Friday, October 14, 2016

ಕಾರುಗಳ ಮುಖಾಮುಖಿ ಒಬ್ಬರಿಗೆ ಗಾಯ:

     ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಒಬ್ಬರು ಗಾಯಗೊಂಡ ಘಟನೆ ಸೋಮವಾರಪೇಟೆ ಹತ್ತಿರದ ಹಾನಗಲ್ಲು ಗ್ರಾನದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಹಾನಗಲ್ಲು ಗ್ರಾಮದ ನಿವಾಸಿ ಕೆ.ಎಸ್. ಮೂರ್ತಿ ಎಂಬವರು ದಿನಾಂಕ 13.10.2016 ರಂದು 09:30 ಗಂಟೆಗೆ ಅವರ ಬಾಬ್ತು ಕೆಎ 12 ಎನ್ 7944 ರ ಇಂಡಿಗೋ ಸಿ.ಎಸ್.ಕಾರನ್ನು ಚಾಲನೆ ಮಾಡಿಕೊಂಡು ಸೋಮವಾರಪೇಟೆಯಿಂದ ಹೆಬ್ಬಾಲೆ ಗ್ರಾಮಕ್ಕೆ ಹೋಗುತ್ತಿರುವಾಗ ಅಬ್ಬೂರು ಕಟ್ಟೆ ಹತ್ತಿರ ಎದುರು ಗಡೆಯಿಂದ ಕೆಎ 18 ಪಿ 2696 ರ ಲ್ಯಾನ್ಸರ್ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಕೆ.ಎಸ್. ಮೂರ್ತಿ ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿಯ ತಲೆಯ ಭಾಗಕ್ಕೆ ರಕ್ತಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಸೋಮವಾರಪೇಟೆ ಠಾಣ ಯಲ್ಲಿ ಪ್ರಕರಣ ದಾಖಲಾಗಿದೆ.

ಮರತುಂಬಿದ ಲಾರಿ ಅಪಘಾತ ಗಾಯಗೊಂಡ ಕ್ಲೀನರ್:

     ಮರತುಂಬಿದ ಲಾರಿಯೊಂದು ರಸ್ತೆಯ ಬದಿಯಲ್ಲಿರುವ ಗುಂಡಿಗೆ ಬಿದ್ದು, ಲಾರಿ ಕ್ಲೀನರ್ ಗಾಯಗೊಂಡ ಬಗ್ಗೆ ವರದಿಯಾಗಿದೆ. ಈ ದಿನ ದಿನಾಂಕ 13.10.2016 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರದಹದ್ದಿನ ಕಡಗದಾಳು ಗ್ರಾಮದಲ್ಲಿ ಫಿರ್ಯಾದಿ ಶಾಹಿದ್ ಜಸ್ವೀರ್ ರವರಿಗೆ ಸೇರಿದ ಮರ ತುಂಬಿದ ಲಾರಿಯನ್ನು ಅದರ ಚಾಲಕ ಆಕ್ಬರ್ ಆಲಿರವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಅಂಚಿನಲ್ಲಿರುವ ಗುಂಡಿಗೆ ಬಿಳಿಸಿದ ಪರಿಣಾಮ ಲಾರಿಯ ಕ್ಲೀನರ್ ಲಿಂಗಾರೆಡ್ಡಿ, ಚಾಲಕ ಆಕ್ಬರ್ ಆಲಿ ಮತ್ತು ಫಿರ್ಯಾದಿ ಶಾಹಿದ್ ಜಸ್ವೀರ್ ರವರುಗಳು ಗಾಯಗೊಂಡಿದ್ದು, ಈ ಸಂಬಂಧ ಫಿರ್ಯಾದಿ ಶಾಹಿದ್ ಜಸ್ವೀರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದಸರಾ ಮಂಟಪ ನಿರ್ಮಿಸುವ ವಿಚಾರದಲ್ಲಿ ಜಗಳ, ವ್ಯಕ್ತಿಯ ಕೊಲೆಗೆ ಯತ್ನ:

    ದಸರಾ ಮಂಟಪ ನಿರ್ಮಿಸುವ ವಿಚಾರದಲ್ಲಿ ಸಮಿತಿಯ ಉಪಾದ್ಯಕ್ಷರೊಂದಿಗೆ ವ್ಯಕ್ತಿಯೊಬ್ಬರು ಜಗಳ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 10-10-2016ರಂದು ಪಿರ್ಯಾದಿ ಅಮ್ಮತ್ತೀರ ವಿಕ್ರಮ್ ಎಂಬವರು ಅರವತ್ತೋಕ್ಲು ಗ್ರಾಮದ ದಸರ ಸಮಿತಿಯ ಉಪಾದ್ಯಕ್ಷನಾಗಿ ಕೆಲಸ ಮಾಡಿಕೊಂಡಿರುವಾಗ್ಗೆ ಆರೋಪಿ ಅರವತ್ತೊಕ್ಲು ಗ್ರಾಮದ ದೀಪು ದೇವಯ್ಯ ಎಂಬವರು ದಸರಾ ಮಂಟಪ ತಯಾರಿಸುವ ಸ್ಥಳವಾದ ಚೋಡುಮಡ ಕಾಂಪ್ಲೇಕ್ಸ್‌‌ ಬಳಿ ಬಂದು ದಸರ ಮಂಟಪ ನಿರ್ಮಿಸುವ ವಿಚಾರದಲ್ಲಿ ಗಲಾಟೆ ಮಾಡಿ ಹೋಗಿದ್ದು , ನಂತರ ದಿನಾಂಕ 13-10-2016 ರಂದು ಸಮಯ 19.30 ಗಂಟೆಗೆ ಚೋಡುಮಡ ಕಾಂಪ್ಲೇಕ್ಸ್‌‌ ಬಳಿ ದಸರ ಮಂಟಪ ನಿರ್ಮಿಸಿದ ಜಾಗದಲ್ಲಿ ಕಸವನ್ನು ಸ್ವಚ್ಚ ಮಾಡುತ್ತಿದ್ದಾಗ ಆರೋಪಿಯು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ಫಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದು ಅಲ್ಲದೆ ಕಲ್ಲಿನಿಂದ ಮುಖಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೋಟಾರ್ ಸೈಕಲ್ ಗೆ ಆಟೋ ರಿಕ್ಕಾ ಡಿಕ್ಕಿ:

     ಮೋಟಾರ್ ಸೈಕಲ್ ಗೆ ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ಲಾಣದ ಬಳಿ ನಡೆದಿದೆ. ಮಡಿಕೇರಿ ನಗರದ ಭಗವತಿ ನಗರದ ನಿವಾಸಿ ಫಿರ್ಯಾದಿ ಎ.ಎಸ್. ಅರುಣ ಎಂಬವರು ದಿನಾಂಕ 13-10-2016 ರಂದು ಸಂಜೆ 6-45 ಗಂಟೆಗೆ ತಮ್ಮ ಮೋಟಾರ್ ಸೈಕಲ್ ನಲ್ಲಿ ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ಲಾಣದ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಚಾವನ್ನು ಅದರ ಚಾಲಕ ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಫಿರ್ಯಾದಿಯವರ ಮೋಟಾರ್ ಸೈಕಲ್ ಜಖಂಗೊಂಡು ಫಿರ್ಯಾದಿಯವರು ಗಾಯಗೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.