Monday, November 7, 2016

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿಯ ಆತ್ಮಹತ್ಯೆ:

        ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಕಂಬಿಬಾಣೆಯ ನಿವಾಸಿಯಾದ ಜೇನುಕುರುಬರ ಮನುರವರು ಚಿಕ್ಲಿ ಹೊಳೆಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನಡೆದಿರುತ್ತದೆ. ಮನು 10 ವರ್ಷಗಳ ಹಿಂದೆ ಲಕ್ಷ್ಮಿ ಎಂಬುವವರನ್ನು ಮದುವೆಯಾಗಿದ್ದು 5 ವರ್ಷಗಳಿಂದ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದು ಮನು ಜೀವನದಲ್ಲಿ ಬೇಸರಗೊಂಡಿದ್ದು, ದಿನಾಂಕ 5-11-2016 ರಂದು ಮನು ಚಿಕ್ಲಿ ಹೊಳೆ ಕಡೆಗೆ ಹೋದವನು ವಾಪಾಸ್ಸು ಮನೆಗೆ ಬಾರದೇ ಇದ್ದು, ದಿನಾಂಕ 6-11-2016 ರಂದು ಚಿಕ್ಲಿ ಹೊಳೆಯಲ್ಲಿ ಮನುರವರ ಮೃತ ದೇಹ ಪತ್ತೆಗಾಗಿದ್ದು, ಈ ಬಗ್ಗೆ ಮನುರವರ ತಂದೆ ಚೋಮರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

          ಕುಶಾಲನಗರ ಪಟ್ಟಣದ ಅಯ್ಯಪ್ಪ ದೇವಸ್ಥಾನದ ರಸ್ತೆಯ ತಮ್ಮಯ್ಯನವರ ಮನೆಯಲ್ಲಿ ಬಾಡಿಗೆಗೆ ಇರುವ ರವಿ, ಗೌರಿ ಮತ್ತು ಪ್ರೇಮರವರು ಬೇರೆ ಬೇರೆ ಮನೆಯಲ್ಲಿ ವಾಸವಿದ್ದು ಇವರ ಮದ್ಯೆ ನೀರು ಹಾಗೂ ಕರೆಂಟಿನ ವಿಚಾರದಲ್ಲಿ ದಿನಾಂಕ 6-10-2016 ರಂದು ಜಗಳವಾಗಿ ಕೆ ಕೆ ಪ್ರೇಮಾ ಎಂಬುವವರ ಮೇಲೆ ರವಿ, ಪ್ರೇಮಾ, ಗೌರಿ, ಪದ್ಮ ಮತ್ತು ಕರುಣಾಕರಶೆಟ್ಟಿರವರು ಹಲ್ಲೆ ಮಾಡಿದ್ದು ಈ ಬಗ್ಗೆ ಕೆ ಕೆ ಪ್ರೇಮಾ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದು ವ್ಯಕ್ತಿಯ ಆತ್ಮ ಹತ್ಯೆ

         ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಮಡಿರುವ ಪ್ರಕರಣ ಸಿದ್ದಾಪುರದ ಚೆನ್ನಯ್ಯನಕೋಟೆಯಲ್ಲಿ ನಡೆದಿದೆ. ಚೆನ್ನಯ್ಯನಕೋಟೆಯ ನಿವಾಸಿ ರಾಜರವರು ಮಾನಸಿಕ ಅಸ್ವಸ್ತರಾಗಿದ್ದು ದಿನಾಂಕ 6-11-2016 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿದ್ದು ಕೂಡಲೇ ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಕೊಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾಜರವರು ಮೃತಪಟ್ಟಿದ್ದು. ಈ ಸಂಬಂದ ರಾಜರವರ ಪತ್ನಿ ನೇತ್ರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.