Tuesday, October 11, 2016

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:
     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆಬ್ಬಾಲೆ ಗ್ರಾಮದಲ್ಲಿ ನಡೆದಿದೆ. ಹೆಬ್ಬಾಲೆ ಗ್ರಾಮದ ನಿವಾಸಿ ಜವರಯ್ಯ (72)  ನವರಿಗೆ 4 ಜನ ಮಕ್ಕಳಿದ್ದು, ಎಲ್ಲರೂ ಮೃತಪಟ್ಟ ನಂತರ ಜವರಯ್ಯ ಸೊಸೆ ಲಕ್ಷ್ಮಿಯೊಂದಿಗೆ ಇದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು ಸಂಸಾರವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕವಾಗಿ ನೊಂದಿದ್ದು, ದಿನಾಂಕ  7-10-216 ರಂದು ಮದ್ಯಾಹ್ನ 01-30 ಗಂಟೆಗೆ ಸೊಸೆ ಲಕ್ಷ್ಮಿಯವರ ಮನೆಯಲ್ಲಿ ಊಟ ಮಾಡಿ ಅಂಗಡಿಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಶಿರಂಗಾಲ ಗ್ರಾಮದಲ್ಲಿರುವ ಜೋಯಿಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರಿಗೆ ಕೆಎಸ್ಆರ್ ಟಿಸಿ ಬಸ್ಸು ದಿಕ್ಕಿ, ಕಾರು ಚಾಲಕನಿಗೆ ಗಾಯ:
     ವ್ಯಕ್ತಿಯೊಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೆಯಿಂದ ಬಸ್ಸೊಂದು ಡಿಕ್ಕಿಯಾಗಿ ಕಾರಿನ  ಚಾಲಕ ಗಾಯಗೊಂಡ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ.   ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬೊಳ್ಳರು ಗ್ರಾಮದ ನಿವಾಸಿ ಕೆ.ಡಿ. ಬಾಲಕೃಷ್ಣ ಎಂಬವರು ದಿನಾಂಕ 10-10-2016 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ತಮ್ಮ ಬಾಪ್ತು ಕಾರಿನಲ್ಲಿ ಕುಶಾಲನಗರ ಕಡೆಯಿಂದ ಬೊಳ್ಳೂರು ಕಡೆಗೆ ಹೋಗುತ್ತಿದ್ದಾಗ ಗುಡ್ಡೆಹೊಸೂರು ಬಳಿ ಹಿಂದೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಜಖಂ ಗೊಂಡು ಕಾರಿನ ಚಾಲಕ ಕೆ.ಡಿ. ಬಾಲಕೃಷ್ಣರವರು ಗಾಯಗೊಂಡಿದ್ದು,  ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.