Saturday, October 22, 2016

 ಪೊಲೀಸ್ ದಾಳಿ ಅಕ್ರಮ ಗಂಜಾ ಗಿಡಗಳ ವಶ:

      ವ್ಯಕ್ತಿಯೊಬ್ಬರ ಕಾಫಿ ತೋಟಕ್ಕೆ ದಾಳಿ ಮಾಡಿದ ಕೊಡಗು ಜಿಲ್ಲಾ ಡಿ.ಸಿ.ಐ.ಬಿ. ಘಟಕದ ಪೊಲೀಸರು ಅಕ್ರಮವಾಗಿ ಬೆಳೆಸಿದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೇಂದ್ರ ಪ್ರಸಾದ್, ಐಪಿಎಸ್, ರವರ ಮಾರ್ಗದರ್ಶನದ ಮೇರೆಗೆ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪ ಹಾಗು ಸಿಬ್ಬಂದಿಗಳು ದಿನಾಂಕ 21-10-2016 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಅಂದಗೋವೆ ಗ್ರಾಮದ ನಿವಾಸಿ ಚೀಕ್ಕಂಡ ನಂಜಪ್ಪ ಎಂಬವರು ತಮಗೆ ಸೇರಿದ ಕಾಫಿ ತೋಟಕ್ಕೆ ದಾಳಿ ನಡೆಸಿದ್ದು, ತೋಟದಲ್ಲಿ ಅಕ್ರಮವಾಗಿ ಬೆಳೆಸಿದ ಸುಮಾರು 4 ಲಕ್ಷ ಮೌಲ್ಯ ಬೆಲೆಬಾಳುವ 2 ರಿಂದ 10 ಅಡಿ ಎತ್ತರದ 58 ಗಾಂಜಾ ಗಿಡಗಳನ್ನು ಪತ್ತೆಹಚ್ಚಿದ್ದು ಗಾಂಜಾ ಗಿಡಗಳನ್ನು ಹಾಗು ಆರೋಪಿ ಚೀಕ್ಕಂಡ ನಂಜಪ್ಪನವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

     ಕಾರ್ಯಾಚರಣೆಯಲ್ಲಿ ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಎಎಸ್ಐ ಕೆ.ವೈ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್, ಎಂ.ಎನ್. ನಿರಂಜನ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಸುಂಟಿಕೊಪ್ಪ ಠಾಣೆಯ ಎಎಸ್ಐ ಪಾರ್ಥ, ಹಾಗು ಸಿಬ್ಬಂದಿಗಳು ಭಾಗಬಹಿಸಿದ್ದರು.

     ಇತ್ತೀಚಿಗೆ ಮಾದಕ ವಸ್ತುಗಳ ಬಳಕೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗು ಯುವಕರು ವ್ಯಸನಿಗಳಾಗುತ್ತಿದ್ದು ಆರೋಗ್ಯ ಮತ್ತು ವಿದ್ಯಾಬ್ಯಾಸದಲ್ಲಿ ನಿರುತ್ಸಾಹರಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಅಕ್ರಮ ಮಾದಕ ವಸ್ಉಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದು ಸಾರ್ವಜನಿಕರು ಈ ಬಗ್ಗೆ ಮಾಹಿತಿಯನ್ನು ನೀಡಿ ಸಹಕರಿಸಬೇಕಾಗಿ ಎಸ್.ಪಿ. ಕೊಡಗು ಜಿಲ್ಲೆಯವರು ಮನವಿ ಮಾಡಿದ್ದಾರೆ.

ಅಕ್ರಮ ಮರಳು ಸಾಗಾಟ ಪತ್ತೆ:

     ಅಕ್ರಮ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಶ್ರೀ ಎಸ್. ಶಿವಪ್ರಕಾಶ್ ರವರು ದಿನಾಂಕ 21-10-2016 ರಂದು ಬೆಳಗಿನ ಜಾವ ಕರ್ತವ್ಯದಲ್ಲಿದ್ದ ಸಮಯದಲ್ಲಿ ಆರೋಪಿಗಳಾದ ಕಗ್ಗೋಡ್ಲು ಗ್ರಾಮದ ಕೆ.ಪಿ. ಉದಯ ಹಾಗು ಮೊಗೇರ ಹರೀಶ ಎಂಬವರು ಪಿಕ್ ಅಪ್ ಜೀಪಿನಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಹಾಗು ಮರಳು ತುಂಬಿದ ಪಿಕ್ ಜೀಪನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿದ್ಯುತ್ ಕಂಬಕ್ಕೆ ಮೋಟಾರ್ ಸೈಕಲ್ ಡಿಕ್ಕಿ, ಸಾವರನಿಗೆ ಗಾಯ:

     ಮೋಟಾರ್ ಸೈಕಲೊಂದು ಸವಾರನ ವೇಗದ ಚಾನೆಯಿಂದ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಮಡಿಕೇರಿ ನಗರದ ಸಂಜೀವಿನಿ ಕ್ಲೀನಿಕ್ ಬಳಿ ಸಂಭವಿಸಿದೆ. ದಿನಾಂಕ 20-10-2016 ರಂದು ಹೇಮಂತ ಎಂಬವರು ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಡಿಕೇರಿ ನಗರದ ಎಫ್.ಎಂ.ಸಿ. ಕಾಲೇಜು ರಸ್ತೆಯ ಸಂಜೀವಿನಿ ಕ್ಲೀನಿಕ್ ಬಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ಮೋಟಾರ್ ಸೈಕಲ್ ಸವಾರ ಹೇಮಂತ್ ರವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಂಚೆ ಕಚೇರಿಗೆ ನುಗ್ಗಿ ಕಳ್ಳತನಕ್ಕೆ ಯತ್ನ:

     ಅಂಚೆ ಕಚೇರಿಗೆ ನುಗ್ಗಿ ಕಳ್ಳತನಕ್ಕೆ ಪ್ತಯತ್ನಿಸಿದ ಘಟನೆ ಸುಂಟಿಕೊಪ್ಪ ನಗರದ ಅಂಚೆ ಕಚೇರಿಯಲ್ಲಿ ನಡೆದಿದೆ. ದಿನಾಂಕ 20-10-2016 ರ ಸಂಜೆ 5-30 ಗಂಟೆ ಮತ್ತು 21-10-2012ರ ಬೆಳಿಗ್ಗೆ 7-45 ಗಂಟೆಯ ಮದ್ಯದ ಅವದಿಯಲ್ಲಿ ಸುಂಟಿಕೊಪ್ಪ ನಗರದ ಅಂಚೆ ಕಚೇರಿಗೆ ಯಾರೋ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದು, ಅಂಚೆ ಕಚೇರಿ ಅಧಿಕಾರಿ ಎನ್.ಎಸ್. ಅಶೋಕ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ನೀರಿನಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು:

     ಜಲಪಾತ ವೀಕ್ಷಿಸಲು ಹೋದ ಕಾಲೇಜು ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ಸೋಮವಾರಪೇಟೆನ ಮಲ್ಲಳ್ಳಿ ಜಲಪಾತದಲ್ಲಿ ಸಂಭವಿಸಿದೆ. ಸೋಮವಾರಪೇಟೆ ತಾಲೋಕು ಬೆಂಬಳೂರು ಗ್ರಾಮದ ನಿವಾಸಿ ಬಿ.ವಿ. ಚಂದ್ರಗುಪ್ತ ಎಂಬವರ ಮಗ ಪ್ರಥಮ ಬಿ.ಎ. ವ್ಯಾಸಂಗ ಮಾಡುತ್ತಿದ್ದ 18 ವರ್ಷದ ಸಂಮಿತ್ರ ಎಂಬಾತ ದಿನಾಂಕ 21-10-2016 ರಂದು ಬೆಳಿಗ್ಗೆ 8-30 ಗಂಟೆಯ ಸಮಯದಲ್ಲಿ ಮಲ್ಲಳ್ಳಿ ಜಲಪಾತ ವೀಕ್ಷಿಸಲು ಹೋಗಿ ಜಲಪಾತದ ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.