Sunday, October 16, 2016

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ

           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಗೋಣಿಕೊಪ್ಪಲುವಿನ ಕೈಕೇರಿಯಲ್ಲಿ ನಡೆದಿದೆ. ಕೈಕೇರಿ ಗ್ರಾಮದ ಎಂ ವಿನೋದ್ ಎಂಬುವವರು ಗೋಣಿಕೊಪ್ಪ ನಗರದಲ್ಲಿ ಆಟೋ ಓಡಿಸಿಕೊಂಡಿದ್ದು ದಿನಾಂಕ 15-10-2016 ರಂದು ಸಮಯ 8-30 ಪಿ ಎಂ ಗೆ ಒಬ್ಬ ವ್ಯಕ್ತಿ ವಿನೋದ್ ರವರ ಹತ್ತಿರ ಬಂದು ಕೈಕೇರಿ ಗ್ರಾಮಕ್ಕೆ ಬಾಡಿಗೆಗೆ ಹೋಗಬೇಕೆಂದು ಹೇಳಿ ಬಾಡಿಗೆಗೆ ಕರೆದುಕೊಂಡು ಕೈಕೇರಿ ಗ್ರಾಮದ ಕ್ಯಾಂಡಲ್ ಪ್ಯಾಕ್ಟರಿ ಹತ್ತಿರ ತಲುಪುವಾಗ್ಗೆ ಆಟೋದಲ್ಲಿದ್ದ ವ್ಯಕ್ತಿ ಆಟೋ ವನ್ನು ನಿಲ್ಲಿಸುವಂತೆ ತಿಳಿಸಿದ ಮೇರೆ ನಿಲ್ಲಿಸಿದಾಗ ಅಲ್ಲಿಗೆ ಗೋಣಿಕೊಪ್ಪದಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಚೇತನ್, ಅಭಿ ಮತ್ತು ಇತರರು ಬಂದು ವಿನೋದ್ ರವರನ್ನು ಆಟೋ ರಿಕ್ಷಾದಿಂದ ಎಳೆದು ಹಾಕಿ ವಿನಾ ಕಾರಣ ಜಗಳ ತೆಗೆದು ಹಾಕಿ ಸ್ಟಿಕ್ ನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಸ್ತಿ ವಿವಾದ ಉಭಯ ಕಡೆಯವರ ಮೇಲೆ ಪ್ರಕರಣ ದಾಖಲು

        ದಿನಾಂಕ 15-10-2016 ರಂದು ಸಮಯ 11-00 ಗಂಟೆಗೆ ಹರಿಹರ ಗ್ರಾಮದ ಬಿ ಎಂ ಉತ್ತಯ್ಯರವರು ತನ್ನ ಸ್ವಾದೀನದಲ್ಲಿರುವ ಜಾಗದಲ್ಲಿ ಕೆಲಸದವರಾದ ಸಿದ್ದ ಮತ್ತು ಪುಟ್ಟ ರವರೊಂದಿಗೆ ಕೆಲಸ ಮಾಡುತ್ತಿರುವಾಗ ಸದರಿ ಜಾಗಕ್ಕೆ ಅದೇ ಗ್ರಾಮದ ಟಿ ಸಿ ಉತ್ತಯ್ಯನವರು ಕೋವಿಯನ್ನು ಹಿಡಿದುಕೊಂಡು ಬಂದು ಆಸ್ತಿ ವಿಚಾರದಲ್ಲಿ ಜಗಳವಾಡಿ ಸಿದ್ದ ಮತ್ತು ಪುಟ್ಟರವರಿಗೆ ಕೈಯಿಂದ ಹೊಡೆದಿರುವುದಾಗಿ ಪುಕಾರು ನೀಡಿರುತ್ತಾರೆ.
        ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಇದೇ ದಿನದಂದು ಸಮಯ 10-00 ಗಂಟೆಗೆ ಹರಿಹರ ಗ್ರಾಮದ ಬಾಚೀರ ಎಂ ಉತ್ತಯ್ಯ, ಬಾಚೀರ ಎಂ ಕುಶಾಲಪ್ಪ,  ಬಾಚೀರ ಕಾಶಿ , ಬಾಚೀರ ರಾಜ, ಬಾಚೀರ ಲಾಲ ಮತ್ತು ಇತರರು ಅದೇ ಗ್ರಾಮದ  ಬಿ ಎಂ ಉತ್ತಯ್ಯರವರ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿ ತೋಟದ ಗೇಟನ್ನು ಎಳೆದು ಹಾಕಿ, ತಂತಿ ಬೇಲಿಯನ್ನು ಹತ್ತರಿಸಿ, ತಂತಿ ಕಂಬಗಳನ್ನು ಮುರಿದು ಹಾಕಿ ನಷ್ಟಪಡಿಸಿ ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಲು ಪ್ರಯತ್ನಿಸಿ, ಪ್ರಾಣ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಉಭಯ ಕಡೆಯವರ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತಾರೆ.
ಕಾರು ಅಪಘಾತ 

                ದಿನಾಂಕ 14-10-2016 ರಂದು ಸಮಯ ರಾತ್ರಿ 8-30 ಗಂಟೆಗೆ ಮಡಿಕೇರಿ ಕುಶಾಲನಗರ ರಸ್ತೆಯ ಇಬ್ನಿವಳವಾಡಿ ಗ್ರಾಮದ ರಸ್ತೆಯಲ್ಲಿ ವಿಟ್ಲದಿಂದ ಕುಶಾಲನಗರದ ಕಡೆಗೆ ಹೋಗುತ್ತಿದ್ದ ಕಾರು ಅಪಘಾತಗೊಂಡು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ. ಕಾಸರಗೋಡಿನ ನಿವಾಸಿ ಅಬ್ದುಲ್ ಬಷೀರ್ ರವರು ಪತ್ನಿ ಫಾತಿಮಾ ಹಾಗೂ ನಾದಿನಿ ಶಮೀಮರವರೊಂದಿಗೆ ಕುಶಾಲನಗರಕ್ಕೆ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಸಿಂಕೋನ ಬಳಿಯ ತಿರುವಿನಲ್ಲಿ ಬಷೀರ್್ರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಅವರ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಮಗುಚಿಕೊಂಡು ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ ಟ್ರ್ಯಾಕ್ಟರ್ ವಶ

                ಸೋಮವಾರಪೇಟೆ ಬಳಿಯ ಶಾಂತಪುರ ಗ್ರಾಮದ ಹೇಮಾವತಿ ಹಿನ್ನೀರಿನ ಪ್ರದೇಶದಿಂದ ಶಾಂತಪುರ ಗ್ರಾಮದ ಎಸ್ ಎಸ್ ಮೂರ್ತಿರವರು ಅಕ್ರಮವಾಗಿ ಮರಳನ್ನು ತೆಗೆದು ಶೇಖರಿಸಿಟ್ಟಿದ್ದ ಮತ್ತು ಕೆ.ಎ-45-ಟಿ-702 ಟ್ರ್ಯಾಕ್ಟರ್ ನಲ್ಲಿ ತುಂಬಿಸಿದ್ದನ್ನು ಸೋಮವಾರಪೇಟೆಯ ವೃತ್ತ ನಿರೀಕ್ಷಕರು ಪತ್ತೆಹಚ್ಚಿದ್ದು ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ಗೂಡ್ಸ್ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ

                ದಿನಾಂಕ 14-10-2016 ರಂದು ಸಮಯ 8-00 ಗಂಟೆಗೆ ಕರಡಿಗೋಡು ಗ್ರಾಮದ ಸತೀಶ್ ಎಂಬುವವರು ಕೆಎ 12-ಎ-8563ರ ಅಶೋಕ್ ಲೈಲ್ಯಾಂಡ್ ದೋಸ್ತ ವಾಹನವನ್ನು ಚಾಲನೆ ಮಾಡಿಕೊಂಡು ಅಮ್ಮತ್ತಿಯಿಂದ ಸಿದ್ದಾಪುರದ ಕಡೆಗೆ ಹೋಗುತ್ತಿರುವಾಗ ಗುಹ್ಯಾ ಗ್ರಾಮದ ಅತ್ತಿತೋಪು ಕಾಫೀ ತೋಟದ ಹತ್ತಿರ ಸಿದ್ದಾಪುರ ಕಡೆಯಿಂದ ಟ್ರ್ಯಾಕ್ಟರ್ ಸಂಖ್ಯೆ ಕೆಎ-12-ಟಿ-7959 ಹಾಗೂ ಟ್ರೇಲರ್ ಸಂಖ್ಯೆ ಕೆಎ-12-ಟಿ-7060ರ ವಾಹನವನ್ನು ಅದರ ಚಾಲಕ ಬೇರರವರು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ಟ್ಯಾಕ್ಟರ್ ಅನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವುದಾಗಿ ಸತೀಶರವರು ಕೊಟ್ಟ ಪುಕಾರಿಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕಿಗೆ ಕಾರು ಡಿಕ್ಕಿ

              ದಿನಾಂಕ: 15-10-16 ರಂದು ವಿರಾಜಪೇಟೆಯ ಅಂಬಟ್ಟಿ ಗ್ರಾಮದ ಅಹಮ್ಮದ್ ಮತ್ತು ಅವರ ಪತ್ನಿ ಅಮೀನಾ ರವರು ಕೊಟ್ಟಮುಡಿಗೆ ಮದುವೆಗೆ ಕೆಎ.09. ವೈ. 5823 ರ ಮೋಟಾರ್ ಸೈಕಲಿನಲ್ಲಿ ಹೋಗಿ ವಾಪಾಸ್ಸು ಅಂಬಟ್ಟಿಗೆ ಬರುತ್ತಿರು ವಾಗ್ಗೆ ರಾತ್ರಿ ಸಮಯ ಕದನೂರು ಗ್ರಾಮದ ಪಾಲೇಕಂಡ ಹನ್ ರವರ ನರ್ಸರಿ ಮುಂಭಾಗದ ಸಾರ್ವ ಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-03-ಎಂಇ-7056 ರ ಹೊಂಡಾ ಸಿ.ಆರ್.ವಿ. ಕಾರನ್ನು ಅದರ ಚಾಲಕ ಬಿ. ಎ. ಸೋಮಣ್ಣರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಅಹಮದ್ ರವರ ಮೋಟಾರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರೂ ಬೈಕ್ ಸಮೇತ ರಸ್ತೆಗೆ ಬಿದ್ದು ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.