Monday, October 10, 2016

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ: 

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಇಬ್ಬರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಡಿಕೇರಿ ತಾಲೋಕಿನ ಮುರ್ನಾಡುವಿನಲ್ಲಿ ನಡೆದಿದೆ. ಮೂಲತ: ಹಾಸನ ಜಿಲ್ಲೆಯ ಬಂದಿಹಳ್ಳಿ ಗ್ರಾಮದ ನಿವಾಸಿ ಬಿ.ಕೆ. ಚರಣ್ ಎಂಬವರು  ಹಾಲಿ ಮುರ್ನಾಡು ಗ್ರಾಮದ ನಿವಾಸಿ ಜಗದೀಶ್ ಅಯ್ಯಪ್ಪ ಎಂಬವರಲ್ಲಿ ಚಾಲಕ ವೃತ್ತಿ ಮಾಡಿಕೊಂಡಿದ್ದು, ದಿನಾಂಕ 9-10-2016 ರಂದು ರಾತ್ರಿ ಮಡಿಕೇರಿ ತಾಲೋಕು  ಹೊದ್ದೂರು ಗ್ರಾಮದ ನಿವಾಸಿಗಳಾದ ಪಂಚಮ ಹಾಗು ಇನ್ನೊಬ್ಬ ವ್ಯಕ್ತಿ ಫಿರ್ಯಾದಿ ಚರಣ್ ರವರು ವಾಸವಾಗಿರುವ ಮನೆಯ ಹತ್ತಿರ ಬಂದು ಅವರನ್ನು ಮನೆಯಿಂದ ಹೊರಗಡೆ ಬರುವಂತ ಕರೆದು ಮಾಲಿಕ ಜಗದೀಸ ಅಯ್ಯಪ್ಪನವರಲ್ಲಿಂದ ಕೆಲಸ ಬಿಟ್ಟುಹೋಬೇಕೆಂದು ಬೆದರಿಕೆ ಹಾಕಿ ಫಿರ್ಯಾದಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಅಕ್ರಮ ಜೂಜು, ಪ್ರಕರಣ ದಾಖಲು: 

     ಅಕ್ರಮ ಜೂಜಾಡುತ್ತಿದ್ದ ಜನರ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾಧಿಕಾರಿ ಶ್ರೀ ಹೆಚ್.ಎಂ. ಮರಿಸ್ವಾಮಿ ಯವರಿಗೆ ದೊರೆತ ಖಚಿತ ಮಾಹಿತಿ ಆದಾರದ ಮೇರೆಗೆ ದಿನಾಂಕ 9-10-2016 ರಂದು ಸಂಜೆ 5-00ಗಂಟೆಗೆ ಸಿಬ್ಬಂದಿಯೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ದೊಡ್ಡಳ್ಳಿ ಗ್ರಾಮದ ವಿರೂಪಾಕ್ಷ ಎಂಬವರ ಮನೆಯ ಮುಂಭಾಗದ ಅಂಗಳದಲ್ಲಿ ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿದ್ದ 5 ಮಂದಿಯ ಮೇಲೆ ದಾಳಿ ನಡೆಸಿ ಸದರಿ ವ್ಯಕ್ತಿಗಳಿಂದ ರೂ 3,850/- ನಗದು ಹಣ ಹಾಗು ಜೂಜಾಟಕ್ಕೆ ಬಳಸಿದ ಇಸ್ಪೀಟ್ ಹಾಳೆ ಮತ್ತು ಇತರೆ ಸಾಮಾಗ್ರಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ವೇಗದ ಚಾಲನೆ, ಅಪಘಾಕ್ಕೀಡಾದ ಬೈಕ್. 

     ವೇಗದ ಚಾಲನೆಯಿಂದಾಗಿ ಸವಾರ ಮೋಟಾರ್ ಸೈಕಲ್ಲಿನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಹಿಂಬದಿ ಸವಾರ ಗಾಯಗೊಂಡ ಘಟನೆ ಕುಶಾಲನಗರದಲ್ಲಿರುವ ಫಿಲ್ಮ್ ಥಿಯೇಟರ್ ಹತ್ತಿರ ಸಂಭವಿಸಿದೆ. ದಿನಾಂಕ 7-10-2016 ರಂದು ಕುಶಾಲನಗರ ಠಾಣಾ ಸರಹದ್ದಿನ ಸಿದ್ದಲಿಂಗಪುರ ಗ್ರಾಮ ನಿವಾಸಿ ರಾಬಿನ್ ರವರು ಮಹೇಶ ಎಂಬವರ ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದು, ಸವಾರ ಮಹೇಶ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕ್ ನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದು ಹಿಂಬದಿ ಸವಾರ ರಾಬಿನ್ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.