Sunday, October 2, 2016

ವಿನಾಕಾರಣ ಮಹಿಳೆ ಮೇಲೆ ಹಲ್ಲೆ, ಕೊಲೆ ಬೆದರಿಕೆ: 

     ವಿನಾಕಾರಣ ವ್ಯಕ್ತಿಯೊಬ್ಬರ ಮನೆಗೆ ಕಲ್ಲು ಬಿಸಾಡಿ ಮಹಿಳೆ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಕುಶಾಲನಗರದ ಕಾಳಮ್ಮ ಕಾಲೋನಿಯಲ್ಲಿ ದಿನಾಂಕ 29-9-2016 ರಂದು ನಡೆದಿದೆ.  ಕಾಳಮ್ಮ ಕಾಲೋನಿ ನಿವಾಸಿ ಫಿರ್ಯಾದಿ ಹೆಚ್.ಟಿ, ಗೋಪಾಲ ಎಂಬವರು ತನ್ನ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆರೋಪಿಗಳಾದ ಕಾಳಮ್ಮ ಕಾಲೋನಿ ನಿವಾಸಿಗಳಾದ ಮೀನಾ ಹಾಗು ಮೈಲಾರಿ ಎಂಬವರು ಫಿರ್ಯಾದಿಯವರ ಮನೆಗೆ ಕಲ್ಲು ತೂರಾಟ ನಡೆಸಿ ಫಿರ್ಯಾದಿಯ ತಾಯಿಯವರ ಮೇಲೆ ಕಲ್ಲಿನಿಂದ ಮತ್ತು ಕೈಗಳಿಂದ ಹಲ್ಲೆ ನಡೆಸಿದ್ದು ಅಲ್ಲದೆ ಫಿರ್ಯಾದಿ ಗೋಪಾಲನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ 1-10-2016 ರಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಕ್ಷುಲ್ಲಕ ಕಾರಣಕ್ಕೆ ನಿಂದನೆ, ಹಲ್ಲೆ:
      ವ್ಯಕ್ತಿಯೊಬ್ಬರು ತನ್ನ ಮನೆಯ ಹತ್ತಿದಲ್ಲಿ ಶೇಖರಿಸಿಟ್ಟಿದ್ದ ಸೌದೆಗಳನ್ನು ಯಾರೋ ತೆಗೆದ ವಿಚಾರದಲ್ಲಿ ಜಗಳ ಮಾಡಿ ತನ್ನ ಪತ್ನಿ ಹಾಗು ತನ್ನ ಅಣ್ಣನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  ಗೋಣಿಕೊಪ್ಪ ಠಾಣಾ ಸರಹದ್ದಿನ ಕುಟ್ಟಂದಿ ಗ್ರಾಮದಲ್ಲಿ ವಾಸವಾಗಿರುವ ಫಿಯಾದಿ ಶ್ರೀಮತಿ ಪುಷ್ಪ ರವರ ಪತಿನ ಸಹೋದರನಾದ ಪಿ.ಎ. ಗಣಪತಿ ಎಂಬವರು ಫಿರ್ಯಾದಿಯವರ ಮನೆಯಲ್ಲಿ ತನ್ನ ಪತ್ನಿ ಪ್ರತಿಮಾಳೊಂದಿಗೆ ವಾಸವಾಗಿದ್ದು, ಸದರಿ ಗಣಪತಿರವರ ಮನೆಯ ಮುಂದೆ ಇಟ್ಟಿದ್ದ ಸೌದೆಯನ್ನು ಯಾರೋ ತೆಗೆದ ವಿಚಾರದಲ್ಲಿ  ಫಿರ್ಯಾದಿ ಪುಷ್ಪಾ, ಪ್ರತಿಮಾ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾಗ ಇದನ್ನು ವಿಚಾರಿಸಿದ ಆತನ ಪತ್ನಿ ಪ್ರತಿಮಾ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು,  ನಂತರ ಅಣ್ಣ ಚಂಗಪ್ಪನವರ ಮೇಲೆಯು ಸಹ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಹಣದ ವಿಚಾರದಲ್ಲಿ ದಾರಿ ತಡೆದು ಹಲ್ಲೆ:
     ಮಹಿಳೆಯೊಬ್ಬರು  ಮತ್ತೋರ್ವ ಮಹಿಳೆಯ ದಾರಿ ತಡೆದು  ಮಹಿಳಾ ಸಮಾಜದ ಸಂಘದ ವಿಚಾರದಲ್ಲಿ ಖಾಲಿ ಚೆಕ್ ಗಳಿಗೆ ಸಹಿಮಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿರುವ ಘಟನೆ ಮಡಿಕೇರಿ ಹತ್ತಿರದ ಮುರ್ನಾಡು ಗ್ರಾಮದಲ್ಲಿ ನಡೆದಿದೆ.  ದಿನಾಂಕ 1-10-2016 ರಂದು  ಮುರ್ನಾಡು ಗ್ರಾಮದ ಮಹಿಳಾ ಸಮಾಜದ ಸಂಘದ ಸಭೆಯು ನಡೆದಿದ್ದು, ಖಾಲಿ ಚೆಕ್ ಗಳಿಗೆ ಸಹಿಹಾಕುವ ವಿಚಾರದಲ್ಲಿ ಕೊಡಂಬೂರು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಚೋಂದಮ್ಮ ಎಂಬವರ ಮೇಲೆ ಆರೋಪಿ ಶ್ರೀಮತಿ ಬಿಂದು ರಾಣಿ ಎಂಬವರು ದಾರಿ ತಡೆದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.