Friday, October 21, 2016

ಆನೆ ತುಳಿತ, ಗಾಯಾಳು ಮಹಿಳೆ ಸಾವು
                    ಆನೆ ತುಳಿತದಿಂದಾಗಿ ಗಾಯಾಳುವಾಗಿದ್ದ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಸೋಮವಾರಪೇಟೆ ಬಳಿಯ ಯಡವನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 19/10/2016ರಂದು ಯಡವನಾಡು ಗ್ರಾಮದ ಸೂಳೆ ಬಾವಿ ಹಾಡಿ ನಿವಾಸಿ ಪಾರ್ವತಿ ಎಂಬ ಮಹಿಳೆಯು ಅಂಗಡಿಯಿಂದ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಕಾಡಾನೆಯ ತುಳಿತಕ್ಕೊಳಗಾಗಿ  ಗಾಯಾಳುವಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಶೇಖರಣೆ
                ಅಕ್ರಮವಾಗಿ ನದಿಯಿಂದ  ಮರಳನ್ನು ತೆಗೆದು ಶೇಖರಿಸಿಟ್ಟಿರುವ ಪ್ರಕರಣ ಗೋಣಿಕೊಪ್ಪ ಠಾಣೆಯಲ್ಲಿ ದಾಖಲಾಗಿದೆ. ಗೋಣಿಕೊಪ್ಪ ಬಳಿಯ ಕೊಂಗಾಣ ಗ್ರಾಮದಲ್ಲಿ ಕಡೇಮಾಡ ಸತೀಶ್‌ ಎಂಬವರು ಕೊಂಗಾಣ ಹೊಳೆಯಿಂದ ಅಕ್ರಮವಾಗಿ ಮರಳನ್ನು ಶೇಖರಿಸುತ್ತಿರುವಾಗಿ ದೊರೆತ ಸುಳಿವಿನ ಮೇರೆಗೆ ಪೊನ್ನಂಪೇಟೆ ಹೋಬಳಿ ಕಂದಾಯ ಪರಿವೀಕ್ಷಕರಾದ ರಾಧಾಕೃಷ್ಣರವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸದ್ರಿ ಸ್ಥಳದಲ್ಲಿ ಮೂರು ಲೋಡುಗಳಷ್ಟು ಮರಳನ್ನು ಅಕ್ರಮವಾಗಿ ಶೇಖರಿಸಿಟ್ಟಿರುವುದು ಕಂಡು ಬಂದಿದ್ದು ಮರಳನ್ನು ವಶಪಡಿಸಿಕೊಂಡು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪಘಾತ ಪ್ರಕರಣ
               ವಿರಾಜಪೇಟೆಯ ಕದನೂರುವಿನ ಬಳಿ  ಕಾರಿಗೆ  ವ್ಯಾನ್‌ ಡಿಕ್ಕಿಯಾದ ಘಟನೆ ನಡೆದಿದೆ. ದಿನಾಂಕ 20/10/2016ರಂದು ವಿರಾಜಪೇಟೆ ದಖನ್ನಿ ಮೊಹಲ್ಲಾ ನಿವಾಸಿ ಎಂ.ಎನ್.ನಿಸ್ಸಾರ್‌ ಎಂಬವರು ಕೆಎ-12-ಎಂ-6122ರ ಮಾರುತಿ 800 ಕಾರಿನಲ್ಲಿ ಕದನೂರು ಬಳಿ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-04-ಎಂಬಿ-4775ರ ಮಾರತು ಓಮ್ನಿ ವ್ಯಾನನ್ನು ಅದರ ಚಾಲಕ ದಿಲೀಪ್‌ ಸೋಮಣ್ಣ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಸ್ಸಾರ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿಸ್ಸಾರ್‌ ಮತ್ತು ದಿಲೀಪ್‌ ಸೋಮಣ್ಣ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ಭೋಗ್ಯ, ಮೋಸ
                   ಆಸ್ತಿಯನ್ನು ಭೋಗ್ಯಕ್ಕೆ ಪಡೆದುಕೊಂಡು ನಂತರ ವಂಚಿಸಿರುವ ಘಟನೆ ಮಡಿಕೇರಿ ಬಳಿಯ ಕಡಗದಾಳು ಗ್ರಾಮದಲ್ಲಿ ನಡೆದಿದೆ.ಕಡಗದಾಳು ನಿವಾಸಿ ಕೆ.ಕೆ.ಮಂದಣ್ಣ ಎಂಬವರು  2010ನೇ ಸಾಲಿನಲ್ಲಿ ಅವರ  ಜಾಗದಲ್ಲಿ ವ್ಯಾಪಾರೋದ್ಯಮ ಮಾಡುವ ಸಲುವಾಗಿ ಬೆಂಗಳೂರಿನ ಜನಾರ್ಧನ ಮತ್ತು ಸುದನ್‌ ಗೌಡ ಎಂಬವರಿಗೆ ಸುಮಾರು 3,34,000 ರೂಗಳ ವಾರ್ಷಿಕ ಬಾಡಿಗೆಗೆ ನೀಡಿದ್ದು, ನಂತರ ಆರೋಪಿಗಳು ಆಸ್ತಿಯಲ್ಲಿನ ಬೆಳೆಗಳನ್ನು ಸರಿಯಾಗಿ ನಿರ್ವಹಿಸದೆ ಹಾಗೂ ಬಾಡಿಗೆಯನ್ನು ಸರಿಯಾಗಿ ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಡಿಕ್ಕಿ, ಹಾನಿ
                    ನಿಲ್ಲಿಸಿದ ಕಾರಿಗೆ ಹಿಂದಿನಿಂದ ಕಾರೊಂದು ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ದೇವರಕೊಲ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 20/10/2016ರಂದು ಮಂಗಳೂರು ನಿವಾಸಿ ಕೆ.ಅಬ್ದುಲ್ ರಹೂಫ್‌ ಎಂಬವರು ಕೆಎ-19-ಎಂಇ-2332ರ ಕಾರಿನಲ್ಲಿ ಸಂಬಂಧಿಕರೊಂದಿಗೆ ಮಡಿಕೇರಿಗೆ ಬರುತ್ತಿರುವಾಗ ಮಾರ್ಗ ಮಧ್ಯೆ ದೇವರಕೊಲ್ಲಿ ಬಳಿ ರಸ್ತೆಗೆ ರಿಫ್ಲೆಕ್ಟರ್‌ಗಳನ್ನು ಆಳವಡಿಸುತ್ತಿದ್ದು ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಾರನ್ನು ನಿಲ್ಲಿಸುವಂತೆ ಸೂಚಿಸಿದ ಮೇರೆಗೆ ಅಬ್ದುಲ್‌ ರಹೋಫ್‌ರವರು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದು, ಅದೇ ಸಮಯಕ್ಕೆ ಹಿಂದಿನಿಂದ ಕೆಎ-19-ಎಂಎಫ್‌-8942ರ ಕಾರನ್ನು ಅದರ ಚಾಲಕ ಜಾನ್‌ ಡಿಸೋಜ ಎಂಬವರು ಅತಿ ವೇಗವಾಗಿ ಬಂದು ಅಬ್ದುಲ್ ರಹೂಫ್‌ರವರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.