Wednesday, November 23, 2016


ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ಕ್ಷುಲ್ಲಕ ಕಾರಣಕ್ಕೆ ತೋಟದ ರೈಟರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ನಾಪೋಕ್ಲು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಗ್ರಾಮದ ನಿವಾಸಿ ಫಿರ್ಯಾದಿ ಬೊಪ್ಪಂಡ ಜೆ. ಮುದ್ದಪ್ಪ ಎಂಬವರು ಶಿವಕಾಳಿಯಂಡ ಅಂಬಿ ಕಾರ್ಯಪ್ಪ ಎಂಬವರ ಕಾಫಿ ತೋಟದಲ್ಲಿ ಟೈಟರ್ ಆಗಿ ಕೆಲಸ ಮಾಡಿಕೊಂಡಿದ್ದು, ತನ್ನ ಪತ್ನಿ ಲೀಲಾ ಎಂಬವರನ್ನು ಫಿರ್ಯಾದಿಯವರ ಅಣ್ಣನ ಮಗ ಭರತ್ ಎಂಬಾತ ವಿನಾಕಾರಣ ಬೈದ ವಿಚಾರವಾಗಿ ಕೇಳಲು ದಿನಾಂಕ 20-11-2016 ರಂದು ಹೋಗಿದ್ದ ಸಂದರ್ಭದಲ್ಲಿ ಫಿರ್ಯಾದಿ ಮತ್ತು ಭರತ್ ನಡುವೆ ಜಗಳವಾಗಿ ಭರತ್ ಕತ್ತಿಯಿಂದ ಫಿರ್ಯಾದಿ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದೂ ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸ್ ದಾಳಿ ಅಕ್ರಮ ಮರಳು ವಶ:

     ಅಕ್ರಮವಾಗಿ ಮರಳನ್ನು ಶೇಖರಣೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್‌ ರವರವರಿಗೆ ಸದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ದಿನಾಂಕ 22-11-2016 ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಾಡು ಗ್ರಾಮದ ನಿವೃತ್ತ ಎಸಿಪಿ ಮುತ್ತಣ್ಣ ಹಾಗೂ ತಮ್ಮಯ್ಯರವರ ಜಮೀನಿನ ಬಳಿ ಇರುವ ಕಕ್ಕಬೆ ಹೊಳೆಯಲ್ಲಿ ಅಕ್ರಮವಾಗಿ ತೆಪ್ಪಗಳನ್ನು ಬಳಸಿ ಹೊಳೆಯಿಂದ ಮರಳು ಕಳ್ಳತನ ಮಾಡುವ ಉದ್ದೇಶದಿಂದ ಮರಳನ್ನು ಹೊಳೆಯ ದಡದಲ್ಲಿ ಶೇಖರಣೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ಮಾಡಿ 2 ಪಿಕ್‌-ಅಪ್‌ನಷ್ಟು ಮರಳನ್ನು ಮರಳನ್ನು ತೆಗೆಯಲು ಬಳಸಿದ 2 ಕಬ್ಬಿಣದ ತೆಪ್ಪಗಳು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡಂಗ ಅರಪಟ್ಟು ಗ್ರಾಮದ ನಿವಾಸಿ ಪಿ.ಎ. ಸೈಫುದ್ದೀನ್ ಹಾಗು ಅದೇ ಗ್ರಾಮದ ರಾವೂಫ್ ಎಂಬವರ ನಡುವೆ ಮೊಬೈಲ್ ಮೂಲಕ ರಾವೂಫ್ ರವರು ಪಿ.ಎ. ಸೈಫುದ್ದೀನ್ ರವರ ಭಾವನವರನ್ನು ಬೈದ ವಿಚಾರದಲ್ಲಿ ಜಗಳವಾಗಿ ಆರೋಪಿ ರಾವೂಫ್ ರವರು ಪಿ.ಎ. ಸೈಫುದ್ದೀನ್ ನವರ ಮೇಲೆ ಕೈಯಿಂದ ಹಲ್ಲೆ ನಡೆಸಿ ಕಾಲಿನಿಂದ ಒದ್ದು ನೋವನ್ನುಂಟುಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.