Thursday, October 13, 2016

ಮನೆಕಳವು:
 
     ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳರು ನುಗ್ಗಿ ಚಿನ್ನಾಭರಣ ಹಾಗು ನಗದನ್ನು ಕಳವು ಮಾಡಿದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚಡಾವು ಎಂಬಲ್ಲಿ ನಡೆದಿದೆ.  ದಿನಾಂಕ 19-9-2016 ರಂದು ಸಂಜೆ ಸಂಪಾಜೆ ಗ್ರಾಮದ ಚಡಾವು ನಿವಾಸಿ ಶ್ರೀಮತಿ ಜಯಂತಿ ಎಂಬವರು ಪಕ್ಕದ ಮನೆಗೆ ಹೋಗಿದ್ದ ಸಂದರ್ಭವನ್ನು ಉಪಯೋಗಿಸಿದ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಹಾಗು ನಗದು ರೂ.950/- ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಮುಂಬೈ ಮೂಲದ ವ್ಯಕ್ತಿ ಸಾವು:
 
     ಮುಂಬೈ ಮೂಲದ ವ್ಯಕ್ತಿಯೊಬ್ಬರು ವಿರಾಜಪೇಟೆ ಸಮೀಪದ ಅಮ್ಮತ್ತಿ ಬಳಿಯ ರೇಸಾರ್ಟ್ ನಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.  ಮುಂಬೈ ಮೂಲಕ ಹೀನಾ ಮಧುಕಾಂತ್ ಲೋಡಾಯಿ ಎಂಬವರು ಫಿರ್ಯಾದಿ ಮಿಲಿಂದ್ ಮಧುಕಾಂತ್ ಹಾಗು ಸಂಸಾರದೊಂದಿಗೆ  ಕೊಡಗು ಜಿಲ್ಲೆಗೆ ದಿನಾಂಕ 9-10-2016 ರಂದು ಪ್ರವಾಸಕ್ಕೆಂದು ಬಂದು ಅಮ್ಮತ್ತಿಯ ಅಲಾತ್ ಕಾರ್ಡ್ ಹೋಂ ಸ್ಟೇ ನಲ್ಲಿ ತಂಗಿದ್ದು,  ಹೀನಾ ಮಧುಕಾಂತ್ ಲೋಡಾಯಿ ರವರು ಬಿ.ಪಿ ಮತ್ತು ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದು ದಿನಾಂಕ  ಈ ದಿನ ದಿನಾಂಕ 13-10-2016 ರಂದು ಅಸ್ವಸ್ಥಗೊಂಡ ಅವರನ್ನು ಅಮ್ಮತ್ತಿಯ ಆರ್.ಐ. ಹೆಚ್.ಪಿ. ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅವರು ಮೃತಪಟ್ಟಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.