Monday, October 3, 2016

ಅನಾಥ ವ್ಯಕ್ತಿಯ ಶವ ಪತ್ತೆ
               ಅನಾಥ ವ್ಯಕ್ತಿಯ ಶವವೊಂದು ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದಲ್ಲಿ ಪತ್ತೆಯಾಗಿದೆ. ದಿನಾಂಕ 02/10/2016ರಂದು ಯವಕಪಾಡಿ ನಿವಾಸಿ ಬಾರಿಕೆರ ಗಿರೀಶ್‌ ಎಂಬವರು ಅವರ ತೋಟಕ್ಕೆ ಹೋಗುತ್ತಿರುವಾಗ ದಾರಿಯಲ್ಲಿರುವ ಸಾರ್ವಜನಿಕ ಕೋಲಾಟ ಬಯಲಿನಲ್ಲಿ ಒಬ್ಬ ಅಪರಿಚಿತ ಗಂಡಸಿನ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿನ ಟ್ಯಾಂಕಿಗೆ ಕಾರು ಡಿಕ್ಕಿ
                   ಅಡ್ಡ ಬಂದವರನ್ನು ತಪ್ಪಿಸಲು ಹೋಗಿ ಕಾರೊಂದು ನೀರಿನ ಟ್ಯಾಂಕಿಗೆ ಡಿಕ್ಕಿಯಾದ ಘಟನೆ ಶನಿವಾರಸಂತೆ ಬಳಿಯ ಕೊಡ್ಲಿಪೇಟೆಯಲ್ಲಿ ನಡೆದಿದೆ. ದಿನಾಂಕ 02/10/2016ರಂದು ಸಕಲೇಶಪುರ ನಿವಾಸಿಗಳಾದ ವಿನುತ ಮತ್ತು ಪ್ರಸನ್ನ ಎಂಬವರು ಅವರ ಕೆಎ-46-ಎಂ-3180ರ ಕಾರಿನಲ್ಲಿ ಸಕಲೇಶಪುರ ತಾಲೂಕಿನ ನಾಗರ ಗ್ರಾಮದ ಬಂಧುಗಳ ಮನೆಗೆ ಹೋಗಿ ವಾಪಾಸು ಬರುತ್ತಿರುವಾಗ ಕೊಡ್ಲಿಪೇಟೆಯ ಬಳಿ ಕ್ಯಾತೆ ಗ್ರಾಮದ ಬಳಿ ಯಾರೋ ವ್ಯಕ್ತಿಗಳು ಕಾರಿಗೆ ಅಡ್ಡ ಬಂದಿದ್ದು ಅವರನ್ನು ತಪ್ಪಿಸುವ ಸಲುವಾಗಿ ಪ್ರಸನ್ನರವರು ಕಾರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ನೀರಿನ ಟ್ಯಾಂಕಿಗೆ ಡಿಕ್ಕಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ನುಗ್ಗಿ ಕಳವು
                  ಮನೆಯ ಕಿಟಕಿಯನ್ನು ಮುರಿದ ಒಳ ಪ್ರವೇಶಿಸಿದ ಕಳ್ಳರು ಬೆಳ್ಳಿ ಹಾಗೂ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ಬಳಿಯ ಬಳಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 30/09/2016ರಂದು ಬಳಗುಂದ ಗ್ರಾಮದ ಪ್ರಮೀಳಾ ವಿಶ್ವನಾಥ್‌ ಎಂಬವರು ಮನೆಯಲ್ಲಿದ ವೇಳೆಯಲ್ಲಿ ಯಾರೋ ಕಳ್ಳರು ರಾಥ್ರಿ ವೇಳೆ ಮನೆಯ ಕಿಟಕಿಯನ್ನು ಮುರಿದು ಒಳ ಪ್ರವೇಶಿಸಿ ಸುಮಾರು ರೂ.50,000/- ಬೆಲೆಯ ಬೆಳ್ಳಿಯ ಜಗ್‌ ಮತ್ತು ಎಲ್‌ಇಡಿ ಟಿವಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.