Sunday, November 27, 2016

  ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿದ್ದ ಲಾರಿ ವಶಕ್ಕೆ

          ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಲಕ್ಷ್ಮಣ ತೀರ್ಥ ನದಿಯಿಂದ ದಿನಾಂಕ 25-11-2016 ರಂದು ಮರಳು ಸಂಗ್ರಹಿಸಿ ಮಾರಾಟ ಮಾಡಲು ಕೆಎ-12-ಎ-1978 ರ ಟಿಪ್ಪರ್ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದುದ್ದನ್ನು ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕರಾದ ಜಯರಾಮ್ ರವರು ಪತ್ತೆಹಚ್ಚಿ ಆರೋಪಿಗಳಾದ ಚಾಲಕ ಟಿ ಎಂ ಸುಬ್ರಮಣಿ ಮತ್ತು ಲಾರಿ ಮಾಲಿಕನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ನಹತ್ಯೆ

          ವಿರಾಜಪೇಟೆ ತಾಲೂಕಿನ ಶ್ರೀಮಂಗಲದ ಕುರ್ಚಿ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ದಿನಾಂಕ 26-11-2016 ರಂದು ಅಜ್ಜಮಾಡ ಮೋಹನ್ ರವರು ತೋಟದಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡಿಕೊಂಡಿರುವಾಗ್ಗೆ ಕೆಟ್ಟ ವಾಸನೆ ಬರುತ್ತಿದ್ದು ಹೋಗಿ ನೋಡಲಾಗಿ ನೇಣು ಬಿಗಿದುಕೊಂಡು ಯಾರೋ ಆತ್ಮ ಹತ್ಯೆ ಮಾಡಿಕೊಂಡಿದ್ದು ದೇಹವು ಕೊಳೆತು ಹೋಗಿದ್ದು, ಈ ಬಗ್ಗೆ ಅಜ್ಜಮಾಡ ಮೋಹನ್ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

  ಅಕ್ರಮ ಮರಳು ಸಾಗಾಟ ಲಾರಿಗಳ ವಶ

           ದಿನಾಂಕ 26-11-2016 ರಂದು ಕುಶಾಲನಗರ ಉಪ ವಿಭಾಗದ ಉಪಾಧೀಕ್ಷಕರಾದ ಸಂಪತ್ ಕುಮಾರ್ ರವರು ರಾತ್ರಿ ಗಸ್ತು ಮಾಡುತ್ತಿರುವಾಗ ಹೆಬ್ಬಾಲೆ ಗ್ರಾಮದ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಕೆಎ-12-ಎ-6715 ಮತ್ತು ಕೆಎ-12-ಬಿ-1065 ರ ಲಾರಿಯನ್ನು ತಡೆದು ಚೆಕ್ ಮಾಡಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸದರಿ 2 ಲಾರಿಗಳನ್ನು ಭದ್ರಿಕೆ ಮಾಡುತ್ತಿದ್ದ ಕೆಎ-12-ಎನ್-7520 ರ ಮಾರುತಿ ಸ್ವಿಪ್ಟ್ ಕಾರನ್ನು ಸಹಾ ವಶಕ್ಕೆ ಪಡೆದುಕೊಂಡು ಲಾರಿ ಚಾಲಕರಾದ ಮಂಜುನಾಥ, ಸಂಗಮೇಶ್ ಮತ್ತು ಕಾರಿನ ಚಾಲಕ ಜಗದೀಶ್ ರವರ ಮೇಲೆ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಮೋಟಾರು ಸೈಕಲ್ ಗೆ ಟ್ರ್ಯಾಕ್ಟರ್ ಡಿಕ್ಕಿ

          ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮುಳ್ಳೂರು ಕಾಲೋನಿಯ ರಸ್ತೆಯಲ್ಲಿ ದಿನಾಂಕ 24-11-2016 ರಂದು ಕೆಎ-12-ಟಿ-4971 ರ ಟ್ರ್ಯಾಕ್ಟರನ್ನು ಅದರ ಚಾಲಕ ವಿಜಯ ಕುಮಾರ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಪ್ರಮೋದ್ ರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪ್ರಮೋದ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ದಿನಾಂಕ 26-11-2016 ರಂದು ಮೋಹನರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಆರೋಪಿಗಳ ಬಂಧನ
          ದಿನಾಂಕ 26-11-2016 ರಂದು ಶನಿವಾರಸಂತೆಯ ದುಂಡಳ್ಳಿ ಗ್ರಾಮದ ಪೈಸಾರಿ ಖಾಲಿ ಜಾಗದಲ್ಲಿ ಇಸ್ಪೀಟು ಎಲೆಗಳಿಂದ ಹಣವನ್ನು ಪಣವಾಗಿ ಇಟ್ಟುಕೊಂಡು ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಶನಿವಾರಸಂತೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮರಿಸ್ವಾಮಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿಗಳಾದ ಕೆ ಟಿ ಜೋಸೆಫ್, ನಿಂಗರಾಜು, ಸುರೇಶ್ ಮತ್ತು ಹನುಮಂತಶೆಟ್ಟಿರವರನ್ನು ಹಾಗೂ  ಪಣವಾಗಿ ಕಟ್ಟಿದ್ದ 700 ರೂಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

ಮೋಟಾರು ಸೈಕಲಿಗೆ ಗೂಡ್ಸ್ ಆಟೋ ಡಿಕ್ಕಿ

        ದಿನಾಂಕ 25-11-2016 ರಂದು ಕಂಟ್ರಾಕ್ಟರ್ ಪೌಲೋಸ್ ಜೊತೆ ಅವರ ಬಾಪ್ತು ಮೋಟಾರು ಸೈಕಲಿನಲ್ಲಿ ಕಾರ್ಮಾಡುವಿನಲ್ಲಿ ವಾಸವಿರುವ ಮಹದೇವಾಚಾರ್ ರವರು ಹಿಂಬದಿಯಲ್ಲಿ ಕುಳಿತುಕೊಂಡು ಕಾರ್ಮಾಡುವಿಗೆ ವಿರಾಜಪೇಟೆಯಿಂದ ಹೋಗುತ್ತಿರುವಾಗ ಮಗ್ಗುಲ ಗ್ರಾಮದ ಗ್ಯಾಸ್ ಗೋಡಾನ್ ಹತ್ತಿರ ತಲುಪುವಾಗ ಮುಂದೆ ಹೋಗುತ್ತಿದ್ದ ಗೂಡ್ಸ್ ಆಟೋ ಚಾಲಕ ಶಿಯಾಬ್ ಎಂಬುವವರು ಯಾವುದೇ ಸೂಚನೆ ನೀಡದೇ ಬಲಕ್ಕೆ ತಿರುಗಿಸಿದ ಪರಿಣಾಮ ಮೋಟಾರು ಸೈಕಲಿಗೆ ಡಿಕ್ಕಿಯಾಗಿ ಮೋಟಾರು ಸೈಕಲಿನಲ್ಲಿದ್ದ ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಮಹದೇವಾಚಾರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಆಟೋ ರಿಕ್ಷಾಕ್ಕೆ ಮ್ಯಾಜಿಕ್ ವಾಹನ ಡಿಕ್ಕಿ

         ಆಟೋ ರಿಕ್ಷಾಕ್ಕೆ ಸೂಪರ್ ಮ್ಯಾಜಿಕ್ ವಾಹನವು ಡಿಕ್ಕಿ ಪಡಿಸಿ ನಿಲ್ಲಿಸದೇ ಹೊರಟು ಹೋದ ಪ್ರಕರಣ ವಿರಾಜಪೇಟೆ ತಾಲೂಕಿನ ಕುಕ್ಲೂರುವಿನಲ್ಲಿ ನಡೆದಿದೆ. ದಿನಾಂಕ 26-11-2016 ರಂದು ಅರಮೇರಿ ಗ್ರಾಮದ ಕೋಟೆರ ಸುಬ್ರಮಣಿ ಎಂಬುವವರು ಜಯಂತಿ ಎಂಬುವವರನ್ನು ಕೂರಿಸಿಕೊಂಡು ಬಾಡಿಗೆಗೆ ಕದನೂರು ಗ್ರಾಮಕ್ಕೆ ಹೋಗುತ್ತಿರುವಾಗ ಕುಕ್ಲೂರು ಗ್ರಾಮದ ಮುತ್ತಪ್ಪ ದೇವಸ್ತಾನದ ಹತ್ತಿರ ತಲುಪುವಾಗ ಹಿಂದುಗಡೆಯಿಂದ ಬಂದ ಸೂಪರ್ ಮ್ಯಾಜಿಕ್ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ್ದು, ಆಟೋದಲ್ಲಿದ್ದ ಜಯಂತಿಯವರಿಗೆ ಗಾಯಗಳಾಗಿದ್ದು, ಆಟೋ ಜಖಂಗೊಂಡಿರುವುದಾಗಿ ಮುತ್ತಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಸ್ತಿ ವಿಚಾರದಲ್ಲಿ ಹಲ್ಲೆ

         ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದ ಮಲ್ಲಂಗಡ ಚಿಟ್ಟಿಯಪ್ಪ ಮತ್ತು ವಿಶ್ವನಾಥರವರು ಅಣ್ಣತಮ್ಮಂದಿಯರಾಗಿದ್ದು ಇಬ್ಬರಿಗೂ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಇದ್ದು, ದಿನಾಂಕ ದಿನಾಂಕ 7-9-2016 ರಂದು ಚಿಟ್ಟಿಯಪ್ಪರವರು ಮನೆಯಲ್ಲಿರುವಾಗ್ಗೆ ಅಲ್ಲಿಗೆ ವಿಶ್ವನಾಥ ಮತ್ತು ಆತನ ಹೆಂಡತಿ ರೋಹಿಣಿಯವರು ಬಂದು ನೀನು ಇಲ್ಲಿ ಮನೆಯಲ್ಲಿ ಇರಕೂಡದು ಎಂದು ಹೇಳಿ ಏಕಾ ಏಕಿ ಹಲ್ಲೆ ನಡೆಸಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಿನಾಂಕ 26-11-2016 ರಂದು ಚಿಟ್ಟಿಯಪ್ಪರವರು ನೀಡಿದ ಪುಕಾರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.