Thursday, October 27, 2016

ಹೊಳೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ

              ದಿನಾಂಕ 26-10-2016 ರಂದು ಮಡಿಕೇರಿ ತಾಲೂಕಿನ ಕಿಗ್ಗಾಲು ಗ್ರಾಮದ ಕಾವೇರಿ ಹೊಳೆಯಲ್ಲಿ ಅಂದಾಜು 50 ರಿಂದ 55 ವರ್ಷ ಪ್ರಾಯುದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು ಈ ಬಗ್ಗೆ ಬಾಡಗ ಗ್ರಾಮದ ಕುಂಞಪ್ಪರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕೊಲೆ ಬೆದರಿಕೆ

                ಹಳೆಕೂಡಿಗೆ ಹೆಗ್ಗಡಳ್ಳಿ ಗ್ರಾಮದ ನಿವಾಸಿ ಪ್ರಮೀಳ ಎಂಬುವವರು ದಿನಾಂಕ 14-10-2016 ರಂದು ರಾತ್ರಿ ಸಮಯ ತನ್ನ ವಾಸದ ಮನೆಯ ಮುಂಭಾಗ ರಸ್ತೆಯಲ್ಲಿ ನಿಂತುಕೊಂಡಿರುವಾಗ ಅದೇ ಗ್ರಾಮದ ನಿವಾಸಿಗಳಾದ ದರ್ಶನ್‌, ಹರೀಶ ರವರು ಬಂದು ಆಕೆಯ ಮಗನ ಮೇಲಿನ ಹಳೇ ವೈಷಮ್ಯದಿಂದ ಜಗಳ ತೆಗೆದು ಅಶ್ಲೀಲ ಪದಗಳಿಂದ ಬೈಯ್ದು ಆಕೆಯ ಮಗ ಸಿಕ್ಕಿದರೆ ಕತ್ತಿಯಿಂದ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ಕೊಟ್ಟ ಪುಕಾರಿಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ನಿಂತಿದ್ದ ವ್ಯಕ್ತಿಗೆ ಆಟೋ ಡಿಕ್ಕಿ

               ದಿನಾಂಕ 25-10-2016 ರಂದು ಸಂಜೆ ನಲ್ಲೂರು ಶಿರಂಗಾಲ ಗ್ರಾಮದ ಅಂಬೇಡ್ಕರ್‌ ಬೀದಿಯ ನಿವಾಸಿ ರೂಪರವರ ಮಗ ನಿಖಿಲ್‌ ರವರು ತಮ್ಮ ಮನೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಅದೇ ಗ್ರಾಮದ ನಿವಾಸಿ ಚೆನ್ನಕೇಶವ ಎಂಬವರು ಅವರ ಬಾಪ್ತು ಕೆಎ-12–8982 ರ ಆಟೋ ರಿಕ್ಷಾವನ್ನು ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ನಿಖಿಲ್‌ನಿಗೆ ಡಿಕ್ಕಿಪಡಿಸಿ ಆಟೋ ರಿಕ್ಷಾವನ್ನು ನಿಲ್ಲಿಸದೆ ಹೊರಟು ಹೋಗಿದ್ದು ಈ ಬಗ್ಗೆ ರೂಪರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಬೀಟಿ ಮರ ಕಳವು ಪ್ರಕರಣ

                   ಸಿದ್ದಾಪುರದ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ಎಂ.ಬಿ.ಚಂಗಪ್ಪ ರವರ ಹನಿಫಾರಂ ತೋಟದಿಂದ ಹಂಸ, ಲತೀಫ್ ಹಾಗೂ ಇತರರು ಸೇರಿ ಒಣಗಿದ ಬೀಟಿ ಮರವನ್ನು ಬೀಳಿಸಿ ದಿನಾಂಕ 24-10-2016 ರಂದು ಲತೀಫನಿಗೆ ಸೇರಿದ ವಾಹನದಲ್ಲಿ 2 ತುಂಡುಗಳನ್ನು ಸಾಗಿಸುತ್ತಿದ್ದಾಗ ಕುಶಾಲನಗರದಲ್ಲಿ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದು, ಅರಣ್ಯ ಇಲಾಖೆಯವರು ತೋಟದ ಮೇಲ್ವಿಚಾರಕರಾದ ಬೋಪಯ್ಯರರವರಿಗೆ ತಿಳಿಸಿದ ಮೇರೆಗೆ ತೋಟಕ್ಕೆ ಹೋಗಿ ನೋಡಲಾಗಿ ಇನ್ನೂ 3 ತುಂಡುಗಳು ಇದ್ದು ಇದರ ಅಂದಾಜು ಬೆಲೆ 2,00,000 ರೂ ಆಗಿದ್ದು ಹಂಸ, ಲತೀಫ್ ಹಾಗೂ ಇತರರ ಮೇಲೆ ತೋಟದ ಮೇಲ್ವಿಚಾರಕರಾದ ಬೋಪಯ್ಯರವರು ನೀಡಿದ ಪುಕಾರಿಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ ವ್ಯಕ್ತಿಯ ಬಂಧನ

                ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿಗೆ ಸೇರಿದ ಹಳೆ ಕೋಟೆ ಗ್ರಾಮದ ಉದಯಕುಮಾರ್ ಎಂಬುವವರು ದಿನಾಂಕ 26-10-2016 ರಂದು ತನ್ನ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಕುಶಾಲನಗರ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಕೆ. ಇ. ಮಹೇಶ್ ಮತ್ತು ಸಿಬ್ಬಂದಿಯವರು ಧಾಳಿ ಮಾಡಿ ಉದಯಕುಮಾರ್ ರವರನ್ನು ವಶಕ್ಕೆ ಪಡೆದುಕೊಂಡು ಮಾರಾಟ ಮಾಡಲು ಇಟ್ಟಿದ್ದ 90 ಎಂ ಎಲ್ ನ 80 ಒರಿಜಿನಲ್ ಚಾಯ್ಸ್ ಪ್ಯಾಕೆಟ್‌ ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.