Monday, November 28, 2016

ಪರಸ್ಪರ ಕಾರು ಡಿಕ್ಕಿ
                        ದಿನಾಂಕ 27/11/2016ರಂದು ಹಾಸನ ಜಿಲ್ಲೆಯ ಶಾಂತಿನಗರ ನಿವಾಸಿ ಬಿ.ಕೆ.ವಿಶ್ವನಾಥ ಎಂಬವರು ಅವರ ಕಾರು ಸಂಖ್ಯೆ ಕೆಎ-13-5214ರಲ್ಲಿ ಕುಟುಂಬದೊಂದಿಗೆ ಭಾಗಮಂಡಲಕ್ಕೆ ಪ್ರವಾಸ ಹೋಗುತ್ತಿರುವಾಘ ಮಂಗಳೂರು ಎದುರುಗಡೆಯಿಂದ ಕೆಎ-02-ಎಂಸಿ-5007ರ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕ ಪ್ರೇಂ ಕುಮಾರ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿಶ್ವನಾಥರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ನಿಂಗಮ್ಮ ಎಂಬವರಿಗೆ ಗಾಯಗಳಾಗಿದ್ದು ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಕಲಿ ದಾಖಲೆ, ಮೋಸ
                    ಚೇರಂಬಾಣೆ ಬಳಿಯ  ನಿವಾಸಿಗಳಾದ ಪೊನ್ನಪ್ಪ ಪಿ.ಎಂ., ಅಭಿಶೇಖ ಎಂಬವರುಗಳು ಸೇರಿಕೊಂಡು ಚೇರಂಬಾಣೆಯ ನಿವೃತ್ತ ಗ್ರಾಮ ಲೆಕ್ಕಿಗ ರಾಧಾಕೃಷ್ಣ ಎಂಬವರ ಸಹಕಾರದೊಂದಿಗೆ ಬೆಂಗಳೂರು ನಿವಾಸಿಯಾಗಿರುವ ಪ್ರಾರ್ಥನಾ ಎಂಬವರ ಸಹಿಯನ್ನು ನಕಲು ಮಾಡಿ  ಪ್ರಾರ್ಥನಾರವರ ತಂದೆಯವರ ಡಿಬಿಬಿಎಲ್‌ ಕೋವಿ ಮತ್ತು .22 ರೈಫಲ್‌ಗಳನ್ನು ಪೊನ್ನಪ್ಪ ಮತ್ತು ಅಭಿಶೇಖ್‌ರವರ ಹೆಸರಿಗೆ ಮಾಡಿಕೊಂಡಿರುವುದಾಗಿ  ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ತಡೆದು ಹಣ ದರೋಡೆ
                    ದಿನಾಂಕ 26/11/2016ರಂದು ತಡ ರಾತ್ರಿ ವೇಳೆ ಕೇರಳದ ಕೋಯಿಕ್ಕೋಡ್ ನಿವಾಸಿ  ನೌಷಾದ್‌ ಎಂಬವರು ಅವರ ಸ್ನೇಹಿತ ಮಹಮದ್‌ ಎಂಬವರೊಂದಿಗೆ ಅವರ ಟೊಯೋಟಾ ಕೊರೊಲಾ ಆಲ್ಟಿಸ್ ಕಾರು ಸಂಖ್ಯೆ ಕೆಎಲ್‌-11-ಎಜಿ-5000 ದಲ್ಲಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೋಯಿಕ್ಕೋಡಿಗೆ ಹೋಗುತ್ತಿರುವಾಗ ಹುದಿಕೇರಿ ಬಳಿ ಎರಡು ಇನ್ನೋವಾ ಕಾರುಗಳಲ್ಲಿ ಸುಮಾರು 10 ರಿಂದ 11 ಮಂದಿ ಬಂದು ನೌಷಾದ್‌ರವರ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜನ್ನು ಒಡೆದು ಕಾರಿನಲ್ಲಿದ್ದ ನೌಷಾದ್‌ರವರನ್ನು ಎಳೆದು ಹೊರ ಹಾಕಿ ಕಾರಿನಲ್ಲಿದ್ದ ಮಹಮದ್‌ರವರ ಸಮೇತ ಕಾರನ್ನು ತೆಗೆದುಕೊಂಡು ಹೋಗಿರುವುದಾಗಿದೆ. ನಂತರ ನೌಷಾದ್‌ರವರ ಆ ದಾರಿಯಲ್ಲಿ ಬರುತ್ತಿದ್ದ ಕೇರಳದ ಯಾವುದೋ ವಾಹನದಲ್ಲಿ ಠಾಣೆಗೆ ಬರುತ್ತಿರುವಾಗ ಹುದಿಕೇರಿಯಿಂದ ಮೂರು ಕಿ.ಮೀ ದೂರದಲ್ಲಿ ರಸ್ತೆಯ ಬದಿ ಅವರ ಕಾರನ್ನು ನಿಲ್ಲಿಸಿದ್ದು ಕಂಡು ಬಂದಿದ್ದು ಹೋಗಿ ನೋಡಿದಾಗ ಮಹಮದ್‌ರವರು ಕಾರಿನಲ್ಲಿದ್ದು ಅವರನ್ನು ವಿಚಾರಿಸಿದಾಗ ದುಷ್ಕರ್ಮಿಗಳು ಮಹಮದ್‌ರವರನ್ನು ಹಣಕ್ಕಾಗಿ ಒತ್ತಾಯಿಸಿ ಹಣ ಸಿಗದಿದ್ದಾಗ ಮಹಮದ್‌ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ ರೂ 15,000 ಹಣ ಮತ್ತು ಅವರ ಮೊಬೈಲನ್ನು ಕಿತ್ತುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಬಸ್‌ ಡಿಕ್ಕಿ
                       ದಿನಾಂಕ 26/11/2016ರಂದು ಟಿ.ಶೆಟ್ಟಿಗೇರಿ ನಿವಾಸಿ ಮಂದಮಾಡ ತೇಜಪ್ಪ ಎಂಬವರು ನಾಲ್ಕೇರಿಯಲ್ಲಿ  ಅಂಗಡಿಯಿಂದ ಕೋಳಿ ಮಾಂಸ ತೆಗೆದುಕೊಂಡು ಅವರ ಸ್ಕೂಟರ್‌  ಸಂಖ್ಯೆ  ಕೆಎ-19-ಜೆ-5908ರಲ್ಲಿ  ಮನೆಗೆ ಹೋಗುತ್ತಿರುವಾಗ ಕುಟ್ಟ ಕಡೆಯಿಂದ  ಕೆಎ-10-8818ರ ಖಾಸಗಿ ಬಸ್ಸನ್ನು ಅದರ ಚಾಲಕ ಜಬೀವುಲ್ಲಾ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತೇಜಪ್ಪನವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗುಮಾನಿ ವ್ಯಕ್ತಿಯ ಬಂಧನ
                       ದಿನಾಂಕ 27/11/2016ರಸಂಜೆ  ವೇಳೆ ಸುಂಟಿಕೊಪ್ಪ ಠಾಣೆ ಸಿಬ್ಬಂದಿ ಕೆ.ಪಿ.ವಿಜಯ ಕುಮಾರ್‌ ಮತ್ತು ಸಿ.ಎಂ.ಉದಯ ಎಂಬವರು ನಗರ ಗಸ್ತು ಮಾಡುತ್ತಿರುವಾಗ ಸುಂಟಿಕೊಪ್ಪದ ಪೂಜಾ ಬಾರ್‌ ಬಳಿ ಬೆಂಗಳೂರು ಜಿಲ್ಲೆಯ ಆನೆಕಲ್ ತಾಲೂಕಿನ ನಿವಾಸಿ ಬಿ.ಸುರೇಶ್ ಎಂಬಾತನು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಆತನು ಅವನ ಇರುವಿಕೆ ಬಗ್ಗೆ ಸೂಕ್ತ ಕಾರಣ ನೀಡದೆ ಇದ್ದ ಕಾರಣ ಆತನು ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ 
                          ದಿನಾಂಕ 27/11/2016ರಂದು ಶನಿವಾರಸಂತೆ ಬಳಿಯ ನಂದಿಗುಂದ ಗ್ರಾಮದ ನಿವಾಸಿ ಪಂಚಾಯಿತಿ ವತಿಯಿಂದ ಗ್ರಾಮದ ಮನೆಗಳಿಗೆ ನೀರು ಬಿಡುವ ಕೆಲಸ ಮಾಡಿಕೊಂಡಿರುವ ಸಣ್ಣಪ್ಪ ಎಂಬವರು ಶಾಂತವೇರಿ ಗ್ರಾಮಕ್ಕೆ ಹೋಗುತ್ತಿರುವಾಗ ದಾರಿಯಲ್ಲಿ ಅಂಗಡಿಯ ಬಳಿ ಸಿಕ್ಕಿದ ಆನಂದ ಎಂಬವರನ್ನು ಕುರಿತು ಆನಂದರವರು ಸಣ್ಣಯ್ಯನವರ ಮನೆಯ ಅಂಗಳಕ್ಕೆ ಕೊಳಚೆ ನೀರನ್ನು ಬಿಟ್ಟ ಬಗ್ಗೆ ಕೇಳಿದಾಗ ಆನಂದ, ಉಮೇಶ ಮತ್ತು ದಾಸಯ್ಯ ಎಂಬವರು ಸೇರಿಕೊಂಡು ಸಣ್ಣಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಕೊಲೆ ಯತ್ನ
                       ದಿನಾಂಕ 27/11/2016ರಂದು ಹಾಕತ್ತೂರು ನಿವಾಸಿ ಭವ್ಯ ಎಂಬವರು ಅವರ ಮನೆಯ ಬಾವಿಯಿಂದ ನೀರು ಸೇದುತ್ತಿರುವಾಗ ಆಕೆಯ ಪತಿ ಲಿತೀಶ್‌ ಎಂಬವರು ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯನ್ನು ಬಾವಿಗೆ ತಳ್ಳಿದ್ದು, ಭವ್ಯರವರ ಕಿರುಚಾಟ ಕೇಳಿದ ನೆರೆಮನೆಯ ಆಶಾ ಎಂಬವರು ಬಂದು ಭವ್ಯರವರನ್ನು ವಾವಿಯಿಂದ ಎತ್ತಿ ಕಾಪಾಡಿರುವುದಾಗಿ ಭವ್ಯರವರು ದೂರು ನೀಡಿರುವುದಾಗಿದೆ. ಲಿತೀಶ್‌ ಹಾಗೂ ಭವ್ಯರವರು ಸುಮಾರು 4 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ದಾಂಪತ್ಯದಲ್ಲಿ ಹೊಂದಾಣಿಕೆ ಕಂಡು ಬಾರದ ಕಾರಣ ಲಿತೀಶ್‌ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದು, ನಂತರ ಎರಡೂ ಕಡೆಯ ವಕೀಲರ ಮದ್ಯಸ್ಥಿಕೆಯಿಂದ ರಾಜಿ ತೀರ್ಮಾನವಾಗಿ ಜುಲೈ ತಿಂಗಳಿನಿಂದ ಭವ್ಯರವರು ಪತಿಯೊಂದಿಗೆ ವಾಸಿಸುತ್ತಿದ್ದರೆನ್ನಲಾಗಿದೆ. ಪ್ರಕರಣ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.