Wednesday, November 9, 2016

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

      ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ನಹತ್ಯೆ ಮಾಡಿಕೊಂಡ ಘಟನೆ ಗೋಣಿಕೊಪ್ಪ ಸಮೀಪದ ಚೆನ್ನಂಗೊಲ್ಲಿ ಗ್ರಾಮದಲ್ಲಿ ನಡೆದಿದೆ. ಚೆನ್ನಂಗೊಲ್ಲಿ ಗ್ರಾಮದ ನಿವಾಸಿ ಗಣೇಶ (40) ಎಂಬವರು ಹೃಧಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 7-11-2016 ರಂದು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು , ಮೃತಸ ಪತ್ನಿ ಶ್ರೀಮತಿ ಸುನಿತ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವೃದ್ದೆಯ ಸಾವು:

     ಬಟ್ಟೆ ಹೊಗೆಯುತ್ತಿದ್ದ ವೃದ್ಧೆಯೊಬ್ಬರು ಆಕಸ್ಮಿಕ  ಜಾರಿ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರಗೂರು ಗ್ರಾಮದಲ್ಲಿ ನಡೆದಿದೆ. ಕಿರಗೂರು ಗ್ರಾಮದಲ್ಲಿ ವಾಸವಾಗಿರುವ ಹೆಚ್.ಜಿ. ವಿಜಯ ಎಂಬವರ ತಾಯಿ ಶ್ರೀಮತಿ ಲಕ್ಷ್ಮಿ, (85) ರವರು ದಿನಾಂಕ 8-11-2016 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಕಿರಗೂರು ಗ್ರಾಮದಲ್ಲಿರುವ ಕೀರೆ ಹೊಳೆಯಲ್ಲಿ ಬಟ್ಟೆಯನ್ನು ಹೊಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಗ್ರಹಿಸಿಟ್ಟ ಮರಳು ಕಳವು:

     ಕಂದಾಯ ಇಲಾಖೆಯವರು ಸಂಗ್ರಹಿಸಿಟ್ಟ ಮರಳನ್ನು ವ್ಯಕ್ತಿಗಳಿಬ್ಬರು ಕಳ್ಳತನ ಮಾಡಿದ ಘಟನೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನಡೆದಿದೆ. ಕಂದಾಯ ಇಲಾಖೆಯವರು ಭಾಗಮಂಡಲದ ತ್ರಿವೇಣಿ ಸಂಗಮದಿಂದ ಹೂಳೆತ್ತಿದ್ದ ಸಂದರ್ಭ ಸಂಗ್ರಹಿಸಿಟ್ಟ ಮರಳನ್ನು ಆರೋಪಿಗಳಾದ`ಕುರುಂಜಿ ರವೀಂದ್ರ ಹಾಗು ನಂಗಾರು ಪುನಿತ್ ಎಂಬವರುಗಳು ಇಲಾಖೆಯ ಅನುಮತಿ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಲಾರಿಗಳಲ್ಲಿ ತುಂಬಿಸಿಕೊಂಡು ಹೋಗಿ ಸಂಗ್ರಹಿಸಿಟ್ಟಿದ್ದು,  ಸದರಿ ಮರಳನ್ನು ದಿನಾಂಕ 14-10-2016 ರಂದು ಕಂದಾಯ ಇಲಾಖೆಯವರು ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ದಿನಾಂಕ 8-11-2016 ರಂದು ಭಾಗಮಂಡಲ ಪೊಲೀಸರು ಭಾಗಮಂಡಲ ಕಂದಾಯ ಪರಿವೀಕ್ಷಕ ರಾಮಯ್ಯ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ. 

ಅಕ್ರಮ ಮದ್ಯ ವಶ:

     ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ಪಿ.ಎಸ್.ಐ. ಜೆ.ಇ. ಮಹೇಶ್ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಾರ್ವಜನಿಕ ಬಸ್ ನಿಲ್ದಾಣದ ಹತ್ತಿರ ಅಕ್ರಮವಾಗಿ ಗ್ರಾಹಕರಿಗೆ ಮದ್ಯಮಾರಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿತ ಹಾರಂಗಿ ನಿವಾಸಿ ಬೆಟ್ಟಚಾರ ಎಂಬಾತನಿಂದ ರೂ 700/-ರೂ ಮೌಲ್ಯದ 90 ML ನ 20 ಓರಿಜಿನಲ್ ಚಾಯ್ಸ್ ಡಿಲೆಕ್ಷ್ ವಿಸ್ಕಿ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ ಸವಾರನಿಗೆ ಗಾಯ:

       ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ನಿವಾಸಿ ಪಿ.ಎನ್. ಸಂಪತ್ ಎಂಬವರು ದಿನಾಂಕ 08.11.2016 ಮದ್ಯಾಹ್ನ 1.00 ಗಂಟೆಗೆ ಮಡಿಕೇರಿಯಿಂದ ಮನೆಗೆ ಅಂದರೆ ಮುಕ್ಲೋಡ್ಲು ವಿಗೆ ಬೈಕ್ ನಂ ಕೆ ಎ 12ಹೆಚ್ 8820 ರಲ್ಲಿ ಹೋಗುತ್ತಿರುವಾಗ ಹಾಲೇರಿ ಅಂಚೆ ಕಛೇರಿ ಸ್ವಲ್ಪ ಮುಂದೆ ಎದುರುಗಡೆಯಿಂದ ಬಂದ ಕಾರಿನ ಚಾಲಕ ಅತೀವೇಗ ಮತ್ತು ಅಜಾಗರುಕತೆಯಿಂದ ಬೈಕ್ ಗೆ ಡಿಕ್ಕಿ ಪಡಿಸಿದ ಪರೀಣಾಮ ಬೈಕ್ ಸಮೇತ ಕೆಳಗೆ ಬಿದ್ದು ಎಡಗಾಲಿಗೆ ಮತ್ತು ಬಲ ಕೈಗೆ ಗಾಯವಾಗಿದ್ದು ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.