Tuesday, October 18, 2016

 ಬೀಗ ಮುರಿದು ಭತ್ತ ಕಳವು:
     ಮನೆಯೊಂದರ ಬೀಗ ಮುರಿದ ಕಳ್ಳರು ಕಣಜದಲ್ಲಿ ಶೇಖರಿಸಿಟ್ಟಿದ್ದ ಭತ್ತವನ್ನು ಕಳವು ಮಾಡಿಕೊಂಡು ಹೋದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಭಂಡಾರ ಗ್ರಾಮದಲ್ಲಿ ನಡೆದಿದೆ. ದಿನಾಂಕ 12-102-106 ರಂದು ಸೋಮವಾರಪೇಟೆ ತಾಲೋಕು ದೊಡ್ಡ ಭಂಡಾರ ಗ್ರಾಮದ ನಿವಾಸಿ ಡಿ.ಜೆ. ಶಿವರಾಂ ಎಂಬವರ ಮನೆಯ ಬೀವನ್ನು ಮುರಿದು ಮನೆಯ ಒಳಗಡೆ ಕಣಜದಲ್ಲಿ ಶೇಖರಿಸಿಟ್ಟಿದ್ದ ಸುಮಾರು 15,000 ರೂ ಮೌಲ್ಯದ 9 ಕ್ವಿಂಟಾಲ್ ಭತ್ತವನ್ನು ಅದೇ ಗ್ರಾಮದ ಕುಶಾಲ ಎಂಬ ವ್ಯಕ್ತಿ ಕಳವು ಮಾಡಿದ್ದು, ಈ ಸಂಬಂಧ ಶವರಾಂ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಪ್ರವೇಶ, ವ್ಯಕಿ ಮೇಲೆ ಹಲ್ಲೆ:

     ಮಡಿಕೇರಿ ನಗರ ಠಾಣಾ ವ್ಯಾಪ್ತಿಯ ಚಾಂಡೇಶ್ವರಿ ನಗದ ನಿವಾಸಿ ಡಾಲು ಎಂಬವರ ಮನೆಗೆ ದಿನಾಂಕ 16-10-2016 ರಂದು 9-00 ಪಿಎಂ. ಸಮಯದಲ್ಲಿ ಮಂಜುನಾಥ ಹಾಗು ಕುಮಾರ ಎಂಬವರು ಅಕ್ರಮ ಪ್ರವೇಶ ಮಾಡಿ ಕಬ್ಬಿಣದ ರಾಡಿನಿಂದ ಹಲ್ಲೆಗೆ ಪ್ರಯತ್ನಿಸಿ, ಕೈಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಶ್ರೀಮತಿ ಸಂಗೀತ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜೀವನದಲ್ಲಿ ವ್ಯಕ್ತಿ ಆತ್ಮಹತ್ಯೆ:

     ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ನಿವಾಸಿ ಪರಿಣಕ ಗಣಪತಿ ಎಂಬವರು ದಿನಾಂಕ 8-10-2016 ರಿಂದ ಕಾಣೆಯಾಗಿದ್ದು ಸದರಿಯವರು ದಿನಾಂಕ 17-10-2016 ರಂದು ಅಣ್ಣೀರ ಅಭಿಷೇಕ್ ಎಂಬವರ ಕೆರೆಯಲ್ಲಿ ಹೆಣವು ಪತ್ತೆಯಾಗಿದ್ದು, ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಪಣಿಕರ ಚಂಗಪ್ಪ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ:

     ಸುಂಟಿಕೊಪ್ಪ ನಗರದ ನಿವಾಸಿ ಶ್ರೀಮತಿ ಸಫಯಾ ಎಂಬವರು ದಿನಾಂಕ 16-10-2016 ರಂದು ರಾತ್ರಿ 9-00 ಗಂಟೆಗೆ ಮಡಿಕೇರಿಯಿಂದ ಬಂದು ತಮ್ಮ ಮನೆಯ ಕಡೆಗೆ ನಡೆದುಕೊಂಡು ಸುಂಟಿಕೊಪ್ಪ ನಗರದ ಕೆ.ಇ.ಬಿ. ಕಚೇರಿಯ ಹತ್ತಿರ ರಸ್ತೆ ದಾಟುತ್ತಿರುವ ವೇಳೆ ಕುಶಾಲನಗರದ ಕಡೆಯಿಂದ ಬಂದ ಕಾರೊಂದು ಡಿಕ್ಕಿಯಾಗಿ ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಕಾರು ಡಿಕ್ಕಿ ಸವಾರನ ದುರ್ಮರಣ:

      ಕುಶಾಲನಗರದ ಮಾದಾಪಟ್ನ ಗ್ರಾಮದ ನಿವಾಸಿ ಫಿರ್ಯಾದಿ ಪ್ರದೀಪ ಮತ್ತು ಆತನ ಸ್ನೇಹಿತ ಪ್ರತಾಪ ರವರುಗಳು ದಿನಾಂಕ 16-10-2016 ರಂದು ಸಮಯ ರಾತ್ರಿ 10-45 ಗಂಟೆಗೆ ಕುಶಾಲನಗರದ ಕಡೆಯಿಂದ ತಮ್ಮ ಮನೆಯ ಕಡೆ ಮಾದಾಪಟ್ಟಣದ ಕಡೆಗೆ ಪಲ್ಸರ್ ಮೋಟಾರ್ ಸೈಕಲಿನಲ್ಲಿ ಬರುತ್ತಿರುವಾಗ ಮಡಿಕೇರಿ ಕಡೆಯಿಂದ ಬಂದ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸವಾರರಿಬ್ಬರೂ ಗಾಯಗೊಂಡು ಗಂಭೀರವಾಗಿ ಗಾಯಗೊಂಡ ಪ್ರತಾಪ್ ರವರನ್ನು ಮೈಸೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರಿ ಶಾಲೆಗೆ ನುಗ್ಗಿ ಕಳುವಿಗೆ ಯತ್ನ:

      ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಳುಗುಂದ ಗ್ರಾಮದಲ್ಲಿರುವ ಸರಕಾರಿ ಪೌಢಶಾಲೆಗೆ ದಿನಾಂಕ 13-10-2016 ರಿಂದ 17-10-2016 ರ ನಡುವೆ ಸಮಯದಲ್ಲಿ ಯಾರೋ ಕಳ್ಳರು ಕೊಠಡಿಯ ಬೀಗವನ್ನು ಮುರಿದು ಕಳುವಿಗೆ ಪ್ರಯತ್ನಿಸಿರುತ್ತಾರೆಂದು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಬಿಂದುರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.