Sunday, November 6, 2016

ಬೀಗ ಮುರಿದು ನಗ ನಾಣ್ಯ ಕಳ್ಳತನ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಎಂ.ಎ. ಹನೀಫ್ ಎಂಬವರ ಮನೆಯ ಬಾಗಿಲನ್ನು ದಿನಾಂಕ 5-11-2016ರ ಬೆಳಿಗ್ಗೆ 7-20 ಗಂಟೆ ಯಿಂದ 8-20 ಗಂಟೆಯ ನಡುವೆ ಯಾರೋ ಕಳ್ಳರು ಮುರಿದು ಗಾಡ್ರೇಜ್ ನಲ್ಲಿಟ್ಟಿದ್ದ 1) 18 ಗ್ರಾಂ ಚಿನ್ನದ ನಕ್ಲೇಸ್, 2) 4 ಗ್ರಾಂ ನ 2 ಉಂಗುರ 3) 6 ಗ್ರಾಂ ನ ಬ್ರಾಸ್ಲೆಟ್ ಒಟ್ಟು (ಅಂದಾಜು ಮೌಲ್ಯದ 76000) 28 ಗ್ರಾಂ ಚಿನ್ನವನ್ನು ಹಾಗೂ 10000=00 ರೂ ಹಣವನ್ನು ಕಳ್ಳತನ ಮಾಡಿಕೊಂಡಿಹೋಗಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿ:

     ಸೋಮವಾರಪೇಟೆ ಠಾಣಾ ಸರಹದ್ದಿನ ಕರ್ಕಳ್ಳಿ ಗ್ರಾಮದ ನಿವಾಸಿ ಶ್ರೀಮತಿ ನಾಗಮ್ಮ ಎಂಬವರು ದಿನಾಂಕ 04.11.2016 ರಂದು ಬೆಳಿಗ್ಗೆ 09:00 ಗಂಟೆಗೆ ಕೂಲಿ ಕೆಲಸಕ್ಕೆಂದು ಸೋಮವಾರಪೇಟೆ ನಗರದ ಜೂನಿಯರ್ ಕಾಲೇಜ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕೆಎ 13 ಕೆ 1969 ರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಅನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾಗಮ್ಮರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಎಡ ಭಾಗದ ಮಂಡಿ ಕೈಗಳಿಗೆ, ಹೊಟ್ಟೆಯ ಕೆಳ ಭಾಗಕ್ಕೆ ನೋವಾಗಿರುವುದಾಗಿ ನೀಡಿದ ದೂರಿಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.