Friday, October 7, 2016

 ಬೈಕಿಗೆ ಬಸ್ಸು ಡಿಕ್ಕಿ, ಗಾಯಗೊಂಡ ಸವಾರ:

     ರಾಜಹಂಸ ಬಸ್ಸೊಂದು ಮೋಟಾರ್ ಸೈಕಲನ್ನು ಹಿಂದಿಕ್ಕುವ ಸಂದರ್ಭದಲ್ಲಿ ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ಸವಾರನು ಗಾಯಗೊಂಡ ಘಟನೆ ಕುಶಾಲನಗರ ಹತ್ತಿರದ ಗುಡ್ಡಹೊಸೂರಿನಲ್ಲಿ ನಡೆದಿದೆ. ದಿನಾಂಕ 6-10-2016 ರಂದು ವೆಂಕಟೇಶ ಎಂಬವರು ಕುಶಾಲನಗರದ ಕಡೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆ.ಎಸ್.ಆರ್.ಟಿ.ಸಿ. ರಾಜ ಹಂಸ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲನ್ನು ಹಿಂದಿಕ್ಕುವಾಗ ಬಸ್ಸು ಮೋಟಾರ್ ಸೈಕಲ್ ಗೆ ಡಿಕ್ಕಿಯಾಗಿ ಬೈಕ್ ಸವಾರ ವೆಂಕಟೇಶರವರು ಗಾಯಗೊಂಡಿದ್ದು, ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನೀರಿನ ವಿಚಾರದಲ್ಲಿ ಜಗಳ ಪ್ರಕರಣ ದಾಖಲು:

     ಗುಂಪೊಂದು ನೀರಿನ ವಿಚಾರದಲ್ಲಿ ಮಹಿಳೆಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಮ್ಮೆಮಾಡು ಗ್ರಾಮದಲ್ಲಿ ನಡೆದಿದೆ. ಎಮ್ಮೆಮಾಡು ಗ್ರಾಮದ ನಿವಾಸಿ ಶ್ರೀಮತಿ ಬಿ.ವೈ .ರುಕಿಯಾ ಎಂಬವರು ದಿನಾಂಕ 6-10-2016 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ .ಬಿ.ಎಂ.ಅಶ್ರಫ್, ಎಂ.ಎಸ್.ಮೂಸೆ, ಅಶ್ರಫ್ ಕಡವೀಲ್, ಸಂಷಾದ್ ಕೆ.ಎಂ, ರಜಾಕ್ ಬಿ.ಎಂ., ರೌಫ್‌ ಸಿ.ಹೆಚ್‌ ಮತ್ತು ಹಜೀಜ್ ಎಂಬವರುಗಳು ಆಕೆಯ ದಾರಿ ತಡೆದು ಪಂಚಾಯ್ತಿಯ ನೀರಿನ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ಮಾಡಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಚಾಯ್ತಿ ನೀರು ಬಳಸುವ ವಿಚಾರದಲ್ಲಿ ಜಗಳ:

     ಮೂವರು ವ್ಯಕ್ತಿಗಳು ಪಂಚಾಯ್ತಿ ನೀರನ್ನು ತುಂಬಿಸುತ್ತಿರುವ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 6-10-2016 ರಂದು ಎಮ್ಮೆಮಾಡು ಗ್ರಾಮ ನಿವಾಸಿ ಸಲೀಂ ಎಂಬ ವ್ಯಕ್ತಿ ಪಂಚಾಯ್ತಿಯಿಂದ ಪೂರೈಕೆಯಾಗುತ್ತಿರುವ ನೀರನ್ನು ನಲ್ಲಿಯಿಂದ ತುಂಬಿಸುತ್ತಿರುವ ಸಂದರ್ಭದಲ್ಲಿ ಅದೇ ಗ್ರಾಮದ ನಿವಾಸಿ ಶ್ರೀಮತಿ ರುಕಿಯ, ಸಾದುಲಿ, ಮತ್ತು . ಸಿ.ಎಂ.ಜಕ್ರಿಯಾ ಎಂಬವರುಗಳು ಅಡ್ಡಿಪಡಿಸಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.