Wednesday, November 30, 2016

ವಿಷ ಸೇವಿಸಿ ಆತ್ಮಹತ್ಯೆ 
                       ಸೋಮವಾರಪೇಟೆ ಬಳಿಯ ಅಬ್ಬೂರುಕಟ್ಟೆ ನಿವಾಸಿ ರಾಜು ಎಂಬವರು ದಿನಾಂಕ ದಿನಾಂಕ 28/11/2016ರಂದು ಮನೆಯ ಹಿಂದೆ ಕೊಟ್ಟಿಗೆಯಲ್ಲಿಟ್ಟಿದ್ದ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದು ಚಿಕಿತ್ಸೆಯ ವೇಳೆಯಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತರಾಗಿರುತ್ತಾರೆ. ಮೃತ ರಾಜುರವರು ವಿಪರೀತ ಮದ್ಯವ್ಯಸನಿಯಾಗಿದ್ದು ದಿನವೂ ಮದ್ಯಪಾನ ಮಾಡಿ ಪತ್ನಿ ಶಿವಮ್ಮರವರೊಂದಿಗೆ ಜಗಳವಾಡುತ್ತಿದ್ದು ಇದೇ ವಿಷಯಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ ಎಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಕಳವು ಪ್ರಕರಣ
                            ದಿನಾಂಕ 28/11/2016ರಂದು ಕುಶಾಲನಗರದ 4ನೇ ವಿಭಾಗದ ನಿವಾಸಿ ಆಲ್ಬರ್ಟ್‌ ಡಿ'ತೆಸ್ಸಾ ಎಂಬವರು ಕುಶಾಲನಗರದ ಗುಂಡೂರಾವ್‌ ಬಡಾವಣೆಯಲ್ಲಿ ನಡೆಯುತ್ತಿರುವ ಜಾತ್ರೆಯನ್ನು ವೀಕ್ಷಿಸಲು ಓಮಿನಿ ವ್ಯಾನು ಸಂಖ್ಯೆ ಕೆಎ-12-ಎನ್-1105ರಲ್ಲಿ ಹೋಗಿ ಜಾತ್ರಾ ಮೈದಾನದಲ್ಲಿ ಕಾರು ನಿಲ್ಲಿಸಿ ಜಾತ್ರೆ ನೋಡಲು ಹೋಗಿದ್ದು, ವಾಪಾಸು ಬಂದಾಗ ಕಾರನ್ನು ಯಾರೋ ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್‌ ಡಿಕ್ಕಿ, ಪಾದಚಾರಿ ಸಾವು
                               ದಿನಾಂಕ 29/11/2016ರ ಸಂಜೆ ವೇಳೆ ಕುಶಾಲನಗರ ಬಳಿಯ ಮುಳ್ಳುಸೋಗೆ ನಿವಾಸಿ ಚೆಲುವರಾಜು ಎಂಬವರು ಅವರ ಮೈದುನ ಮಂಜುನಾಥ ಹೆಗಡೆ ಎಂಬವರೊಂದಿಗೆ ಕುಶಾಲನಗರದ ಐಬಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಕೆಎ-10-ಎಫ್‌-0244ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಪರಮೇಶ್ವರ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೆಲುವರಾಜುರವರ ಜೊತರೆ ನಡೆಯುತ್ತಿದ್ದ ಮಂಜುನಾಥರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರ ಗಾಯಗಳಾದ ಮಂಜುನಾಥ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬಸ್‌ ಅವಘಡ
                                ದಿನಾಂಕ 26/11/2016ರಂದು ಕೇರಳ ರಾಜ್ಯದ  ಕೋಯಿಕ್ಕೋಡ್‌ ಡಿಪೋಗೆ ಸೇರಿದ ಕೇರಳ ಸರ್ಕಾರಿ ಬಸ್‌ ಸಂಖ್ಯೆ ಕೆಎಲ್‌-15-ಎ-1692ನ್ನು ಬಸ್ಸಿನ ಚಾಲಕ ಸುರೇಶ್‌ ಎಂಬವರು ಚಾಲಿಸಿಕೊಂಡು ಕೋಯಿಕ್ಕೋಡಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಕುಟ್ಟ ಬಳಿಯ ಹಳೆಯ ಚೆಕ್‌ಪೋಸ್ಟ್‌ ಬಳಿ ದಾರಿಗೆ ಅಡ್ಡ ಬಂದ ಜಿಂಕೆಗಳನ್ನು ತಪ್ಪಿಸುವ ಸಲುವಾಗಿ ಬಸ್ಸನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿದ ಬಸ್‌ ಹಳೆಯ ಚೆಕ್‌ ಪೋಸ್ಟ್‌ನ ಸಿಮೆಂಟ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿಯ ಹಣ ನೀಡದೆ ಮೋಸ
                        ಕೇರಳ ರಾಜ್ಯದ ವೈನಾಡು ಜಿಲ್ಲೆಯ ಕಲ್ಪೆಟ್ಟ ನಿವಾಸಿ ಅಬ್ದುಲ್‌ ಅಜೀಜ್‌ ಎಂಬವರು ಹಾತೂರು ಗ್ರಾಮದಲ್ಲಿ ಹಾತೂರು ನಿವಾಸಿ ಶಿವಪ್ಪ ಎಂಬವರ ಕಟ್ಟಡವೊಂದನ್ನು ಬಾಡಿಗೆಗೆ ಪಡೆದು ಅಲ್ಲಿ ಕಾಫಿ ಕ್ಯೂರಿಂಗ್‌ ಕೆಲಸ ನಡೆಸುತ್ತಿದ್ದರೆನ್ನಲಾಗಿದೆ. ಅಲ್ಲಿ ಅಬ್ದುಲ್‌ ಅಜೀಜ್‌ರವರು ಗ್ರಾಮಸ್ಥರಿಂದ ಖರೀದಿಸಿದ ಸುಮಾರು 1750 ಚೀಲ ಕಾಫಿಯನ್ನು ಶೇಖರಿಸಿ ಇಟ್ಟಿದ್ದು ಮಾರಾಟ ಮಾಡಿದ ಗ್ರಾಮಸ್ಥರಿಗೆ ಹಣ ನೀಡದೆ ಹಾಗೂ ಶಿವಪ್ಪರವರ ಅಕ್ಕ ತುಳಸಿ ಎಂಬವರಿಂದ ವ್ಯಾಪಾರಕ್ಕಾಗಿ ಸುಮಾರು 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಪಡೆದು ಹಿಂತಿರುಗಿಸದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಫಘಾತ
                       ಬೆಂಗಳೂರು ನಿವಾಸಿ ಮಂಜುನಾಥ ರೆಡ್ಡಿ ಎಂಬವರು ದಿನಾಂಕ 21/11/2016ರಂದು ಅವರ ಮಾರುತಿ ಜಿಪ್ಸಿ ವಾಹನ ಸಂಖ್ಯೆ ಕೆಎ-51-ಎಂಜೆ-7689ರಲ್ಲಿ ಅವರ ಸ್ನೇಹಿತ ಮಂಜುನಾಥ ಎಂಬವರೊಂದಿಗೆ ವಿರಾಜಪೇಟೆಯ ಬಾಡಗರಕೇರಿ ನಿವಾಸಿ ಎ.ಜಿ.ನಾಚಪ್ಪರವರನ್ನು ಚಾಲಕರಾಗಿ ನೇಮಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿ ದಿನಾಂಕ 22/11/2016ರಂದು ಮರಳಿ ಬೆಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ಬಳಿ ಚಾಲಕ ನಾಚಪ್ಪರವರು ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ವಾಹನ ಮಗುಚಿಕೊಂಡು ವಾಹನದಲ್ಲಿದ್ದ ಮಂಜುನಾಥ ಮತ್ತು ಚಾಲಕ ನಾಚಪ್ಪರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಟ್ಯಾಂಕರ್‌ ಅಫಘಾತ
                          ದಿನಾಂಕ 28/11/2016ರಂದು ಹಾಸನ ನಿವಾಸಿ ಶಕುನಿ ಗೌಡ ಎಂಬವರು ಚಾಲಕರಾಗಿರುವ ಕೆಎ13-ಸಿ-682 ರ ಪೆಟ್ರೋಲ್‌ ಟ್ಯಾಂಕರ್‌ ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ನ್ನು ವಿರಾಜಪೇಟೆಗರ ಸರಬರಾಜು ಮಾಡಿ ನಂತರ ಚೆಟ್ಟಳ್ಳಿ ಮಾರ್ಗವಾಗಿ ಹಾಸನಕ್ಕೆ ಹೋಗುತ್ತಿರುವಾಗ ಚೆಟ್ಟಳ್ಳಿ ಬಳಿ ಎದುರಿನಿಂದ ಬರುತ್ತಿದ್ದ ಒಂದು ಕಾರಿಗೆ ದಾರಿ ಬಿಡುವ ಸಮಯದಲ್ಲಿ ಚಾಲಕ ಶಕುನಿ ಗೌಡರವರು ಅಜಾಗರೂಕತೆಯಿಂದ ಟ್ಯಾಂಕರನ್ನು ಚಾಲಿಸಿದ ಪರಿಣಾಮ ಟ್ಯಾಂಕರ್‌ ರಸ್ತೆಯಲ್ಲಿ ಮಗುಚಿ ಬಿದ್ದು ಶಕುನಿ ಗೌಡರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ 
                     ದಿನಾಂಕ 29/11/2016ರಂದು ಮಡಿಕೇರಿ ನಗರದ ಶಾಸ್ತ್ರಿನಗರ ನಿವಾಸಿ ಸುಪ್ರೀತಾ ಎಂಬವರು ಮಡಿಕೇರಿಯ ಸಂತ ಮೈಕಲರ ಶಾಲೆಯ ವಾರ್ಷಿಕೋತ್ಸವಕ್ಕೆ ಹೋಗಿ ವಾಪಸು ಮನೆಗೆ ಬಂದಾಗ ಮನೆಯ ಅಡುಗೆ ಕೋಣೆಯಲ್ಲಿ ಅವರ ಪತಿ ಲವ ಎಂಬವರು ಅಡುಗೆ ಕೋಣೆಯ ಮಾಡಿಗೆ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರುವುದು ಕಂಡು ಬಂದಿದ್ದು, ಲವರವರು ವಿಪರೀತ ಕೈಸಾಲಗಳನ್ನು ಮಾಡಿಕೊಂಡಿದ್ದು ಸಾಲವನ್ನು ತೀರಿಸಲಾಗಿದೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿ ನಮೇರೆಗೆ  ಮಡಿಕೇರಿ ನಗರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

     ಆಸ್ತಿ ವಿಚಾರದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಕುಂಜಿಲ ಗ್ರಾಮದಲ್ಲಿ ನಡೆದಿದೆ. ಕುಂಜಿಲ ಗ್ರಾಮದ ನಿವಾಸಿ ಬಾರಿಕೆ ಅಬ್ದುಲ್ಲಾ ಎಂಬವರು ದಿನಾಂಕ 26-11-2016 ರಂದು ಕುಂಜಿಲ ಗ್ರಾಮದ ಬಸ್ ಶೆಲ್ಟರ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಮೊಯ್ದು ಹಾಜಿ ಮತ್ತು ರಜಾಕ್ ಎಂಬವರುಗಳು ದಾರಿ ತಡೆದು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜಗಳ ಮಾಡಿ ಕೈಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ, ಮನೆಗೆ ಅಕ್ರಮ ಪ್ರವೇಶ ಹಲ್ಲೆ:

     ಆಸ್ತಿ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮನೆಗೆ ಅಕ್ರಮ ಪ್ರವೇಶ ಮಾಡಿದ ಇಬ್ಬರು ಮಹಿಳೆ ಮೇಲೆ ಹಲ್ಲೆ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಒಡೆದುಹಾಕಿ ನಷ್ಟಪಡಿಸಿದ ಘಟನೆ ಮಡಿಕೇರಿ ತಾಲೋಕು ಕುಂಜಿಲ ಗ್ರಾಮದಲ್ಲಿ ನಡೆದಿದೆ. ಕುಂಜಿಲ ಗ್ರಾಮದ ನಿವಾಸಿ ಬಿ.ಎ. ಮೊಯ್ದು ಹಾಗು ಆತನ ತಮ್ಮ ಅಂದು ರವರ ನಡುವೆ ಜಾಗದ ಆರ್.ಟಿ.ಸಿ. ವಿಚಾರದಲ್ಲಿ ಜಗಳವಾಗಿದ್ದು, ಇದೇ ವಿಚಾರವಾಗಿ ದಿನಾಂಕ 26-11-2016 ರಂದು 3-00 ಪಿ.ಎಂ. ಸಮಯದಲ್ಲಿ ಕುಂಜಿಲ ಗ್ರಾಮದ ನಿವಾಸಿಗಳಾದ ಯಹ್ಯಾ ಮತ್ತು ಸಾದಿಕ್ ಎಂಬವರುಗಳು ಫಿರ್ಯಾದಿ ಬಿ.ಎ. ಮೊಯ್ದು ರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿರವರ ಪತ್ನಿ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಮನೆ ಬಾಗಿಲಿನ ಲಾಕ್ ಮುರಿದು ಮನೆಯ 3 ಕಿಟಕಿಗಳನ್ನು ಒಡೆದುಹಾಕಿ ಸುಮಾರು 3,000 ರೂ. ನಷ್ಟು ನಷ್ಟಪಡಿಸಿರುತ್ತಾರೆಂದು ಮತ್ತು ಕೊಲೆ ಬೆದರಿಕಿ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.