Saturday, October 8, 2016

ಆಸ್ತಿ ವ್ಯಾಜ್ಯ, ಕೊಲೆ ಯತ್ನ
                          ಆಸ್ತಿ ವಿವಾದದಿಂದಾಗಿ ವ್ಯಕ್ತಿಯೊಬ್ಬರು ಕೊಲ್ಲಲೆತ್ನಿಸಿದ ಘಟನೆ ಸೋಮವಾರಪೇಟೆ ಬಳಿಯ ಗರ್ವಾಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 05/10/2016ರಂದು ಇಗ್ಗೋಡ್ಲು ನಿವಾಸಿ ಪೂವಯ್ಯ ಎಂಬವರು ಅವರ ಗದ್ದೆಯಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಅವರ ಆಣ್ಣನ ಮಗ ಕುಶಾಲಪ್ಪನವರು ಬಂದು ಆ ಜಾಗದ ವಿಚಾರವಾಗಿ ಜಗಳ ಮಾಡುತ್ತಿರುವ ಸಮಯ ಕುಶಾಲಪ್ಪನವರ ಪತ್ನಿ ರಜನಿ ಎಂಬವರು ಕತ್ತಿಯನ್ನು ತಂದು ಕುಶಾಲಪ್ಪನವರಿಗೆ ನೀಡಿದ್ದು ಕುಶಾಲಪ್ಪನವರು ಪೂವಯ್ಯನವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದರೆನ್ನಲಾಗಿದೆ. ಅಲ್ಲದೆ ಜಗಳ ಬಿಡಿಸಲು ಬಂದ ಕಾರ್ಮಿಕರಿಗೂ ಕೊಲೆ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ. ಅದೇ ಸಮಯಕ್ಕೆ ಪೂವಯ್ಯನವರ ಅಣ್ಣ ಸುಬ್ಬಯ್ಯನವರು ಕೋವಿಯೊಮದಿಗೆ ಬಂದು ಆ ಕೋವಿಯಿಂದ ಕುಶಾಲಪ್ಪನವರು ಪೂವಯ್ಯನವರನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿದ್ದು ಗುಂಡು ಗುರಿ ತಪ್ಪಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                    ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ನಗರದ ಎಂ.ಡಿ.ಬ್ಲಾಕ್‌ ನಿವಾಸಿ ಚೆಲುವಯ್ಯ ಎಂಬವರು ದಿನಾಂಕ 07/10/2016ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅತೀವ ಮದ್ಯವ್ಯಸನಿಯಾಗಿರುವ ಚೆಲುವಯ್ಯನವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಪತ್ನಿ ಸರೋಜಮ್ಮನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೀರಿಗೆ ಬಿದ್ದು ಇಬ್ಬರ ಆಕಸ್ಮಿಕ ಸಾವು
                     ಜಲಪಾತ ವೀಕ್ಷಿಸುತ್ತಿದ್ದ ಸಮಯದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ದುರ್ಮರಣಕ್ಕೀಡಾದ ಘಟನೆ ನಾಪೋಕ್ಲು ಬಳಿಯ ಚೇಲಾವರ ಗ್ರಾಮದಲ್ಲಿ ನಡೆದಿದೆ. ಪೊನ್ನಂಪೇಟೆಯ ಸಾಯಿ ಶಂಕರ ಕಾಲೇಜಿನ ವಿದ್ಯಾರ್ಥಿಗಳಾದ ಕೆ.ಸಿ.ಸೋಮಣ್ಣ ಹಾಗೂ ಬಿ.ಕೆ.ಸೋಮಣ್ಣ ಎಂಬ ಇಬ್ಬರು ವಿದ್ಯಾರ್ಥಿಗಳು ದಿನಾಂಕ 06/10/2016ರಂದು ಚೇಲಾವರ ಜಲಪಾತ ವೀಕ್ಷಿಸಲೆಂದು ತೆರಳಿದ್ದು ಸಂಜೆಯಾದರೂ ಬಾರದ ಕಾರಣ ಅವರ ಗೆಳೆಯರು ವಿಚಾರವನ್ನು ಕೆ.ಸಿ.ಸೋಮಣ್ಣನ ತಂದೆ ಚಂಗಪ್ಪ ನವರಿಗೆ ತಿಳಿಸಿದ್ದು ಒಡನೆ ಅವರೆಲ್ಲರೂ ಸ್ಥಳಕ್ಕೆ ತೆರಳಿ ಹುಡುಕಾಡಿದರೂ ಇಬ್ಬರು ಯುವಕರು ಪತ್ತೆಯಾಗದಿದ್ದು ಮಾರನೇ ದಿನ ಪೊಲೀಸ್‌ ಮತ್ತು ಅಗನಿ ಶಾಮಕ ದಳದ ಸಿಬ್ಬಂದಿಗಳ ಸಹಕಾರದೊಂದಿಗೆ ಜಲಪಾತದಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹಗಳ ನೀರಿನಲ್ಲಿ ದೊರೆತಿದ್ದು, ಜಲಪಾತ ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.