Sunday, October 30, 2016

ನಕಲಿ ಸಹಿ ಮಾಡಿ ವಂಚನೆ
                      ನಕಲಿ ಸಹಿ ಮಾಡಿ ಆಸ್ತಿಯನ್ನು ನೋಂದಣಿ ಮಾಡಿಕೊಂಡು ವಂಚಿಸಿರುವ ಪ್ರಕರಣ ನಾಪೋಕ್ಲು ಬಳಿಯ ಬಲ್ಲಮಾವಟಿ ಗ್ರಾಮದಲ್ಲಿ ನಡೆದಿದೆ. ಬಲ್ಲಮಾವಟಿ ಬಳಿಯ ಪೇರೂರು ಗ್ರಾಮದ ಪಾಲೆಯಂಡ ಚಿಣ್ಣಪ್ಪ ಎಂಬವರು ಕೋಟೆರ ಬಿದ್ದಪ್ಪ, ಎ.ಕೆ.ಜೋಯಪ್ಪ, ಶಾಂತಿ ರಾಜ, ಎ.ಯು.ಕಾಳಯ್ಯ, ಕೆ.ಕೆ.ಗಣಪತಿ ಮತ್ತು ಎನ್‌.ಎ.ಚಿಣ್ಣಪ್ಪ ಎಂಬವರ ಸಹಕಾರದೊಂದಿಗೆ ಪಾಲೆಯಂಡ ಕುಟುಂಬಸ್ಥರ ಜಾಗದ ಆರ್‌ಟಿಸಿಯನ್ನು ಪಡೆದುಕೊಂಡು ಯಾರದೇ ಒಪ್ಪಿಗೆ ಇಲ್ಲದೆ ನೆಲಜಿ ಕೃಷಿ ಪತ್ತಿನ ಸಹಕಾರ ಬ್ಯಾಂಕು ಮತ್ತು ಮಡಿಕೇರಿಯ ಡಿ.ಸಿ.ಸಿ. ಬ್ಯಾಂಕಿನಲ್ಲಿ ಅಡಮಾನ ಇಟ್ಟು ಸುಮಾರು ರೂ.9,00,000/- ಗಳಷ್ಟು ಸಾಲವನ್ನು ಪಡೆದಿರುವುದಲ್ಲದೆ ಜಾಗವನ್ನು ಅವರ ಹೆಸರಿಗೆ ನಕಲಿ ಸಹಿ ಮಾಡಿ ನೋಂದಣಿ ಮಾಡಿಸಿಕೊಂಡಿರುವುದಾಗಿ ಪಾಲೆಯಂಡ ಅಯ್ಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಸಾವು
                     ದಿನಾಂಕ 29/10/2016ರಂದು ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮೃತನಾಗಿದ್ದು ಈತನ ಬಗ್ಗೆ ಯಾವುದೇ ವಿವರಗಳು ದೊರೆತಿರುವುದಿಲ್ಲವೆಂದು ವಿರಾಜಪೇಟೆ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ಮಹೇಂಧ್ರ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.