋಗುತ್ತಿರುವಾಗ ಜಮ್ಮಡ ಜಯಂತ್ರವರ ಲೈನ್ ಮನೆಯಲ್ಲಿ ವಾಸವಿರುವ ರಾಜರವರು ನಾಗರವರನ್ನು ಕುರಿತು ಹಣವನ್ನು ಕೇಳಿದ್ದು ನಾಗರವರು ನಿರಾಕರಿಸಿದಾಗ ಜಗಳವಾಡಿ ಕುಡಿದ ಮತ್ತಿನಲ್ಲಿ ಕತ್ತಿಯಿಂದ ನಾಗರವರ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ನಾಗರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಅಪಘಾತ ಪ್ರಕರಣ 
                      ದಿನಾಂಕ: 22-10-16ರಂದು ಕೊಣಂಜಗೇರಿಯ ವಾಸಿ ಮಲ್ಲಡ ಸೋಮಣ್ಣನವರು ಅವರ ಪತ್ನಿ ರೋಹಿಣಿ ಮತ್ತು ಮಗಳು ಕೃತಿರವರೊಂದಿಗೆ ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ಬಂದು ರಾತ್ರಿ ವಾಪಾಸ್ಸು ಮನೆಗೆ ಕೆಎ.12.ಬಿ.3770 ರ ಆಟೋ ರಿಕ್ಷಾದಲ್ಲಿ ಕಡಂಗದ ಕಡೆಗೆ ಹೋಗುತ್ತಿರುವಾಗ ಅರಮೇರಿ ಗ್ರಾಮದ ತಿರುವು ರಸ್ತೆಯ ಬಳಿ ಆಟೋ ಚಾಲಕ ಶಬರೀಶ್ ರವರು ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ರಿಕ್ಷಾವು ರಸ್ತೆಗೆ ಮಗುಚಿ ಬಿದ್ದು ಮೂವರಿಗೂ ಗಾಯಗಳಾಗಿದ್ದು ಈ ಬಗ್ಗೆ ನೀಡಿದ ದೂರಿಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವಿದ್ಯಾರ್ಥಿ ಆತ್ಮಹತ್ಯೆ 
                   ಮಡಿಕೇರಿ ತಾಲೂಕಿನ ಕುಯ್ಯಂಗೇರಿ ಗ್ರಾಮದ ತಂಬಂಡ ಸೋಮಯಯ್ಯರವರ ಮಗ ಕುಂಬಳದಾಳು ಸರ್ಕಾರಿ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿ ಉದಯ ಎಂಬುವವನು ದಿನಾಂಕ 23-10-2016 ರಂದು ಹಗಲು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಾಲ್ ನ ಮೇಲ್ಛಾವಣಿಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು, ದಿನಾಂಕ 24-10-2016 ರಿಂದ ಶಾಲೆಯು ಪ್ರಾರಂಭವಾಗುತ್ತಿದ್ದು ರಜೆಯಲ್ಲಿ ಹೋಂವರ್ಕ್ ಮಾಡದೇ ಇದ್ದು ಇದೇ ವಿಚಾರದಲ್ಲಿ ಮಗ ಉದಯನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಂದೆ ಸೋಮಯ್ಯನವರು ನೀಡಿದ ದೂರಿಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.