Friday, November 11, 2016

                                           ಪ್ರಕಟಣೆ

             ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ನಡೆದಂತಹ ಗೌರಿ ಗಣೇಶ ಹಬ್ಬ, ದಸರಾ ಉತ್ಸವ, ತಲಕಾವೇರಿ ಜಾತ್ರೆ, ಬಕ್ರೀದ್ ಹಬ್ಬ, ರಂಜಾನ್ ಹಬ್ಬ ಹಾಗೂ ಇದೀಗ ಮುಕ್ತಾಯಗೊಂಡಿರುವ ಟಿಪ್ಪು ಜಯಂತಿ ಆಚರಣೆಯ ಸಮಯದಲ್ಲಿ ಶಾಂತ ರೀತಿಯಿಂದ ಮೇಲ್ಕಂಡ ಎಲ್ಲಾ ಆಚರಣೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಉತ್ತಮವಾಗಿ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲೆಯ ಎಲ್ಲಾ ಸಮಾಜದ ಮುಖಂಡರು, ಸಂಘ ಸಂಸ್ಥೆಯವರು , ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮಾದ್ಯಮ ಮತ್ತು ಪತ್ರಿಕಾ ಮಿತ್ರರು ಹಾಗೂ ಜಿಲ್ಲೆಯ ಎಲ್ಲಾ ಶಾಂತಿ ಪ್ರಿಯ ಸಾರ್ವಜನಿಕ ಮಿತ್ರರು ಕೈಜೋಡಿಸಿ ಸಹಕರಿಸಿರುತ್ತೀರಿ. ಈ ನಿಟ್ಟಿನಲ್ಲಿ ನಿಮ್ಮೆಲರ ಸಹಕಾರದೊಂದಿಗೆ ಪೊಲೀಸ್ ಇಲಾಖೆ ಜನ ಸಾಮಾನ್ಯರೊಂದಿಗೆ ಬೆರೆತು ‘’ಜನಸ್ನೇಹಿ ಪೊಲೀಸರಾಗಿ’’ ಸಾರ್ವಜನಿಕರ ಪ್ರಸಂಶಗೆ ಪಾತ್ರವಾಗಲು ಸಹಕರಿಸಿದ್ದು, ಸಾರ್ವಜನಿಕರೊಂದಿಗೆ ಪೊಲೀಸ್ ಬಾಂದವ್ಯ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಳ್ಳುತ್ತಿದ್ದು, ಇನ್ನು ಮುಂದೆಯೂ ಸಹ ಕೊಡಗು ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಇಲಾಖೆಯೊಂದಿಗೆ ಸಹಕರಿಸಲು ಕೋರುತ್ತಾ, ಕೊಡಗು ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ಕೊಡಗು ಜಿಲ್ಲೆಯ ಎಲ್ಲಾ ಆತ್ಮೀಯ ಭಾಂದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.


                                                                                                ಪಿ. ರಾಜೇಂದ್ರ ಪ್ರಸಾದ್., ಐ.ಪಿ.ಎಸ್

                                                                                                  ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ

ವ್ಯಕ್ತಿಯ ಆತ್ಮಹತ್ಯೆ

                           ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ತೋರ ಗ್ರಾಮದಲ್ಲಿ ನಡೆದಿದೆ. ದಿನಾಂಕ 06/11/2016ರಂದು ತೋರ ಗ್ರಾಮದ ನಿವಾಸಿ ಜಯಾನಂದ ಎಂಬವರು ಮನೆಯಲ್ಲಿ ವಿಪರೀತ ಮದ್ಯಪಾನ ಮಾಡಿದ್ದು ಜೊತೆಗೆ ವಿಷವನ್ನು ಸಹಾ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರವರನ್ನು ಅವರ ಮಗ ಪ್ರಸನ್ನರವರು ಮಡಿಕೇರಿರಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 10/11/2016ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


ಅಕ್ರಮ ಮರ ಹನನ

                        ಅಕ್ರಮವಾಗಿ ರಸ್ತೆಗೆ ಅಡ್ಡಲಾಗಿ ಮರ ಕಡಿದ ಘಟನೆ ಭಾಗಮಂಡಲ ಬಳಿಯ ಸಣ್ಣಪುಲಿಕೋಟು ಗ್ರಾಮದಲ್ಲಿ ನಡೆದಿದೆ. ದಿನಾಂಕ 10/11/2016ರಂದು ಭಾಗಮಂಡಲ ಠಾಣಾ ಪಿಎಸ್‌ಐ ಸದಾಶಿವರವರು ಗಸ್ತು ಕರ್ತವ್ಯದಲ್ಲಿದ್ದಾಗ ಸಣ್ಣ ಪುಲಿಕೋಟು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎರಡು ಮರಗಳನ್ನು ಯಾರೋ ಅಪರಿಚಿತರು ಕಡಿದು ರಸ್ತೆಗೆ ಅಡ್ಡಲಾಗಿ ಬೀಳಿಸಿ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಬಗ್ಗೆ ಭಾಗಂಮಂಡಲ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಹನನ
                      ಅಕ್ರಮವಾಗಿ ರಸ್ತೆಗೆ ಅಡ್ಡಲಾಗಿ ಮರ ಕಡಿದ ಘಟನೆ ಮಡಿಕೇರಿ ಬಳಿಯ ಕಡಗದಾಳು ಗ್ರಾಮದಲ್ಲಿ ನಡೆದಿದೆ. ದಿನಾಂಕ 10/11/2016ರಂದು ಕಡಗದಾಳು ಬಳಿ ರಸ್ತೆಗೆ ಅಡ್ಡವಾಗಿ ಮರ ಕಡಿದು ಹಾಕಿರುವ ಬಗ್ಗೆ ದೊರೆತ ಮಾಃಇತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಪ್ರಕಾಶ್‌ರವರು ಕಡಗದಾಳು ಗ್ರಾಮಕ್ಕೆ ಹೋಗಿ ನೋಡಿದಾಗ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎರಡು ಮರಗಳನ್ನು ಯಾರೋ ಅಪರಿಚಿತರು ಕಡಿದು ರಸ್ತೆಗೆ ಅಡ್ಡಲಾಗಿ ಬೀಳಿಸಿದ್ದು, ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿರುವ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.