Sunday, October 9, 2016

ಮಡಿಕೇರಿ ನಗರ ದಸರಾ -2016 ರ ಸಂಬಂಧ ಪೊಲೀಸ್ ಇಲಾಖೆಯಿಂದ ವಿಶೇಷ ಬಂದೋಬಸ್ತು.


                ದಿನಾಂಕ 11.10.2016 ರಂದು ರಾತ್ರಿ ಮಡಿಕೇರಿ ನಗರದಲ್ಲಿ ದಸರಾ ಮಂಟಪಗಳ ಕಾರ್ಯಕ್ರಮವು ನಡೆಯಲಿದ್ದು ಈ ಸಂಬಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಹಾಗೂ ವಾಹನಗಳ ಸುಗಮ ಸಂಚಾರದ ಸಂಬಂಧ ದಿನಾಂಕ 11.10.2016 ರ ಸಂಜೆ 04.00 ಗಂಟೆಯಿಂದ ದಿನಾಂಕ 12.10.2016 ರ ಮದ್ಯಾಹ್ನ 12.00 ಗಂಟೆಯವರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆ ರವರ ಕಛೇರಿ ಆದೇಶ ಸಂಖ್ಯೆ ಎಂ.ಎ.ಜಿ/ದಸರಾ/2016-17 ದಿನಾಂಕ 07/10/2016 ರಲ್ಲಿ ಅದೇಶಿಸಿರುವಂತೆ ಮಡಿಕೇರಿ ನಗರದಲ್ಲಿ ತಾತ್ಕಾಲಿಕವಾಗಿ ಈ ಕೆಳಕಂಡಂತೆ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ. 

ವಾಹನ ಸಂಚಾರಗಳ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ವ್ಯವಸ್ಥೆಯ ವಿವರ.

1. ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಮತ್ತು ಸೋಮವಾರಪೇಟೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ. ಸ್ಕೂಲ್, ಮುತ್ತಪ್ಪ ದೇವಸ್ಥಾನ, ಮುಂದೆ ಸೈಂಟ್ ಜೋಸೆಫ್ ಕಾನ್ವೆಂಟ್, ಎಸ್.ಪಿ. ಕಛೇರಿ ಜಂಕ್ಷನ್, ಮುಂದೆ ಐ.ಟಿ.ಐ. ಜಂಕ್ಷನ್ ಕಡೆಯಿಂದ ಎಫ್.ಎಂ.ಸಿ. ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

2. ಸಿದ್ದಾಪುರ, ಮೂರ್ನಾಡು ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಆರ್.ಎಂ.ಸಿ. ಯಾರ್ಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

3. ಗಾಳಿಬೀಡು, ಅಬ್ಬಿಪಾಲ್ಸ್, ಸೋಮವಾರಪೇಟೆ ಹಾಗು ಕಾಲೂರು ಕಡೆಗಳಿಂದ ಬರುವ ವಾಹನಗಳಿಗೆ ಎಫ್.ಎಂ.ಸಿ. ಕಾಲೇಜು ಮೈದಾನ, ಮತ್ತು ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

4. ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಅಂಡ್ ಹೊಟೇಲ್ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.
5. ವಿರಾಜಪೇಟೆ ಕಡೆಯಿಂದ ಬರುವ ವಾಹನಗಳ ನಿಲುಗಡೆಗೆ ಮೂರ್ನಾಡು ರಸ್ತೆಯ ಸರ್ಕಾರಿ ಆಸ್ಪತ್ರೆಯ ಪಂಪ್ ಹೌಸ್ ಬಳಿ ಚಿಕ್ಕ ಮೈದಾನದಲ್ಲಿ ನಿಗದಿತ ವಾಹನಗಳಿಗೆ ಅನುಕೂಲವಾಗುವಷ್ಟು ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು ನಂತರ ಉಳಿದ ವಾಹನಗಳು ಜಿ.ಟಿ. ವೃತ್ತದ ಕಡೆಯಿಂದ ಆರ್.ಎಂ.ಸಿ. ಯಾರ್ಡ್ ಕಡೆಗೆ ಕಳುಹಿಸಿ ಕೊಡಲಾಗುವುದು. 

ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ಸ್ಥಳ 

1. ಎಫ್.ಎಂ.ಸಿ. ಕಾಲೇಜು ಮೈದಾನ.,
2. ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ., 
3. ಆರ್.ಎಂ.ಸಿ ಯಾರ್ಡ್ ಮೈದಾನ.,
4. ಕ್ರೆಸೆಂಟ್ ಶಾಲಾ ಮೈದಾನ.,
5. ಹಿಂದುಸ್ಥಾನಿ ಶಾಲಾ ಮೈದಾನ.,
6. ಐ.ಟಿ.ಐ ಕಾಲೇಜಿನ ಮೈದಾನ.
7. ಶಾಂತಿ ಶಾಂತಿ ಚರ್ಚ್ ಮೈದಾನ (ದ್ವಿ-ಚಕ್ರ ಮೋಟಾರು ಸೈಕಲ್ ಮಾತ್ರ).,
8. ಮ್ಯಾನ್ಸ್ ಕಾಂಪೌಂಡ್ (ಜನರಲ್ ತಿಮ್ಮಯ್ಯ ಜಿಲ್ಲಾ ಕೀಡ್ರಾಂಗಣ).,
9. ಜೂನಿಯರ್ ಕಾಲೇಜು ಮೈದಾನ., 


 ಏಕಮುಖ ಸಂಚಾರ ವ್ಯವಸ್ಥೆ.

1. ಮೈಸೂರು, ಸೋಮವಾರಪೇಟೆ ಕಡೆಗಳಿಂದ ಬರುವ ವಾಹನಗಳು ಚೈನ್ ಗೇಟ್ ಕಡೆಯಿಂದ ಮೆನ್ಸ್ ಕಾಂಪೌಂಡು ಮತ್ತು ಜೂನಿಯರ್ ಕಾಲೇಜು ಮೈದಾನಕ್ಕೆ ಪ್ರವೇಶಿಸುವ ದಾರಿಯು ತಾತ್ಕಾಲಿಕ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. 

2. ಜೂನಿಯರ್ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸಿದ ವಾಹನಗಳು ವಾಪಾಸು ಮೈಸೂರು ರಸ್ತೆಗೆ ಹೋಗುವಾಗ ಗೌಡ ಸಮಾಜ, ರಾಘವೇಂದ್ರ ದೇವಸ್ಥಾನ ಕಡೆಯಿಂದ ಚೈನ್ ಗೇಟ್ ಕಡೆಗಾಗಿ ಹೋಗುವಂತೆಯೂ ಏಕಮುಖ ಸಂಚಾರ ರಸ್ತೆಯಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

 ಮಡಿಕೇರಿ ನಗರದೊಳಗೆ ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾದ ಬಗ್ಗೆ ವಿವರ

1. ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಎಂ.ಎಂ. ಸರ್ಕಲ್, ಗಾಂಧೀ ಮಂಟಪ, ರಾಜಾಸೀಟ್, ರಾಡ್ರಿಗಾಸ್ ಬಿಲ್ಡಿಂಗ್ ಜಂಕ್ಷನ್ ಮತ್ತು ವೆಬ್ಸ್, ಹಾಕಿ ಸ್ಟೇಡಿಯಂವರೆಗೆ


2. ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಗೌಳಿಬೀದಿ ರಸ್ತೆಗಳಲ್ಲಿ ಮತ್ತು ಮೋಣಪ್ಪ ಗ್ಯಾರೇಜ್, ಎಸ್ ಬಿ ಐ ಜಂಕ್ಷನ್, ಶಕ್ತಿ ಪ್ರೆಸ್ ರಸ್ತೆ, ಹೊಟೇಲ್ ರಾಜ್ ವರೆಗೆ. 

3. ಮಡಿಕೇರಿ ನಗರದ ಜಿ.ಟಿ. ರಸ್ತೆ, ಎಂ.ಎಂ. ವೃತ್ತಕ್ಕಾಗಿ ಓಂಕಾರೇಶ್ವರ ದೇವಸ್ಥಾನ ರಸ್ತೆ, ಜೂನಿಯರ್ ಕಾಲೇಜುಗಾಗಿ ಬಸ್ಸು ನಿಲ್ದಾಣದ ಕಡೆಗೆ ನಿಷೇಧಿಸಲಾಗಿದೆ.

4. ಮಡಿಕೇರಿ ನಗರದ ಜಿ.ಟಿ. ವೃತ್ತದಿಂದ ಎಂ.ಎಂ. ವೃತ್ತಕ್ಕಾಗಿ ಖಾಸಗಿ ಬಸ್ಸು ನಿಲ್ದಾಣ, ಜೂನಿಯರ್ ಕಾಲೇಜು ರಸ್ತೆ, ಖಾಸಗಿ ಬಸ್ಸು ನಿಲ್ದಾಣದಿಂದ ಐ.ಜಿ. ಸರ್ಕಲ್, ಗಣಪತಿ ಬೀದಿ ಪೂರ್ಣ, ಮಹದೇವಪೇಟೆ ರಸ್ತೆಗಾಗಿ ಎ.ವಿ. ಶಾಲೆಯವರೆಗೆ, ಮತ್ತು ಐ.ಜಿ. ಸರ್ಕಲ್ ನಿಂದ ಕಾಲೇಜು ರಸ್ತೆ, ಎಸ್.ಬಿ.ಐ. ಜಂಕ್ಷನ್, ಮಾರ್ಕೆಟ್ ರಸ್ತೆ, ಖಾಸಗಿ ಬಸ್ಸು ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ, ಮೋಣಪ್ಪ ಗ್ಯಾರೇಜ್ ವರೆಗೆ ಮತ್ತು ಇದಲ್ಲದೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಗಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಪೂರ್ಣವಾಗಿ ನಿಷೇಧಿಸಲಾಗಿದೆ.

5. ಜಿ.ಟಿ. ವೃತ್ತದಿಂದ ಕೆ.ಎಸ್.ಆರ್.ಟಿ.ಸಿ ಡಿಪೋ ಕಡೆಗೆ ರಸ್ತೆಯ ಉಭಯ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

6. ದಿನಾಂಕ 11/12-10-2016 ರಂದು ಕುಂದುರುಮೊಟ್ಟೆ ದೇವಸ್ಥಾನದಿಂದ ಗಾಂಧೀ ಮಂಟಪ ಹಾಗು ಎಂ.ಎಂ. ವೃತ್ತದವರೆಗೂ, ಜಿ.ಟಿ. ವೃತ್ತದಿಂದ ಖಾಸಗಿ ಬಸ್ಸು ನಿಲ್ದಾಣ, ಇಂದಿರಾ ವೃತ್ತ, ಕಾಲೇಜು ರಸ್ತೆ, ಎಸ್.ಬಿ.ಐ. ಜಂಕ್ಷನ್, ಗಣಪತಿ ಬೀದಿ, ಮಹದೇವಪೇಟೆ ಈ ಮೇಲ್ಕಂಡ ರಸ್ತೆ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

7. ದಿನಾಂಕ 11-10-2016 ರಂದು ಸಂಜೆ 4.00 ಗಂಟೆಯ ನಂತರ ಮಡಿಕೇರಿ ನಗರದೊಳಗೆ ಜನ ಸಂದಣಿ ಅಧಿಕವಾಗಿರುವುದರಿಂದ ಎಲ್ಲಾ ಮಾದರಿಯ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗುವುದು. ದಿನಾಂಕ 12-10-2016 ರಂದು ಮಧ್ಯಾಹ್ನ 12.00 ಗಂಟೆಯವರೆಗೆ ನಗರದೊಳಗೆ ಮಂಟಪಗಳು ಸಂಚರಿಸುವ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

8. ಮಂಗಳೂರು ರಸ್ತೆಯ ದೊಡ್ಡ ತಿರುವಿನಿಂದ ಕೆಳಗಡೆಗೆ ಮತ್ತು ಮೂರ್ನಾಡು ರಸ್ತೆ ಪಂಪ್ ಹೌಸ್ ನಿಂದ ಕೆಳಗಡೆಗೆ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

9. ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಮತ್ತು ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಜಿ.ಟಿ. ವೃತ್ತದ ಮುಖಾಂತರ ಎಲ್ಲಾ ವಾಹನಗಳಿಗೆ ಸಂಚಾರ ವ್ಯವಸ್ಥೆ ಮಾಮೂಲಿನಂತಿರುತ್ತೆ. ಜಿ.ಟಿ. ವೃತ್ತದ ಬಳಿ ಬರುವ ಎಲ್ಲಾ ಮಂಟಪಗಳು ಜಿ.ಟಿ. ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿಯಿಂದ ತಿರುಗಿ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. 

10. ದಸರಾ ಜನೋತ್ಸವ ಕಾರ್ಯಕ್ರಮದ ಸಂಬಂಧ ನಗರದ ಮಹದೇವಪೇಟೆ ಮತ್ತು ಗಣಪತಿ ಬೀದಿ ನಿವಾಸಿಗಳು ದಿನಾಂಕ 11-10-2016 ರಿಂದ 12-10-2016 ರ ಸಂಜೆ 6.00 ಗಂಟೆಯವರೆಗೆ ತಮ್ಮ ವಾಹನಗಳನ್ನು ಮಹದೇವಪೇಟೆಯಲ್ಲಿರುವ ಎಲ್.ಜಿ. ಕ್ರಸೆಂಟ್ ಶಾಲೆಯ ಆವರಣದಲ್ಲಿ ಮತ್ತು ಕನಕದಾಸ ರಸ್ತೆಯ ನಗರ ಸಭೆ ಹಿಂದೂಸ್ಥಾನಿ ಶಾಲೆಯ ಆವರಣದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. 

11. ನಿಯಮ ಉಲ್ಲಂಘಿಸಿ ನಿಷೇಧಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಗೊಳಿಸಿದಲ್ಲಿ ಅಥವಾ ಸಂಚರಿಸುತ್ತಿದ್ದಲ್ಲಿ ಅಂಥಹ ವಾಹನಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ದಸರಾಕ್ಕೆ ಸಿಸಿಟಿವಿ ಕಣ್ಗಾವಲು

                ದಿನಾಂಕ 11/12.10.2016 ರಂದು ರಾತ್ರಿ ಮಡಿಕೇರಿ ನಗರದಲ್ಲಿ ಆಚರಿಸಲಿರುವ ದಸರಾ ಉತ್ಸವ ಸಂಬಂಧ ಶಾಂತ ರೀತಿಯಿಂದ ನಡೆಯಲು ಹಾಗೂ ಸಾರ್ವಜನಿಕರು ದಸರಾ ಉತ್ಸವವನ್ನು ನಿರ್ಬೀತಿಯಿಂದ ವೀಕ್ಷಿಸಲು ಅನುಕೂಲವಾಗುವಂತೆ ಕಾರ್ಯಕ್ರಮದ ಸಂಬಂಧ ಅನಧಿಕೃತ ಚಟುವಟಿಕೆ, ಕಾನೂನು ಭಾಹಿರ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ನಿಗಾ ಇಟ್ಟು ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಈ ಕೆಳಕಂಡ ಸ್ಥಳಗಳಲ್ಲಿ ಸಿ.ಸಿ. ಟಿವಿಯನ್ನು ಅಳವಡಿಸಲಾಗಿದೆ.

                ದಿನಾಂಕ 11/12.10.2016 ರಂದು ರಾತ್ರಿ ಮಡಿಕೇರಿ ನಗರದಲ್ಲಿ ಆಚರಿಸಲಿರುವ ದಸರಾ ಉತ್ಸವ ಸಂಬಂಧ ಶಾಂತ ರೀತಿಯಿಂದ ನಡೆಯಲು ಹಾಗೂ ಸಾರ್ವಜನಿಕರು ದಸರಾ ಉತ್ಸವವನ್ನು ನಿರ್ಬೀತಿಯಿಂದ ವೀಕ್ಷಿಸಲು ಅನುಕೂಲವಾಗುವಂತೆ ಕಾರ್ಯಕ್ರಮದ ಸಂಬಂಧ ಅನಧಿಕೃತ ಚಟುವಟಿಕೆ, ಕಾನೂನು ಭಾಹಿರ ಚಟುವಟಿಕೆಯಲ್ಲಿ ತೊಡಗಿರುವವರ ಮೇಲೆ ನಿಗಾ ಇಟ್ಟು ಸೂಕ್ತ ಕ್ರಮ ಕೈಗೊಳ್ಳುವ ಸಂಬಂಧ ಕಮಾನ್ ಗೇಟ್, ಸಂಪಿಗೆ ಕಟ್ಟೆ, ಚೈನ್ ಗೇಟ್, ಸಿದ್ದಾಪುರ ರಸ್ತ, ಕೊಡಗು ವಿದ್ಯಾಲಯ, ಕೆಎಸ್.ಆರ್.ಟಿ.ಸಿ ಡಿಪೋ ಮುಂಭಾಗ, ಶಾಂತಿ ಚರ್ಚ್ ಬಳಿ, ಮ್ಯಾನ್ಸ್ ಕಾಂಪೌಂಡ್ ಮೈದಾನ, ಜೂನಿಯರ್ ಕಾಲೇಜು ಮೈದಾನ, ಸಂತ ಜೋಸೆಫರ ಶಾಲಾ ಮೈದಾನ, ಕಾನ್ವೆಂಟ್ ಜಂಕ್ಷನ್, ಮೈತ್ರಿ ಜಂಕ್ಷನ್, ಟೌನ್ ಹಾಲ್ ಮುಂಭಾಗ, ಜನತಾ ಬಜಾರ್ ಮುಂಭಾಗ, ನಗರ ಠಾಣೆ ಮುಂಭಾಗ, ಕೂರ್ಗ್ ಕ್ಯುಸಿನ್ ಹೋಟೆಲ್ ಮುಂಭಾಗ, ಅಂಚೆ ಕಚೇರಿ ಮುಂಭಾಘ, ಬಾಟಾ ಅಂಗಡಿ ಮುಂದೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಎ.ವಿ.ಶಾಲೆ ಮುಂಭಾಗ, ಪೇಟೆ ರಾಮಮಂದಿರ, ಕೂರ್ಗ್ ಸ್ಪೈಸಸ್ ಮುಂಭಾಗ, ಗಾಂಧಿ ಮೈದಾನ ಸುತ್ತ ಮುತ್ತ, ಮೂರ್ನಾಡು ರಸ್ತೆ ಚೆಕ್ ಪೋಸ್ಟ್, ಮಂಗಳೂರು ರಸ್ತೆ ಚೆಕ್ ಪೋಸ್ಟ್, ಮುತ್ತಪ್ಪ ದೇವಸ್ಥಾನ ಜಂಕ್ಷನ್, ಸಂಪಿಗೆ ಕಟ್ಟೆ ಜಂಕ್ಷನ್ ಮುಂತಾದ ಸ್ಥಳಗಳಲ್ಲಿ 33 ಸಿ.ಸಿ. ಟಿವಿಗಳನ್ನು ಆಳವಡಿಸಲಾಗಿದೆ.

 ಗೋಣಿಕೊಪ್ಪ ದಸರಾ-2016

                         ದಿನಾಂಕ 11.10.2016 ರಂದು ರಾತ್ರಿ ಗೋಣಿಕೊಪ್ಪದಲ್ಲಿ ದಸರಾ ಮಂಟಪಗಳ ಕಾರ್ಯಕ್ರಮವು ನಡೆಯಲಿದ್ದು ಈ ಸಂಬಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಹಾಗೂ ವಾಹನಗಳ ಸುಗಮ ಸಂಚಾರದ ಸಂಬಂಧ ದಿನಾಂಕ 11.10.2016 ರ ಸಂಜೆ 04.00 ಗಂಟೆಯಿಂದ ದಿನಾಂಕ 12.10.2016 ರ ಮದ್ಯಾಹ್ನ 12.00 ಗಂಟೆಯವರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಕೊಡಗು ಜಿಲ್ಲೆ ರವರ ಕಛೇರಿ ಆದೇಶ ಸಂಖ್ಯೆ ಎಂ.ಎ.ಜಿ/ದಸರಾ/2016-17 ದಿನಾಂಕ 07/10/2016 ರಲ್ಲಿ ಅದೇಶಿಸಿರುವಂತೆ ಮಡಿಕೇರಿ ನಗರದಲ್ಲಿ ತಾತ್ಕಾಲಿಕವಾಗಿ ಈ ಕೆಳಕಂಡಂತೆ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿರುತ್ತದೆ. 

ವಾಹನ ಸಂಚಾರಗಳ ತಾತ್ಕಾಲಿಕ ಮಾರ್ಗ ಬದಲಾವಣೆಯ ವಿವರ.

1) ಗೋಣಿಕೊಪ್ಪಲು ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ ಪೊನ್ನಂಪೇಟೆ ರಸ್ತೆ ಜಂಕ್ಷನ್ ನಿಂಧ ಕೆ.ಪಿ.ಟಿ.ಸಿ.ಎಲ್ ಕಚೇರಿಯವರೆಗೆ, ಪಾಲಿಬೆಟ್ಟ ರಸ್ತೆಯಲ್ಲಿ ಕೊಪ್ಪದ ಕೂರ್ಗ್ ಪಬ್ಲಿಕ್ ಸ್ಕೂಲ್ ರಸ್ತೆಯವರೆಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ

2) ಮೈಸೂರಿನಿಂದ ತಿತಿಮತಿ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುವ ವಾಹನಗಳಿಗೆ ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಗೆ ಹೋಗಲು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 

3) ವಿರಾಜಪೇಟೆಯಿಂದ ಗೋಣಿಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಕೈಕೇರಿ ಗ್ರಾಮದ ಕಳತ್ಮಾಡ್-ಅತ್ತೂರು ಶಾಲೆ ಜಂಕ್ಷನ್-ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 

4) ಕೇರಳದಿಂದ ಪೆರುಂಬಾಡಿ-ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ-ವಿರಾಜಪೇಟೆ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಕಡೆಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

5) ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ-ಕಾನೂರು-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು.

6) ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಬಾಳಲೆ-ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು. 

7) ಕುಟ್ಟ, ಶ್ರೀಮಂಗಲ, ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ-ಕುಂದಾ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು. 

8) ಮೈಸೂರು-ತಿತಿಮತಿ-ಗೋಣಿಕೊಪ್ಪ-ಶ್ರೀಮಂಗಲ-ಕುಟ್ಟ ಕಡೆಗಳಿಗೆ ಹೋಗುವ ವಾಹನಗಳು ತಿತಿಮತಿ-ಕೋಣನಕಟ್ಟೆ-ಪೊನ್ನಪ್ಪಸಂತೆ-ನಲ್ಲೂರು-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು. 

9) ಕುಟ್ಟ - ಶ್ರೀಮಂಗಲ - ಪೊನ್ನಂಪೇಟೆ - ಗೋಣಿಕೊಪ್ಪ - ಮೈಸೂರು ಕಡೆಗೆ ಹೋಗುವ ವಾಹನಗಳು, ಕುಟ್ಟ - ಶ್ರೀಮಂಗಲ - ಪೊನ್ನಂಪೇಟೆ - ನಲ್ಲೂರು - ಪೊನ್ನಪ್ಪಸಂತೆ - ಕೋಣನಕಟ್ಟೆ - ತಿತಿಮತಿ ಮಾರ್ಗವಾಗಿ ಸಂಚರಿಸುವುದು.

10) ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಬಾಳಲೆ ಕಡೆಗೆ ಹೋಗುವ ವಾಹನಗಳಿಗೆ ವಿರಾಜಪೇಟೆ-ಹಾತೂರು-ಕುಂದಾ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು.

 ಗೋಣಿಕೊಪ್ಪ ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ
               ದಸರಾ ವೀಕ್ಷಣೆಗೆ ಗೋಣಿಕೊಪ್ಪಕ್ಕೆ ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕಾವೇರಿ ಕಾಲೇಜು ಮೈದಾನದಲ್ಲಿ, ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯಲ್ಲಿರುವ ರುದ್ರಭೂಮಿಯ ಹಿಂದಕ್ಕೆ ಪೊನ್ನಂಪೇಟೆ ರಸ್ತೆಯ ಬದಿಯಲ್ಲಿ, ತಿತಿಮತಿ ಮತ್ತು ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪಲು ಆರ್.ಎಂ.ಸಿ. ಆವರಣದಲ್ಲೂ ಹಾಗೂ ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ ಪಾಲಿಬೆಟ್ಟ ರಸ್ತೆಯಲ್ಲಿ ಶಾಸ್ತ್ರಾ ಇಂಡಸ್ಟ್ರೀಸ್ ನಿಂದ ಅತ್ತೂರು ಕಡೆಗೆ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.


ಮದ್ಯಮಾರಾಟ ನಿಷೇದಿಸಿ ಅದೇಶ ಹೊರಡಿಸಿರುವ ಬಗ್ಗೆ.

                ದಿನಾಂಕ 11.10.2016 ರಂದು ರಾತ್ರಿ ಮಡಿಕೇರಿ ನಗರ ಮತ್ತು ಗೋಣಿಕೊಪ್ಪದಲ್ಲಿ ಆಚರಿಸಲಿರುವ ದಸರಾ ಉತ್ಸವ ಕಾರ್ಯಕ್ರಮದ ಸಂಬಂಧ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಹಾಗೂ ದಸರಾ ಉತ್ಸವವು ಶಾಂತ ರೀತಿಯಿಂದ ಆಚರಿಸಲು ದಿನಾಂಕ 10.10.2016 ರ ಮದ್ಯ ರಾತ್ರಿಯಿಂದ ದಿನಾಂಕ 12.10.2016 ರ ಬೆಳಿಗ್ಗೆ 10.00 ಗಂಟೆಯವರೆಗೆ ಮಡಿಕೇರಿ ನಗರ ಮತ್ತು ಗೋಣಿಕೊಪ್ಪ ನಗರದ 10 ಕಿ.ಮಿ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ಅಂಗಡಿಗಳು, ಬಾರ್ & ರೆಸ್ಟೋರೆಂಟ್ ಮತ್ತು ಕ್ಲಬ್ ಗಳಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಛೇರಿ ಆದೇಶ ಸಂಖ್ಯೆ ಎಂಎಜಿ/ದಸರಾ/2016-17 ದಿನಾಂಕ 07/10/2016 ರಂದು ಅದೇಶ ಹೊರಡಿಸಲಾಗಿದೆ.
ಭಾರೀ ವಾಹನ ನಿಷೇಧಿಸಿ ಅದೇಶ ಹೊರಡಿಸಿರುವ ಬಗ್ಗೆ.
                 ದಿನಾಂಕ 11/12.10.2016 ರಂದು ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಹಬ್ಬದ ಸಂಬಂಧ ಮಡಿಕೇರಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ದಿನಾಂಕ 11.10.2016 ರ ಮದ್ಯಾಹ್ನ 02.00 ಗಂಟೆಯಿಂದ ದಿನಾಂಕ 12.10.2016 ರ ಬೆಳಿಗ್ಗೆ 10.00 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರಿಗೆ ತೆರಳುವ ಭಾರೀ ಸರಕು ಸಾಗಾಣಿಕೆ ವಾಹನ / ಮಲ್ಟಿ ಆಕ್ಸಿಲ್ ಟ್ರಕ್ ಗಳನ್ನು (ಪ್ರಯಾಣಿಕರ ಸಾರಿಗೆ ವಾಹನಗಳನ್ನು ಹೊರತು ಪಡಿಸಿ) ಸಂಚಾರವನ್ನು ನಿಷೇದಿಸಿ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳ ಕಛೇರಿ ಆದೇಶ ಸಂಖ್ಯೆ ಎಂಎಜಿ/ದಸರಾ/2016-17 ದಿನಾಂಕ 09/10/2016 ರಂದು ಅದೇಶ ಹೊರಡಿಸಿರುತ್ತಾರೆ. ನಿಷೇದದ ಅವಧಿಯಲ್ಲಿ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ಸಂಚರಿಸುವ ವಾಹನಗಳನ್ನು ಸಂಪಾಜೆಯಲ್ಲಿ ಮತ್ತು ಮೈಸೂರು ಕಡೆಯಿಂದ ಮಡಿಕೇರಿ ಮುಖಾಂತರ ಸಂಚರಿಸುವ ವಾಹನಗಳನ್ನು ಕುಶಾಲನಗರದ ಬಳಿ ಜಿಲ್ಲೆಯೊಳಗೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

 ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು

                      ಮಡಿಕೇರಿ ದಸರಾ ಸಂಬಂಧ ಬಂದೋಬಸ್ತ್ ಕರ್ತವ್ಯಕ್ಕೆ 2 ಡಿ.ಎಸ್.ಪಿ, 8 ಸಿಪಿಐಗಳು, 24 ಪಿ.ಎಸ್.ಐ, 48 ಎ.ಎಸ್,ಐ, 339 ಪೊಲೀಸ್ ಸಿಬ್ಬಂದಿಗಳು, 43 ಮಹಿಳಾ ಪೊಲೀಸ್ ಸಿಬ್ಬಂದಿಗಳು, 100 ಗೃಹ ರಕ್ಷಕ ದಳ ಸಿಬ್ಬಂದಿಗಳು, 21 ಎನ್.ಸಿ.ಸಿ. ಕೆಡೆಟ್ ಗಳು 8 ಡಿಎಆರ್ ಮತ್ತು 2 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ.

                       ಗೋಣಿಕೊಪ್ಪ ದಸರಾ ಸಂಬಂಧ ಬಂದೋಬಸ್ತ್ ಕರ್ತವ್ಯಕ್ಕೆ ಕರ್ತವ್ಯಕ್ಕೆ 2 ಡಿ.ಎಸ್.ಪಿ, 4 ಸಿಪಿಐಗಳು, 11 ಪಿ.ಎಸ್.ಐ, 22 ಎ.ಎಸ್,ಐ, 150 ಪೊಲೀಸ್ ಸಿಬ್ಬಂದಿಗಳು, 28 ಮಹಿಳಾ ಪೊಲೀಸ್ ಸಿಬ್ಬಂದಿಗಳು, 80 ಗೃಹ ರಕ್ಷಕ ದಳ ಸಿಬ್ಬಂದಿಗಳು, 25 ಎನ್.ಸಿ.ಸಿ. ಕೆಡೆಟ್ ಗಳು 4 ಡಿಎಆರ್ ಮತ್ತು 2 ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿರುತ್ತದೆ.

 ಎನ್.ಸಿ.ಸಿ ಕೆಡೆಟ್

                    ಈ ಬಾರಿಯ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದ ಬಂದೋಬಸ್ತ್ ಕರ್ತವ್ಯಕ್ಕೆ ಪೊಲೀಸ್ ಇಲಾಖೆಗೆ ಸಹಾಯಕರಾಗಿ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿರುವ 19ನೇ ಕರ್ನಾಟಕ ಬೆಟಾಲಿಯನ್, ಮಡಿಕೇರಿಯ 46 ಎನ್.ಸಿ.ಸಿ ಕೆಡೆಟ್ ಗಳು ಸಹಕಾರ ನೀಡಲಿರುವರು.

                    ದಸರಾ ಹಬ್ಬದ ಆಚರಣೆಯ ಸಂದರ್ಭದಲ್ಲಿ ಸರಗಳ್ಳತನ ಮತ್ತು ಜೇಬುಗಳ್ಳತನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ ನಗರ ಮತ್ತು ಗೋಣಿಕೊಪ್ಪಗಳಲ್ಲಿ 25 ಮಂದಿ ಅಪರಾಧ ಪತ್ತೆ ಕರ್ತವ್ಯಕ್ಕೆ ಹೊರ ಜಿಲ್ಲೆಗಳಿಂದ ಸಿಬ್ಬಂದಿಯವರನ್ನು ನೇಮಿಸಲಾಗಿರುತ್ತದೆ.

                    ದಸರಾ ಹಬ್ಬದ ಆಚರಣೆಯ ಸಂಧರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡಿ ದಸರಾ ಹಬ್ಬವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಳಾದ ಪಿ.ರಾಜೇಂದ್ರ ಪ್ರಸಾದ್ ರವರು ಮನವಿ ಮಾಡಿಕೊಂಡಿದ್ದಾರೆ.
 
ನೀರಿಗೆ ಬಿದ್ದ ವ್ಯಕ್ತಿಯ ಸಾವು
                  ಆಕಸ್ಮಿಕವಾಗಿ ನೀರಿಗೆ ಬಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ  ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 09/10/2016ರಂದು ಕೂಡ್ಲೂರು ನಿವಾಸಿ ಗಿರೀಶ್‌ ಎಂಬವರು ಅವರ ಮನೆಯ ಬಳಿ ಕಾವೇರಿ ಹೊಳೆಯಲ್ಲಿ ಅವರ ಎತ್ತಗಳನ್ನು ಸ್ನಾನ ಮಾಡಿಸಲೆಂದು ಹೋಗಿದ್ದು, ಎತ್ತುಗಳನ್ನು ಸ್ನಾನ ಮಾಡಿಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಬೈಕ್‌ ಡಿಕ್ಕಿ, ಯುವಕನ ಸಾವು 
                      ಮೋಟಾರು ಬೈಕುಗಳೆರಡು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸಾವಿಗೀಡಾದ ಪ್ರಕರಣ ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 08/10/2016ರಂದು ಗುಮ್ಮನಕೊಲ್ಲಿ ನಿವಾಸಿ ಸೋಮಶೇಖರ ಎಂಬವರು ಅವರ ಕೆಎ-12-ಆರ್-15ರ ಮೋಟಾರು ಬೈಕಿನಲ್ಲಿ ಕುಶಾಲನಗರದಿಂದ ಕೂಡ್ಲೂರು ಕಡೆ ಹೋಗುತ್ತಿರುವಾಗ ಕೂಡ್ಲೂರುವಿನ ಪೆಟ್ರೋಲ್‌ ಬಂಕ್‌ ಬಳಿ ಮುಂದುಗಡೆ  ಕೆಎ-12-ಎಲ್-5725ರ ಬೈಕನ್ನು ಅದರ ಚಾಲಕ ಯೋಗೇಶ್ ಎಂಬಾತನು ಇದ್ದಕ್ಕಿಂತೆ ಯಾವುದೇ ಸೂಚನೆ ನೀಡದೆ ಬಲಕ್ಕೆ ತಿರುಗಿಸಿದ್ದು, ಹಿಂದೆ ಇದ್ದ ಸೋಮಶೇಖರ್‌ರವರು ಚಾಲಿಸುತ್ತಿದ್ದ  ಬೈಕ್‌ಅವರ ನಿಯಂತ್ರಣ  ತಪ್ಪಿ ಮುಂದೆ ಇದ್ದ ಮೋಟಾರು ಬೈಕಿಗೆ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ಸೋಮಶೇಖರ್‌ರವರನ್ನು ಚಿಕಿತ್ಸೆ ಬಗ್ಗೆ ಮೈಸೂರಿಗೆ ಕರೆದುಕೊಂಡು ಹೋಗಿ ನಂತರ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಮಗುಚಿ ವ್ಯಕ್ತಿಯ ಸಾವು
                       ಚಾಲಕನ ನಿಯಂತ್ರಣ ತಪ್ಪಿ ಬೈಕೊಂದು ಕೊಲ್ಲಿಗೆ ಮಗುಚಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಾಪೋಕ್ಲು ಬಳಿಯ ನೆಲಜಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 08/10/2016ರಂದು ನಾಪೋಕ್ಲು ವಾಸಿ ರವೂಫ್‌ ಎಂಬವರಲ್ಲಿ ಮರ ಕೆಲಸ ಮಾಡಿಕೊಂಡಿರುವ ಸುರೇಂದ್ರ ಎಂಬವರು ಅವರ ಕೆಎಲ್‌-12-ಸಿ-2984ರ ಮೋಟಾರು ಬೈಕಿನಲ್ಲಿ ಸುರೇಶ್‌ ಬಾಬು ಎಂಬವರೊಡನೆ ನೆಲಜಿ ಗ್ರಾಮದ ಮಾಳೆಯಂಡ ತೋಟದ ಬಳಿ ಬರುತ್ತಿರುವಾಗ ಇಳಿಜಾರಿನಲ್ಲಿ ಬೈಕ್‌ ಸುರೇಂದ್ರರವರ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿದ್ದ ಕೊಲ್ಲಿಗೆ ಮಗುಚಿಕೊಂಡ ಪರಿಣಾಮ ಹಿಂಬದಿ ಸವಾರ ಸುರೇಶ್‌ ಬಾಬುರವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಕಾಣೆ
                     ಮಹಿಳೆಯೊಬ್ಬರು ಕಾಣೆಯಾದ ಪ್ರಕರಣ ಮೂರ್ನಾಡು ಬಳಿಯ ಮುತ್ತಾರ್ಮುಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 07/10/2016ರಂದು ಮುತ್ತಾರ್ಮುಡಿ ನಿವಾಸಿ ದಿನೇಶ ಎಂಬವರ ಪತ್ನಿ ಜ್ಯೋತಿ ಎಂಬವರು ಅವರ ಅಣ್ಣ ಶಾಂತರಾಜುರವರ ಮಗುವನ್ನು ನೋಡಿಕೊಂಡು ಬರುವುದಾಗಿ ತಿಳಿಸಿ ಮನೆಯಿಂದ ಹೋದರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೆಂಕಿ ತಗುಲಿ ವ್ಯಕ್ತಿಯ ಸಾವು
                           ಆಕಸ್ಮಿಕವಾಗಿ ಬೆಂಕಿ ತಗುಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 03/09/2016ರಂದು ನೆಲ್ಲಿ ಹುದಿಕೇರಿ ನಿವಾಸಿ ಪಿ.ರವಿ ಎಂಬವರು ಅತೀವ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ರಾತ್ರಿ ವೇಳೆ ಶೌಚಕ್ಕೆಂದು ಸೀಮೆಣ್ಣೆ ದೀಪವನ್ನು ತೆಗೆದುಕೊಂಡು ಹೋಗಿ ಮರಳಿ ಬರುವಾಗ ಅವರ ಕೈ ನಡುಕದಿಂದ ಸೀಮೆಣ್ಣೆ ದೀಪವು ಮೈಮೇಲೆ ಬಿದ್ದು ಶರೀರಕ್ಕೆ ಬೆಂಕಿ ಹೊತ್ತಿಕೊಂಡು ತೀವ್ರ ತರ ಗಾಯಗಳಾಗಿದ್ದವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08/10/2016ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.