Sunday, November 20, 2016

ಪಾದಚಾರಿಗೆ ಲಾರಿ ಡಿಕ್ಕಿ:

        ಪಾದಚಾರಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದ ಹತ್ತಿರದ ಕೂಡಿಗೆಯಲ್ಲಿ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ಚಂದ್ರಾಚಾರಿ ಎಂಬವರು ದಿನಾಂಕ 19-11-2016 ರಂದು ಕೂಡಿಗೆ ಮಾರುಕಟ್ಟೆಯಿಂದ ತರಕಾರಿ ತೆಗೆದುಕೊಳ್ಳಲು ಕೂಡಿಗೆ ಮಾರುಕಟ್ಟೆಯ ಬಳಿ ಬಸ್ಸಿನಿಂದ ಇಳಿದು ಮಾರುಕಟ್ಟೆಗೆ ಹೋಗಲು ಬಸ್ಸಿನ ಮುಂಭಾಗಕ್ಕಾಗಿ ರಸ್ತೆ ದಾಟುವಾಗ ಬಸ್ಸಿನ ಹಿಂಭಾಗದಿಂದ ಕೆ.ಎ.12 -7807 ರ 407 ಲಾರಿ ಚಾಲಕ ಸತೀಶ್ ಎಂಬವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಚಂದ್ರಾಚಾರಿಯವರು ಗಾಯಗೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ:

       ವ್ಯಕ್ತಿಯೊಬ್ಬರು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿದ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 19-11-16ರಂದು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಕುಮಾರ ಆರಾಧ್ಯ ರವರು ಸಿಬ್ಬಂದಿಯವರೊಂದಿಗೆ ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ತುಂಬಿಸಿ ಮಾರಾಟಕ್ಕೆ ಸಾಗಿಸುತ್ತಿದ್ದ ವೇಳೆ ಬಿಟ್ಟಂಗಾಲ ಗ್ರಾಮದಲ್ಲಿ ಲಾರಿ ಮೇಲೆ ದಾಳಿ ಮಾಡಿ ಲಾರಿ ತುಂಬಿದ ಕೆಎಲ್. 24.ಎ.3560ರ ಟಿಪ್ಪರ್ ಲಾರಿ ಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ.