Tuesday, October 25, 2016

ಮಹಿಳೆಯ ಮೇಲೆ ಹಲ್ಲೆ,
                      ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಗೋಣಿಕೊಪ್ಪ ನಗರದ ನಿವಾಸಿ ದಾಸ ಎಂಬವರು ಹಲವು ದಿನಗಳಿಂದ ಮನೆಗೆ ಬಾರದೆ ಇದ್ದು, ದಿನಾಂಕ 23/10/2016ರಂದು ಮನೆಗೆ ಬಂದವರನ್ನು ಪತ್ನಿ ಪಾರ್ವತಿಯವರು ಅವರು ಮನೆಗೆ ಬಾರದೆ ಎಲ್ಲಿಗೆ ಹೋಗಿದ್ದರೆನ್ನುವ ಬಗ್ಗೆ ಪ್ರಶ್ನಿಸಿದ ಕಾರಣಕ್ಕೆ ದಾಸರವರು ಪತ್ನಿಯೊಂದಿಗೆ ಜಗಳ ತೆಗೆದು ಚಾಕುವಿನಿಂದ ಪಾರ್ವತಿಯವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ,
                     ರಾತ್ರಿ ವೇಳೆ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 24/10/2016ರ ಬೆಳಗಿನ ಜಾವ 4 ಗಂಟೆಗೆ ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಹೆಚ್‌.ವೈ.ರಾಜುರವರು ಗಸ್ತು ಕರ್ತವ್ಯದಲ್ಲಿರುವಾಗ ನಗರದ ಸೌತ್‌ ಕೂರ್ಗ್‌ ಕ್ಲಬ್‌ನ ಮುಂಭಾಗ ಗೋಣಿಕೊಪ್ಪದ ಹರಿಶ್ಚಂದ್ರಪುರದ ನಿವಾಸಿ ಪಣಿ ಎರವರ ರಾಜು ಎಂಬಾತನು ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಆತನಿಂದ ಸಮರ್ಪಕ ಉತ್ತರ ದೊರೆಯದೇ ಇದ್ದ ಕಾರಣದಿಂದ ಆತನು ಯಾವುದೋ  ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.
 
ಸಂಶಯಾಸ್ಪದ ವ್ಯಕ್ತಿಯ ಬಂಧನ,
                      ರಾತ್ರಿ ವೇಳೆ ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 24/10/2016ರ ರಾತ್ರಿ ವೇಳೆ 2:50 ಗಂಟೆಗೆ ಪೊನ್ನಂಪೇಟೆ ಠಾಣೆಯ ಎಎಸ್‌ಐ ಕೆ.ಎಸ್‌.ಮೇದಪ್ಪರವರು ನಗರ ಗಸ್ತು ಕರ್ತವ್ಯದಲ್ಲಿರುವಾಗ ಪೊನ್ನಂಪೇಟೆ ನಗರದ ಎಸ್‌ಬಿಎಂ ಬ್ಯಾಂಕಿನ ಮುಂಭಾಗ ತಿತಿಮತಿಯ ಅಕ್ಕಿಮಾಳ ನಿವಾಸಿ ಬಿ.ಎಸ್‌.ಕುಮಾರ ಎಂಬಾತನು ಸಂಶಯಾಸ್ಪದವಾಗಿ ಕೈಯಲ್ಲಿ ಕಬ್ಬಿಣದ ರಾಡಿನೊಂದಿಗೆ ಸುತ್ತಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಆತನಿಂದ ಆತನ ಇರುವಿಕೆಯ ಬಗ್ಗೆ ಸಮರ್ಪಕ ಉತ್ತರ ದೊರೆಯದೇ ಇದ್ದ ಕಾರಣದಿಂದ ಆತನು ಯಾವುದೋ  ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿ ಪೊನ್ನಂಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ಮಹಿಳೆಯ ಸಾವು
                      ಮಹಿಳೆಯೊಬ್ಬರು ಅಸ್ವಾಭಾವಿಕವಾಗಿ ಸಾವಿಗೀಡಾಗಿರುವ ಘಟನೆ ಸಿದ್ದಾಪುರ  ಬಳಿಯ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.ದಿನಾಂಕ 24/10/2016ರಂದು ತಿತಿಮತಿಯ ಜಂಗಲಾಡಿ ನಿವಾಸಿ ಜೇನು ಕುರುಬರ ಮಂಜು ಎಂಬಾತನಿಗೆ ಕಳತ್ಮಾಡು ಗ್ರಾಮದ ಜೇನುಕುರುಬರ ಗಣೇಶ ಎಂಬಾತನು ಮಂಜುವಿನ ತಾಯಿ ಗೌರಿರವರು ಮನೆಯ ಮುಂದಿನ ಜಗಲಿಯಲ್ಲಿ ಮೃತಪಟ್ಟಿರುವ ವಿಷಯ ತಿಳಿಸಿದ್ದು, ಮಂಜುರವರು ಒಡನೆ ತಾಯಿ ಗೌರಿ ವಾಸವಿರುವ ಕಳತ್ಮಾಡು ಗ್ರಾಮದ ಕುಟ್ಟಂಡ ಬೋಪಣ್ಣರವರ ಲೈನು ಮನೆಗೆ ತೆರಳಿ ನೋಡಿದಾಗ ಲೈನು ಮನೆಯ ಜಗಲಿಯಲ್ಲಿ ಗೌರಿಯ ಮೃತ ದೇಹವು ಕಂಡು ಬಂದಿರುವುದಾಗಿದೆ. ಈ ಬಗ್ಗೆ ಗಣೇಶರವರನ್ನು ವಿಚಾರಿಸಿದಾಗ ಹಿಂದಿನ ದಿನ ಗಣೇಶ ಹಾಗೂ ಗೌರಿರವರು ಗೋಣಿಕೊಪ್ಪಕ್ಕೆ ದಿನಸಿ ಸಾಮಗ್ರಿಗಳನ್ನು ತರಲೆಂದು ಹೋಗಿದ್ದು ಮರಳಿ ಬರುವಾಗ ಮದ್ಯಪಾನವನ್ನು ಮಾಡಿ ಬಂದಿದ್ದರೆನ್ನಲಾಗಿದೆ. ನಂತರ ಮನೆಗೆ ಬಂದು ಗಣೇಶರವರ ಮೊಬೈಲ್‌ನಲ್ಲಿ ಹಾಕಿದ ಹಾಡಿಗೆ ಗೌರಿರವರು ಕುಣಿಯುತ್ತಿರುವಾಗ ಅಂಗಳದಲ್ಲಿ ಬಿದ್ದಾಕೆಯನ್ನು ಮನೆಯ ಜಗಲಿಯಲ್ಲಿ ಮಲಗಿಸಿದ್ದು, ದಿನಾಂಕ 24/10/2016ರ ಬೆಳಿಗ್ಗೆ ಗಣೇಶರವರು ಗೌರಿಗೆ ಕಾಫಿ ಮಾಡಿಕೊಟ್ಟಿದ್ದು ಗೌರಿಯು ಕಾಫಿ ಕುಡಿದಿದ್ದು ನಂತರ ಅಲ್ಲಿಯೇ ಕುಸಿದು ಮೃತ ಪಟ್ಟಿರುವುದಾಗಿ ತಿಳಿಸಿದ್ದು, ತಾಯಿಯ ಸಾವಿನ ಬಗ್ಗೆ ಸಂಶಯವಿರುವುದಾಗಿ ಮಂಜುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ
                      ಜಾಗದ ವಿವಾದ ಬಗ್ಗೆ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಮಂಕ್ಯ  ಗ್ರಾಮದಲ್ಲಿ ನಡೆದಿದೆ. ದಿನಾಂಕ 22/10/2016ರಂದು ಮಂಕ್ಯ ಗ್ರಾಮದ ನಿವಾಸಿ ಸೀತಮ್ಮ ಎಂಬವರು ಮನೆಗೆ ಬಂದಿದ್ದ ನೆಂಟರನ್ನು ಕಳುಹಿಸಿಕೊಡಲು ಹೋಗುತ್ತಿದ್ದಾಗ ಗ್ರಾಮದ ನಾಗರಗುಡಿ ಬಳಿ ಅದೇ ಗ್ರಾಮದ ನಿವಾಸಿಗಳಾದ ಚಾಮೇರ ಲಕ್ಷ್ಮಣ ಮತ್ತು ಕಾಳಪ್ಪ ಎಂಬವರು ಅಲ್ಲಿಗೆ ಬಂದು ಸೀತಮ್ಮನವರೊಂದಿಗೆ ಜಾಗದ ವಿವಾದದ ಬಗ್ಗೆ ಜಗಳವಾಡಿ ಆಕೆಗೆ ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
                     ವಿಷ ಸೇವಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಬಳಿಯ ನಾರ್ಗಣೆ ತೋಟದಲ್ಲಿ ನಡೆದಿದೆ. ದಿನಾಂಕ 23/10/2016ರಂದು ನಾರ್ಗಣೆ ತೋಟದ ನಿವಾಸಿ ಗೋಪಾಲ ಎಂಬವರು ಸಂತೆಗೆ ಬಂದಿದ್ದು, ಸಂತೆಯಿಂದ ಬರುವಾಗ ವಿಪರೀತ ಮದ್ಯಪಾನ ಮಾಡಿದ್ದು, ಜೊತೆಗೆ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು, ಬಾಯಿಂದ ನೊರೆ ಬರುತ್ತಿದ್ದುದನ್ನು ಕಂಡ ಆತನ ಪತ್ನಿ ಗೀತಾರವರು ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಆತನು ಮೃತಪಟ್ಟಿರುವ ಬಗ್ಗೆ ದೃಢೀಕರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.