Wednesday, November 30, 2016

ವಿಷ ಸೇವಿಸಿ ಆತ್ಮಹತ್ಯೆ 
                       ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ನಿವಾಸಿ ರಾಜು ಎಂಬವರು ದಿನಾಂಕ ದಿನಾಂಕ 28/11/2016ರಂದು ಮನೆಯ ಹಿಂದೆ ಕೊಟ್ಟಿಗೆಯಲ್ಲಿಟ್ಟಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದು ಚಿಕಿತ್ಸೆಯ ವೇಳೆಯಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರಾಗಿರುತ್ತಾರೆ. ಮೃತ ರಾಜುರವರು ವಿಪರೀತ ಮದ್ಯವ್ಯಸನಿಯಾಗಿದ್ದು ದಿನವೂ ಮದ್ಯಪಾನ ಮಾಡಿ ಪತ್ನಿ ಶಿವಮ್ಮರವರೊಂದಿಗೆ ಜಗಳವಾಡುತ್ತಿದ್ದು ಇದೇ ವಿಷಯಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಕಳವು ಪ್ರಕರಣ
                            ದಿನಾಂಕ 28/11/2016ರಂದು ಕುಶಾಲನಗರದ 4ನೇ ವಿಭಾಗದ ನಿವಾಸಿ ಆಲ್ಬರ್ಟ್‌ ಡಿ'ತೆಸ್ಸಾ ಎಂಬವರು ಕುಶಾಲನಗರದ ಗುಂಡೂರಾವ್‌ ಬಡಾವಣೆಯಲ್ಲಿ ನಡೆಯುತ್ತಿರುವ ಜಾತ್ರೆಯನ್ನು ವೀಕ್ಷಿಸಲು ಓಮಿನಿ ವ್ಯಾನು ಸಂಖ್ಯೆ ಕೆಎ-12-ಎನ್-1105ರಲ್ಲಿ ಹೋಗಿ ಜಾತ್ರಾ ಮೈದಾನದಲ್ಲಿ ಕಾರು ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದು, ವಾಪಾಸು ಬಂದಾಗ ಕಾರನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್‌ ಡಿಕ್ಕಿ, ಪಾದಚಾರಿ ಸಾವು
                               ದಿನಾಂಕ 29/11/2016ರ ಸಂಜೆ ವೇಳೆ ಕುಶಾಲನಗರ ಬಳಿಯ ಮುಳ್ಳುಸೋಗೆ ನಿವಾಸಿ ಚೆಲುವರಾಜು ಎಂಬವರು ಅವರ ಮೈದುನ ಮಂಜುನಾಥ ಹೆಗಡೆ ಎಂಬವರೊಂದಿಗೆ ಕುಶಾಲನಗರದ ಐಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-10-ಎಫ್‌-0244ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಪರಮೇಶ್ವರ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೆಲುವರಾಜುರವರ ಜೊತರೆ ನಡೆಯುತ್ತಿದ್ದ ಮಂಜುನಾಥರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರ ಗಾಯಗಳಾದ ಮಂಜುನಾಥ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್‌ ಅವಘಡ
                                ದಿನಾಂಕ 26/11/2016ರಂದು ಕೇರಳ ರಾಜ್ಯದ  ಕೋಯಿಕ್ಕೋಡ್‌ ಡಿಪೋಗೆ ಸೇರಿದ ಕೇರಳ ಸರ್ಕಾರಿ ಬಸ್‌ ಸಂಖ್ಯೆ ಕೆಎಲ್‌-15-ಎ-1692ನ್ನು ಬಸ್ಸಿನ ಚಾಲಕ ಸುರೇಶ್‌ ಎಂಬವರು ಚಾಲಿಸಿಕೊಂಡು ಕೋಯಿಕ್ಕೋಡಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಕುಟ್ಟ ಬಳಿಯ ಹಳೆಯ ಚೆಕ್‌ಪೋಸ್ಟ್‌ ಬಳಿ ದಾರಿಗೆ ಅಡ್ಡ ಬಂದ ಜಿಂಕೆಗಳನ್ನು ತಪ್ಪಿಸುವ ಸಲುವಾಗಿ ಬಸ್ಸನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿದ ಬಸ್‌ ಹಳೆಯ ಚೆಕ್‌ ಪೋಸ್ಟ್‌ನ ಸಿಮೆಂಟ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿಯ ಹಣ ನೀಡದೆ ಮೋಸ
                        ಕೇರಳ ರಾಜ್ಯದ ವೈನಾಡು ಜಿಲ್ಲೆಯ ಕಲ್ಪೆಟ್ಟ ನಿವಾಸಿ ಅಬ್ದುಲ್‌ ಅಜೀಜ್‌ ಎಂಬವರು ಹಾತೂರು ಗ್ರಾಮದಲ್ಲಿ ಹಾತೂರು ನಿವಾಸಿ ಶಿವಪ್ಪ ಎಂಬವರ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಕಾಫಿ ಕ್ಯೂರಿಂಗ್‌ ಕೆಲಸ ನಡೆಸುತ್ತಿದ್ದರೆನ್ನಲಾಗಿದೆ. ಅಲ್ಲಿ ಅಬ್ದುಲ್‌ ಅಜೀಜ್‌ರವರು ಗ್ರಾಮಸ್ಥರಿಂದ ಖರೀದಿಸಿದ ಸುಮಾರು 1750 ಚೀಲ ಕಾಫಿಯನ್ನು ಶೇಖರಿಸಿ ಇಟ್ಟಿದ್ದು ಮಾರಾಟ ಮಾಡಿದ ಗ್ರಾಮಸ್ಥರಿಗೆ ಹಣ ನೀಡದೆ ಹಾಗೂ ಶಿವಪ್ಪರವರ ಅಕ್ಕ ತುಳಸಿ ಎಂಬವರಿಂದ ವ್ಯಾಪಾರಕ್ಕಾಗಿ ಸುಮಾರು 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಪಡೆದು ಹಿಂತಿರುಗಿಸದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಫಘಾತ
                       ಬೆಂಗಳೂರು ನಿವಾಸಿ ಮಂಜುನಾಥ ರೆಡ್ಡಿ ಎಂಬವರು ದಿನಾಂಕ 21/11/2016ರಂದು ಅವರ ಮಾರುತಿ ಜಿಪ್ಸಿ ವಾಹನ ಸಂಖ್ಯೆ ಕೆಎ-51-ಎಂಜೆ-7689ರಲ್ಲಿ ಅವರ ಸ್ನೇಹಿತ ಮಂಜುನಾಥ ಎಂಬವರೊಂದಿಗೆ ವಿರಾಜಪೇಟೆಯ ಬಾಡಗರಕೇರಿ ನಿವಾಸಿ ಎ.ಜಿ.ನಾಚಪ್ಪರವರನ್ನು ಚಾಲಕರಾಗಿ ನೇಮಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿ ದಿನಾಂಕ 22/11/2016ರಂದು ಮರಳಿ ಬೆಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಚಾಲಕ ನಾಚಪ್ಪರವರು ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವಾಹನ ಮಗುಚಿಕೊಂಡು ವಾಹನದಲ್ಲಿದ್ದ ಮಂಜುನಾಥ ಮತ್ತು ಚಾಲಕ ನಾಚಪ್ಪರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಟ್ಯಾಂಕರ್‌ ಅಫಘಾತ
                          ದಿನಾಂಕ 28/11/2016ರಂದು ಹಾಸನ ನಿವಾಸಿ ಶಕುನಿ ಗೌಡ ಎಂಬವರು ಚಾಲಕರಾಗಿರುವ ಕೆಎ13-ಸಿ-682 ರ ಪೆಟ್ರೋಲ್‌ ಟ್ಯಾಂಕರ್‌ ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ನ್ನು ವಿರಾಜಪೇಟೆಗರ ಸರಬರಾಜು ಮಾಡಿ ನಂತರ ಚೆಟ್ಟಳ್ಳಿ ಮಾರ್ಗವಾಗಿ ಹಾಸನಕ್ಕೆ ಹೋಗುತ್ತಿರುವಾಗ ಚೆಟ್ಟಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಒಂದು ಕಾರಿಗೆ ದಾರಿ ಬಿಡುವ ಸಮಯದಲ್ಲಿ ಚಾಲಕ ಶಕುನಿ ಗೌಡರವರು ಅಜಾಗರೂಕತೆಯಿಂದ ಟ್ಯಾಂಕರನ್ನು ಚಾಲಿಸಿದ ಪರಿಣಾಮ ಟ್ಯಾಂಕರ್‌ ರಸ್ತೆಯಲ್ಲಿ ಮಗುಚಿ ಬಿದ್ದು ಶಕುನಿ ಗೌಡರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ 
                     ದಿನಾಂಕ 29/11/2016ರಂದು ಮಡಿಕೇರಿ ನಗರದ ಶಾಸ್ತ್ರಿನಗರ ನಿವಾಸಿ ಸುಪ್ರೀತಾ ಎಂಬವರು ಮಡಿಕೇರಿಯ ಸಂತ ಮೈಕಲರ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿ ವಾಪಸು ಮನೆಗೆ ಬಂದಾಗ ಮನೆಯ ಅಡುಗೆ ಕೋಣೆಯಲ್ಲಿ ಅವರ ಪತಿ ಲವ ಎಂಬವರು ಅಡುಗೆ ಕೋಣೆಯ ಮಾಡಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರುವುದು ಕಂಡು ಬಂದಿದ್ದು, ಲವರವರು ವಿಪರೀತ ಕೈಸಾಲಗಳನ್ನು ಮಾಡಿಕೊಂಡಿದ್ದು ಸಾಲವನ್ನು ತೀರಿಸಲಾಗಿದೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿ ನಮೇರೆಗೆ  ಮಡಿಕೇರಿ ನಗರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಕುಂಜಿಲ ಗ್ರಾಮದ ನಿವಾಸಿ ಬಾರಿಕೆ ಅಬ್ದುಲ್ಲಾ ಎಂಬವರು ದಿನಾಂಕ 26-11-2016 ರಂದು ಕುಂಜಿಲ ಗ್ರಾಮದ ಬಸ್ ಶೆಲ್ಟರ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಮೊಯ್ದು ಹಾಜಿ ಮತ್ತು ರಜಾಕ್ ಎಂಬವರುಗಳು ದಾರಿ ತಡೆದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜಗಳ ಮಾಡಿ ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ಮನೆಗೆ ಅಕ್ರಮ ಪ್ರವೇಶ ಹಲ್ಲೆ:

     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಮಹಿಳೆ ಮೇಲೆ ಹಲ್ಲೆ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಒಡೆದುಹಾಕಿ ನಷ್ಟಪಡಿಸಿದ ಘಟನೆ ಮಡಿಕೇರಿ ತಾಲೋಕು ಕುಂಜಿಲ ಗ್ರಾಮದಲ್ಲಿ ನಡೆದಿದೆ. ಕುಂಜಿಲ ಗ್ರಾಮದ ನಿವಾಸಿ ಬಿ.ಎ. ಮೊಯ್ದು ಹಾಗು ಆತನ ತಮ್ಮ ಅಂದು ರವರ ನಡುವೆ ಜಾಗದ ಆರ್.ಟಿ.ಸಿ. ವಿಚಾರದಲ್ಲಿ ಜಗಳವಾಗಿದ್ದು, ಇದೇ ವಿಚಾರವಾಗಿ ದಿನಾಂಕ 26-11-2016 ರಂದು 3-00 ಪಿ.ಎಂ. ಸಮಯದಲ್ಲಿ ಕುಂಜಿಲ ಗ್ರಾಮದ ನಿವಾಸಿಗಳಾದ ಯಹ್ಯಾ ಮತ್ತು ಸಾದಿಕ್ ಎಂಬವರುಗಳು ಫಿರ್ಯಾದಿ ಬಿ.ಎ. ಮೊಯ್ದು ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿರವರ ಪತ್ನಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಮನೆ ಬಾಗಿಲಿನ ಲಾಕ್ ಮುರಿದು ಮನೆಯ 3 ಕಿಟಕಿಗಳನ್ನು ಒಡೆದುಹಾಕಿ ಸುಮಾರು 3,000 ರೂ. ನಷ್ಟು ನಷ್ಟಪಡಿಸಿರುತ್ತಾರೆಂದು ಮತ್ತು ಕೊಲೆ ಬೆದರಿಕಿ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

Tuesday, November 29, 2016

ಮರ ಕಳವು ಪ್ರಕರಣ
                      ಮರಗೋಡು ಬಳಿಯ ಕಟ್ಟೆಮಾಡು ನಿವಾಸಿಯಾದ ನಂದೇಟಿರ ಸುಬ್ಬಯ್ಯ ಎಂಬವರು ಮೈಸೂರಿನಲ್ಲಿ ವಾಸವಾಗಿದ್ದು, ಕಟ್ಟೆಮಾಡು ಗ್ರಾಮದಲ್ಲಿ ಅವರಿಗೆ ಕಾಫಿ ತೋಟವಿದ್ದು, ಆಗಿಂದಾಗ್ಗೆ ತೋಟಕ್ಕೆ ಬಂದು ಹೋಗುತ್ತಿರುವುದಾಗಿದೆ. ಅದೇ ರೀತಿ ದಿನಾಂಕ 27/11/2016ರಂದು ಕಟ್ಟೆಮಾಡು ಗ್ರಾಮಕ್ಕೆ ಬಂದು ತೋಟಕ್ಕೆ ಭೇಟಿ ನೀಡಿದಾಗ ತೋಟದಲ್ಲಿದ್ದ ಒಂದು ಬೀಟೆ ಮರ ಮತ್ತು ಒಂದು ಹಲಸಿನ ಮರವನ್ನು ಯಾರೋ ಕಡಿದು ಕಳವು ಮಾಡಿರುವುದು ಕಂಡು ಬಂದಿದ್ದು, ಊರಿನವರಲ್ಲಿ ವಿಚಾರಿಸಿದಾಗ ಅದೇ ಗ್ರಾಮದ ನಿವಾಸಿ ಕೆ.ಎನ್‌.ಸುರೇಶ್‌ ಮತ್ತು ಇನ್ನೊಬ್ಬ ಅರಣ್ಯ ಇಲಾಖೆಯ ಅರಣ್ಯ ರಕ್ಷಕರೊಬ್ಬರು ಸೇರಿಕೊಂಡು ಮರಗಳನ್ನು ಕಡಿದು ಕಳವು ಮಾಡಿರುವುದಾಗಿ ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

ಬೈಕಿಗೆ ಬಸ್‌ ಡಿಕ್ಕಿ
                      ದಿನಾಂಕ 27/11/2016ರಂದು ಬೇಟೋಳಿ ಗ್ರಾಮದ ನಿವಾಸಿ ಬಿ.ಜೆ.ಬೋಪಣ್ಣ ಎಂಬವರು ಗೋಣಿಕೊಪ್ಪ ನಗರದ ಕೈಕೇರಿ ಬಳಿ ರಸ್ತೆಯಲ್ಲಿ ಬರುತ್ತಿರುವಾಗ ಅವರ ಎದುರುಗಡೆಯಿಂದ ಕೆಎ-12-ಕ್ಯು-5402ರ ಮೋಟಾರು ಬೈಕನ್ನು ಓರ್ವ ವ್ಯಕ್ತಿ ಚಾಲಿಸಿಕೊಂಡು ಬರುತ್ತಿದ್ದು ಬೈಕಿನ ಹಿಂದಿನಿಂದ ಕೆಎ-01-ಎಇ-2619ರ ಖಾಸಗಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಬೈಕು ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸು ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ ಮೂವರ ಬಂಧನ
                        ಸೋಮವಾರಪೇಟೆ ನಗರದ ಕೆ.ಇ.ಬಿ ಬಳಿ ಹಲವರು ಅಕ್ರಮವಾಗಿ ಜೂಜಾಟವಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ಪಿಎಸ್‌ಐ ಶಿವಣ್ಣರವರು ದಿನಾಂಕ 28/11/2016ರಂದು ನಗರದ ಕೆ.ಇ.ಬಿ ಬಳಿ ಇರುವ  ಕಾಡಿನ ಬಳಿ ಧಾಳಿ ನಡೆಸಿ ಅಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಸೋಮವಾರಪೇಟೆ ನಿವಾಸಿಗಳಾದ ನಾಗರಾಜು, ಮಂಜ ಮತ್ತು ಮಲ್ಲೇಶ ಎಂಬವರನ್ನು ಬಂಧಿಸಿ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೇಟು ಎಲೆ ಮತ್ತು ಪಣವಾಗಿಟ್ಟ ರೂ. 1170ನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 28, 2016

ಪರಸ್ಪರ ಕಾರು ಡಿಕ್ಕಿ
                        ದಿನಾಂಕ 27/11/2016ರಂದು ಹಾಸನ ಜಿಲ್ಲೆಯ ಶಾಂತಿನಗರ ನಿವಾಸಿ ಬಿ.ಕೆ.ವಿಶ್ವನಾಥ ಎಂಬವರು ಅವರ ಕಾರು ಸಂಖ್ಯೆ ಕೆಎ-13-5214ರಲ್ಲಿ ಕುಟುಂಬದೊಂದಿಗೆ ಭಾಗಮಂಡಲಕ್ಕೆ ಪ್ರವಾಸ ಹೋಗುತ್ತಿರುವಾಘ ಮಂಗಳೂರು ಎದುರುಗಡೆಯಿಂದ ಕೆಎ-02-ಎಂಸಿ-5007ರ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಪ್ರೇಂ ಕುಮಾರ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿಶ್ವನಾಥರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ನಿಂಗಮ್ಮ ಎಂಬವರಿಗೆ ಗಾಯಗಳಾಗಿದ್ದು ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಕಲಿ ದಾಖಲೆ, ಮೋಸ
                    ಚೇರಂಬಾಣೆ ಬಳಿಯ  ನಿವಾಸಿಗಳಾದ ಪೊನ್ನಪ್ಪ ಪಿ.ಎಂ., ಅಭಿಶೇಖ ಎಂಬವರುಗಳು ಸೇರಿಕೊಂಡು ಚೇರಂಬಾಣೆಯ ನಿವೃತ್ತ ಗ್ರಾಮ ಲೆಕ್ಕಿಗ ರಾಧಾಕೃಷ್ಣ ಎಂಬವರ ಸಹಕಾರದೊಂದಿಗೆ ಬೆಂಗಳೂರು ನಿವಾಸಿಯಾಗಿರುವ ಪ್ರಾರ್ಥನಾ ಎಂಬವರ ಸಹಿಯನ್ನು ನಕಲು ಮಾಡಿ  ಪ್ರಾರ್ಥನಾರವರ ತಂದೆಯವರ ಡಿಬಿಬಿಎಲ್‌ ಕೋವಿ ಮತ್ತು .22 ರೈಫಲ್‌ಗಳನ್ನು ಪೊನ್ನಪ್ಪ ಮತ್ತು ಅಭಿಶೇಖ್‌ರವರ ಹೆಸರಿಗೆ ಮಾಡಿಕೊಂಡಿರುವುದಾಗಿ  ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ತಡೆದು ಹಣ ದರೋಡೆ
                    ದಿನಾಂಕ 26/11/2016ರಂದು ತಡ ರಾತ್ರಿ ವೇಳೆ ಕೇರಳದ ಕೋಯಿಕ್ಕೋಡ್ ನಿವಾಸಿ  ನೌಷಾದ್‌ ಎಂಬವರು ಅವರ ಸ್ನೇಹಿತ ಮಹಮದ್‌ ಎಂಬವರೊಂದಿಗೆ ಅವರ ಟೊಯೋಟಾ ಕೊರೊಲಾ ಆಲ್ಟಿಸ್ ಕಾರು ಸಂಖ್ಯೆ ಕೆಎಲ್‌-11-ಎಜಿ-5000 ದಲ್ಲಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೋಯಿಕ್ಕೋಡಿಗೆ ಹೋಗುತ್ತಿರುವಾಗ ಹುದಿಕೇರಿ ಬಳಿ ಎರಡು ಇನ್ನೋವಾ ಕಾರುಗಳಲ್ಲಿ ಸುಮಾರು 10 ರಿಂದ 11 ಮಂದಿ ಬಂದು ನೌಷಾದ್‌ರವರ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ ನೌಷಾದ್‌ರವರನ್ನು ಎಳೆದು ಹೊರ ಹಾಕಿ ಕಾರಿನಲ್ಲಿದ್ದ ಮಹಮದ್‌ರವರ ಸಮೇತ ಕಾರನ್ನು ತೆಗೆದುಕೊಂಡು ಹೋಗಿರುವುದಾಗಿದೆ. ನಂತರ ನೌಷಾದ್‌ರವರ ಆ ದಾರಿಯಲ್ಲಿ ಬರುತ್ತಿದ್ದ ಕೇರಳದ ಯಾವುದೋ ವಾಹನದಲ್ಲಿ ಠಾಣೆಗೆ ಬರುತ್ತಿರುವಾಗ ಹುದಿಕೇರಿಯಿಂದ ಮೂರು ಕಿ.ಮೀ ದೂರದಲ್ಲಿ ರಸ್ತೆಯ ಬದಿ ಅವರ ಕಾರನ್ನು ನಿಲ್ಲಿಸಿದ್ದು ಕಂಡು ಬಂದಿದ್ದು ಹೋಗಿ ನೋಡಿದಾಗ ಮಹಮದ್‌ರವರು ಕಾರಿನಲ್ಲಿದ್ದು ಅವರನ್ನು ವಿಚಾರಿಸಿದಾಗ ದುಷ್ಕರ್ಮಿಗಳು ಮಹಮದ್‌ರವರನ್ನು ಹಣಕ್ಕಾಗಿ ಒತ್ತಾಯಿಸಿ ಹಣ ಸಿಗದಿದ್ದಾಗ ಮಹಮದ್‌ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ ರೂ 15,000 ಹಣ ಮತ್ತು ಅವರ ಮೊಬೈಲನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಬಸ್‌ ಡಿಕ್ಕಿ
                       ದಿನಾಂಕ 26/11/2016ರಂದು ಟಿ.ಶೆಟ್ಟಿಗೇರಿ ನಿವಾಸಿ ಮಂದಮಾಡ ತೇಜಪ್ಪ ಎಂಬವರು ನಾಲ್ಕೇರಿಯಲ್ಲಿ  ಅಂಗಡಿಯಿಂದ ಕೋಳಿ ಮಾಂಸ ತೆಗೆದುಕೊಂಡು ಅವರ ಸ್ಕೂಟರ್‌  ಸಂಖ್ಯೆ  ಕೆಎ-19-ಜೆ-5908ರಲ್ಲಿ  ಮನೆಗೆ ಹೋಗುತ್ತಿರುವಾಗ ಕುಟ್ಟ ಕಡೆಯಿಂದ  ಕೆಎ-10-8818ರ ಖಾಸಗಿ ಬಸ್ಸನ್ನು ಅದರ ಚಾಲಕ ಜಬೀವುಲ್ಲಾ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತೇಜಪ್ಪನವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ ಬಂಧನ
                       ದಿನಾಂಕ 27/11/2016ರಸಂಜೆ  ವೇಳೆ ಸುಂಟಿಕೊಪ್ಪ ಠಾಣೆ ಸಿಬ್ಬಂದಿ ಕೆ.ಪಿ.ವಿಜಯ ಕುಮಾರ್‌ ಮತ್ತು ಸಿ.ಎಂ.ಉದಯ ಎಂಬವರು ನಗರ ಗಸ್ತು ಮಾಡುತ್ತಿರುವಾಗ ಸುಂಟಿಕೊಪ್ಪದ ಪೂಜಾ ಬಾರ್‌ ಬಳಿ ಬೆಂಗಳೂರು ಜಿಲ್ಲೆಯ ಆನೆಕಲ್ ತಾಲೂಕಿನ ನಿವಾಸಿ ಬಿ.ಸುರೇಶ್ ಎಂಬಾತನು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಆತನು ಅವನ ಇರುವಿಕೆ ಬಗ್ಗೆ ಸೂಕ್ತ ಕಾರಣ ನೀಡದೆ ಇದ್ದ ಕಾರಣ ಆತನು ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ 
                          ದಿನಾಂಕ 27/11/2016ರಂದು ಶನಿವಾರಸಂತೆ ಬಳಿಯ ನಂದಿಗುಂದ ಗ್ರಾಮದ ನಿವಾಸಿ ಪಂಚಾಯಿತಿ ವತಿಯಿಂದ ಗ್ರಾಮದ ಮನೆಗಳಿಗೆ ನೀರು ಬಿಡುವ ಕೆಲಸ ಮಾಡಿಕೊಂಡಿರುವ ಸಣ್ಣಪ್ಪ ಎಂಬವರು ಶಾಂತವೇರಿ ಗ್ರಾಮಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಅಂಗಡಿಯ ಬಳಿ ಸಿಕ್ಕಿದ ಆನಂದ ಎಂಬವರನ್ನು ಕುರಿತು ಆನಂದರವರು ಸಣ್ಣಯ್ಯನವರ ಮನೆಯ ಅಂಗಳಕ್ಕೆ ಕೊಳಚೆ ನೀರನ್ನು ಬಿಟ್ಟ ಬಗ್ಗೆ ಕೇಳಿದಾಗ ಆನಂದ, ಉಮೇಶ ಮತ್ತು ದಾಸಯ್ಯ ಎಂಬವರು ಸೇರಿಕೊಂಡು ಸಣ್ಣಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಕೊಲೆ ಯತ್ನ
                       ದಿನಾಂಕ 27/11/2016ರಂದು ಹಾಕತ್ತೂರು ನಿವಾಸಿ ಭವ್ಯ ಎಂಬವರು ಅವರ ಮನೆಯ ಬಾವಿಯಿಂದ ನೀರು ಸೇದುತ್ತಿರುವಾಗ ಆಕೆಯ ಪತಿ ಲಿತೀಶ್‌ ಎಂಬವರು ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯನ್ನು ಬಾವಿಗೆ ತಳ್ಳಿದ್ದು, ಭವ್ಯರವರ ಕಿರುಚಾಟ ಕೇಳಿದ ನೆರೆಮನೆಯ ಆಶಾ ಎಂಬವರು ಬಂದು ಭವ್ಯರವರನ್ನು ವಾವಿಯಿಂದ ಎತ್ತಿ ಕಾಪಾಡಿರುವುದಾಗಿ ಭವ್ಯರವರು ದೂರು ನೀಡಿರುವುದಾಗಿದೆ. ಲಿತೀಶ್‌ ಹಾಗೂ ಭವ್ಯರವರು ಸುಮಾರು 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಹೊಂದಾಣಿಕೆ ಕಂಡು ಬಾರದ ಕಾರಣ ಲಿತೀಶ್‌ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು, ನಂತರ ಎರಡೂ ಕಡೆಯ ವಕೀಲರ ಮದ್ಯಸ್ಥಿಕೆಯಿಂದ ರಾಜಿ ತೀರ್ಮಾನವಾಗಿ ಜುಲೈ ತಿಂಗಳಿನಿಂದ ಭವ್ಯರವರು ಪತಿಯೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಪ್ರಕರಣ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 27, 2016

  ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ

          ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಲಕ್ಷ್ಮಣ ತೀರ್ಥ ನದಿಯಿಂದ ದಿನಾಂಕ 25-11-2016 ರಂದು ಮರಳು ಸಂಗ್ರಹಿಸಿ ಮಾರಾಟ ಮಾಡಲು ಕೆಎ-12-ಎ-1978 ರ ಟಿಪ್ಪರ್ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದುದ್ದನ್ನು ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕರಾದ ಜಯರಾಮ್ ರವರು ಪತ್ತೆಹಚ್ಚಿ ಆರೋಪಿಗಳಾದ ಚಾಲಕ ಟಿ ಎಂ ಸುಬ್ರಮಣಿ ಮತ್ತು ಲಾರಿ ಮಾಲಿಕನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ನಹತ್ಯೆ

          ವಿರಾಜಪೇಟೆ ತಾಲೂಕಿನ ಶ್ರೀಮಂಗಲದ ಕುರ್ಚಿ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ದಿನಾಂಕ 26-11-2016 ರಂದು ಅಜ್ಜಮಾಡ ಮೋಹನ್ ರವರು ತೋಟದಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡಿಕೊಂಡಿರುವಾಗ್ಗೆ ಕೆಟ್ಟ ವಾಸನೆ ಬರುತ್ತಿದ್ದು ಹೋಗಿ ನೋಡಲಾಗಿ ನೇಣು ಬಿಗಿದುಕೊಂಡು ಯಾರೋ ಆತ್ಮ ಹತ್ಯೆ ಮಾಡಿಕೊಂಡಿದ್ದು ದೇಹವು ಕೊಳೆತು ಹೋಗಿದ್ದು, ಈ ಬಗ್ಗೆ ಅಜ್ಜಮಾಡ ಮೋಹನ್ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

  ಅಕ್ರಮ ಮರಳು ಸಾಗಾಟ ಲಾರಿಗಳ ವಶ

           ದಿನಾಂಕ 26-11-2016 ರಂದು ಕುಶಾಲನಗರ ಉಪ ವಿಭಾಗದ ಉಪಾಧೀಕ್ಷಕರಾದ ಸಂಪತ್ ಕುಮಾರ್ ರವರು ರಾತ್ರಿ ಗಸ್ತು ಮಾಡುತ್ತಿರುವಾಗ ಹೆಬ್ಬಾಲೆ ಗ್ರಾಮದ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೆಎ-12-ಎ-6715 ಮತ್ತು ಕೆಎ-12-ಬಿ-1065 ರ ಲಾರಿಯನ್ನು ತಡೆದು ಚೆಕ್ ಮಾಡಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸದರಿ 2 ಲಾರಿಗಳನ್ನು ಭದ್ರಿಕೆ ಮಾಡುತ್ತಿದ್ದ ಕೆಎ-12-ಎನ್-7520 ರ ಮಾರುತಿ ಸ್ವಿಪ್ಟ್ ಕಾರನ್ನು ಸಹಾ ವಶಕ್ಕೆ ಪಡೆದುಕೊಂಡು ಲಾರಿ ಚಾಲಕರಾದ ಮಂಜುನಾಥ, ಸಂಗಮೇಶ್ ಮತ್ತು ಕಾರಿನ ಚಾಲಕ ಜಗದೀಶ್ ರವರ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮೋಟಾರು ಸೈಕಲ್ ಗೆ ಟ್ರ್ಯಾಕ್ಟರ್ ಡಿಕ್ಕಿ

          ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮುಳ್ಳೂರು ಕಾಲೋನಿಯ ರಸ್ತೆಯಲ್ಲಿ ದಿನಾಂಕ 24-11-2016 ರಂದು ಕೆಎ-12-ಟಿ-4971 ರ ಟ್ರ್ಯಾಕ್ಟರನ್ನು ಅದರ ಚಾಲಕ ವಿಜಯ ಕುಮಾರ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಪ್ರಮೋದ್ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರಮೋದ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ದಿನಾಂಕ 26-11-2016 ರಂದು ಮೋಹನರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಆರೋಪಿಗಳ ಬಂಧನ
          ದಿನಾಂಕ 26-11-2016 ರಂದು ಶನಿವಾರಸಂತೆಯ ದುಂಡಳ್ಳಿ ಗ್ರಾಮದ ಪೈಸಾರಿ ಖಾಲಿ ಜಾಗದಲ್ಲಿ ಇಸ್ಪೀಟು ಎಲೆಗಳಿಂದ ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಶನಿವಾರಸಂತೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮರಿಸ್ವಾಮಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳಾದ ಕೆ ಟಿ ಜೋಸೆಫ್, ನಿಂಗರಾಜು, ಸುರೇಶ್ ಮತ್ತು ಹನುಮಂತಶೆಟ್ಟಿರವರನ್ನು ಹಾಗೂ  ಪಣವಾಗಿ ಕಟ್ಟಿದ್ದ 700 ರೂಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಮೋಟಾರು ಸೈಕಲಿಗೆ ಗೂಡ್ಸ್ ಆಟೋ ಡಿಕ್ಕಿ

        ದಿನಾಂಕ 25-11-2016 ರಂದು ಕಂಟ್ರಾಕ್ಟರ್ ಪೌಲೋಸ್ ಜೊತೆ ಅವರ ಬಾಪ್ತು ಮೋಟಾರು ಸೈಕಲಿನಲ್ಲಿ ಕಾರ್ಮಾಡುವಿನಲ್ಲಿ ವಾಸವಿರುವ ಮಹದೇವಾಚಾರ್ ರವರು ಹಿಂಬದಿಯಲ್ಲಿ ಕುಳಿತುಕೊಂಡು ಕಾರ್ಮಾಡುವಿಗೆ ವಿರಾಜಪೇಟೆಯಿಂದ ಹೋಗುತ್ತಿರುವಾಗ ಮಗ್ಗುಲ ಗ್ರಾಮದ ಗ್ಯಾಸ್ ಗೋಡಾನ್ ಹತ್ತಿರ ತಲುಪುವಾಗ ಮುಂದೆ ಹೋಗುತ್ತಿದ್ದ ಗೂಡ್ಸ್ ಆಟೋ ಚಾಲಕ ಶಿಯಾಬ್ ಎಂಬುವವರು ಯಾವುದೇ ಸೂಚನೆ ನೀಡದೇ ಬಲಕ್ಕೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಮೋಟಾರು ಸೈಕಲಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಮಹದೇವಾಚಾರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಆಟೋ ರಿಕ್ಷಾಕ್ಕೆ ಮ್ಯಾಜಿಕ್ ವಾಹನ ಡಿಕ್ಕಿ

         ಆಟೋ ರಿಕ್ಷಾಕ್ಕೆ ಸೂಪರ್ ಮ್ಯಾಜಿಕ್ ವಾಹನವು ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋದ ಪ್ರಕರಣ ವಿರಾಜಪೇಟೆ ತಾಲೂಕಿನ ಕುಕ್ಲೂರುವಿನಲ್ಲಿ ನಡೆದಿದೆ. ದಿನಾಂಕ 26-11-2016 ರಂದು ಅರಮೇರಿ ಗ್ರಾಮದ ಕೋಟೆರ ಸುಬ್ರಮಣಿ ಎಂಬುವವರು ಜಯಂತಿ ಎಂಬುವವರನ್ನು ಕೂರಿಸಿಕೊಂಡು ಬಾಡಿಗೆಗೆ ಕದನೂರು ಗ್ರಾಮಕ್ಕೆ ಹೋಗುತ್ತಿರುವಾಗ ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ತಾನದ ಹತ್ತಿರ ತಲುಪುವಾಗ ಹಿಂದುಗಡೆಯಿಂದ ಬಂದ ಸೂಪರ್ ಮ್ಯಾಜಿಕ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ್ದು, ಆಟೋದಲ್ಲಿದ್ದ ಜಯಂತಿಯವರಿಗೆ ಗಾಯಗಳಾಗಿದ್ದು, ಆಟೋ ಜಖಂಗೊಂಡಿರುವುದಾಗಿ ಮುತ್ತಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಹಲ್ಲೆ

         ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಮಲ್ಲಂಗಡ ಚಿಟ್ಟಿಯಪ್ಪ ಮತ್ತು ವಿಶ್ವನಾಥರವರು ಅಣ್ಣತಮ್ಮಂದಿಯರಾಗಿದ್ದು ಇಬ್ಬರಿಗೂ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಇದ್ದು, ದಿನಾಂಕ ದಿನಾಂಕ 7-9-2016 ರಂದು ಚಿಟ್ಟಿಯಪ್ಪರವರು ಮನೆಯಲ್ಲಿರುವಾಗ್ಗೆ ಅಲ್ಲಿಗೆ ವಿಶ್ವನಾಥ ಮತ್ತು ಆತನ ಹೆಂಡತಿ ರೋಹಿಣಿಯವರು ಬಂದು ನೀನು ಇಲ್ಲಿ ಮನೆಯಲ್ಲಿ ಇರಕೂಡದು ಎಂದು ಹೇಳಿ ಏಕಾ ಏಕಿ ಹಲ್ಲೆ ನಡೆಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಿನಾಂಕ 26-11-2016 ರಂದು ಚಿಟ್ಟಿಯಪ್ಪರವರು ನೀಡಿದ ಪುಕಾರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, November 26, 2016

ಗಂಡಸು ಕಾಣೆ: 
     ಕೂಲಿ ಕಾರ್ಮಿಕನೊಬ್ಬ ಕೆಲಸಕ್ಕೆ ಹೋಗಿ ಮತ್ತೆ ಮನೆಗೆ ಬಾರಕೆ ಕಾಣೆಯಾಗಿರುವ ಘಟನೆ ವಿರಾಜಪೇಟೆ  ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿ ಎಂಬಲ್ಲಿ ನಡೆದಿದೆ.  ಪೆರುಂಬಾಡಿಯಲ್ಲಿ ವಾಸವಾಗಿರುವ ವಿನೋದ್ ಎಂಬವರ ತಂದೆ ಗೋಪಾಲ ಎಂಬವರು ದಿನಾಂಕ  22-11-2016 ರಂದು ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು  ವಿನೋದ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಾವಿಗೆ ಅಳವಡಿಸಿದ ಮೋಟಾರ್ ಕಳವು:
      ನೀರು ಸರಬರಾಜು ಮಾಡುವ ಸಂಬಂಧ ಬಾವಿಗೆ ಅಳವಡಿಸಿದ ಮೋಟಾರ್ ನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಅಂಬಟ್ಟಿ ಎಂಬಲ್ಲಿ ನಡೆದಿದೆ.  ಬಾಳುಗೋಡು ಗ್ರಾಮದ  ಅಂಬಟ್ಟಿ ಎಂಬಲ್ಲಿ ವಾಸವಾಗಿರುವ ಎ.ಆರ್. ಆನಂದ ಎಂಬವರ ಮನೆಯ ಹತ್ತಿರದಲ್ಲಿರುವ ನ್ಯಾಯಾಲಯದ ವ್ಯಾಜ್ಯವಿರುವ ಸ್ಥಳದಲ್ಲಿ ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಬಾವಿಗೆ ಅಳವಡಿಸಿದ ಮೋಟಾರನ್ನು ಕದನೂರು ಗ್ರಾಮದ ಪಾಲೆಕಂಡ ಪಿ. ಕುಟ್ಟಪ್ಪ ಎಂಬವರು ಕಳವು ಮಾಡಿಕೊಂಡು ಹೋಗಿರುವುದಾಗಿ ಫಿರ್ಯಾದಿ ಎ.ಆರ್. ಆನಂದರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆ ದ್ವೇಷ ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:
 
     ದ್ವೇಷವನ್ನಿಟ್ಟುಕೊಂಡು ಜಾಗದ ವಿಚಾರವಾಗಿ ವ್ಯಕ್ತಿಯೊಬ್ಬರ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ಒಡೆಯನಪುರ ಗ್ರಾಮದಲ್ಲಿ ನಡೆದಿದೆ.  ಒಡೆಯನಪುರ ಗ್ರಾಮದ ನಿವಾಸಿ ವಿ.ಎಸ್. ರವೀಂದ್ರ ಎಂಬವರು ದಿನಾಂಕ 24-11-2016 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ತನ್ನ ವಾಸದ ಮನೆಯ ಮುಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ವಿ.ಜೆ. ಹರೀಶ್ ಎಂಬವರು ಜಾಗದ ವಿಚಾರದಲ್ಲಿ ಹಳೆಯ ದ್ವೇಷವನ್ನಿಟ್ಟುಕೊಂಡು ವಿ.ಎಸ್. ರವೀಂದ್ರ ರವರ ದಾರಿ ತಡೆದು ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, November 25, 2016

ಕೊಡಗು ಜಿಲ್ಲಾ ಪೊಲೀಸರ ಮಿಂಚಿನ ಕಾರ್ಯಾಚರಣೆ, ದರೋಡೆಯಾದ 12 ಗಂಟೆಯಲ್ಲೇ  ಮಾಲು ಸಮೇತ ಆರೋಪಿತರ ಬಂಧನ          
 
         ಕೊಡಗು ಜಿಲ್ಲೆ, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮೊಕದ್ದಮೆ ಸಂಖ್ಯೆ 147/16 ಗೆ ಸಂಬಂಧಿಸಿದಂತೆ, ದಿನಾಂಕ 24-11-2016 ರಂದು ಬೆಳಗ್ಗೆ ಹೊಸಪಟ್ನ ಗ್ರಾಮದ ಹೆಚ್. ಬಿ ಶಿವಕುಮಾರ್ ರವರ ಮನೆಯಲ್ಲಿ ಯಾರೋ ಅಪರಿಚಿತರು ಡಕಾಯಿತಿ ಮಾಡಿದ ಬಗ್ಗೆ ಮಾಹಿತಿ ಬಂದ ಕೂಡಲೇ ಸಿಪಿಐ ಕುಶಾಲನಗರ ಹಾಗೂ ಪಿಎಸ್ಐ ಕುಶಾಲನಗರ ಗ್ರಾಮಾಂತರ, ಪಿಎಸ್ಐ ಸುಂಟಿಕೊಪ್ಪ, ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಯವರು ಡಿವೈಎಸ್ ಪಿ ಕುಶಾಲನಗರರವರ ನೇತೃತ್ವದಲ್ಲಿ ಪೊಲೀಸ್ ಬಾತ್ಮೀದಾರರ ಸಹಾಯದೊಂದಿಗೆ ರಾತ್ರಿ 8.30 ಸಮಯಕ್ಕೆ ನಾಲ್ವರು ಆರೋಪಿಗಳನ್ನು ಪತ್ತೆ ಮಾಡಿದ್ದು ಸದರಿಯವರ ವಿವರ ಈ ಕೆಳಕಂಡಂತೆ ಇರುತ್ತದೆ.

1) ಅಬ್ದುಲ್ ರೆಹಮಾನ್ @ ಜಿಯಾ ತಂದೆ ಮೊಹಮ್ಮದ್, 24 ವರ್ಷ, ಲಾರಿ ಚಾಲಕ, ಸರ್ಕಾರಿ ಕಾಲೇಜ್ ಪಕ್ಕ, ಗಾಂಧಿ ಪಾರ್ಕ್, ಉಪ್ಪಿನಂಗಡಿ, ದಕ್ಷಿಣ ಕನ್ನಡ ಜಿಲ್ಲೆ.

2) ಮೊಹಮ್ಮದ್ ಹನೀಫ್, ತಂದೆ ಲೇ: ಉಮ್ಮರಬ್ಬಿ, 28 ವರ್ಷ, ಗುಜರಿ ವ್ಯಾಪಾರ, ಸುಂದರಿ ಬಾಗ್, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 19 ಕಳವು, ಮನೆಗಳವು, ಕೊಲೆ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

 3) ಮೊಹಮ್ಮದ್ ಫಯಾಜ್ ತಂದೆ ಅಬುಬಕರ್, 28 ವರ್ಷ, ಧಕ್ಕೆ ಮಾರ್ಕೆಟ್ನಲ್ಲಿ ಮೀನು ವ್ಯಾಪಾರ, ಸಬಾಸ್ಟೀನ್ ಕಾಲೇಜ್ ಹಿಂಬಾಗ, ತೊಕ್ಕೊಟ್ಟು, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 13 ಕೊಲೆ, ಕಳವು, ಡಕಾಯಿತಿ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

 4) ಜಾಫರ್ ಸಾಧಿಕ್, ತಂದೆ ಕೆ. ಎಸ್. ಅಬ್ಬಾಸ್, 25 ವರ್ಷ, ಟೈಲರ ಕೆಲಸ, ಫ್ಯಾಷನ್ ಪ್ಯಾಲೇಸ್, ಕುನಿಲ್ ಸೆಂಟರ್, ಹಂಪನಕಟ್ಟೆ ಮುಖ್ಯರಸ್ತೆ, ಮಂಗಳೂರು, ವಾಸ: ಕೆ. ಎಸ್. ಮಂಜಿಲ್, ಟಿ. ಸಿ.ರೋಡ್, ಅಕ್ಕರೆಕೆರೆ, ಉಲ್ಲಾಳ, ಮಂಗಳೂರು. (ಉಲ್ಲಾಳ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ)

          ಮೇಲ್ಕಂಡ ಆರೋಪಿಗಳನ್ನು ವಿಚಾರಣೆ ಮಾಡಲಾಗಿ ದಿನಾಂಕ 23-11-2016 ರಂದು ಮೇಲ್ಕಂಡ ಆರೋಪಿಗಳು ಇನ್ನಿತರೆ ಆರೋಪಿಗಳಾದ ನಿಜಾಮ್ @ ನಿಜ್ಜು, ಮಜೀದ್, ಸಲಿಯಾತ್ @ ಸಲಿತ್, ಜಲಾಲ್ ರವರೊಂದಿಗೆ ಸೇರಿ ಇನ್ನೋವಾ ಕಾರನ್ನು ತಮಗೆ ಪರಿಚಯವಿರುವ ಅಲಿ ರವರ ಸಹಾಯದಿಂದ ಬಾಡಿಗೆ ಪಡೆದು ಮಂಗಳೂರಿನಿಂದ ಮಡಿಕೇರಿಗೆ ಬಂದು ಮಡಿಕೇರಿಯ ಆಟೋಚಾಲಕ ಕೃಷ್ಣ ನನ್ನು ಬೇಟಿ ಮಾಡಿ ಎಲ್ಲರೂ ಒಟ್ಟಿಗೆ ಸೇರಿ ಸಂಚು ರೂಪಿಸಿ ರಾತ್ರಿ 11 ಗಂಟೆಯವರೆಗೆ ಮಡಿಕೇರಿಯಲ್ಲಿ ಸುತ್ತಾಡಿಸಿದ ನಂತರ ಕೃಷ್ಣ ಎಲ್ಲರನ್ನು ಕುಶಾಲನಗರಕ್ಕೆ ಕರೆತಂದು ಯಾವುದೋ ಒಂದು ರೂಮಿಗೆ ಕರೆತಂದು ವಿಶ್ರಾಂತಿ ಪಡೆಯುವಂತೆ ರಾತ್ರಿ ಊಟವನ್ನು ರೂಮಿಗೆ ತಂದು ಕೊಟ್ಟಿದ್ದಾಗಿ ತಿಳಿದು ಬಂದಿರುತ್ತದೆ. ನಂತರ ಬೆಳಿಗ್ಗೆ 5 ಗಂಟೆಗೆ ಮಡಿಕೇರಿ ಆಟೋಚಾಲಕ ಕೃಷ್ಣ ಕುಶಾಲನಗರಕ್ಕೆ ಬಂದು ಎಲ್ಲರನ್ನು ಎಚ್ಚರಗೊಳಿಸಿ ಎಲ್ಲರೂ ಸೇರಿ ಇನ್ನೊವಾ ಕಾರಿನಲ್ಲಿ ಹೊರಟು ಮಾರ್ಗ ಮಧ್ಯೆ ಇನ್ನೊವಾ ಕಾರಿನ ನಂಬರ್ ಪ್ಲೇಟನ್ನು ಬದಲಿಸಿ, ಹೊಸಪಟ್ನದ ಕಡೆಗೆ ಹೊರಟು ಶಿವಕುಮಾರ್ ರವರ ಮನೆಯನ್ನು ತಲುಪಿದ್ದು, ಪೂರ್ವನಿಯೋಜಿತವಾದಂತೆ ಮನೆಯ ಬಾಗಿಲು ತೆರೆಯುವವರೆಗೆ ಮನೆಯ ಬಳಿಯ ಕಾಫಿ ತೋಟದಲ್ಲಿ ಕಾದು ಕುಳಿತು, ಇವರಲ್ಲಿ ಹನೀಫ್ ಹಾಗೂ ಜಲಾಲ್ ರವರು ಮಂಕಿ ಕ್ಯಾಪ್ ಧರಿಸಿದ್ದರು.
          ವಿಶ್ವನಾಥ್ ರವರು ಶಿವಕುಮಾರ್ ರವರ ಮನೆಯ ಮುಂಬಾಗಿಲಿನ ಬೆಲ್ ಮಾಡಿದ್ದು, ಆಗ ಶಿವಕುಮಾರ್ ರವರು ಮನೆಯ ಬಾಗಿಲು ತೆರೆದು ವಿಶ್ವನಾಥ್ ರವರು ಒಳಗೆ ಪ್ರವೇಶಿಸುತ್ತಿದ್ದಂತೆ, ಶಿವಕುಮಾರ್ ರವರು ಅವರಿಗೆ ಹೂವನ್ನು ತರಲು ಹೇಳಿದಾಗ ವಿಶ್ವನಾಥ್ ರವರು ಹಿಂಬದಿಯ ಬಾಗಿಲನ್ನು ತರೆದು ಮನೆಯ ಪಕ್ಕದಲ್ಲಿರುವ ಹೂಗಿಡದಿಂದ ಹೂ ತರಲು ಹೋದಾಗ, ಎಲ್ಲಾ ಆರೋಪಿಗಳು ವಿಶ್ವನಾಥ್ ರವರಿಗೆ ಲಾಂಗ್ ತೋರಿಸಿ ಮುಂದಿನ ಬಾಗಿಲಿಗೆ ಬೀಗ ಹಾಕಿ ವಿಶ್ವನಾಥ್ ರವರೊಂದಿಗೆ ಹಿಂಬದಿಯ ಬಾಗಿಲಿನಿಂದ ಒಳಪ್ರವೇಶಿಸಿ ಕೈಯಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ ಅವರ ಕೈ ಕಾಲುಗಳನ್ನು ಬಟ್ಟೆ ಹಾಗೂ ಪ್ಯಾಕಿಂಗ್ ಟೇಪ್ ನಿಂದ ಕಟ್ಟಿಹಾಕಿ ತಮ್ಮೊಂದಿಗಿದ್ದ ಚಾಕುವಿನಿಂದ ಇರಿದು ಮನೆಯ ಹಾಲ್ ನಲ್ಲಿ ನೆಲದ ಮೇಲೆ ಮಲಗಿಸಿದ್ದು, ಮನೆಯ ದೇವರ ಕೋಣೆಯಿಂದ ಹಾಲ್ ಗೆ ಬರುತ್ತಿದ್ದ ಶಿವಕುಮಾರ್ ರವರಿಗೆ ಲಾಂಗ್ ತೋರಿಸಿ ಕೈಯಿಂದ ಹಲ್ಲೆ ಮಾಡಿ ಕಾಲಿನಿಂದ ಒದ್ದು ಬಟ್ಟೆ ಹಾಗೂ ಪ್ಯಾಕಿಂಗ್ ಟೇಪ್ ನಿಂದ ಕಟ್ಟಿಹಾಕಿದ್ದಾರೆ. ಮುಂಬಾಗಿಲಿಗೆ ಬೀಗ ಹಾಕಿದ್ದನ್ನು ಗಮನಿಸಿದ ಶಿವಕುಮಾರ್ ರವರ ಸ್ನೇಹಿತರಾದ ಈಶ್ವರ್ ರವರು ಹಿಂಬದಿಯ ಬಾಗಿಲಿನ ಬಳಿ ಬಂದವರನ್ನು ಚಾಕುವಿನಿಂದ ಹಾಗೂ ಕಾಲಿನಿಂದ ಹಲ್ಲೆ ಮಾಡಿ ಹಿಂಬದಿಯ ಬಾಗಿಲಿನ ಬಳಿ ಕೂರಿಸಿ, ಮನೆಯ ಲಾಕರ್ ಹಾಗೂ ಇನ್ನಿತರೆ ಕಪಾಟುಗಳನ್ನು ತಡಕಾಡಿ ಸಿಕ್ಕ ಸಣ್ಣ ಪುಟ್ಟ ಚಿನ್ನಾಭರಣಗಳನ್ನು ಜೇಬಿನಲ್ಲಿ ಹಾಕಿಕೊಂಡಿದ್ದು, ಉಳಿದಂತೆ ಕೃಷ್ಣ ಹಾಗೂ ನಿಜಾಮ್ ತಮ್ಮೊಂದಿಗೆ ತಂದಿದ್ದ ಬ್ಯಾಗ್ ನಲ್ಲಿ ಮನೆಯಲ್ಲಿದ್ದ 40 ಲಕ್ಷ ಬೆಲೆಬಾಳುವ ವಜ್ರ, ಚಿನ್ನಾಭರಣ, ಬೆಳ್ಳಿ ನಾಣ್ಯಗಳು, ಚಿನ್ನದ ನಾಣ್ಯಗಳನ್ನು ಒಂದು ಕ್ಯಾರಿಬ್ಯಾಗ್ ನಲ್ಲಿ ತುಂಬಿಕೊಂಡು ಶಿವಕುಮಾರ್ ರವರ ರಿವಾಲ್ವರ್ ನೊಂದಿಗೆ ಹಿಂಬದಿಯ ಬಾಗಿಲಿನ ಮೂಲಕ ರಸ್ತೆ ಪ್ರವೇಶಿಸುತ್ತಿದ್ದಂತೆ, ಹಿಂಬದಿಯ ಬಾಗಿಲ ಬಳಿ ಕೂತಿದ್ದ ಈಶ್ವರ್ ರವರು ಬೊಬ್ಬೆ ಹಾಕಿದ್ದು ಎಲ್ಲರೂ ಗಾಬರಿಯಿಂದ ದಿಕ್ಕಾಪಾಲಾಗಿ ಓಡಿಹೋಗಿದ್ದು, ಅವರಲ್ಲಿ ಆರೋಪಿಗಳಾದ ಕೃಷ್ಣ, ನಿಜಾಮ್ @ ನಿಜ್ಜು, ಮಜೀದ್, ಸಲಿಯಾತ್ @ ಸಲಿತ್, ಜಲಾಲ್ ರವರುಗಳು ಕಳವು ಮಾಡಿದ ಆಭರಣಗಳಿದ್ದ ಬ್ಯಾಗಿನೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿರುತ್ತದೆ.
 ಮೇಲ್ಕಂಡ ಆರೋಪಿಗಳಿಂದ ಈ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
 1) 42,700-00 ರೂ ನಗದು, 2) 4 ಚಿನ್ನದ ಉಂಗುರ, 3) 2 ಚಿನ್ನದ ಚೈನು, 4) 1 ನೆಕ್ಲೇಸ್, 5) 1 ಕರಿಮಣಿ ಪದಕ,            6) 2 ಚಿನ್ನದ ಬಳೆಗಳು, 7) ಕಪ್ಪು ಮಣಿಗಳುಳ್ಳ ಬಳೆ, 8) ಪರ್ಫ್ಯೂಮ್ ಬಾಟಲ್, 9) ಸಿಗಾರ್ ಲೈಟ್, 10) ಒಂದು ರಿವಾಲ್ವರ್, 11) ಎರಡು ಲಾಂಗ್

       ಸದರಿ ಆರೋಪಿತರುಗಳು ಇನ್ನೂ ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಕೂಲಂಕುಷವಾಗಿ ವಿಚಾರಣೆಯಾಗಬೇಕಾಗಿರವುದರಿಂದ ಸದರಿ ಪ್ರಕರಣದ ತನಿಖೆಯನ್ನು ಸಿಪಿಐ ಕುಶಾಲನಗರರವರು ಕೈಗೊಂಡಿದ್ದು ಪ್ರಕರಣ ತನಿಖೆಯಲ್ಲಿರುತ್ತದೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಮದ್ಯಪಾನದ ಅಮಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದಲ್ಲಿ ನಡೆದಿದೆ. ಕೆ. ಬಾಡಗ ಗ್ರಾಮದ ಮುಕ್ಕಾಟೀರ ಬಿದ್ದಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ 27 ವರ್ಷ ಪ್ರಾಯದ ಗಣೇಶ ಎಂಬಾತ ಮದ್ಯಪಾನ ಮಾಡಿ ಮನೆಗೆ ಬಂದಿದ್ದು ಊಟದ ವಿಚಾರದಲ್ಲಿ ಪತ್ನಿಜೊತೆ ಜಗಳ ಮಾಡಿಕೊಂಡಿದ್ದು, ರಾತ್ರಿ ಸಮಯದಲ್ಲಿ ಮನೆಯ ಹತ್ತಿರದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ

     ಸಾಲ ಮರುಪಾವತಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ಸೋಮವಾರಪೇಟೆ ತಾಲೋಕು ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ ಶ್ರೀಮತಿ ಲಲಿತ ಎಂಬವರ ಪತಿ ಲಿಂಗರಾಜು ಎಂಬವರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ತಾನು ಪಡೆದ ಸಾಲದ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸದರಿಯವರ ಪತ್ನಿ ಲಲಿತರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗೋದಾಮಿನಿಂದ ಕಾಫಿ ಕಳ್ಳತನ

    ಗೋದಾಮಿನಲ್ಲಿ ಶೇಖರಿಸಿಟ್ಟ ಕಾಫಿ ಹಾಗು ಪಂಪ್ ಹೌಸ್ ಬಳಿ ಇಟ್ಟ ಬ್ಯಾಟರಿ ಕಳ್ಳತನವಾದ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಕೆ.ಎಂ. ತಿಮ್ಮಯ್ಯ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಅಳವಡಿಸಿದ 12 ವೋಲ್ಟ್ ನ ಬ್ಯಾಟರಿಯನ್ನು ದಿನಾಂಕ 25-9-2016 ರಂದು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು, ನಂತರ ದಿನಾಂಕ 23-11-2016 ರಂದು ಕೆ.ಎಂ. ತಿಮ್ಮಯ್ಯ ಎಂಬವರಿಗೆ ಸೇರಿದ ಕಾಫಿ ಗೋದಾಮಿನಿಂದ 34 ಬ್ಯಾಗ್ ಕಾಫಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಫಿರ್ಯಾದಿ ಕೆ.ಎಂ. ತಿಮ್ಮಯ್ಯ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, November 24, 2016

ಅಸ್ವಾಭಾವಿಕ ಸಾವು ಪ್ರಕರಣ ದಾಖಲು:
                       ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟ ಘಟನೆ ಕುಟ್ಟ ಠಾಣಾ ಸರಹದ್ದಿನ ಕಾನೂರು ಗ್ರಾಮದಲ್ಲಿ ನಡೆದಿದೆ. ಮೂಲತ: ವಿಜಯಪುರ ಜಿಲ್ಲೆ, ಸಿಂದಗಿ ತಾಲೋಕು, ಜಟನಾಳ ಗ್ರಾಮದ ನಿವಾಸಿ ಹಾಲಿ  ಕಾನೂರು ಗ್ರಾಮದಲ್ಲಿ ನೆಲೆಸಿದ್ದ  ಶಿವಲಿಂಗಯ್ಯ ಎಂಬ ವ್ಯಕ್ತಿ ದಿನಾಂಕ 23-11-2016 ರಂದು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ  ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದವನ್ನು  ಚಿಕಿತ್ಸೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಆತನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪತ್ನಿಮೇಲೆ ಪತಿಯಿಂದ ಹಲ್ಲೆ:
                       ಗಂಡ ಹೆಂಡತಿ ನಡುವೆ ಜಗಳವಾಗಿ ಪತಿ ಪತ್ನಿಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ  ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಸುಳುಗೋಡು ಗ್ರಾಮದಲ್ಲಿ ನಡೆದಿದೆ.  ಸುಳುಗೋಡು ಗ್ರಾಮದ ಕಾಂಡೇರ ರಘು ಎಂಬವರ ಲೈನು ಮನೆಯಲ್ಲಿ ಫಿರ್ಯಾದಿ ಶ್ರೀಮತಿ ಪಣಿಎರವರ ಬೇಬಿ ಎಂಬವರು  ಪಣಿಎರವರ ಅಪ್ಪು ಎಂಬವರೊಂದಿಗೆ ವಾಸವಾಗಿದ್ದು ದಿನಾಂಕ 21-11-2016 ರಂದು ರಾತ್ರಿ  12-00 ಗಂಟೆಗೆ ಪಿರ್ಯಾಧಿಯವರ ಮೊದಲನೇ ಗಂಡನ ವಿಚಾರದಲ್ಲಿ ಹಾಗೂ ಮೊದಲನೇ ಗಂಡನ ತಮ್ಮ ಪುಟ್ಟ ಎಂಬ ವ್ಯಕ್ತಿ   ಮನೆಗೆ ಬಂದು ಹೋಗುವ  ವಿಚಾರದಲ್ಲಿ ಪಣಿಎರವರ ಅಪ್ಪು  ಜಗಳ ಮಾಡಿದ್ದು ಅಲ್ಲದೆ  ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಯಿಂದ ಎಡ ಕಣ್ಣಿಗೆ ಹೊಡೆದು ನೋವು ಪಡಿಸಿದ್ದಲ್ಲದೇ , ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಅಸಹಜ ಸಾವು:
                     ವ್ಯಕ್ತಿಯೊಬ್ಬ ಚಿಕಿತ್ಸೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ.  ಹಾಸನ ಜಿಲ್ಲೆಯ, ಹೊಳೆನರಸೀಪುರ ತಾಲೋಕು ಅಂಕನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಕುಮಾರಿ ಎಂಬವರ ಪತಿ ಕುಮಾರ ಎಂಬವರು ಮಡಿಕೇರಿಯ ಬ ಸ್ ನಿಲ್ದಾಣದಲ್ಲಿ ದಿನಾಂಕ 08/11/2016ರಂದು ರಾತ್ರಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಣ ಕೊಡುವಂತೆ ಕೇಳಿ ಹಣ ನೀಡದೇ ಇರುವ ಕಾರಣ ಕುಮಾರನ ಮೇಲೆ ಹಲ್ಲೆ ನಡೆಸಿ ತಳ್ಳಿ ಕೆಳಗೆ ಬೀಳಿಸಿದ್ದು, ಇದರಿಂದಾಗಿ ಗಾಯಗೊಂಡ ಕುಮಾರನು ಮೈಸೂರು ಮತ್ತು ಹಾಸನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 23/11/2016ರಂದು ಆಸ್ಪತ್ರೆಯಲ್ಲಿ ಮೃತರಾಗಿದ್ದು, ದಿನಾಂಕ 08/11/2016ರಂದು ಯಾರೋ ಅಪರಿಚಿತರು ಮಡಿಕೇರಿ ಬಸ್ ನಿಲ್ದಾಣದಲ್ಲಿ ತಳ್ಳಿ ಬೀಳಿಸಿದ ಕಾರಣಕ್ಕೆ ತನ್ನ ಪತಿ ಮೃತರಾಗಿರುವುದಾಗಿ ಸಂಶಯಿಸಿ ಕುಮಾರನ ಪತ್ನಿ ಕುಮಾರಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Wednesday, November 23, 2016


ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ಕ್ಷುಲ್ಲಕ ಕಾರಣಕ್ಕೆ ತೋಟದ ರೈಟರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಾಪೋಕ್ಲು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಗ್ರಾಮದ ನಿವಾಸಿ ಫಿರ್ಯಾದಿ ಬೊಪ್ಪಂಡ ಜೆ. ಮುದ್ದಪ್ಪ ಎಂಬವರು ಶಿವಕಾಳಿಯಂಡ ಅಂಬಿ ಕಾರ್ಯಪ್ಪ ಎಂಬವರ ಕಾಫಿ ತೋಟದಲ್ಲಿ ಟೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ಪತ್ನಿ ಲೀಲಾ ಎಂಬವರನ್ನು ಫಿರ್ಯಾದಿಯವರ ಅಣ್ಣನ ಮಗ ಭರತ್ ಎಂಬಾತ ವಿನಾಕಾರಣ ಬೈದ ವಿಚಾರವಾಗಿ ಕೇಳಲು ದಿನಾಂಕ 20-11-2016 ರಂದು ಹೋಗಿದ್ದ ಸಂದರ್ಭದಲ್ಲಿ ಫಿರ್ಯಾದಿ ಮತ್ತು ಭರತ್ ನಡುವೆ ಜಗಳವಾಗಿ ಭರತ್ ಕತ್ತಿಯಿಂದ ಫಿರ್ಯಾದಿ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದೂ ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸ್ ದಾಳಿ ಅಕ್ರಮ ಮರಳು ವಶ:

     ಅಕ್ರಮವಾಗಿ ಮರಳನ್ನು ಶೇಖರಣೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್‌ ರವರವರಿಗೆ ಸದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಿನಾಂಕ 22-11-2016 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಾಡು ಗ್ರಾಮದ ನಿವೃತ್ತ ಎಸಿಪಿ ಮುತ್ತಣ್ಣ ಹಾಗೂ ತಮ್ಮಯ್ಯರವರ ಜಮೀನಿನ ಬಳಿ ಇರುವ ಕಕ್ಕಬೆ ಹೊಳೆಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಬಳಸಿ ಹೊಳೆಯಿಂದ ಮರಳು ಕಳ್ಳತನ ಮಾಡುವ ಉದ್ದೇಶದಿಂದ ಮರಳನ್ನು ಹೊಳೆಯ ದಡದಲ್ಲಿ ಶೇಖರಣೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿ 2 ಪಿಕ್‌-ಅಪ್‌ನಷ್ಟು ಮರಳನ್ನು ಮರಳನ್ನು ತೆಗೆಯಲು ಬಳಸಿದ 2 ಕಬ್ಬಿಣದ ತೆಪ್ಪಗಳು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಂಗ ಅರಪಟ್ಟು ಗ್ರಾಮದ ನಿವಾಸಿ ಪಿ.ಎ. ಸೈಫುದ್ದೀನ್ ಹಾಗು ಅದೇ ಗ್ರಾಮದ ರಾವೂಫ್ ಎಂಬವರ ನಡುವೆ ಮೊಬೈಲ್ ಮೂಲಕ ರಾವೂಫ್ ರವರು ಪಿ.ಎ. ಸೈಫುದ್ದೀನ್ ರವರ ಭಾವನವರನ್ನು ಬೈದ ವಿಚಾರದಲ್ಲಿ ಜಗಳವಾಗಿ ಆರೋಪಿ ರಾವೂಫ್ ರವರು ಪಿ.ಎ. ಸೈಫುದ್ದೀನ್ ನವರ ಮೇಲೆ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ನೋವನ್ನುಂಟುಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, November 22, 2016

 ದಾರಿ ತಡೆದು ವ್ಯಕ್ತಿ ಮೇಲೆ ಮೂವರಿಂದ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಮೂವರು ವ್ಯಕ್ತಿಗಳು ಸೇರಿ ಹಲ್ಲೆನಡೆಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಅರೆಯೂರು ಗ್ರಾಮದಲ್ಲಿ ನಡೆದಿದೆ, ದಿನಾಂಕ 21-11-2016 ರಂದು ಸಮಯ 17.30 ಗಂಟೆಗೆ ಅರೆಯೂರು ಗ್ರಾಮದ ನಿವಾಸಿ ಪಿರ್ಯಾದಿ ವಿ.ಪಿ. ಸಂಪು ಎಂಬವರು ತಮ್ಮಬಾಪ್ತು ಮೋಟಾರ್ ಸೈಕಲ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಅವರ ಮನೆಯ ಬಳಿ ಇರುವ ಜಂಕ್ಷನ್ ನಲ್ಲಿ ಆರೋಪಿಗಳಾದ ಮುತ್ತಣ್ಣ, ಪವನ್ ಹಾಗೂ ಜೀವನ್ ಎಂಬವರುಗಳು ಪಿರ್ಯಾದಿಯನ್ನು ತಡೆದು ನಿಲ್ಲಿಸಿ ಹಳೆ ದ್ವೇಷದಿಂದ ಕೈಯಿಂದ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಮಹಿಳೆ ಮೇಲೆ ಹಲ್ಲೆ:

      ಜಾಗದ ವಿಚಾರದಲ್ಲಿ ಎರಡು ಕಡೆಯವರ ನಡುವೆ ಜಗಳ ನಡೆದು ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆ ಸೋಮವಾರಪೇಟೆ ತಾಲೋಕು ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ಕಿರಗಂದೂರು ಗ್ರಾಮದ ನಿವಾಸಿ ಬಿ.ಪಿ. ಸಂದ್ಯಾ ಹಾಗು ಬಿ.ಬಿ. ಚಂಗಪ್ಪ ಮತ್ತು ಇಬ್ಬರ ನಡುವೆ ಜಾಗದಲ್ಲಿ ನಿರ್ಮಿಸಿದ ಬೇಲಿಯ ವಿಚಾರದಲ್ಲಿ ಜಗಳವಾಗಿದ್ದು, ಫಿರ್ಯಾದಿ ಬಿ.ಪಿ. ಸಂದ್ಯಾರವರ ಮೇಲೆ ಆರೋಪಿಗಳಾದ ಬಿ.ಸಿ.ಕಿರಣ, ಗಣಪತಿ ಹಾಗು ಚಂದ್ರಿಕಾರವರುಗಳು ಹಲ್ಲೆ ನಡೆಸಿರುವುದಾಗಿ ಹಾಗು ಗಣಪತಿಯವರು ಫಿರ್ಯಾದಿಯ ಮಾನಭಂಗಕ್ಕೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಠಾಣೆಯಲ್ಲಿ ವರದಿಯಾಗಿದೆ. ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ 62 ವರ್ಷ ಪ್ರಾಯದ ವಿ.ಸಿ. ವಸಂತ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-11-2016 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿ.ಸಿ. ಬೋರಯ್ಯ ಎಂಬವರು ನೀಡಿದ ದೂರಿನನ್ವಯ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಸ್ಸ್ ಮತ್ತು ಮಿನಿ ಬಸ್ ನಡುವೆ ಅಪಘಾತ:

     ಕೆ.ಎಸ್.ಆರ್.ಟಿ.ಸಿ ಬಸ್ ಹಾಗು ಮಿನಿ ಬಸ್ ನಡುವೆ ಅಪಘಾತ ಸಂಭವಿಸಿ ಎರಡು ವಾಹನಗಳು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಕೊಯನಾಡುವಿನಲ್ಲಿ ನಡೆದಿದೆ. ದಿನಾಂಕ 20-11-2016 ರಂದು ಸಂಜೆ 6-30 ಗಂಟೆ ಸಮಯದಲ್ಲಿ ವಿರಾಜಪೇಟೆಯಿಂದ ಜಾಲ್ಸೂರಿಗೆ ಹೋಗುತ್ತಿದ್ದ ಮಿನಿಬಸ್ ಹಾಗು ಮಡಿಕೇರಿಯ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಮಿನಿ ಬಸ್ ಮತ್ತು ಕೆಎಸ್ಆರ್ ಟಿಸಿ ಬಸ್ಸು ಜಖಂ ಗೊಂಡಿದ್ದು, ಪ್ರಯಾಣಿಕರು ಯಾವುದೇ ಗಾಯ, ನೋವುಗಳಾಗದೆ ಪಾರಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಾರುತಿ 800 ಕಾರು ಕಳವು:

     ಮನೆಯ ಮುಂದುಗಡೆ ನಿಲ್ಲಿಸಿದ್ದ ಮಾರುತಿ ಕಾರೊಂದನ್ನು ಕಳ್ಳರು ಕಳವು ಮಾಡಿದ ಘಟನೆ ಕುಶಾಲನಗರದಲ್ಲಿ ನಡೆದಿದೆ. 
ದಿನಾಂಕ 4-11-16 ರಂದು ಪಿರ್ಯಾದಿ ಪಿರಿಯಾಪಟ್ಟಣದ ತಾತನಹಳ್ಳಿ ಗ್ರಾಮದ ನಿವಾಸಿ ಸೈಯದ್ ಮನ್ಸೂರ್ ಎಂಬವರು ತಮ್ಮ ಬಾಪ್ತು ಕಾರು ನಂ ಕೆಎ 01 ಎಂ 7894 ರ ಮಾರುತಿ 800 ಕಾರನ್ನು ತಮ್ಮ ಮಾವನ ಮನೆಯಾದ ದಂಡಿನಪೇಟೆಯಲ್ಲಿ ಸಮಯ 07-00 ಪಿ.ಎಂಗೆ ನಿಲ್ಲಿಸಿದ್ದು, ದಿನಾಂಕ 5-11-16 ರಂದು 06-00 ಎ.ಎಂಗೆ ಎದ್ದು ನೋಡಲಾಗಿ ನಿಲ್ಲಿಸಿದ ಕಾರು ಕಾಣದೆ ಇದ್ದು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಈ ಸಂಬಂಧ ಫಿರ್ಯಾದಿ ಸೈಯದ್ ಮನ್ಸೂರ್ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಶೇಖರಣೆ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಬಿಳೂರು ಗ್ರಾಮದ ನಿವಾಸಿ ಕಾಂಡೆರ ಬಿ. ಸುರೇಶ ಹಾಗು ಹಿಟಾಚಿ ವಾಹನದ ಮಾಲಿಕರೊಬ್ಬರು ಸೇರಿ ಲಕ್ಷ್ಮಣತೀರ್ಥ ನದಿಯ ಹರಿವಿನ ತಿರುವನ್ನು ಬದಲಾಯಿಸಿ ನದಿಯಲ್ಲಿ ಯಾಂತ್ರಿಕ ಬೋಟನ್ನು ಬಳಸಿ ಬೋಟಿನಲ್ಲಿ ಡಿಸೆಲ್ ಇಂಜಿನನ್ನು ಅಳವಡಿಸಿ ಪುಟ್ ವಾಲ್ ಮೂಲಕ ನದಿಯ ನೀರಿನ ಆಳಕ್ಕೆ ಬಿಟ್ಟು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೇ ಕಬ್ಬಿಣದ ಹಾಗೂ ಪ್ಲಾಸ್ಟಿಕ್ ಪೈಪನ್ನು ಉಪಯೋಗಿಸಿ ಮರಳನ್ನು ಕದ್ದು ತೆಗೆದು ಸದರಿ ಮರಳನ್ನು ಹಿಟಾಚಿ ಯಂತ್ರ ಬಳಸಿ ಬೇರೆ ವಾಹನದಲ್ಲಿ ಕಾಂಡೆರ ಬಿ. ಸುರೇಶ ರವರ ಲೈನ್‌ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕದ್ದು ಸಂಗ್ರಹಿಸಿದ್ದುದನ್ನು ಶ್ರೀಮತಿ ಬಿ.ರೇಷ್ಮ , ಹಿರಿಯ ಭೂ ವಿಜ್ಞಾನಿ, ಖನಿಜ ಮತ್ತು ಭೂ ವಿಜ್ಞಾನ ಇಲಾಖೆ, ಮಡಿಕೇರಿ, ಕೊಡಗು ರವರು ದಾಳಿ ಮಾಡಿ ಪತ್ತೆ ಹಚ್ಚಿ ಪೊನ್ನಂಪೇಟೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Monday, November 21, 2016

ಸರ ಕಳ್ಳತನಕ್ಕೆ ಯತ್ನ
                      ದಿನಾಂಕ 20/11/2016ರಂದು ಮಡಿಕೇರಿ ಬಳಿಯ ಕುಂಬಳಗೇರಿ ಉಕ್ಕಡ ನಿವಾಸಿ ಯಮುನಾ ಎಂಬವರು ಮೈಸೂರಿನಿಂದ ಮಡಿಕೇರಿಗೆ ಬರುವ ಸಲುವಾಗಿ ಕುಶಾಲನಗರಕ್ಕೆ ಬಂದು ಅಲ್ಲಿಂದ ಮಡಿಕೇರಿಗೆ ಬೇರೆ ಬಸ್ಸನ್ನು ಹತ್ತಲು ಹೋಗುತ್ತಿರುವಾಗ ಎದುರುಗಡೆಯಿಂದ ಓರ್ವ ವ್ಯಕ್ತಿಯು ಬಂದು ಏಕಾ ಏಕಿ ಯಮುನಾರವರ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಮತ್ತು ಚಿಕ್ಕ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಅವರು ಆತನನ್ನು ನೂಕಿ ಕಿರುಚಿಕೊಂಡಾಗ ಅಲ್ಲೇ ಇದ್ದ ಸಾರ್ವಜನಿಕರು ಆತನನ್ನು ಹಿಡಿದು ವಿಚಾರಿಸಿದಾಗ ಆತನು ಶ್ರೀಮಂಗಲ ಬಳಿಯ ಹುದಿಕೇರಿ ನಿವಾಸಿ ಪೊನ್ನಳಗನ್ ಯಾನೆ ರವಿ ಎಂಬುದಾಗಿ ತಿಳಿದಿದ್ದು ಆತನನ್ನು ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                      ದಿನಾಂಕ 19/11/2016ರಂದು ಸೋಮವಾರಪೇಟೆ ಬಳಿಯ ಮಾದಾಪುರ ನಿವಾಸಿ ಕೃಷ್ಣಪ್ಪ ಎಂಬವರು ಬಾಗಿಲ ಮೇಲಿನ ಪಟ್ಟಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನು ಮೂರ್ಛೆರೋಗದಿಂದ ಬಳಲುತ್ತಿದ್ದು ವಿಪರೀತ ಮದ್ಯವಸ್ಯಸನಿಯಾದ ಕಾರಣ ಕಾಯಿಲೆ ವಾಸಿಯಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಆತ್ಮಹತ್ಯೆ 
                      ದಿನಾಂಕ 19/11/2016ರಂದು ಮಡಿಕೇರಿ ಬಳಿಯ ಮದೆನಾಡು ನಿವಾಸಿ ತಂಗಮ್ಮ ಎಂಬವರು ಮನೆಯಲ್ಲಿ ವಿಷ ಸೇವಿಸಿದ್ದು ಮಗ ಗಣೇಶರವರು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿದೆ. ತಂಗಮ್ಮನವರಿಗೆ ಸಕ್ಕರೆ ಹಾಗೂ ವಿಪರೀತ ರಕ್ತದೊತ್ತಡದ ಕಾರಣದಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಫಘಾತ
                  ದಿನಾಂಕ 19/11/2016ರಂದು ಅಭ್ಯತ್‌ಮಂಗಲ ನಿವಾಸಿ ಬಿ.ಎಸ್‌.ಪ್ರಕಾಶ್‌ ಎಂಬವರು ಅವರ ಕೆಎ-50-ಎನ್‌-4554ರ ಸ್ಕಾರ್ಪಿಯೋ ವಾಹನದಲ್ಲಿ ಚಾಲಕ ಹರೀಶ್‌ ಎಂಬಾತನೊಂದಿಗೆ ಮಕ್ಕಂದೂರಿಗೆ ಹೋಗಿ ವಾಪಾಸು ಅಭ್ಯತ್‌ಮಂಗಲಕ್ಕೆ ಸುಂಟಿಕೊಪ್ಪ ಮಾರ್ಗವಾಘಿ ಹೋಗುತ್ತಿರುವಾಗ ಚೆಟ್ಟಳ್ಳಿಯ ಕಾಫಿ ಬೋರ್ಡ್‌ ಬಳಿ ಕಾಡಾನೆಯೊಂದು ರಸ್ತೆ ದಾಟುತ್ತಿದ್ದು, ಅದನ್ನು ತಪ್ಪಸುವ ಸಲುವಾಗಿ ಚಾಲಕ ಹರೀಶನು ಕಾರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿ ಹಾನಿಗೊಳಗಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 19/11/2016ರಂದು ಸಿದ್ದಾಪುರ ಬಳಿಯ ಹಚ್ಚಿನಾಡು ನಿವಾಸಿ ಪಣಿ ಎರವರ ಕೃಷ್ಣ ಎಂಬವರು ಮಕ್ಕಳನ್ನು ನೋಡುವ ಸಲುವಾಗಿ ಅವರ ಪತ್ನಿ ಪಾರ್ವತಿರವರು ವಾಸವಿರುವ ಅವರ ತಂದೆಯ ಮನೆಗೆ ಹೋದಾಗ ಅಲ್ಲಿ ಮಾವ ಬೆಳ್ಳಿ ಮತ್ತು ಪತ್ನಿ ಪಾರ್ವತಿರವರು ಕೃಷ್ಣರವರೊಂದಿಗೆ ಜಗಳವಾಡಿ ಕತ್ತಿ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 19/11/2016ರಂದು ಸಿದ್ದಾಪುರ ಬಳಿಯ ನೆಲ್ಲಿ ಹುದಿಕೇರಿಯಲ್ಲಿರುವ ನಂದಿನಿ ಬಾರ್‌ಗೆ ನೆಲ್ಲಿ ಹುದಿಕೇರಿ ನಿವಾಸಿಗಳಾದ ನೇಮಿರಾಜ್‌, ಸೈಜು,ವಿಜು ಮತ್ತು ಮಂಜು ಎಂಬವರು ಬಂದು ಮದ್ಯಪಾನ ಮಾಡಿದ ಹಣವನ್ನು ಬಾರ್‌ನ ಕ್ಯಾಷಿಯರ್‌ ರಾಘವೇಂದ್ರರವರು ಕೇಳಿದ ಕಾರಣಕ್ಕೆ ನಾಲ್ವರೂ ರಾಘವೇಂದ್ರರವರೊಂದಿಗೆ ಜಗಳವಾಡಿ ಅವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಸೊಡಾ ಬಾಟಲಿಗಳಿಂದ ಹೊಡೆಯಲು ಯತ್ನಿಸಿ ಗಾಜಿನ ಗ್ಲಾಸುಗಳನ್ನು ಒಡೆದು ಹಾಕಿ ಮದ್ಯಪಾನ ಮಾಡಿದ ಹಣವನ್ನು ನೀಡಿದೆ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 20, 2016

ಪಾದಚಾರಿಗೆ ಲಾರಿ ಡಿಕ್ಕಿ:

        ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದ ಹತ್ತಿರದ ಕೂಡಿಗೆಯಲ್ಲಿ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ಚಂದ್ರಾಚಾರಿ ಎಂಬವರು ದಿನಾಂಕ 19-11-2016 ರಂದು ಕೂಡಿಗೆ ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಳ್ಳಲು ಕೂಡಿಗೆ ಮಾರುಕಟ್ಟೆಯ ಬಳಿ ಬಸ್ಸಿನಿಂದ ಇಳಿದು ಮಾರುಕಟ್ಟೆಗೆ ಹೋಗಲು ಬಸ್ಸಿನ ಮುಂಭಾಗಕ್ಕಾಗಿ ರಸ್ತೆ ದಾಟುವಾಗ ಬಸ್ಸಿನ ಹಿಂಭಾಗದಿಂದ ಕೆ.ಎ.12 -7807 ರ 407 ಲಾರಿ ಚಾಲಕ ಸತೀಶ್ ಎಂಬವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಚಂದ್ರಾಚಾರಿಯವರು ಗಾಯಗೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ:

       ವ್ಯಕ್ತಿಯೊಬ್ಬರು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 19-11-16ರಂದು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕುಮಾರ ಆರಾಧ್ಯ ರವರು ಸಿಬ್ಬಂದಿಯವರೊಂದಿಗೆ ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ತುಂಬಿಸಿ ಮಾರಾಟಕ್ಕೆ ಸಾಗಿಸುತ್ತಿದ್ದ ವೇಳೆ ಬಿಟ್ಟಂಗಾಲ ಗ್ರಾಮದಲ್ಲಿ ಲಾರಿ ಮೇಲೆ ದಾಳಿ ಮಾಡಿ ಲಾರಿ ತುಂಬಿದ ಕೆಎಲ್. 24.ಎ.3560ರ ಟಿಪ್ಪರ್ ಲಾರಿ ಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

Saturday, November 19, 2016

ಕೊಲೆ ಬೆದರಿಕೆ
                      ದಿನಾಂಕ 08/11/2016ರಂದು ಕುಶಾಲನಗರ ಬಳಿಯ ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಸುಧಾ ಎಂಬವರು ಮನೆಯಲ್ಲಿರುವಾಗ ಮದಲಾಪುರ ಗ್ರಾಮದ ನಿವಾಸಿ ಕುಶಾಲಪ್ಪ ಎಂಬವರು ಮನೆಗೆ ಬಂದು ಸುಧಾರವರನ್ನು ಕುರಿತು ಆಶ್ಲೀಲವಾಗಿ ನಿಂದಿಸಿ ಆಕೆಯ ಪತಿಯನ್ನು ವಿಚಾರಿಸಿ ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಗುಂಪು ಹಲ್ಲೆ
                          ದಿನಾಂಕ 17/11/2016ರಂದು ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ನಿವಾಸಿ ರವಿ ಎಂಬವರು ನಗರದ ಶಫಾಲಿ ಬಾರ್‌ನ ಬಳಿ ನಡೆದುಕೊಂಡು ಹೋಗುತ್ತಿರುವಾಗ ಚೌಡ್ಲು ಗ್ರಾಮದ ನಿವಾಸಿಗಳಾದ ಸತೀಶ, ಶಶಿ ಮತ್ತು ಜಗ್ಗ ಎಂಬವರು ರವಿಯವರನ್ನು ದಾರಿ ತಡೆದು ಹಳೆ ವೈಷಮ್ಯದಿಂದ ಜಗಳವಾಡಿ ಮೂವರು ಸೇರಿ ದೊಣ್ಣೆಯಿಂದ ರವಿರವರಿಗೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮೇಲೆ ಹಲ್ಲೆ
                      ದಿನಾಂಕ 17/11/2016ರಂದು ಮಡಿಕೇರಿ ನಗರದ ಕೊಹಿನೂರ್‌ ರಸ್ತೆಯ ನಿವಾಸಿ ಗುಣವತಿ ಎಂಬವರು ಅವರ ಮಗ ಸುನಿಲ್‌ರವರೊಂದಿಗೆ ಮನೆ ಸಾಮಗ್ರಿಗಳನ್ನು ತೆಗೆದುಕೊಂಡು ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯಲ್ಲಿರುವ ಅವರ ಇನ್ನೊಂದು ಮನೆಗೆ ಹೋಗಿದ್ದ ಸಮಯದಲ್ಲಿ ಅಲ್ಲಿಗೆ  ಭಾವನ ಮಗ ರೋಹಿತ್‌ ಎಂಬಾತನು ಬಂದು  ಆಸ್ತಿಯ  ವಿಚಾರದಲ್ಲಿ  ಜಗಳವಾಡಿ  ಗುಣವತಿರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

                     ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಣವತಿರವರ ಮಗ ಸುನಿಲ್‌ ಕುಮಾರ್‌ ಸಹಾ ಆತನ ದೊಡ್ಡಮ್ಮ  ಪಿ.ಆರ್‌.ಸುಶೀಲ  ಎಂಬವರ ಮೇಲೆ ಹಲ್ಲೆ  ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ಸುಶೀಲರವರ ಸೊಸೆ ಶಿಲ್ಪ ಎಂಬವರು ದೂರು ನೀಡಿದ್ದು ಸುಂಟಿಕೊಪ್ಪ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ
                    ದಿನಾಂಕ 18/11/2016ರಂದು ಸಂಜೆ ವೇಳೆ ಅಕ್ರಮ ಮರಳು ಸಾಗಾಟದ ಬಗ್ಗೆ ದೊರೆತ ಸುಳಿವಿನ ಮೇರೆಗೆ ಕುಟ್ಟ ಠಾಣೆಯ ಪಿಎಸ್‌ಐ ಎಸ್‌.ಎಸ್‌.ರವಿಕಿರಣ್‌ರವರು ಕೋತೂರು ಗ್ರಾಮದ ಅಯ್ಯಪ್ಪ ದೇವಸ್ಥಾನದ ಬಳಿ ಬರುತ್ತಿದ್ದ ಕೆಎ-12-ಎ-3489ರ ಲಾರಿಯನ್ನು ನಿಲ್ಲಿಸಲು ಸೂಚಿಸಿದಾಗ ಲಾರಿ ಚಾಲಕ ಲಾರಿ ನಿಲ್ಲಿಸಿ ಲಾರಿಯಿಂದ ಇಳಿದು ಓಡಿ ಹೋಗಿದ್ದು ನಂತರ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಕಂಡು ಬಂದಿದ್ದು, ವಿಚಾರಿಸಿದಾಗ ಲಾರಿಯು ಕೋತೂರು ಗ್ರಾಮದ ನಿವಾಸಿ ರವಿ ಎಂಬವರಿಗೆ ಸೇರಿದುದಾಗಿ ತಿಳಿದು ಬಂದಿದ್ದು ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರಿ ಮೆಣಸು ಕಳವು
                    ಪೊನ್ನಂಪೇಟೆ ಬಳೀಯ ಹಳ್ಳಿಗಟ್ಟು ಗ್ರಾಮದ ನಿವಾಸಿ ಮನೆಯಪಂಡ ಸೀತಾ ಎಂಬವರು ದಿನಾಂಕ 12/11/2016ರಂದು ಚಿಕಿತ್ಸೆಗಾಗಿ ಮೈಸೂರಿಗೆ ಹೋಗಿದ್ದು, ದಿನಾಂಕ 18/11/2016ರಂದು ವಾಪಾಸು ಮನೆಗೆ ಬಂದು ನೋಡಿದಾಗ ಅವರ ಗೋಡಾನಿನಲ್ಲಿ ಇಟ್ಟಿದ್ದ ಸುಮಾರು 12 ಚೀಲ ಕರಿ ಮೆಣಸು ಪೈಕಿ ರೂ.25,000 ಬೆಲೆ ಬಾಳುವ ಒಂದು ಚೀಲ ಕರಿ ಮೆಣಸು ಕಾಣೆಯಾಗಿದ್ದು ಅವರ ತೋಟದಲ್ಲಿ ಉಸ್ತುವಾರಿ ಕೆಲಸ ಮಾಡಿಕೊಂಡಿದ್ದ ಬಾಚಮಾಡ ರಾಕೇಶ್‌ ಎಂಬಾತನು ಕರಿ ಮೆಣಸನ್ನು ಕಳವು ಮಾಡಿರಬಹುದಾಗಿ ಸಂಶಯಿಸಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಬೈಕ್‌ಗೆ ಡಿಕ್ಕಿ
                      ದಿನಾಂಕ 18/11/2016ರಂದು  ಕಾರ್ಕಳ ನಿವಾಸಿ ರಮೇಶ್‌ ಮೂಲ್ಯ ಎಂಬವರು ಕೆಎ-20-ಎಸ್‌- 6435ರಲ್ಲಿ ಚೇರಂಬಾಣೆ ಕಡೆಗೆ ಬರುತ್ತಿರುವಾಗ ಚೇರಂಬಾಣೆ ಬಳಿ ಹಿಂದಿನಿಂದ ಕೆಎ-51-ಸಿ-5683ರ ಬಸ್ಸನ್ನು ಅದರ ಚಾಲಕ ಜಗದೀಶ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದ ಪರಿಣಾಮ ಬಸ್ಸಿನ ಹಿಂಭಾಗದ ಬಾಗಿಲು ತೆರೆದುಕೊಂಡು ರಮೇಶ್‌ ಮೂಲ್ಯರವರಿಗೆ ತಗುಲಿದ ಪರಿಣಾಂ ಅವರು ಬೈಕಿನಿಂದ ಕೆಳಗೆ ಬಿದ್ದು ಗಾಯಗಳಾಗಿರುವುದಾಘಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, November 18, 2016

ಅಪರಿಚಿತ ಶವ ಪತ್ತೆ
                      ಅಪರಿಚಿತ ವ್ಯಕ್ತಿಯ ಶವವೊಂದು ಕುಶಾಲನಗರ ಬಳಿಯ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ದಿನಾಂಕ 17/11/2016ರ ಸಂಜೆ ವೇಳೆ ಕುಶಾಲನಗರದ ಮಾದಾಪಟ್ನ ನಿವಾಸಿ ಬಿ.ಆರ್‌.ಬೋಪಯ್ಯ ಎಂಬವರು ಗ್ರಾಮದ ವರದರಾಜ ಶೆಟ್ಟಿ ಎಂಬವರ ಜಮೀನಿನ ಪಂಪ್‌ ಹೌಸ್ ಬಳಿ ನೀರು ಬಿಡಲು ಹೋಗಿದ್ದಾಗ ಕಾವೇರಿ ನದಿಯ ಮದ್ಯ ಭಾಗದಲ್ಲಿ ಓರ್ವ ಅಪರಿಚಿತ ವ್ಯಕ್ತಿಯ ಶವವು ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ಡಿಕ್ಕಿ ಪ್ರಕರಣ 
                     ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೆ ಮೋಟಾರು ಬೈಕೊಂದು ಡಿಕ್ಕಿಯಾದ ಘಟನೆ  ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 17/11/2016ರ ಸಂಜೆ ವೇಳೆ ಗೋಣಿಕೊಪ್ಪ ಠಾಣೆಯ ಎಎಸ್‌ಐ ಎಂ.ಕೆ.ಮೇದಪ್ಪ ಮತ್ತು ಮುಖ್ಯ ಪೇದೆ ಧನಪತಿ ಎಂಬವರು ಗೋಣಿಕೊಪ್ಪ ನಗರದಲ್ಲಿ ಕೆಎ-12-ಜಿ-566ರ ಮೋಟಾರು ಬೈಕಿನಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ನಗರದ ಹರಿಶ್ಚಂದ್ರಪುರದ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್ ಬಳಿ ಗೋಣಿಕೊಪ್ಪ ಕಡೆಯಿಂದ ಕೆಎ-12-ಕ್ಯು-7037ರ ಮೋಟಾರು ಬೈಕನ್ನು ಅದರ ಚಾಲಕ ಸಾಜಿ ಥೋಮಸ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಧನಪತಿರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೇದಪ್ಪ ಮತ್ತು ಧನಪತಿ ಇಬ್ಬರೂ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 17, 2016

ಲಾರಿ ಅವಘಡ, ಕ್ಲೀನರ್ ಗೆ ಗಾಯ:

     ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಾಲಾಯಿಸಿದ ಪರಿಣಾಮ ರಸ್ತೆಬದಿಯ ಗುಂಡಿಯೊಂದಕ್ಕೆ ಇಳಿದು ಕ್ಲೀನರ್ ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಡಗದಾಳುವಿನಲ್ಲಿ ನಡೆದಿದೆ. ದಿನಾಂಕ 13-11-2016 ರಂದು ಲಾರಿ ಚಾಲಕ ಅಕ್ಬರ್ ಎಂಬವರು ತಾನು ಚಲಿಸುತ್ತಿದ್ದ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆಬದಿಯ ಗುಂಡಿಯೊಂದಕ್ಕೆ ಲಾರಿ ಇಳಿದು ಅವಘಡಕ್ಕೀಡಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಶಾಹಿದ್ ಜಸ್ವಿರ್ ಎಂಬಾತ ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ 17 ಮಂದಿಗೆ ಗಾಯ: 

     ಟಾಟಾ ಏಸ್ ವಾಹನವೊಂದು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 17 ಮಂದಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣೀರಳ್ಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 16-11-2016 ರಂದು ಶ್ರೀಮತಿ ಚಂದ್ರಾವತಿ ಗಂಡ ಶಿವರಾಜು ಸಿದ್ದಲಿಂಗಪುರ ಕುಶಾಲನಗರ ಇವರು ಕೇರಳಾಪುರ ಬಸವನಳ್ಳಿ ಗ್ರಾಮದ ಕಾರ್ಮಿಕರೊಂದಿಗೆ ಜಂಬೂರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಸಮಯ 17-45 ಗಂಟೆಗೆ ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣಿರಳ್ಳ ಗ್ರಾಮದ ಡಿ.ಸಿಲ್ವ ರವರ ಮನೆಯ ತಿರುವು ರಸ್ತೆಯಲ್ಲಿ ಕೆಎ-13-ಬಿ-6713 ರ ಟಾಟಾ ಏಸ್ ವಾಹನದ ಚಾಲಕ ಅಂಜನ್ ಕುಮಾರ್ ಯಾನೆ ಧರ್ಮ ಎಂಬವರು ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಟಾಟಾಏಸ್ ಅಪಘಾತಕ್ಕೀಡಾಗಿ ವಾಹನದಲ್ಲಿ ಇದ್ದ ಲಕ್ಷ್ಮಿ, ಸುಮಿತ್ರ, ಶೈಲಜ, ಮಂಜುಳ, ಸರಸ್ವತಿ, ಲಕ್ಷ್ಮಮ್ಮ, ನಾಗಮ್ಮ, ಕುಮಾರಿ, ಗೌರಮ್ಮ, ಪ್ರೇಮ, ಚಂಗಮ್ಮ, ವಿಶಾಲಾಕ್ಷಿ, ಲಕ್ಷ್ಮಮ್ಮ, ಜಯಮ್ಮ, ವನಜಮ್ಮ, ಲಕ್ಷ್ಮಿ, ಮಣಿಯಮ್ಮ, ಮತ್ತು ದೇವಮ್ಮ ರವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ವಶ, ಪ್ರಕರಣ ದಾಖಲು: 

    ವ್ಯಕ್ತಿಯೊಬ್ಬರು ತಮ್ಮ ಅಂಗಡಿ ಮುಂದುಗಡೆ ಅಕ್ರಮವಾಗಿ ಮದ್ಯವನ್ನು ಕುಡಿಯಲು ಅನುವುಮಾಡಿಕೊಟ್ಟ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಂದಿಗುಂದ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ನಂದಿಗುಂದ ಗ್ರಾಮದಲ್ಲಿರುವ ಎನ್.ಎಸ್. ಸುಧಾಕರ ಎಂಬವರಿಗೆ ಸೇರಿದ ಆಂಗಡಿಯ ಬಳಿ ದಾಳಿ ನಡೆಸಿದ್ದು, ಅಂಗಡಿ ಮುಂದುಗಡೆ ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟಿದ್ದನ್ನು ಪತ್ತೆಹಚ್ಚಿ ಸ್ಥಳದಲ್ಲಿದ್ದ ಸುಮಾರು 9 ಯುಬಿ ಎಕ್ಸ್ ಪೋರ್ಟ್ ಸ್ಟ್ರಾಂಗ್ ಬೀಯರ್ ಬಾಟಲಿಗಳು ಹಾಗು ಆರೋಪಿ ಎನ್.ಎಸ್. ಸುಧಾಕರ ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜಾಗದ ವಿಚಾರದಲ್ಲಿ ಜಗಳ: 

     ಜಾಗದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಹಿಳೆಯನ್ನು ಎಳೆದಾಡಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಭಾಗಮಂಡಲ ಠಾಣಾ ಸರಹದ್ದಿನ ಕೋರಂಗಾಲ ಗ್ರಾಮದ ನಿವಾಸಿ ಜಮುನಾ ಹಾಗು ನಾಗರಾಜು, ಸುಂದರಿ ನಡುವೆ ಜಾಗದ ವಿಚಾರದಲ್ಲಿ ಜಗಳವಾಗಿ, ಆರೋಪಿ ನಾಗರಾಜ ಮತ್ತು ಸುಂದರಿ ರವರುಗಳು ಫಿರ್ಯಾದಿ ಜಮುನಾರವರ ಕೈಯನ್ನು ಹಿಡಿದು ಎಳೆದಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಫಿರ್ಯಾದಿ ಜಮುನಾರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
 
ಅಕ್ರಮ ಮರಳು ಸಾಗಾಟ:

     ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಕರೀಂ ರಾವುತಾರ್ ರವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಪಾಲಿಬೆಟ್ಟದ ಕಡೆಯಿಂದ ಸಿದ್ದಾಪುರದ ಕಡೆಗೆ ಮಿನಿಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆದಾರದ ಮೇರೆಗೆ ದಿನಾಂಕ 16-11-2016 ರಂದು ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಕರೀಂ ರಾವುತಾರ್ ಹಾಗು ಸಿಬ್ಬಂದಿಗಳು ಪಾಲಿಬೆಟ್ಟ ಜಂಕ್ಷನ್ ಬಳಿ ದಾಳಿ ನಡೆಸಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಕಾರ್ಯಾಚರಣೆಯಲ್ಲಿ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರ ಅಬ್ದುಲ್ ಕರೀಂ ರಾವುತಾರ್, ಎಎಸ್ಐ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್, ನಿರಂಜನ್ ಮತ್ತು ಕೆ.ಆರ್. ವಸಂತ ಮತ್ತು ಚಾಲಕ ರಾಜೇಶ್ ರವರು ಭಾಗಿಯಾಗಿದ್ದರು. 
 

Wednesday, November 16, 2016

ನಕಲಿ ಪಾಸ್‌ಪೋರ್ಟ್‌ ಪ್ರಕರಣ
                     ನಕಲಿ ಪಾಸ್‌ಪೋರ್ಟ್‌ ಉಪಯೋಗಿಸಿ ವಿದೇಶಕ್ಕೆ ತೆರಳಿದ ಪ್ರಕರಣವೊಂದು ನಾಪೋಕ್ಲು ಬಳಿಯ ಎಡಪಾಲ ಗ್ರಾಮದಲ್ಲಿ ನಡೆದಿದೆ. ಎಡಪಾಲ ನಿವಾಸಿ ಬಷೀರ್‌ ಎಂಬವರು 2005-2006ನೇ ಸಾಲಿನಲ್ಲಿ ಕೇರಳದ ಕೊಚ್ಚಿನ್‌ ನಿಂದ ನಕಲಿ ಪಾಸ್‌ಪೋರ್ಟ್‌ ಪಡೆದು ಮುಂಬೈ ಮಾರ್ಗವಾಗಿ ದುಬೈಗೆ ಪ್ರಯಾಣಿಸಿರುವುದಾಗಿ ಬೆಂಗಳೂರಿನ ಪ್ರಾದೇಶಕ ಪಾಸ್‌ಪೋರ್ಟ್‌ ಕಚೇರಿ ಉದ್ಯೋಗಿ ಜಯಪ್ರಕಾಶ್‌ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಶ್ರೀಗಂಧ ಸಾಗಾಟ ಪತ್ತೆ
                            ಅಕ್ರಮವಾಗಿ ಶ್ರೀಗಂಧದ ತಂಡುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 15/11/2016ರಂದು ಬೆಳಗಿನ ಜಾವ ಸೋಮವಾರಪೇಟೆ ನಗರದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿರುವ ಬಗ್ಗೆ ದೊರೆತ ವರ್ತಮಾನದ ಮೇರೆಗೆ ಸೋಮವಾರಪೇಟೆ ಠಾಣೆ ಪಿಎಸ್‌ಐ ಶಿವಣ್ಣರವರು ಸಿಬ್ಬಂದಿಗಳೊಂದಿಗೆ ನಗರದ ಅಂಬೇಡ್ಕರ್‌ ವೃತ್ತದ ಬಳಿ ಕಾಯುತ್ತಿರುವಾಗ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಕೆಎ-12-ಎನ್‌-4541ರ ಮಾರುತಿ ಓಮಿನಿ ವ್ಯಾನನ್ನು ತಡೆದು ಪರಿಶೀಲಿಸಿದಾಗ ಅದರೊಳಗೆ ಸುಮಾರು 56 ಕೆ.ಜಿಯಷ್ಟು ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದ ಸತೀಶ್‌ ಕುಮಾರ್‌, ಅರುಣ್‌ಕುಮಾರ್‌, ಸುರೇಶ್‌, ಮಹೇಶ್‌, ಉಮೇಶ್‌, ಶಶಿಕುಮಾರ್‌, ಜೀವನ್‌ ಮತ್ತು ಪೂರ್ಣೇಶ್‌ ಎಂಬವರನ್ನು ಬಂಧಿಸಿ ಕಾರು ಹಾಗೂ ಗಂಧದ ತುಂಡುಗಳನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕಿ ಆತ್ಮಹತ್ಯೆ
                      ವಿಷ ಸೇವಿಸಿ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಿಗೇರಿ ನಿವಾಸಿ ಬೆಟ್ಟಕುರುಬರ ರವಿ ಎಂಬವರ ಮಗಳು 16 ವರ್ಷ ಪ್ರಾಯದ ಮಾರಕ್ಕ ಎಂಬವಳು ಸುಮಾರು ಎರಡು ವರ್ಷಗಳಿಂದ ಗ್ಯಾಸ್ಟ್ರಿಕ್ ನಿಂದ ಬಳಲುತ್ತಿದ್ದು, ದಿನಾಂಕ 15/11/2016ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಾಲಕಿಗೆ  ಬೈಕ್‌ ಡಿಕ್ಕಿ
                    ಬಾಲಕಿಯೊಬ್ಬಳಿಗೆ ಬೈಕ್‌ ಡಿಕ್ಕಿಯಾದ ಘಟನೆ ವಿರಾಝಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 15/11/2016ರಂದು  ವಿರಾಜಪೇಟೆ ನಗರದ ಚಿಕ್ಕಪೇಟೆ ಬಳಿ ಕೆಎ-12-ಕ್ಯು-9756ರ ಮೋಟಾರು ಬೈಕಿನ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲಿಸಿಕೊಂಡು ಬಂದು ಕೊಟ್ಟೋಳಿ ನಿವಾಸಿ ಉಮ್ಮರ್‌ ಎಂಬವರ ತಂಗಿಯ ಮಗಳು ಶಾನಿಬಾ ಎಂಬವಳಿಗೆ ಡಿಕ್ಕಿ ಪಡಿಸಿ ಬೈಕನ್ನು ನಿಲ್ಲಿಸದೆ ಹೋಗಿದ್ದು, ಶಾನಿಬಾಳಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಕ್ಕೆ ಕಾರು ಡಿಕ್ಕಿ
                      ದಿನಾಂಕ 15/11/2016ರಂದು ವಿರಾಜಪೇಟೆ ನಿವಾಸಿ ನಮಾಸಿರ್‌ ಎಂಬವರು ಅವರ ಆಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಿರುವಾಗ ನಗರದ ಮಲಬಾರ್‌ ರಸ್ತೆಯ ಬಳಿ ಕೆಎ-02-ಎಂಬಿ-343 ಸಂಖ್ಯೆಯ ಮಾರುತಿ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಕಿರಣ ಮತ್ತು ಲೀಲಾವತಿಯವರಿಗೆ ಗಾಯಗಳಾಗಿದ್ದು ರಿಕ್ಷಾಕ್ಕೂ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 15, 2016

ವ್ಯಕ್ತಿಯ ಆತ್ಮಹತ್ಯೆ
                       ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 14/11/2016ರಂದು ಕ್ಯಾತೆ ಗ್ರಾಮದ ನಿವಾಸಿ ಕೆ.ಡಿ.ಸುಬ್ರಮಣಿ ಎಂಬವರು ಅವರ ಗ್ರಾಮದ ಸ್ಮಶಾನದಲ್ಲಿ ಗೊಬ್ಬರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಂಠಿ ಬೇಸಾಯಕ್ಕಾಗಿ ಸಿಕ್ಕಾಪಟ್ಟೆ ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ವಂಚನೆ ಪ್ರಕರಣ
                          ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಚಿನ್ನಾಭರಣಗಳನ್ನು ತೆಗೆದು ವಂಚಿಸಿರುವ ಪ್ರಕರಣವೊಂದು ಮಡಿಕೇರಿ ಬಳಿಯ ಮರಗೋಡು ಗ್ರಾಮದಲ್ಲಿ ನಡೆದಿದೆ. ಮರಗೋಡು ನಿವಾಸಿ ಶ್ರೀಮತಿ ಹರಿಣಿ ಎಂಬವರು ಅವರ ಅತ್ತೆ ಧನಲಕ್ಷ್ಮಿ ಎಂಬವರೊಂದಿಗೆ ಅವರ ಪತಿ ಗಿರೀಶ್‌ರವರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ದಿನಾಂಕ 21/05/2016ರಂದು ಹೋಗಿದ್ದು ಆ ಸಮಯದಲ್ಲಿ ಮರಗೋಡುವಿನ ಮನೆಯಲ್ಲಿ ಹರಿಣಿಯವರ ಅತ್ತಿಗೆ ಶೋಭಾರವರನ್ನು ಬಿಟ್ಟು ಹೋಗಿದ್ದರೆನ್ನಲಾಗಿದೆ. ನಂತರ ದಿನಾಂಕ 24/10/2016ರಂದು ಹರಿಣಿ ಮತ್ತು ಗಿರೀಶ್‌ರವರು ಮರಗೋಡಿನ ಮನೆಗೆ ಬಂದಿದ್ದು, ಮನೆಯಲ್ಲಿ ನೋಡಿದಾಗ ಮನೆಯ ಬೀರುವಿನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿದ್ದು, ಇವರು ಮನೆಯಲ್ಲಿಲ್ಲದ ಸಮಯದಲ್ಲಿ ಯಾರೋ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 14, 2016

ಕಾರಿಗೆ ಬಸ್‌ ಡಿಕ್ಕಿ
                    ಕಾರಿಗೆ ಬಸ್ ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 13/11/2016ರಂದು ಉಡುಪಿ ಜಿಲ್ಲೆಯ ಅತ್ರಾಡಿ ಗ್ರಾಮದ ನಿವಾಸಿ ಮನ್ನೂರ್ ಅಖ್ತರ್‌ ಎಂಬವರು ಅವರ ಅಣ್ಣನ ಕಾರು ಸಂಖ್ಯೆ ಕೆಎ-20-ಎಂಎ-1682ರಲ್ಲಿ ಅವರ ಸಂಬಂಧಿಕರೊಂದಿಗೆ ಮಡಿಕೇರಿಗೆ ಮದುವೆ ಸಮಾರಂಭಕ್ಕೆ ಬಂದು ವಾಪಾಸು ಉಡುಪಿಗೆ ಹೋಗುತ್ತಿರುವಾಗ ಕಾಟಕೇರಿ ಗ್ರಾಮದ ಬಳಿ ಕೆಎ-19-ಎಫ್‌-3040ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮನ್ನೂರ್‌ ಅಖ್ತರ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಯುನೈನಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಆತ್ಮಹತ್ಯೆ 
                     ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಬಳಿಯ ಮಾದಾಪುರದ ಮೋವತೊಕ್ಲು ಗ್ರಾಮದಲ್ಲಿ ನಡೆದಿದೆ. ಮೂವತೊಕ್ಲು ಗ್ರಾಮದ ಮೀನುಕೊಲ್ಲಿ ನಿವಾಸಿ ರಾಜ ಎಂಬವರು ದಿನಾಂಕ 12/11/2016ರಂದು ಜೀವನದಲ್ಲಿ ಜುಗುಪ್ಸೆಗೊಂಡು ಯಾವುದೋ ವಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                   ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಬಳಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/11/2016ರಂದು ಬಳಗುಂದ ಗ್ರಾಮದ ಕುಸುಬೂರು ಎಸ್ಟೇಟಿನ ಕಾರ್ಮಿಕ ಹುಸೇನ್‌ ಆಲಿ ಎಂಬವರು ಕೆಲಸ ಮಾಡಿದ ಸಂಬಳದ ಹಣವನ್ನು ಊರಿಗೆ ಕಳುಹಿಸಬೇಕೆಂದು ಅವರ ಮೇಸ್ತ್ರಿ ಹಜರತ್‌  ಆಲಿ ರವರನ್ನು ಕೋರಿದಾಗ ಹಜರತ್‌ ಆಲಿರವರು ಏಕಾ ಏಕಿ ಹುಸೇನ್‌ ಆಲಿಯವರ ಮೇಲೆ ಸೌದೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪತ್ತೆ
                    ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 13/11/2016ರಂದು ಸೋಮವಾರಪೇಟೆ ವೃತ್ತ ನಿರೀಕ್ಷಕರ ಪರಶಿವ ಮೂರ್ತಿರವರು ರಾತ್ರಿ ವೇಳೆ ಗಸ್ತು ಕರ್ತವ್ಯದಲ್ಲಿದ್ದಾಗ ಮಾದಾಪುರ ಕಡೆಗೆ ಒಂದು ಪಿಕ್‌ ಅಪ್‌ ಜೀಪಿನಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಸುಮಾರು ರೂ.4,000/- ಮೊತ್ತದ ಮರಳನ್ನು ವಶಪಡಿಸಿಕೊಂಡು ಮರಳು ಸಾಗಿಸುತ್ತಿದ್ದ ಪ್ರವೀಣ್‌ ಕುಮಾರ್‌, ಉಮೇಶ್‌ ಮತ್ತು ಈರಪ್ಪ ಎಂಬವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, November 13, 2016

ಸ್ಕೂಟರಿಗೆ ಜೀಪು ಡಿಕ್ಕಿ
                        ಸ್ಕೂಟರಿಗೆ ಜೀಪು ಡಿಕ್ಕಿಯಾದ ಘಟನೆ ಮೂರ್ನಾಡು ಬಳಿ ನಡೆದಿದೆ. ದಿನಾಂಕ 12/11/2016ರಂದು ಮಹೇಶ್‌  ಎಂಬವರು ಕರ್ತವ್ಯದ ನಿಮಿತ್ತ ಅವರ  ಸ್ಕೂಟರ್‌ ಸಂಖ್ಯೆ ಕೆಎ-12-ಕೆ-2419ರಲ್ಲಿ ಮೂರ್ನಾಡಿನಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಎಂ.ಬಾಡಗ ಗ್ರಾಮದ ರಸ್ತೆಯ ಬಳಿ ಎದುರುಗಡೆಯಿಂದ ಕೆಎ-12-ಪಿ-8245ರ ಜೀಪನ್ನು ಅದರ ಚಾಲಕ ಸೂರಜ್‌ ಎಂಬಾತನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಹೇಶರವರು ಚಾಲಿಸುತ್ತಿದ್ದ ಜೀಪಿಗೆ ಡಿಕ್ಕಿಸಿದ ಪರಿಣಾಮ ಮಹೇಶರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ಮಹೇಶರವರ ತಮ್ಮ ಹರೀಶರವರು ದೂರು ನೀಡಿದ್ದು, ಇದೇ ರೀತಿ ಮಹೇಶರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್‌ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿರುವುದಾಗಿ ಜೀಪು ಚಾಲಕ ಸೂರಜ್‌ವರು ಸಹಾ ದೂರು ನೀಡಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬಸ್‌ ಡಿಕ್ಕಿ
                          ಕಾರಿಗೆ ಬಸ್ಸೊಂದು ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 11/11/2016ರ ಸಂಜೆ ವೇಳೆ ಹಾಸನ ಜಿಲ್ಲೆಯ ವೈ.ಜೆ.ಪ್ರವೀಣ್‌ ಎಂಬವರು ಅವರ ಕೆಎ-41-ಬಿ-0243ರ ಇನೋವಾ ಕಾರಿನಲ್ಲಿ ಬೆಂಗಳೂರಿನಿಂದ ಪ್ರವಾಸಿಗರನ್ನು ಕೊಡಗು ಜಿಲ್ಲೆಗೆ ಕರೆದುಕೊಂಡು ಬರುವಾಗ ಇಬ್ನಿವಳವಾಡಿ ಗ್ರಾಮದ ಇಬ್ನಿ ರೆಸಾರ್ಟ್‌ ಬಳಿ ಮಡಿಕೇರಿ ಕಡೆಯಿಂದ ಕೆಎ-11-ಎಫ್‌-0260 ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಗುರು ಪ್ರಸಾದ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರವೀಣ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರವಿಣ್‌ರವರಿಗೆ ಮತ್ತು ಕಾರಿನಲ್ಲಿದ್ದ ಪ್ರಿಯಾಂಕಾ ಕಟಾರಿಯಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                              ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 11/11/2016ರಂದು ನಗರದ ಮುತ್ತಪ್ಪ ದೇವಾಲಯದ ನಿವಾಸಿ ಹರೀಶ್‌ ಎಂಬವರು ನಗರದ ಮಾರುಕಟ್ಟೆ ಬಳಿ ಇರುವ ಕಾವೇರಿ ಬಾರ್‌ನಲ್ಲಿರುವಾಗ ಅಲ್ಲಿಗೆ ಬಂದ ಅವರಿಗೆ ಪರಿಚಯವಿರುವ ಸಂಜು ಎಂಬವರನ್ನು ಕುರಿತು ಸಂಜುರವರು ಈ ಹಿಂದೆ ವಿಷ ಸೇವಿಸಿದ ಬಗ್ಗೆ ವಿಚಾರಿಸಿದಾಗ ಸಂಜುರವರು ಕೋಪಗೊಂಡು ಏಕಾ ಏಕಿ ಹರೀಶರವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, November 12, 2016

ವ್ಯಕ್ತಿ ನಾಪತ್ತೆ ಪ್ರಕರಣ
                      ಮನೆಯಿಂದ ಕೆಲಸದ ನಿಮಿತ್ತ ಹೋದ ವ್ಯಕ್ತಿಯೊಬ್ಬರು ಮರಳಿ ಬಾರದೆ ಕಾಣೆಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 7/11/2016ರಂದು ನಗರದ ಒಂದನೇ ಬ್ಲಾಕ್‌ ನಿವಾಸಿ ಸಿಂಧೂ ಎಂಬವರ ಪತಿ ಸುದರ್ಶನ್‌ ಎಂಬವರು ಸೋಮವಾರಪೇಟೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿ ಬರುವುದಾಗಿ  ಸಿಂಧೂರವರ ತಾಯಿ ಭಾಗ್ಯಲಕ್ಷ್ಮಿರವರಿಗೆ ತಿಳಿಸಿ ಹೋದವರು ಮರಳಿ ಬರದೆ ನಾಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಭಾರೀ ಮೊತ್ತದ ಹಣ ದುರುಪಯೋಗ
                        ಸಹಕಾರ ಸಂಘವೊಂದರಲ್ಲಿ ಭಾರಿ ಮೊತ್ತದ ಹಣ ದುರುಪಯೋಗಪಡಿಸಿದ ಪ್ರಕರಣ ಶನಿವಾರಸಂತೆ ಬಳಿಯ ಬೆಸೂರು ಗ್ರಾಮದಲ್ಲಿ ನಡೆದಿದೆ. ಬೆಸೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿರುವ ಫಾಲಾಕ್ಷ ಎಂಬವರು ಸುಮಾರು 2012ನೇ ಸಾಲಿನಿಂದ ಇಲ್ಲಿಯವರೆಗೆ ಸಂಘದ ಸದಸ್ಯರಾದ ಬಿ.ಎನ್‌.ನಂದೀಶ ಎಂಬವರ ಅನುಮತಿಯಿಲ್ಲದೆ ಅವರ ಚೆಕ್ಕುಗಳನ್ನು ಬಳಸಿಕೊಂಡು ಅಕ್ರಮವಾಗಿ ಸಂಘದ ಸುಮಾರು ರೂ.18,00,000/-ಗಳಷ್ಟು ಭಾರೀ ಮೊತ್ತದ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸರ್ಕಾರದ ಹಣ ದುರುಪಯೋಗ
                        ದಿನಾಂಕ 01/07/2010 ರಿಂದ 28/12/2012ರ ನಡುವೆ ನೇರುಗಳಲೆ ಗ್ರಾಮದ ಪಂಚಾಯಿತಿ ಅಧ್ಯಕ್ಷರಾಗಿದ್ದ ಲೋಕಾನಂದ ಎಂಬವರು ಭಾರೀ ಮೊತ್ತದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಸೋಮವಾರಪೇಟೆ  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ.ಚಂದ್ರಶೇಖರ್‌ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, November 11, 2016

                                           ಪ್ರಕಟಣೆ

             ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆದಂತಹ ಗೌರಿ ಗಣೇಶ ಹಬ್ಬ, ದಸರಾ ಉತ್ಸವ, ತಲಕಾವೇರಿ ಜಾತ್ರೆ, ಬಕ್ರೀದ್ ಹಬ್ಬ, ರಂಜಾನ್ ಹಬ್ಬ ಹಾಗೂ ಇದೀಗ ಮುಕ್ತಾಯಗೊಂಡಿರುವ ಟಿಪ್ಪು ಜಯಂತಿ ಆಚರಣೆಯ ಸಮಯದಲ್ಲಿ ಶಾಂತ ರೀತಿಯಿಂದ ಮೇಲ್ಕಂಡ ಎಲ್ಲಾ ಆಚರಣೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಉತ್ತಮವಾಗಿ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರು, ಸಂಘ ಸಂಸ್ಥೆಯವರು , ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಾದ್ಯಮ ಮತ್ತು ಪತ್ರಿಕಾ ಮಿತ್ರರು ಹಾಗೂ ಜಿಲ್ಲೆಯ ಎಲ್ಲಾ ಶಾಂತಿ ಪ್ರಿಯ ಸಾರ್ವಜನಿಕ ಮಿತ್ರರು ಕೈಜೋಡಿಸಿ ಸಹಕರಿಸಿರುತ್ತೀರಿ. ಈ ನಿಟ್ಟಿನಲ್ಲಿ ನಿಮ್ಮೆಲರ ಸಹಕಾರದೊಂದಿಗೆ ಪೊಲೀಸ್ ಇಲಾಖೆ ಜನ ಸಾಮಾನ್ಯರೊಂದಿಗೆ ಬೆರೆತು ‘’ಜನಸ್ನೇಹಿ ಪೊಲೀಸರಾಗಿ’’ ಸಾರ್ವಜನಿಕರ ಪ್ರಸಂಶಗೆ ಪಾತ್ರವಾಗಲು ಸಹಕರಿಸಿದ್ದು, ಸಾರ್ವಜನಿಕರೊಂದಿಗೆ ಪೊಲೀಸ್ ಬಾಂದವ್ಯ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಳ್ಳುತ್ತಿದ್ದು, ಇನ್ನು ಮುಂದೆಯೂ ಸಹ ಕೊಡಗು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸಲು ಕೋರುತ್ತಾ, ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಕೊಡಗು ಜಿಲ್ಲೆಯ ಎಲ್ಲಾ ಆತ್ಮೀಯ ಭಾಂದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.


                                                                                                ಪಿ. ರಾಜೇಂದ್ರ ಪ್ರಸಾದ್., ಐ.ಪಿ.ಎಸ್

                                                                                                  ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ

ವ್ಯಕ್ತಿಯ ಆತ್ಮಹತ್ಯೆ

                           ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/11/2016ರಂದು ತೋರ ಗ್ರಾಮದ ನಿವಾಸಿ ಜಯಾನಂದ ಎಂಬವರು ಮನೆಯಲ್ಲಿ ವಿಪರೀತ ಮದ್ಯಪಾನ ಮಾಡಿದ್ದು ಜೊತೆಗೆ ವಿಷವನ್ನು ಸಹಾ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರವರನ್ನು ಅವರ ಮಗ ಪ್ರಸನ್ನರವರು ಮಡಿಕೇರಿರಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/11/2016ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಅಕ್ರಮ ಮರ ಹನನ

                        ಅಕ್ರಮವಾಗಿ ರಸ್ತೆಗೆ ಅಡ್ಡಲಾಗಿ ಮರ ಕಡಿದ ಘಟನೆ ಭಾಗಮಂಡಲ ಬಳಿಯ ಸಣ್ಣಪುಲಿಕೋಟು ಗ್ರಾಮದಲ್ಲಿ ನಡೆದಿದೆ. ದಿನಾಂಕ 10/11/2016ರಂದು ಭಾಗಮಂಡಲ ಠಾಣಾ ಪಿಎಸ್‌ಐ ಸದಾಶಿವರವರು ಗಸ್ತು ಕರ್ತವ್ಯದಲ್ಲಿದ್ದಾಗ ಸಣ್ಣ ಪುಲಿಕೋಟು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎರಡು ಮರಗಳನ್ನು ಯಾರೋ ಅಪರಿಚಿತರು ಕಡಿದು ರಸ್ತೆಗೆ ಅಡ್ಡಲಾಗಿ ಬೀಳಿಸಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಬಗ್ಗೆ ಭಾಗಂಮಂಡಲ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಹನನ
                      ಅಕ್ರಮವಾಗಿ ರಸ್ತೆಗೆ ಅಡ್ಡಲಾಗಿ ಮರ ಕಡಿದ ಘಟನೆ ಮಡಿಕೇರಿ ಬಳಿಯ ಕಡಗದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 10/11/2016ರಂದು ಕಡಗದಾಳು ಬಳಿ ರಸ್ತೆಗೆ ಅಡ್ಡವಾಗಿ ಮರ ಕಡಿದು ಹಾಕಿರುವ ಬಗ್ಗೆ ದೊರೆತ ಮಾಃಇತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಪ್ರಕಾಶ್‌ರವರು ಕಡಗದಾಳು ಗ್ರಾಮಕ್ಕೆ ಹೋಗಿ ನೋಡಿದಾಗ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎರಡು ಮರಗಳನ್ನು ಯಾರೋ ಅಪರಿಚಿತರು ಕಡಿದು ರಸ್ತೆಗೆ ಅಡ್ಡಲಾಗಿ ಬೀಳಿಸಿದ್ದು, ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 10, 2016

ಬಾಲಕಿಗೆ ಬೈಕ್ ಡಿಕ್ಕಿ:

    ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ಬೈಕೊಂಡು ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ. ಗೋಣಿಕೊಪ್ಪ ಸಮೀಪಮ ಕೈಕೇರಿ ನಿವಾಸಿ ಕೊಕ್ಕಂಡ ಧರ್ಮಜ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಕುಶಾಲ ಎಂಬವರು ತನ್ನ ಅಣ್ಣನ ಮಗಳಾಧ ಆಶಾ ಎಂಬವಳೊಂದಿಗೆ ದಿನಾಂಕ 09/11/2016 ರಂದು ಸಮಯ ಸಂಜೆ 06-45 ಗಂಟೆಗೆ ಗೋಣಿಕೊಪ್ಪ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುವ ಕೈಕೇರಿ ಗ್ರಾಮದ ಸೋನಾಲಿಕ್ ಟ್ರಾಕ್ಟ ರ್ ಶೋ ರೂಂ ನ ಮುಂಭಾಗ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಗೋಣಿಕೊಪ್ಪ ಕಡೆಯಿಂದ ಕೆಎ-12 ಕ್ಯೂ 9210 ರ ಹೀರೋ ಹೊಂಡಾ ಬೈಕ್ ನ ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲಿಸಿಕೊಂಡು ಬಂದು ಆಶಾಳಿಗೆ ಡಿಕ್ಕಿ ಪಡಿಸಿದ ಪರಿಣಾಮ, ಆಕೆ ಕೆಳಗೆ ಬಿದ್ದು ಕಾಲು ಮತ್ತು ಮುಖದ ಭಾಗಕ್ಕೆ ಗಾಯಗಳಾಗಿ ಬೈಕ್ ಸವಾರ ಸುಬ್ರಮಣಿ @ ಸುಬ್ಬಯ್ಯನವರಿಗೂ ರಕ್ತಗಾಯವಾಗಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, November 9, 2016

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

      ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ನಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಗ್ರಾಮದಲ್ಲಿ ನಡೆದಿದೆ. ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಗಣೇಶ (40) ಎಂಬವರು ಹೃಧಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 7-11-2016 ರಂದು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು , ಮೃತಸ ಪತ್ನಿ ಶ್ರೀಮತಿ ಸುನಿತ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವೃದ್ದೆಯ ಸಾವು:

     ಬಟ್ಟೆ ಹೊಗೆಯುತ್ತಿದ್ದ ವೃದ್ಧೆಯೊಬ್ಬರು ಆಕಸ್ಮಿಕ  ಜಾರಿ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಕಿರಗೂರು ಗ್ರಾಮದಲ್ಲಿ ವಾಸವಾಗಿರುವ ಹೆಚ್.ಜಿ. ವಿಜಯ ಎಂಬವರ ತಾಯಿ ಶ್ರೀಮತಿ ಲಕ್ಷ್ಮಿ, (85) ರವರು ದಿನಾಂಕ 8-11-2016 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಿರಗೂರು ಗ್ರಾಮದಲ್ಲಿರುವ ಕೀರೆ ಹೊಳೆಯಲ್ಲಿ ಬಟ್ಟೆಯನ್ನು ಹೊಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗ್ರಹಿಸಿಟ್ಟ ಮರಳು ಕಳವು:

     ಕಂದಾಯ ಇಲಾಖೆಯವರು ಸಂಗ್ರಹಿಸಿಟ್ಟ ಮರಳನ್ನು ವ್ಯಕ್ತಿಗಳಿಬ್ಬರು ಕಳ್ಳತನ ಮಾಡಿದ ಘಟನೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದಿದೆ. ಕಂದಾಯ ಇಲಾಖೆಯವರು ಭಾಗಮಂಡಲದ ತ್ರಿವೇಣಿ ಸಂಗಮದಿಂದ ಹೂಳೆತ್ತಿದ್ದ ಸಂದರ್ಭ ಸಂಗ್ರಹಿಸಿಟ್ಟ ಮರಳನ್ನು ಆರೋಪಿಗಳಾದ`ಕುರುಂಜಿ ರವೀಂದ್ರ ಹಾಗು ನಂಗಾರು ಪುನಿತ್ ಎಂಬವರುಗಳು ಇಲಾಖೆಯ ಅನುಮತಿ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗಿ ಸಂಗ್ರಹಿಸಿಟ್ಟಿದ್ದು,  ಸದರಿ ಮರಳನ್ನು ದಿನಾಂಕ 14-10-2016 ರಂದು ಕಂದಾಯ ಇಲಾಖೆಯವರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ದಿನಾಂಕ 8-11-2016 ರಂದು ಭಾಗಮಂಡಲ ಪೊಲೀಸರು ಭಾಗಮಂಡಲ ಕಂದಾಯ ಪರಿವೀಕ್ಷಕ ರಾಮಯ್ಯ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ. 

ಅಕ್ರಮ ಮದ್ಯ ವಶ:

     ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ಪಿ.ಎಸ್.ಐ. ಜೆ.ಇ. ಮಹೇಶ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಾರ್ವಜನಿಕ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಗ್ರಾಹಕರಿಗೆ ಮದ್ಯಮಾರಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿತ ಹಾರಂಗಿ ನಿವಾಸಿ ಬೆಟ್ಟಚಾರ ಎಂಬಾತನಿಂದ ರೂ 700/-ರೂ ಮೌಲ್ಯದ 90 ML ನ 20 ಓರಿಜಿನಲ್ ಚಾಯ್ಸ್ ಡಿಲೆಕ್ಷ್ ವಿಸ್ಕಿ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ ಸವಾರನಿಗೆ ಗಾಯ:

       ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಪಿ.ಎನ್. ಸಂಪತ್ ಎಂಬವರು ದಿನಾಂಕ 08.11.2016 ಮದ್ಯಾಹ್ನ 1.00 ಗಂಟೆಗೆ ಮಡಿಕೇರಿಯಿಂದ ಮನೆಗೆ ಅಂದರೆ ಮುಕ್ಲೋಡ್ಲು ವಿಗೆ ಬೈಕ್ ನಂ ಕೆ ಎ 12ಹೆಚ್ 8820 ರಲ್ಲಿ ಹೋಗುತ್ತಿರುವಾಗ ಹಾಲೇರಿ ಅಂಚೆ ಕಛೇರಿ ಸ್ವಲ್ಪ ಮುಂದೆ ಎದುರುಗಡೆಯಿಂದ ಬಂದ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಬೈಕ್ ಗೆ ಡಿಕ್ಕಿ ಪಡಿಸಿದ ಪರೀಣಾಮ ಬೈಕ್ ಸಮೇತ ಕೆಳಗೆ ಬಿದ್ದು ಎಡಗಾಲಿಗೆ ಮತ್ತು ಬಲ ಕೈಗೆ ಗಾಯವಾಗಿದ್ದು ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, November 8, 2016

ಮಹಿಳೆಯ ಮೇಲೆ ಹಲ್ಲೆ
                  ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 23/10/2016ರಂದು ಗೋಣಿಕೊಪ್ಪದ ಚೆನ್ನಂಗೊಲ್ಲಿ ನಿವಾಸಿಗಳಾದ ಮುತ್ತು ಎಂಬ ಮಹಿಳೆ ಮತ್ತು ರವಿ ಎಂಬವರು ವಿರಾಜಪೇಟೆ ನಗರದ ಮೀನುಪೇಟೆ ನಿವಾಸಿ ಕಮಲಾಕ್ಷಿಯವರ ಮನೆಗೆ ಬಂದು ಕಮಲಾಕ್ಷಿಯವರ ಸೊಸೆ ಲಕ್ಷ್ಮಿ ಎಂಬವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಜಗಳವಾಡಿ  ಕಮಲಾಕ್ಷಿಯವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆಕಸ್ಮಿಕ ಸಾವು
                     ಅತೀವ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಸಾವಿಗೀಡಾದ  ಘಟನೆ ಶನಿವಾರಸಂತೆ ನಗರದಲ್ಲಿ ನಡೆದಿದೆ. ದಿನಾಂಕ 06/11/2016ರಂದು ಒಡೆಯನಪುರ ಗ್ರಾಮದ ನಿವಾಸಿ ಶಿವಾನಂದ ಎಂಬವರ ಅಣ್ಣ ಕುಮಾರ ಎಂಬವರು ವಿಪರೀತ ಮದ್ಯಪಾನ ಮಾಡಿ ಮನೆಗೆ ತೂರಾಡುತ್ತಾ ಬಂದಿದ್ದು ಮನೆಯೊಳಗೆ ಕಾಲು ಜಾರಿ ಬಿದ್ದು ಮೃತನಾಗಿರುವುದಾಗಿ ಶಿವಾನಂದರವರ ಇನ್ನೊಬ್ಬ ಅಣ್ಣ ಜಗದೀಶ ತಿಳಿಸಿದ್ದು, ಶಿವಾನಂದರವರು ತನ್ನ ಅಣ್ಣ ಕುಮಾರನವರದ್ದು ಸಂಶಯಾಸ್ಪದ ಸಾವು ಎಂಬುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ
                ಅಪರಿಚಿತ ವ್ಯಕ್ತಿಯೊಬ್ಬನ ಶವ ಗೋಣಿಕೊಪ್ಪ ನಗರದಲ್ಲಿ ಪತ್ತೆಯಾಗಿದೆ. ದಿನಾಂಕ 07/11/2016ರಂದು ಗೋಣಿಕೊಪ್ಪ ನಗರದ ಅರ್ವತೊಕ್ಲು ನಿವಾಸಿ ವಿನೋಜ್‌ ಎಂಬವರು ಅವರ ಆಟೋ ರಿಕ್ಷಾದಲ್ಲಿ ಚೆನ್ನಂಗೊಲ್ಲಿ ಪೈಸಾರಿಗೆ ಬಾಡಿಗೆದಾರರನ್ನು ಬಿಟ್ಟು ವಾಪಾಸು ಬರುತ್ತಿರುವಾಗ  ಗೋಣಿಕೊಪ್ಪ ಮೈಸೂರು ಮುಖ್ಯ ರಸ್ತೆಯ ಬದಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, November 7, 2016

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

        ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಕಂಬಿಬಾಣೆಯ ನಿವಾಸಿಯಾದ ಜೇನುಕುರುಬರ ಮನುರವರು ಚಿಕ್ಲಿ ಹೊಳೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನಡೆದಿರುತ್ತದೆ. ಮನು 10 ವರ್ಷಗಳ ಹಿಂದೆ ಲಕ್ಷ್ಮಿ ಎಂಬುವವರನ್ನು ಮದುವೆಯಾಗಿದ್ದು 5 ವರ್ಷಗಳಿಂದ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದು ಮನು ಜೀವನದಲ್ಲಿ ಬೇಸರಗೊಂಡಿದ್ದು, ದಿನಾಂಕ 5-11-2016 ರಂದು ಮನು ಚಿಕ್ಲಿ ಹೊಳೆ ಕಡೆಗೆ ಹೋದವನು ವಾಪಾಸ್ಸು ಮನೆಗೆ ಬಾರದೇ ಇದ್ದು, ದಿನಾಂಕ 6-11-2016 ರಂದು ಚಿಕ್ಲಿ ಹೊಳೆಯಲ್ಲಿ ಮನುರವರ ಮೃತ ದೇಹ ಪತ್ತೆಗಾಗಿದ್ದು, ಈ ಬಗ್ಗೆ ಮನುರವರ ತಂದೆ ಚೋಮರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

          ಕುಶಾಲನಗರ ಪಟ್ಟಣದ ಅಯ್ಯಪ್ಪ ದೇವಸ್ಥಾನದ ರಸ್ತೆಯ ತಮ್ಮಯ್ಯನವರ ಮನೆಯಲ್ಲಿ ಬಾಡಿಗೆಗೆ ಇರುವ ರವಿ, ಗೌರಿ ಮತ್ತು ಪ್ರೇಮರವರು ಬೇರೆ ಬೇರೆ ಮನೆಯಲ್ಲಿ ವಾಸವಿದ್ದು ಇವರ ಮದ್ಯೆ ನೀರು ಹಾಗೂ ಕರೆಂಟಿನ ವಿಚಾರದಲ್ಲಿ ದಿನಾಂಕ 6-10-2016 ರಂದು ಜಗಳವಾಗಿ ಕೆ ಕೆ ಪ್ರೇಮಾ ಎಂಬುವವರ ಮೇಲೆ ರವಿ, ಪ್ರೇಮಾ, ಗೌರಿ, ಪದ್ಮ ಮತ್ತು ಕರುಣಾಕರಶೆಟ್ಟಿರವರು ಹಲ್ಲೆ ಮಾಡಿದ್ದು ಈ ಬಗ್ಗೆ ಕೆ ಕೆ ಪ್ರೇಮಾ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದು ವ್ಯಕ್ತಿಯ ಆತ್ಮ ಹತ್ಯೆ

         ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಮಡಿರುವ ಪ್ರಕರಣ ಸಿದ್ದಾಪುರದ ಚೆನ್ನಯ್ಯನಕೋಟೆಯಲ್ಲಿ ನಡೆದಿದೆ. ಚೆನ್ನಯ್ಯನಕೋಟೆಯ ನಿವಾಸಿ ರಾಜರವರು ಮಾನಸಿಕ ಅಸ್ವಸ್ತರಾಗಿದ್ದು ದಿನಾಂಕ 6-11-2016 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು ಕೂಡಲೇ ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾಜರವರು ಮೃತಪಟ್ಟಿದ್ದು. ಈ ಸಂಬಂದ ರಾಜರವರ ಪತ್ನಿ ನೇತ್ರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.

 

Sunday, November 6, 2016

ಬೀಗ ಮುರಿದು ನಗ ನಾಣ್ಯ ಕಳ್ಳತನ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಎಂ.ಎ. ಹನೀಫ್ ಎಂಬವರ ಮನೆಯ ಬಾಗಿಲನ್ನು ದಿನಾಂಕ 5-11-2016ರ ಬೆಳಿಗ್ಗೆ 7-20 ಗಂಟೆ ಯಿಂದ 8-20 ಗಂಟೆಯ ನಡುವೆ ಯಾರೋ ಕಳ್ಳರು ಮುರಿದು ಗಾಡ್ರೇಜ್ ನಲ್ಲಿಟ್ಟಿದ್ದ 1) 18 ಗ್ರಾಂ ಚಿನ್ನದ ನಕ್ಲೇಸ್, 2) 4 ಗ್ರಾಂ ನ 2 ಉಂಗುರ 3) 6 ಗ್ರಾಂ ನ ಬ್ರಾಸ್ಲೆಟ್ ಒಟ್ಟು (ಅಂದಾಜು ಮೌಲ್ಯದ 76000) 28 ಗ್ರಾಂ ಚಿನ್ನವನ್ನು ಹಾಗೂ 10000=00 ರೂ ಹಣವನ್ನು ಕಳ್ಳತನ ಮಾಡಿಕೊಂಡಿಹೋಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ:

     ಸೋಮವಾರಪೇಟೆ ಠಾಣಾ ಸರಹದ್ದಿನ ಕರ್ಕಳ್ಳಿ ಗ್ರಾಮದ ನಿವಾಸಿ ಶ್ರೀಮತಿ ನಾಗಮ್ಮ ಎಂಬವರು ದಿನಾಂಕ 04.11.2016 ರಂದು ಬೆಳಿಗ್ಗೆ 09:00 ಗಂಟೆಗೆ ಕೂಲಿ ಕೆಲಸಕ್ಕೆಂದು ಸೋಮವಾರಪೇಟೆ ನಗರದ ಜೂನಿಯರ್ ಕಾಲೇಜ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೆಎ 13 ಕೆ 1969 ರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗಮ್ಮರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎಡ ಭಾಗದ ಮಂಡಿ ಕೈಗಳಿಗೆ, ಹೊಟ್ಟೆಯ ಕೆಳ ಭಾಗಕ್ಕೆ ನೋವಾಗಿರುವುದಾಗಿ ನೀಡಿದ ದೂರಿಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Saturday, November 5, 2016

ಪರಸ್ಪರ ಕಾರು ಡಿಕ್ಕಿ

                   ಪರಸ್ಪರ ಕಾರು ಡಿಕ್ಕಿಯಾದ ಘಟನೆ ಕುಶಾಲನಗರ ಬಳಿಯ ಬೈಚಹನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬೈಚಹನಹಳ್ಳಿ ನಿವಾಸಿ ಕೆ.ವೈ.ಚೇತನ್ ಎಂಬವರು ದಿನಾಂಕ 02/11/2016ರಂದು ಅವರ ಕಾರು ಸಂಖ್ಯೆ ಕೆಎ-12-ಜೆಡ್-5684ರಲ್ಲಿ ಗುಂಡೂರಾವ್ ಬಡಾವಣೆಯಿಂದ ಮಡಿಕೇರಿ ಕಡೆ ಹೋಗಲು ಬೈಚನಹಳ್ಳಿ ಬಳಿ ಕಾರು ತಿರುಗಿಸಿ ರಸ್ತೆ ಬದಿ ನಿಲ್ಲಿಸುತ್ತಿರುವಾಗ ಕುಶಾಲನಗರ ಕಡೆಯಿಂದ ಕೆಎ-12-ಎಂ-6256ರ ಕಾರುನ ಚಾಲಕನು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೇತನ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಚೇತನ್‌ರವರಿಗೆ ಗಾಯಗಳಾಗಿ ಕಾರಿಗೆ ಹಾನಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, November 4, 2016

ಕಾರಿಗೆ ಜೀಪು ಡಿಕ್ಕಿ
                 ಕಾರಿಗೆ ಜೀಪು ಡಿಕ್ಕಿಯಾದ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ಪೊನ್ನಂಪೇಟೆ ನಿವಾಸಿ ಟಿ.ಎನ್.ನಾರಾಯಣ ನಾಯ್ಡು ಎಂಬವರು ದಿನಾಂಕ  08/10/2016ರಂದು ಅವರ ಕಾರು ಸಂಖ್ಯೆ ಕೆಎ-03-ಎನ್-6051ರಲ್ಲಿ ಗೋಣಿಕೊಪ್ಪ ಕಡೆಗೆ ಹೋಗುತ್ತಿರುವಾಗ ಅಜ್ಜಾಮಾಡ ಕರುಂಬಯ್ಯ ಎಂಬವರು ಎದುರುಗಡೆಯಿಂದ ಅವರ ಜೀಪು ಸಂಖ್ಯೆ ಕೆಎ-12-ಪಿ-9607ರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಾಲಿಸಿಕೊಂಡು ಬಂದು ನಾರಾಯಣ ನಾಯ್ಡುರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿಗೆ ಹಾನಿಯಾಗಿ ನಾರಾಯಣ ನಾಯ್ಡುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ  ಮೇರೆಗೆ  ಪೊನ್ನಂಪೇಟೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯೊಬ್ಬರ ಸಾವು
                      ಅಪರಿಚಿತ ವ್ಯಕ್ತಿಯೊಬ್ಬರು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಸೋಮವಾರಪೇಟೆ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದೆ. ಇಗ್ಗೋಡ್ಲು ಗ್ರಾಮದ ಆಶ್ರಯ ಕಾಲೋನಿ ಪಕ್ಕದಲ್ಲಿ ಆನಂದ ಎನ್ನುವ ಓರ್ವ  ಅಪರಿಚಿತ ವ್ಯಕ್ತಿ ಕೆಲವು ದಿನಗಳಿಂದ ನೆಲೆಸಿದ್ದು ಇತ್ತೀಚೆಗೆ ಅಸ್ವಸ್ಥನಾದ ಕಾರಣ ಗ್ರಾಮ ಪಂಚಾಯಿತಿ ವತಿಯಿಂದ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತೆನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆನಂದರವರು ದಿನಾಂಕ 02/11/2016ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪರಸ್ಪರ ಕಾರು ಡಿಕ್ಕಿ
                     ದಿನಾಂಕ 02/1/2016ರಂದು ಕುಶಾಲನಗರದ ಬೈಚನಹಳ್ಳಿಯ ಬಳಿ ಸುಂಟಿಕೊಪ್ಪ ನಿವಾಸಿ ಬಷೀರ್‌ ಎಂಬವರು ಅವರ ಕಾರಿನಲ್ಲಿ ಬರುತ್ತಿರುವಾಗ ಗುಂಡೂರಾವ್‌  ಬಡಾವಣೆಯ ಕಡೆಯಿಂದ ಚೇತನ್‌ ಎಂಬಾತನು ಆತನ ಕೆಎ-12-ಜೆಡ್‌-5684 ರ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಷೀರ್‌ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಷೀರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕು ಡಿಕ್ಕಿ 
                     ದಿನಾಂಕ 02/11/2016ರಂದು ಶನಿವಾರಸಂತೆ ಬಳಿಯ ಬೆಳ್ಳಾರಳ್ಳಿ ಗ್ರಾಮದ ಜಂಕ್ಷನ್‌ನಲ್ಲಿ ಪಳನಿಯಮ್ಮ ಯಾನೆ ಕಮಲಮ್ಮ ಎಂಬ ಮಹಿಳೆಯು ನಡೆದುಕೊಂಡು ಹೋಗುತ್ತಿರುವಾಗ ಕೆಎ-13-ಡಬ್ಲ್ಯು-7557ರ ಮೋಟಾರು ಬೈಕು ಚಾಲಕನು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪಳನಿಯಮ್ಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಕ್ಕೆ ಬಸ್‌ ಡಿಕ್ಕಿ 
                     ದಿನಾಂಕ 03/11/2016ರಂದು ಸುಂಟಿಕೊಪ್ಪ ನಿವಾಸಿ ಕೆ.ಎಂ.ಶಾಫಿ ಎಂಬವರು ಅವರ ಕೆಎ-12-ಎ-7055ರ ಆಟೋ ರಿಕ್ಷಾವನ್ನು ಬಾಡಿಗೆಗಾಗಿ ಸುಂಟಿಕೊಪ್ಪದಿಂದ ಹೊಸಕೋಟೆ ಕಡೆಗೆ ಹೋಗುತ್ತಿರುವಾಗ ಹೋಸಕೋಟೆಯ ಮೆಟ್ನಳ್ಳ ಎಂಬಲ್ಲಿ ಎದುರುಗಡೆಯಿಂದ ಕೆಎ-09-ಎಫ್-4763 ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಾಫಿರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾಕ್ಕೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಕೊಲೆ
                    ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಕೊಲೆಯಾದ ಘಟನೆ ಸಿದ್ದಾಪುರ ಬಳಿಯ ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 02/11/2016ರಂದು ರಾತ್ರಿ ಹೊಸೂರು ಬೆಟ್ಟಗೇರಿಯ ಮೊಳ್ಳೆರ ಭೀಮಯ್ಯ ಎಂಬವರ ಮನೆಯಲ್ಲಿ ವಾಸವಿರುವ ಪಣಿ ಎರವರ ಚಿಣ್ಣಪ್ಪ ಮತ್ತು ಆತನ ಪತ್ನಿ ಸೋನಿ ಎಂಬಾಕೆಗೂ ಮದ್ಯದ ವಿಚಾರವಾಗಿ ಜಗಳವಾಗಿದ್ದು ಜಗಳದ ಸಂದರ್ಭದಲ್ಲಿ ಚಿಣ್ಣಪ್ಪನು ಆತನ ಪತ್ನಿ ಸೋನಿಯ ದವಡೆಗೆ ತೀವ್ರತರವಾಗಿ ಹೊಡೆದಿದ್ದು ನೋವು ತಾಳಲಾರದೆ ಕೆಳಗೆ ಬಿದ್ದ ಸೋನಿಯ ಕುತ್ತಿಗೆ ಹಿಚುಕಿ ಸಾಯಿಸಿರುವುದಾಗಿ ತಿಳಸಿರುವುದಾಗಿ ಮೃತೆ ಸೋನಿಯ ಅಣ್ಣ ಪಣಿ ಎರವರ ಬೊಳ್ಳಿ ಎಂಬಾತನು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, November 3, 2016

ಮಹಿಳೆ ಕಾಣೆ ಪ್ರಕರಣ
                          ಮನೆಯಲ್ಲಿದ್ದ ಮಹಿಳೆಯೊಬ್ಬರು ಕಾಣೆಯಾಗಿರುವ ಪ್ರಕರಣ ವಿರಾಜಪೇಟೆ ಬಳಿಯ ಬೊಳ್ಳುಮಾಡು ಗ್ರಾಮದಲ್ಲಿ ನಡೆದಿದೆ. ಬೊಳ್ಳುಮಾಡು ಗ್ರಾಮದ ನಿವಾಸಿ ಜೌರಿ ಎಂಬ ವೃದ್ದ ಮಹಿಳೆಯು ಆಕೆಯ ಮಗಳು ಕುಂಞಕ್ಕ ಎಂಬಾಕೆಯೊಂದಿಗೆ ದಿನಾಂಕ 31/10/2016ರಂದು ಮನೆಯಲ್ಲಿ ಊಟ ಮಾಡಿ ಮಲಗಿದ್ದು ಮಗಳು ಕುಂಞಕ್ಕ ಟಿ.ವಿ. ನೋಡುತ್ತಾ ಕುಳಿತಿದ್ದರೆನ್ನಲಾಗಿದೆ. ಮಾರನೇ ದಿನ ದಿನಾಂಕ 01/11/2016ರಂದು ತಾಯಿ ಜೌರಿಯವರು ಎದ್ದು ನೋಡುವಾಗ ಮಗಳು ಕುಂಞಕ್ಕ ಆಕೆಯ ಕೊಠಡಿಯಲ್ಲಿ ಕಾಣದೇ ಇದ್ದು ಅಕ್ಕ ಪಕ್ಕ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂಬುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
                              ನೇಣು ಬಿಗಿದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಬಳಿಯ ಕಾರುಗುಂದ ಗ್ರಾಮದಲ್ಲಿ ನಡೆದಿದೆ. ದಿನಾಂಕ 01/11/2016ರಂದು ಕಾರುಗುಂದ ನಿವಾಸಿ ಅಜ್ಜೇಟಿರ ಕಮಲ ಎಂಬವರ ಮಗ ಹರ್ಷ ಕುಮಾರ್‌ ಎಂಬಾತನು ವಿಪರೀತ ಮದ್ಯಪಾನ ಮಾಡಿ ಅವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಒಳಗೆ ಮಾಡಿಗೆ ಆಳವಡಿಸಿದ್ದ ಪೈಪಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮುಂದಿನ ವರ್ಷ ಕಮಲರವರ ಮಗಳ ಮದುವೆಗೆ ಹಣ ಹೊಂದಿಸಲು ಸಾಧ್ಯವಾಗದ ಕಾರಣಕ್ಕೆ ಜುಗುಪ್ಸೆಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇವಾಲಯ ಕಳವು
                              ದೇವಸ್ಥಾನದ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ದೇವಾಲಯದ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿದ ಘಟನೆ ಸುಂಟಿಕೊಪ್ಪ ನಗರದಲ್ಲಿ ನಡೆದಿದೆ. ಸುಂಟಿಕೊಪ್ಪ ನಗರದ ಅಯ್ಯಪ್ಪ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿರುವ ಅಂದಗೋವೆ ನಿವಾಸಿ ನಾರಾಯಣ ಉಪಾಧ್ಯ ಎಂಬವರು ದಿನಾಂಕ 01/11/2016ರಂದು ಸಂಜೆ ವೇಳೆ ಪೂಜಾ ಕರ್ತವ್ಯ ಮುಗಿಸಿ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 02/11/2016ರಂದು ಬೆಳಿಗ್ಗೆ ದೇವಾಲಯಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ದೇವಾಲಯದ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ದೇವಸ್ಥಾನದಲ್ಲಿದ್ದ ಸುಮಾರು ರೂ.8,000/- ಬೆಲೆ ಬಾಳುವ ಪೂಜಾ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವಕನ ಆತ್ನಹತ್ಯೆ
                        ಗುಂಡು ಹೊಡೆದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ಬಳಿಯ ಕಡಗದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 02/11/2016ರಂದು ಕಡಗದಾಳು ನಿವಾಸಿ ಕೊರವಂಡ ಬೋಪಯ್ಯ ಎಂಬವರ ಮಗ ಕುಟ್ಟಯ್ಯ ಎಂಬಾತನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಮಡಿದ್ದಾರೆ.ಆತ್ಮಹತ್ಯೆಗೆ  ಕಾರಣ  ತಿಳಿದು ಬಂದಿರುವುದಿಲ್ಲವೆನ್ನಲಾಗಿದೆ.

Wednesday, November 2, 2016

ಚಿನ್ನಾಭರಣ ಕಳವು
                     ಮದುವೆ ಮನೆಯಿಂದ ಭಾರಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಮಡಿಕೇರಿ ಸಮೀಪದ ಕಡಗದಾಳುವಿನಲ್ಲಿ ನಡೆದಿದೆ. ಕುಟ್ಟ ಬಳಿಯ ಕೋತೂರು ಗ್ರಾಮದ ನಿವಾಸಿ ಕೋದಂಡೀರ ದಿನೇಶ ಎಂಬವರು ದಿನಾಂಕ 15/10/2016ರಂದು ಕಡಗದಾಳು ಗ್ರಾಮದ ಕ್ಯಾಪಿಟಲ್‌ ವಿಲೇಜ್‌ ರೆಸಾರ್ಟಿನಲ್ಲಿ ಅವಳ ಮಗಳ ಮದುವೆ ಸಮಾರಂಭ ಏರ್ಪಡಿಸಿದ್ದು, ಮದುವೆ ದಿನ ಮುಹೂರ್ತ ಮುಗಿಸಿ ಮದ್ಯಾಹ್ನ ವೇಳೆಯಲ್ಲಿ ಅವರ ಕೊಟಡಿಗೆ ತೆರಳಿ ಅಲ್ಲಿ ಅವರ ಸಂಪ್ರದಾಯದ ದಟ್ಟಿ ಕುಪ್ಪಸ ಹಾಗೂ ಸುಮಾರು 100 ಗ್ರಾಂ ಚಿನ್ನವಿರುವ ಪೀಚೆ ಕತ್ತಿಯ ಆಭರಣವನ್ನು ಬಿಚ್ಚಿ ಇಟ್ಟಿದ್ದು ನಂತರ ಸಂಜೆ ವೇಳೆ ಬಂದು ನೋಡುವಾಗ ಇಟ್ಟಿದ್ದ ಪೀಚೆ ಕತ್ತಿಯನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಕಳವಾದ ಪೀಚೆಕತ್ತಿಯ ಬೆಲೆ ಸುಮಾರು ರೂ. 2,80,000/- ಎನ್ನಲಾಗಿದೆ. 

ದೇವಸ್ಥಾನದ ಹುಂಡಿ ಕಳವು
                        ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿದ ಪ್ರಕರಣ ವಿರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 31/10/2016ರಂದು ವಿರಾಜಪೇಟೆಯ ಮಗ್ಗುಲ ಗ್ರಾಮದ ಶನೀಶ್ವರ ದೇವಸ್ಥಾನದ ಅರ್ಚಕರಾದ ಸೂರ್ಯ ಪ್ರಸಾದ್‌ರವರು ರಾತ್ರಿ  9:00 ಗಂಟೆಗೆ ರಾತ್ರಿ ಪೂಜೆ ಮುಗಿಸಿ ದೇವಸ್ಥಾನ ಮತ್ತು ಗೇಟಿಗೆ ಬೀಗ ಹಾಕಿಕೊಂಡು ಹೋಗಿದ್ದು ಮಾರನೇ ದಿನ ದಿನಾಂಕ 01/01/2016ರಂದು ದೇವಸ್ಥಾನಕ್ಕೆ ಬಂದು ನೋಡುವಾಗ ಯಾರೋ ಅಪರಿಚಿತ ಕಳ್ಳರು ದೇವಸ್ಥಾನದ ಗೇಟಿನ ಬೀಗ ಮುರಿದು ಒಳಗೆ ಪ್ರವೇಶಿಸಿ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು ರೂ.520/- ಕಾಣಿಕೆ ಹಣವನ್ನು ಕಳವು ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, November 1, 2016

ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಸೂಚನೆ.
 
                         ಕೊಡಗು ಜಿಲ್ಲೆಯಲ್ಲಿ ಯಾವುದೇ ಸಂಭವನೀಯ ಅಪರಾಧಗಳು ಹಾಗೂ  ಅಹಿತಕರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಇಂದಿನಿಂದಲೇ ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ರೀತಿಯ ಹೋಂ ಸ್ಟೇಗಳು, ರೆಸಾರ್ಟ್ ಗಳು, ಲಾಡ್ಜ್ ಗಳಿಗೆ ಬರು ಎಲ್ಲಾ ಗ್ರಾಹಕರ ಪೂರ್ಣ ವಿವರಗಳನ್ನು ಒಂದು ನೋಂದಣಿ ಪುಸ್ತಕವನ್ನು ತೆರೆದು ಅದರಲ್ಲಿ ಆಯಾ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಇಂದಿನಿಂದಲೇ ಕೊಡಗು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ರೀತಿಯ ಹೋಂ ಸ್ಟೇಗಳು, ರೆಸಾರ್ಟ್ ಗಳು, ಲಾಡ್ಜ್ ಗಳ ಮಾಲೀಕರು ಯಾ ನಿರ್ವಾಹಕರುಗಳು ನಿರ್ವಹಿಸುವುದು. ಅಲ್ಲದೆ ಗ್ರಾಹಕರಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಅಂದರೆ ಗುರುತಿನ ಚೀಟಿ, ಭಾವಚಿತ್ರ, ಮೊಬೈಲ್ ಸಂಖ್ಯೆ ಮುಂತಾದವುಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವುದು ಹಾಗೂ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ಈ ಮಾಹಿತಿಗಳನ್ನು ನೀಡುವುದು. ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವು ಅತ್ಯಂತ ಅವಶ್ಯವಾಗಿದ್ದು ಸಂಬಂಧಿಸಿದ ಸಂಸ್ಥೆಗಳ ಮಾಲೀಕರು ಅಥವಾ ನಿರ್ವಾಹಕರು ಈ ಬಗ್ಗೆ ಯಾವುದೇ ನಿರ್ಲಕ್ಷ್ಯತನವನ್ನು ತೋರಬಾರದೆಂದೂ ಈ ಸೂಚನೆಗಳನ್ನು ಪಾಲಿಸದ ಹೋಂ ಸ್ಟೇಗಳು, ರೆಸಾರ್ಟ್ ಗಳು, ಲಾಡ್ಜ್ ಗಳ ಮಾಲೀಕರು ಅಥವಾ ವ್ಯವಸ್ಥಾಪಕರುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ 
              
                        ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಚಂದ್ರರವರು ದಿನಾಂಕ 31-10-2016 ರಂದು ಮನೆಯಲ್ಲಿ ತನ್ನ ಮಗ ಧನುಕುಮಾರ್ ರವರೊಂದಿಗೆ ವಾರಕ್ಕೆ 500 ರೂ ಕೊಡುವಂತೆ ಕೇಳುತ್ತಿದ್ದಾಗ ಅಲ್ಲೇ ಇದ್ದ ಪುಟ್ಟುಸ್ವಾಮಿಯವರು ಏಕಾ ಏಕಿ ಚಂದ್ರರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ಚಂದ್ರರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವಾಹನ ಅಪಘಾತ

                         ದಿನಾಂಕ 30-10-2016 ರಂದು ಸಂಜೆ ಸಂಪಾಜೆ ಗ್ರಾಮದ ನಿಡ್ಯಮಲೆ ಹೊನ್ನಪ್ಪ ಎಂಬುವವರು ಅವರ ಬಾಪ್ತು ಜೀಪನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಮಗುಚಿ ಬೀಳಿಸಿದ ಪರಿಣಾಮ ಜೀಪು ಚಾಲಕರಾದ ಹೊನ್ನಪ್ಪ ಮತ್ತು ಅವರ ಮಗ ಗಗನ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಾಗಿದ್ದು ತೀರ್ಥ ಪ್ರಸಾದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.  

ವ್ಯಕ್ತಿಯ ಮೇಲೆ ಹಲ್ಲೆ

                         ದಿನಾಂಕ 31-10-2016 ತಿತಿಮತಿಯ ನಿವಾಸಿ ಸುಗುಣರವರು ತಿತಿಮತಿ ನಗರದಲ್ಲಿರುವಾಗ ಅದೇ ಗ್ರಾಮದ ವಾಸಿ ಸುಜನ್ ರವರು ತನ್ನ ಮೋಟಾರು ಸೈಕಲಿನಲ್ಲಿ ಬಂದು ಮಾತನಾಡಬೇಕೆಂದು ಹೇಳಿ ಬೈಕಿನಲ್ಲಿ ಕರೆದುಕೊಂಡು ಪಾಲಿಬೆಟ್ಟ ರಸ್ತೆಯ ಡಿಪೋದ ಹತ್ತಿರ ಕರೆದುಕೊಂಡು ಹೋಗಿ ಟಿಂಬರ್ ಕೆಲಸದ ವಿಚಾರವಾಗಿ ಜಗಳ ತೆಗೆದು ಮೋಟಾರು ಸೈಕಲಿನಲ್ಲಿಟ್ಟಿದ್ದ ಕಬ್ಬಿಣದ ರಾಡಿನಿಂದ ಸುಗುಣರವರ ಮೇಲೆ ತೀವೃ ತರಹದ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಗುಣರವರು ನೀಡಿದ ದೂರಿಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ವ್ಯಕ್ತಿಯ ಆತ್ಮ ಹತ್ಯೆ

                         ವ್ಯಕ್ತಿಯೊಬ್ಬ ಬಾವಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಕಾನೂರಿನ ನಿಡುಗುಂಬ ಗ್ರಾಮದಲ್ಲಿ ನಡೆದಿದೆ. ನಿಡುಗುಂಬ ಗ್ರಾಮದ ನಿವಾಸಿ 35 ವರ್ಷ ಪ್ರಾಯದ ದಿನೇಶ ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 30-10-2016 ರಂದು ಬಾವಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಚಂದ್ರಶೇಖರರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಮೋಟಾರು ಸೈಕಲಿಗೆ ಕಾರು ಡಿಕ್ಕಿ

                        ವಿರಾಜಪೇಟೆಯ ಸಮದ್ ರವರಲ್ಲಿ ಕೆಲಸ ಮಾಡಿಕೊಂಡಿರುವ ಬಿಹಾರ ರಾಜ್ಯದವರಾದ ಜಹಗೀರ್ ಮತ್ತು ಮುರತಜ ಎಂಬುವವರು ದಿನಾಂಕ 31-10-2016 ರಂದು ಮೂರ್ನಾಡುವಿನಿಂದ ವಿರಾಜಪೇಟೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಚಿಕ್ಕಪೇಟೆಯ ಕೊಡವ ಸಮಾಜ ಜಂಕ್ಷನ್ ಬಳಿ ಹಿಂದಿನಿಂದ ಬಂದ ಕೆಎ-12-ಎನ್-2606 ರ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಜಹಗೀರ್ ಮತ್ತು ಮುರತಜ ರವರಿಗೆ ಗಾಯಗಳಾಗಿದ್ದು, ಕಾರನ್ನು ಅದರ ಚಾಲಕ ನಿಲ್ಲಿಸದೇ ಹೊರಟು ಹೋಗಿರುವುದಾಗಿ ಸಮದ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.