Saturday, November 12, 2016

ವ್ಯಕ್ತಿ ನಾಪತ್ತೆ ಪ್ರಕರಣ
                      ಮನೆಯಿಂದ ಕೆಲಸದ ನಿಮಿತ್ತ ಹೋದ ವ್ಯಕ್ತಿಯೊಬ್ಬರು ಮರಳಿ ಬಾರದೆ ಕಾಣೆಯಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 7/11/2016ರಂದು ನಗರದ ಒಂದನೇ ಬ್ಲಾಕ್‌ ನಿವಾಸಿ ಸಿಂಧೂ ಎಂಬವರ ಪತಿ ಸುದರ್ಶನ್‌ ಎಂಬವರು ಸೋಮವಾರಪೇಟೆಯ ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಹೋಗಿ ಬರುವುದಾಗಿ  ಸಿಂಧೂರವರ ತಾಯಿ ಭಾಗ್ಯಲಕ್ಷ್ಮಿರವರಿಗೆ ತಿಳಿಸಿ ಹೋದವರು ಮರಳಿ ಬರದೆ ನಾಪತ್ತೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಭಾರೀ ಮೊತ್ತದ ಹಣ ದುರುಪಯೋಗ
                        ಸಹಕಾರ ಸಂಘವೊಂದರಲ್ಲಿ ಭಾರಿ ಮೊತ್ತದ ಹಣ ದುರುಪಯೋಗಪಡಿಸಿದ ಪ್ರಕರಣ ಶನಿವಾರಸಂತೆ ಬಳಿಯ ಬೆಸೂರು ಗ್ರಾಮದಲ್ಲಿ ನಡೆದಿದೆ. ಬೆಸೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿರುವ ಫಾಲಾಕ್ಷ ಎಂಬವರು ಸುಮಾರು 2012ನೇ ಸಾಲಿನಿಂದ ಇಲ್ಲಿಯವರೆಗೆ ಸಂಘದ ಸದಸ್ಯರಾದ ಬಿ.ಎನ್‌.ನಂದೀಶ ಎಂಬವರ ಅನುಮತಿಯಿಲ್ಲದೆ ಅವರ ಚೆಕ್ಕುಗಳನ್ನು ಬಳಸಿಕೊಂಡು ಅಕ್ರಮವಾಗಿ ಸಂಘದ ಸುಮಾರು ರೂ.18,00,000/-ಗಳಷ್ಟು ಭಾರೀ ಮೊತ್ತದ ಹಣವನ್ನು ಡ್ರಾ ಮಾಡಿಕೊಂಡು ವಂಚನೆ ಎಸಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸರ್ಕಾರದ ಹಣ ದುರುಪಯೋಗ
                        ದಿನಾಂಕ 01/07/2010 ರಿಂದ 28/12/2012ರ ನಡುವೆ ನೇರುಗಳಲೆ ಗ್ರಾಮದ ಪಂಚಾಯಿತಿ ಅಧ್ಯಕ್ಷರಾಗಿದ್ದ ಲೋಕಾನಂದ ಎಂಬವರು ಭಾರೀ ಮೊತ್ತದ ಸರ್ಕಾರಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಸೋಮವಾರಪೇಟೆ  ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪಿ.ಚಂದ್ರಶೇಖರ್‌ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.