Sunday, October 23, 2016

ಪಾದಚಾರಿಗೆ ಬೈಕ್ ಡಿಕ್ಕಿ,
                  ಪಾದಚಾರಿಗೆ ಬೈಕ್ ಡಿಕ್ಕಿಯಾದ ಘಟನೆ ಶನಿವಾರಸಂತೆ ಬಳಿಯ ಗುಡುಗಳಲೆ ಬಳಿ ನಡೆದಿದೆ. ದಿನಾಂಕ 22/10/2016ರಂದು ಶನಿವಾರಸಂತೆ ನಗರದ ತ್ಯಾಗರಾಜ ಕಾಲೋನಿ ನಿವಾಸಿ ರಮೇಶ್‌ ಶೆಟ್ಟಿ ಎಂಬವರು ಗುಡುಗಳಲೆಯ ಜಯಲಕ್ಷ್ಮಿ ಸರ್ವಿಸ್‌ ಸ್ಟೇಷನ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಇ-9215ರ ಮೋಟಾರು ಸೈಕಲನ್ನು ಅದರ ಚಾಲಕ ಪ್ರಜ್ವಲ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಂದಿನಿಂದ ರಮೇಶ್‌ ಶೆಟ್ಟಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಮೇಶ್‌ ಶೆಟ್ಟಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಉಡುಗೊರೆ ಆಮಿಷ, ಹಣ ವಂಚನೆ
                     ಉಡುಗೊರೆ ಕಳುಹಿಸುವುದಾಗಿ ಫೇಸ್‌ ಬುಕ್‌ ಮತ್ತು ವಾಟ್ಸ್‌ಆಪ್ ಮೂಲಕ ಆಮಿಷ ಒಡ್ಡಿ ಸುಮಾರು ರೂ.1 ಲಕ್ಷ 20 ಸಾವಿರಗಳಷ್ಟು  ವಂಚಿಸಿರುವ ಘಟನೆ ಸೋಮವಾರಪೇಟೆ ಬಳಿ ನಡೆದಿದೆ. ಇಲ್ಲಿಗೆ ಸಮೀಪದ ಕರ್ಕಳ್ಳಿ ನಿವಾಸಿ ರೀಟಾ ಅನಿಲ್‌  ಮ್ಯಾಥ್ಯೂ ಎಂಬವರೊಂದಿಗೆ ಮಾರ್ಟಿನ್‌ ಕಾನ್ಪುರ ಮತ್ತು ಜರೀನಾ ಕಾನ್ಪುರ ಎಂಬ ಇಬ್ಬರು ವ್ಯಕ್ತಿಗಳು ಫೇಸ್‌ ಬುಕ್ ಮತ್ತು ವಾಟ್ಸ್ ಆಪ್‌ ಮೂಲಕ ಪರಿಚಯಿಸಿಕೊಂಡು ಇತ್ತೀಚೆಗೆ ರೀಟಾರವರ ಮಗುವಿಗೆ ಹುಟ್ಟುಹಬ್ಬದ ಪ್ರಯುಕ್ತ ಉಡುಗೊರೆಯನ್ನು ಕಳುಹಿಸುತ್ತಿರುವುದಾಗಿಯೂ ಈ ಉಡುಗೊರೆಯನ್ನು ಕಳುಹಿಸಲು ಡೆಲಿವರಿ ಶುಲ್ಕ ಮತ್ತು ಕಸ್ಟಮ್ಸ್ ಶುಲ್ಕವಾಗಿ ರೂ. 30 ಸಾವಿರ ಮತ್ತು ರೂ 90 ಸಾವಿರಗಳಷ್ಟು ಹಣವನ್ನು ಜರೀನಾ ಕಾನ್ಪುರರವರ ಬ್ಯಾಂಕ್‌ ಖಾತೆಗೆ ಸಂದಾಯ ಮಾಡುವಂತೆ ತಿಳಿಸಿದ್ದರೆನ್ನಲಾಗಿದೆ. ಅದರಂತೆ ರೀಟಾ ಅನಿಲ್‌ ಮ್ಯಾಥ್ಯೂರವರು ದಿನಾಂಕ 18/10/2016ರಂದು ರೂ.30 ಸಾವಿರ ಹಣವನ್ನು ಹಾಗೂ ದಿನಾಂಕ 19/10/2016ರಂದು ಪುನಃ ರೂ.90 ಸಾವಿರದಷ್ಟು ಹಣವನ್ನು ಮಾರ್ಟಿನ್‌ ಕಾನ್ಪುರವರು ನೀಡಿದ ಜರೀನಾ ಕಾನ್ಪುರವರ ಬ್ಯಾಂಕ್‌ ಖಾತೆಗೆ ಸಂದಾಯ ಮಾಡಿದ್ದು, ನಂತರ ಅನುಮಾನ ಬಂದು ರೀಟಾ ಅನಿಲ್‌ರವರು ದೆಹಲಿಯ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳನ್ನು ಪಾರ್ಸಲ್‌ ಬಗ್ಗೆ ವಿಚಾರಿಸಿದಾಗ ಆ ರೀತಿಯ ಯಾವುದೂ ಪಾರ್ಸಲ್‌ಗಳು ಬಂದಿರುವುದಿಲ್ಲ ಎಂದು ತಿಳಿಸಿದ್ದು,  ಮಾರ್ಟಿನ್‌ ಕಾನ್ಪುರ ಮತ್ತು ಜರೀನಾ ಕಾನ್ಪುರವರು ಉಡುಗೊರೆ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.   

ಅಕ್ರಮ ಮರಳು ಸಾಗಾಟ ಪ್ರಕರಣ
                      ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಗೋಣಿಕೊಪ್ಪ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 22/10/2016ರಂದು ಬೆಳಿಗ್ಗೆ 6:30 ಗಂಟೆಗೆ ಗೋಣಿಕೊಪ್ಪ ಠಾಣಾ ಪಿಎಸ್‌ಐ ಗೋವಿಂದ ರಾಜುರವರು ಗಸ್ತಿನಲ್ಲಿರುವಾಗ ಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಒಂದು ಐಷರ್‌ ಲಾರಿಯಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಕಂಡು ವಿಚಾರಿಸಿದಾಗ ಮರಳನ್ನು ಬಿ.ಶೆಟ್ಟಿಗೇರಿ ಗ್ರಾಮದ ಬರಪೊಳೆ ನದಿಗೆ ಹರಿಯುವ ತೋಡಿನಿಂದ ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ತೆಗೆದು ಸಾಗಿಸುತ್ತಿರುವುದಾಗಿ ತಿಳಿದು ಬಂದಿದ್ದು ಲಾರಿ ಚಾಲಕ ವಿರಾಜಪೇಟೆಯ ಬಿ.ಎಂ.ಈರಪ್ಪ ಮತ್ತು ಇನ್ನೋರ್ವ ಪಿ,ಡಿ.ಮೋಹನ್‌ ಎಂಬವರನ್ನು ಬಂಧಿಸಿ ಮರಳು ಸಮೇತ ಲಾರಿಯನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ ಬಂಧನ
                    ರಾತ್ರಿ ವೇಳೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 22/10/2016ರ ರಾತ್ರಿ ವೇಳೆ ವಿರಾಜಪೇಟೆ ನಗರ ಠಾಣೆ ಪಿಎಸ್‌ಐ ಎಂ.ಡಿ.ಅಪ್ಪಾಜಿ ರವರು ನಗರ ಗಸ್ತಿನಲ್ಲಿರುವಾಗ ರಾತ್ರಿ 12:00 ಗಂಟೆ ವೇಳೆಗೆ ವಿರಾಜಪೇಟೆ ನಗರದ ನೆಹರು ನಗರ ನಿವಾಸಿ  ಅಲೆಕ್ಸ್‌ಎಂಬಾತನು  ನಗರದ ಬೋರೇಗೌಡ ಕಾಂಪ್ಲೆಕ್ಸ್ ಬಳಿ  ಅಪಾಯಕರ  ಆಯುಧವನ್ನಿಟ್ಟುಕೊಂಡು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದು ಯಾವುದೋ ಅಪರಾಧಕೃತ್ಯವೆಸಗುವ ಉದ್ದೇಶದಿಂದ ತಿರುಗಾಡುತ್ತಿರಬಹುದಾಗಿ  ಸಂಶಯಿಸಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ  ಬಂಧನ
                 ರಾತ್ರಿ ವೇಳೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 22/10/2016ರ ರಾತ್ರಿ ವೇಳೆ ವಿರಾಜಪೇಟೆ ನಗರ ಠಾಣೆ ಪಿಎಸ್‌ಐ ಎಂ.ಡಿ.ಅಪ್ಪಾಜಿ ರವರು ನಗರ ಗಸ್ತಿನಲ್ಲಿರುವಾಗ ಮುಂಜಾನೆ  5:00 ಗಂಟೆ ವೇಳೆಗೆ ವಿರಾಜಪೇಟೆ ನಗರದ ತಾಲೂಕು ಮೈದಾನದ ಬಳಿಯ ನಿವಾಸಿ ಮೂಲತಃ ಹಾಸನ ಜಿಲ್ಲೆಯ ರಾಮನಾಥಪುರ ತಾಲೂಕಿನ ರುದ್ರಪಟ್ಟಣ ಗ್ರಾಮದ ನಿವಾಸಿ ಹೆಚ್‌.ಶ್ರೀನಿವಾಸ ಎಂಬಾತನು  ನಗರದ ಉಮ್ಮರ್‌ ಹೋಟೆಲ್‌ ಗಲ್ಲಿಯ ಬಳಿ  ಅಪಾಯಕರ  ಆಯುಧವನ್ನಿಟ್ಟುಕೊಂಡು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದು ಯಾವುದೋ ಅಪರಾಧಕೃತ್ಯವೆಸಗುವ ಉದ್ದೇಶದಿಂದ ತಿರುಗಾಡುತ್ತಿರಬಹುದಾಗಿ  ಸಂಶಯಿಸಿ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ ಪ್ರಕರಣ
                       ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಎರಡು ಲಾರಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿದ್ದಾರೆ.  ವಿರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಿಂದ ವಿರಾಜಪೇಟೆ ಕಡೆಗೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಿನಾಂಕ 22/10/2016ರ ರಾತ್ರಿ 10:15 ಗಂಟೆಯ ವೇಳೆ ವಿರಾಜಪೇಟೆ ನಗರ ಪಿಎಸ್‌ಐ ಜಿ.ಕೆ.ಸುಬ್ರಮಣ್ಯರವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಕೆಎ-12-ಎ-4864ರ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಲಾರಿ ಸಮೇತ ಮರಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ ಪ್ರಕರಣ
                            ಅಕ್ರಮ ಮರಳು ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಎರಡು ಲಾರಿಗಳನ್ನು ಮರಳು ಸಮೇತ ವಶಪಡಿಸಿಕೊಂಡಿದ್ದಾರೆ.  ವಿರಾಜಪೇಟೆ ಬಳಿಯ ಕಂಡಂಗಾಲ ಗ್ರಾಮದಿಂದ ವಿರಾಜಪೇಟೆ ಕಡೆಗೆ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಿನಾಂಕ 23/10/2016ರ ನಡು ರಾತ್ರಿ 12:30 ಗಂಟೆಯ ವೇಳೆ ವಿರಾಜಪೇಟೆ ನಗರ ಪಿಎಸ್‌ಐ ಜಿ.ಕೆ.ಸುಬ್ರಮಣ್ಯರವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ಕೆಎ-12-ಎ-6888ರ ಟಿಪ್ಪರ್‌ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಲಾರಿ ಸಮೇತ ಮರಳನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.