Thursday, November 17, 2016

ಲಾರಿ ಅವಘಡ, ಕ್ಲೀನರ್ ಗೆ ಗಾಯ:

     ವೇಗ ಮತ್ತು ಅಜಾಗರೂಕತೆಯಿಂದ ಲಾರಿಯನ್ನು ಚಾಲಾಯಿಸಿದ ಪರಿಣಾಮ ರಸ್ತೆಬದಿಯ ಗುಂಡಿಯೊಂದಕ್ಕೆ ಇಳಿದು ಕ್ಲೀನರ್ ಗಾಯಗೊಂಡ ಘಟನೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕಡಗದಾಳುವಿನಲ್ಲಿ ನಡೆದಿದೆ. ದಿನಾಂಕ 13-11-2016 ರಂದು ಲಾರಿ ಚಾಲಕ ಅಕ್ಬರ್ ಎಂಬವರು ತಾನು ಚಲಿಸುತ್ತಿದ್ದ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆಬದಿಯ ಗುಂಡಿಯೊಂದಕ್ಕೆ ಲಾರಿ ಇಳಿದು ಅವಘಡಕ್ಕೀಡಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಶಾಹಿದ್ ಜಸ್ವಿರ್ ಎಂಬಾತ ಗಾಯಗೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಅಪಘಾತ 17 ಮಂದಿಗೆ ಗಾಯ: 

     ಟಾಟಾ ಏಸ್ ವಾಹನವೊಂದು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 17 ಮಂದಿ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣೀರಳ್ಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 16-11-2016 ರಂದು ಶ್ರೀಮತಿ ಚಂದ್ರಾವತಿ ಗಂಡ ಶಿವರಾಜು ಸಿದ್ದಲಿಂಗಪುರ ಕುಶಾಲನಗರ ಇವರು ಕೇರಳಾಪುರ ಬಸವನಳ್ಳಿ ಗ್ರಾಮದ ಕಾರ್ಮಿಕರೊಂದಿಗೆ ಜಂಬೂರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಸಮಯ 17-45 ಗಂಟೆಗೆ ಸೋಮವಾರಪೇಟೆ ಠಾಣಾ ಸರಹದ್ದಿನ ತಣ್ಣಿರಳ್ಳ ಗ್ರಾಮದ ಡಿ.ಸಿಲ್ವ ರವರ ಮನೆಯ ತಿರುವು ರಸ್ತೆಯಲ್ಲಿ ಕೆಎ-13-ಬಿ-6713 ರ ಟಾಟಾ ಏಸ್ ವಾಹನದ ಚಾಲಕ ಅಂಜನ್ ಕುಮಾರ್ ಯಾನೆ ಧರ್ಮ ಎಂಬವರು ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಟಾಟಾಏಸ್ ಅಪಘಾತಕ್ಕೀಡಾಗಿ ವಾಹನದಲ್ಲಿ ಇದ್ದ ಲಕ್ಷ್ಮಿ, ಸುಮಿತ್ರ, ಶೈಲಜ, ಮಂಜುಳ, ಸರಸ್ವತಿ, ಲಕ್ಷ್ಮಮ್ಮ, ನಾಗಮ್ಮ, ಕುಮಾರಿ, ಗೌರಮ್ಮ, ಪ್ರೇಮ, ಚಂಗಮ್ಮ, ವಿಶಾಲಾಕ್ಷಿ, ಲಕ್ಷ್ಮಮ್ಮ, ಜಯಮ್ಮ, ವನಜಮ್ಮ, ಲಕ್ಷ್ಮಿ, ಮಣಿಯಮ್ಮ, ಮತ್ತು ದೇವಮ್ಮ ರವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ವಶ, ಪ್ರಕರಣ ದಾಖಲು: 

    ವ್ಯಕ್ತಿಯೊಬ್ಬರು ತಮ್ಮ ಅಂಗಡಿ ಮುಂದುಗಡೆ ಅಕ್ರಮವಾಗಿ ಮದ್ಯವನ್ನು ಕುಡಿಯಲು ಅನುವುಮಾಡಿಕೊಟ್ಟ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಂದಿಗುಂದ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ನಂದಿಗುಂದ ಗ್ರಾಮದಲ್ಲಿರುವ ಎನ್.ಎಸ್. ಸುಧಾಕರ ಎಂಬವರಿಗೆ ಸೇರಿದ ಆಂಗಡಿಯ ಬಳಿ ದಾಳಿ ನಡೆಸಿದ್ದು, ಅಂಗಡಿ ಮುಂದುಗಡೆ ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಶೇಖರಿಸಿಟ್ಟಿದ್ದನ್ನು ಪತ್ತೆಹಚ್ಚಿ ಸ್ಥಳದಲ್ಲಿದ್ದ ಸುಮಾರು 9 ಯುಬಿ ಎಕ್ಸ್ ಪೋರ್ಟ್ ಸ್ಟ್ರಾಂಗ್ ಬೀಯರ್ ಬಾಟಲಿಗಳು ಹಾಗು ಆರೋಪಿ ಎನ್.ಎಸ್. ಸುಧಾಕರ ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜಾಗದ ವಿಚಾರದಲ್ಲಿ ಜಗಳ: 

     ಜಾಗದ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಮಹಿಳೆಯನ್ನು ಎಳೆದಾಡಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಭಾಗಮಂಡಲ ಠಾಣಾ ಸರಹದ್ದಿನ ಕೋರಂಗಾಲ ಗ್ರಾಮದ ನಿವಾಸಿ ಜಮುನಾ ಹಾಗು ನಾಗರಾಜು, ಸುಂದರಿ ನಡುವೆ ಜಾಗದ ವಿಚಾರದಲ್ಲಿ ಜಗಳವಾಗಿ, ಆರೋಪಿ ನಾಗರಾಜ ಮತ್ತು ಸುಂದರಿ ರವರುಗಳು ಫಿರ್ಯಾದಿ ಜಮುನಾರವರ ಕೈಯನ್ನು ಹಿಡಿದು ಎಳೆದಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಫಿರ್ಯಾದಿ ಜಮುನಾರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
 
ಅಕ್ರಮ ಮರಳು ಸಾಗಾಟ:

     ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಕರೀಂ ರಾವುತಾರ್ ರವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಪಾಲಿಬೆಟ್ಟದ ಕಡೆಯಿಂದ ಸಿದ್ದಾಪುರದ ಕಡೆಗೆ ಮಿನಿಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆದಾರದ ಮೇರೆಗೆ ದಿನಾಂಕ 16-11-2016 ರಂದು ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಅಬ್ದುಲ್ ಕರೀಂ ರಾವುತಾರ್ ಹಾಗು ಸಿಬ್ಬಂದಿಗಳು ಪಾಲಿಬೆಟ್ಟ ಜಂಕ್ಷನ್ ಬಳಿ ದಾಳಿ ನಡೆಸಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ. ಕಾರ್ಯಾಚರಣೆಯಲ್ಲಿ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರ ಅಬ್ದುಲ್ ಕರೀಂ ರಾವುತಾರ್, ಎಎಸ್ಐ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್, ನಿರಂಜನ್ ಮತ್ತು ಕೆ.ಆರ್. ವಸಂತ ಮತ್ತು ಚಾಲಕ ರಾಜೇಶ್ ರವರು ಭಾಗಿಯಾಗಿದ್ದರು.