Saturday, December 31, 2016

ಕಾಡಾನೆ ದಾಳಿ ವ್ಯಕ್ತಿಯ ದುರ್ಮರಣ:

     ಕಾಡಾನೆ ದಾಳಿಗೆ ಕಾರ್ಮಿಕನೋರ್ವ ಮೃತಪಟ್ಟ ದುರ್ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ವಡ್ಡರಕಾಡು ಕಾಫಿ ತೋಟದಲ್ಲಿ ಸಂಭವಿಸಿದೆ. ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲ ಗ್ರಾಮದಲ್ಲಿ ವಾಸವಾಗಿರುವ ಹೆಚ್.ಡಿ. ರಾಜಪ್ಪ ಎಂಬವರ ಅಣ್ಣ ಚೆಲುವ (36) ರವರು ವಡ್ಡರಕಾರು ಕಾಫಿ ತೋಟದಲ್ಲಿ ಪ್ರತಿನಿತ್ಯ ಕೆಲಸಮಾಡಿಕೊಂಡಿದ್ದು, ದಿನಾಂಕ `29-12-2016 ಮಧ್ಯಾಹ್ನ 1-00 ಗಂಟೆಯ ಸಮಯದಲ್ಲಿ ತೋಟದಲ್ಲಿ ಟ್ಯಾಕ್ಟರ್ ನಲ್ಲಿ ಚಾಲಕ ಫಾರೂಕ್ , ವೆಂಟಟೇಶ್ ರವರೊಂದಿಗೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿದ್ದು, ಟ್ರಾಕ್ಟರ್ ಚಾಲಕ ಫಾರೂಕ್ ಮತ್ತು ವೆಂಟಕೇಶ್ ರವರು ತಪ್ಪಿಸಿಕೊಂಡು ಹೋಗಿದ್ದು, ಟ್ರಾಕ್ಟರ್ ಹಿಂಬದಿಯಲ್ಲಿ ಕುಳಿತ್ತಿದ್ದ ಚೆಲುವರವರನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಪರಿಣಾಮ ಸದರಿ ಚೆಲುವನವರ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರು ಮತ್ತು ಲಾರಿ ನಡುವೆ ಅಪಘಾತ, ಇಬ್ಬರಿಗೆ ಗಾಯ:

     ಎ.ಎನ್. ವಿಜೇತ್ ಎಂಬವರು ಪುತ್ತೂರಿನ ಅಗ್ನಿಶಾಮಕ ದಳದ ವಸತಿ ಗೃಹದಲ್ಲಿ ವಾಸವಾಗಿದ್ದು ದಿನಾಂಕ 29-12-2016 ರಂದು ತಮ್ಮಬಾಪ್ಪು ಕೆಎ-19-ಎಂಸಿ-9957 ಕಾರಿನಲ್ಲಿ ಅವರ ಸ್ನೇಹಿತರಾದ ನವೀನ್, ತಾರನಾಥ್, ಮನೋಜ್ ಮತ್ತು ಆನಂದರವರು ಸೂಳ್ಯದಿಂದ ಮಡಿಕೇರಿಗೆ ಬರುತ್ತಿದ್ದಾಗ ಸಮಯ ಸುಮಾರು 9.15 ಪಿ.ಎಂ ಗೆ ಕಾಟಗೇರಿ ಗ್ರಾಮದ ಭಾಗಮಂಡಲಕ್ಕೆ ಹೋಗುವ ತಿರುವು ರಸ್ತೆಯಲ್ಲಿ ಎದುರಿನಿಂದ ಬಂದ ಕೆಎ-12-ಬಿ-2927 ರ ಲಾರಿಯು ಎ.ಎನ್. ವಿಜೇತ್ ರವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿ ಇದ್ದ ಮನೋಜ್ ಮತ್ತು ಆನಂದರವರಿಗೆ ಗಾಯಗಳಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ವ್ಯಕ್ತಿಯಿಂದ ಹೋಂಸ್ಟೇನಲ್ಲಿ ತಂಗಿದ್ದ ವ್ಯಕ್ತಿ ಮೇಲೆ ಹಲ್ಲೆ: 

     ವೆಂಕಟಾಚಲ ಎಂಬವರು ಚೆನೈ ನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 25.12.2016 ರಂದು ತಮ್ಮ ಪತ್ನಿ ಗೀತಾಳೊಂದಿಗೆ ಮಡಿಕೇರಿ ತಾಲೋಕು ಕರ್ಣಂಗೇರಿ ಗ್ರಾಮದ ಸುಬ್ರಮಣ್ಯ ಎಸ್ಟೇಟಿನಲ್ಲಿರುವ ದ್ಯಾನ್ ಹೋಮ್ ಸ್ಟೇಗೆ ಪ್ರವಾಸಿಗರಾಗಿ ಬಂದು ತಂಗಿದ್ದು ದಿನಾಂಕ 30.12.2016 ರಂದು ಬೆಳಿಗ್ಗೆ 8.30 ಗಂಟೆಗೆ ಫಿರ್ಯಾದಿ ವೆಂಕಟಾಚಲರವರು ಹೋಮ್ ಸ್ಟೇ ಬಳಿ ಇರುವ ರಸ್ತೆಯಲ್ಲಿ ನಿಂತುಕೊಂಡಿದ್ದಾಗ ಪೂವಣ್ಣ ಎಂಬುವರು ಇಲ್ಲಿ ಏಕೆ ನಿಂತಿದ್ದೀಯಾ ಎಂದು ಗದರಿಸಿದ್ದು, ನಂತರ ಮದ್ಯಾಹ್ನ ಕಾಫಿ ತೋಟದೊಳಗಿರುವ ದೇವಸ್ಥಾನವನ್ನು ನೋಡಲು ಹೋಗಿ ವಾಪಸ್ಸು ಬರುತ್ತಿರುವಾಗ ಅಲ್ಲಿಗೆ ಬಂದ ಪೂವಣ್ಣನು ಅವಾಚ್ಯ ಶಬ್ದಗಳಿಂದ ಬೈದು ವಾಕಿಂಗ್ ಸ್ಟೀಕ್ ನಿಂದ ಪಿರ್ಯಾದಿಯವರ ಎಡ ಮತ್ತು ಬಲ ಕೈಗಳಿಗೆ ಹೊಡೆದು ನೋವುಂಟು ಮಾಡಿದ್ದು ತಡೆಯಲು ಬಂದ ಪತ್ನಿ ಗೀತಾಳಿಗು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಆಸ್ತಿ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 28-12-2016 ರಂದು ಮಧ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಸೋಮವಾರಪೇಟೆ ತಾಲೋಕು ಮೂದರವಳ್ಳಿ ಗ್ರಾಮದ ನಿವಾಸಿ ಎಂ.ಎ. ಚಂದ್ರಪ್ಪ ಎಂಬವರು ತಮ್ಮ ಆಸ್ತಿಯ ಬೇಲಿಯನ್ನು ರಿಪೇರಿ ಕೆಲಸ ಮಾಡುವಾಗ್ಗೆ ಮೇಲ್ಕಂಡ ಆರೋಪಿಗಳಾದ ಗುರುಲಿಂಗಪ್ಪ, ವಿನೋದ, ಚಿನ್ನಮ್ಮ ಮತ್ತು ವಸಂತ ಎಂಬವರುಗಳು ಅಲ್ಲಿಗೆ ಬಂದು ಏಕಾ-ಏಕಿ ಕಲ್ಲು ಮತ್ತು ದೊಣ್ಣೆಯಿಂದ ಫಿರ್ಯಾದಿಯವರಿಗೆ ಹೊಡೆದು ಕೆಳಗೆ ಬೀಳಿಸಿ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು, ಈ ಬಗ್ಗೆಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, December 30, 2016

 ಕಾರಿಗೆ ತುಫಾನ್ ವಾಹನ ಡಿಕ್ಕಿ ಮಹಿಳೆಗೆ ಗಾಯ:

      ವಿರಾಜಪೇಟೆ ತಾಲೋಕು ಹಾಲುಗುಂದ ಗ್ರಾಮದ ನಿವಾಸಿ ಕಿಶನ್ ಎಂಬವರು ದಿನಾಂಕ 29-12-2016 ರಂದು ಸಮಯ 16.30 ಗಂಟೆಗೆ ಮಾಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನ ಮುಂಭಾಗದಲ್ಲಿ ಕೇರಳದ ಕಡೆಯಿಂದ ವಿರಾಜಪೇಟೆಗೆ ತಮ್ಮ ಬಾಪ್ತು ಮಾರುತಿ ಅಲ್ಟೋ ಕಾರ್ ನಂ ಕೆ. ಎ. 12 ಪಿ 3277 ರಲ್ಲಿ ಬರುತ್ತಿದ್ದಾಗ ವಿರಾಜಪೇಟೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಥೂಫಾನ್ ವಾಹನ ನಂ ಕೆ.ಎಲ್ 56 ಸಿ 847 ರ ಚಾಲಕ ನೌಫಲ್ ಎಂಬುವರು ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ಕಿಶನ್ ರವರ ಅಲ್ಟೋ ಕಾರ್ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದಲ್ಲದೆ ಕಾರಿನೊಳಗೆ ಇದ್ದ ಪಿರ್ಯಾದಿಯವರ ಪತ್ನಿ ಭವನ ರವರ ತಲೆಗೆ ಗಾಯವಾಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, December 29, 2016

ದಾರಿತಡೆದು ವಾರಟ್ ಮ್ಯಾನ್ ಮೇಲೆ ಹಲ್ಲೆ:

      ನೀರು ಬಿಡುವ ವಿಚಾರದಲ್ಲಿ ವ್ಯಕ್ತಿಯೊಬ್ಬರು ವಾರಟ್ ಮ್ಯಾನ್ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ಕಲ್ಕಂದೂರು ಗ್ರಾಮದ ನಿವಾಸಿ ಕೆ.ಕೆ. ಕುಮಾರ ಎಂಬವರು ಹಾನಗಲ್ಲು ಪಂಚಾಯಿತಿಯ ವಾಟರ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 27-12-2016 ರಂದು ಸಮಯ 18.00 ಗಂಟೆಗೆ ಎಂದಿನಂತೆ ನೀರನ್ನು ಬಿಡಲು ಹಾನಗಲ್ಲು ಗ್ರಾಮದ ಮಿಥುನ್ ಎಂಬುವವರ ಮನೆಯ ಪಕ್ಕದಲ್ಲಿ ಹೋಗುತ್ತಿರುವಾಗ ಆರೋಪಿ ವಿಶ್ವನಾಥ್ ಎಂಬವರು ಕೆ.ಕೆ. ಕುಮಾರ್ ರವರ ದಾರಿ ತಡೆದು ನೀರಿನ ವಿಚಾರದಲ್ಲಿ ಜಗಳ ತೆಗೆದು ಕೈಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಲಿಸುತ್ತಿದ್ದ ಬೈಕಿನಿಂದ ಬಿದ್ದು ಮಹಿಳೆಗೆ ಗಾಯ:

     ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಬಿದ್ದು ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಮಡಿಕೇರಿ ಹತ್ತಿರದ ಕಡಗದಾಳು ಗ್ರಾಮದ ಮಡಿಕೇರಿ-ವಿರಾಜಪೇಟೆ ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 26-12-2016 ರಂದು ಕಡಗದಾಳು ಗ್ರಾಮದ ನಿವಾಸಿ ರಾಮಚಂದ್ರ ಎಂಬವರು ತನ್ನ ಪತ್ನಿ ಮಾಲಿನಿಯೊಂದಿಗೆ ಮೋಟಾರ್ ಸೈಕಲ್ ನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಮಾಲಿನಿಯವರು ಮೋಟಾರ್ ಸೈಕಲಿಂದ ರಸ್ತೆಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡು ಅವರನ್ನು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ದಿನಾಂಕ 28-12-2016 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. 

ನೀರಿನ ವಿಚಾರದಲ್ಲಿ ವ್ಯಕ್ತಿಯ ದಾರಿ ತಡೆದು ಕೊಲೆ ಬೆದರಿಕೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಹಾನಗಲ್ಲು ಗ್ರಾಮದ ನಿವಾಸಿ ಬಿ.ಡಿ. ವಿಶ್ವನಾಥ ಎಂಬವರು ತಮ್ಮ ಮನೆಗೆ ಪಂಚಾಯಿತಿಯಿಂದ ನೀರು ಸರಬರಾಜು ಪಡೆದಿದ್ದು, ಸದ್ರಿ ನೀರನ್ನು ವಾಟರ್ ಮ್ಯಾನ್ ಕುಮಾರ್ ರವರು ಎಂಡ್ ಕ್ಯಾಪ್ ಹಾಕಿ ಬಂದ್ ಮಾಡಿ ಒಂದು ವಾರದಿಂದ ನೀರನ್ನು ಬಿಡದೇ ಇರುವುದನ್ನು ಸದರಿ ವಾಟರ್ ಮ್ಯಾನ್ ರವರಲ್ಲಿ ವಿಚಾರಿದ ಹಿನ್ನೆಲೆಯಲ್ಲಿ ದಿನಾಂಕ 27-12-2016 ರಂದು ಸಮಯ 17.30 ಗಂಟೆಗೆ ಫಿರ್ಯಾದಿ ವಿಶ್ವನಾಥ ರವರು ಅವರ ಮನೆಯಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗಆರೋಪಿ ಕುಮಾರ್ ರವರು ಫಿರ್ಯಾದಿಯವರನ್ನು ದಾರಿ ತಡೆದು ನಿಲ್ಲಿಸಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಈ ವಿಚಾರವಾಗಿ ಮುಂದುವರಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮದ್ಯ ಕುಡಿಯುವ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ದಿನಾಂಕ 28-12-2016 ರಂದು ಸಮಯ 4.00 ಪಿ.ಎಂ.ಗೆ ಸೋಮವಾರಪೇಟೆ ತಾಲೋಕಿನ ಕೊತ್ತನಳ್ಳಿ ಗ್ರಾಮದ ನಿವಾಸಿ ಕೆ.ಜಿ. ವಿನಾಯಕ ಎಂಬವರು ಸೋಮವಾರಪೇಟೆ ನಗರದಲ್ಲಿರುವ ರಿಲ್ಯಾಕ್ಸ್ ವೈನ್ಸ್ ಬ್ರಾಂಡಿ ಶಾಪ್ ನಲ್ಲಿ ಮದ್ಯ ಕುಡಿಯುತ್ತಿದ್ದಾಗ ಅಲ್ಲಿಗೆ ಬಂದ ಪುನಿತ್ ಮತ್ತು ಮಲ್ಲೇಶ ಇಬ್ಬರು ಕೆ.ಜಿ. ವಿನಾಯಕರನ್ನು ಕುರಿತು ನೀನು ನಮಗೆ ಸಾರಾಯಿ ಕುಡಿಸ ಬೇಕೆಂದು ಹೇಳಿದಾಗ ಸದರಿ ಕೆ.ಜಿ. ವಿನಾಯಕ ನನ್ನ ಹತ್ತಿರ ಹಣ ಇಲ್ಲ ಎಂದು ಹೇಳಿದ ಕಾರಣಕ್ಕೆ ಅವರಿಬ್ಬರು ಜಗಳ ತೆಗೆದು ಪುನಿತ್ ಎಂಬವನು ಬೀಯರ್ ಬಾಟಲಿಯಿಂದ ವಿನಾಯಕರವರ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯಿಂದ ಪತ್ನಿಯ ಕೊಲೆ, ಬಳಿಕ ಆತ್ಮಹತ್ಯೆಗೆ ಯತ್ನ:

     ಮಡಿಕೇರಿ ತಾಲೋಕಿನ ಎಂ. ಬಾಡಗ ಗ್ರಾಮದ ನಿವಾಸಿ ಬಾರಿಯಂಡ ಸಂಜನ್ ಎಂಬವರ ತೋಟದಲ್ಲಿ ಈಗ್ಗೆ ಮೂರು ತಿಂಗಳಿನಿಂದ ಜಹರುಲ್ಲಾ ಇಸ್ಲಾಂ ಮತ್ತು ಆತನ ಹೆಂಡತಿ ಜಹಿರಾನ್ ನೆಸ್ಸಾ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದು ಜಹರುಲ್ಲಾ ಇಸ್ಲಾಮನು ಆತನ ಪತ್ನಿಯ ಶೀಲ ಶಂಕಿಸಿ ಆಕೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದು ಈ ದಿನ ದಿನಾಂಕ 29.12.2016 ರಂದು ಬೆಳಗ್ಗಿನ ಜಾವ ಅಂದಾಜು ಸಮಯ 4.00 ಗಂಟೆಗೆ ಆರೋಪಿಯು ತನ್ನ ಹೆಂಡತಿಯೊಂದಿಗೆ ಜಗಳ ತೆಗೆದು ಆಕೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಲ್ಲದೇ ಆರೋಪಿಯು ಅದೇ ಕತ್ತಿಯಿಂದ ತನ್ನ ಗಂಟಲನ್ನು ಕೂಯ್ದು ಕೊಂಡು ಆತ್ಮ ಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥನಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, December 28, 2016

ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ:

     ಶಾಲಾ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ವಿರಾಜಪೇಟೆ ಸಮೀಪದ ಪೊದ್ದಮಾನಿ ಎಂಬಲ್ಲಿ ನಡೆದಿದೆ. ದಿನಾಂಕ 26-12-2016 ರಂದು ಟಿ.ಆರ್. ಚಂದ್ರ ಎಂಬವರು ತಮ್ಮ ಬಾಪ್ತು ಶಾಲಾ ವಾಹನವನ್ನು ಚಾಲಾಯಿಸಿಕೊಂಡು ವಿರಾಜಪೇಟೆ ನಗರದ ಕಡೆಯಿಂದ ಹೋಗುತ್ತಿದ್ದಾಗ ಪೊದ್ದಮಾನಿ ಎಂಬಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಬೈಕ್ ಸವಾರ ರಸ್ತೆ ಬದಿಯ ತೋಡಿನಲ್ಲಿ ಬಿದ್ದು ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:

      ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದಲ್ಲಿ ವಾಸವಾಗಿರುವ ನವೀನ್ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಜೇನುಕುರುಬರ ದಾಸ ಎಂಬವರ ಪತ್ನಿ ಶ್ರೀಮತಿ ಜಾನು ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-12-2016 ರಂದು ಅವರ ವಾಸದ ಮನೆಯ ಬಳಿ ಇರುವ ಕೆ.ಕೆ. ಉತ್ತಪ್ಪ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೇನುಕುರುಬರ ದಾಸ ರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

      ಮಡಿಕೇರಿ ನಗರದ ಭಗವತಿನಗರ ನಿವಾಸಿ ಟಿ.ಜಿ. ಸಂದೇಶ ಎಂಬವರು ದಿನಾಂಕ 27-12-2016 ರಂದು ತಮ್ಮ ಬಾಪ್ತು ಕೆಎ12-ಹೆಚ್-9895 ಮೋಟಾರ್ ಸೈಕಲಿನಲ್ಲಿ ಮಡಿಕೇರಿಯಿಂದ ಶ್ರೀಮಂಗಲಕ್ಕೆ ಹೋಗಲು ಗೋಣಿಕೊಪ್ಪದ ಮಾರ್ಗವಾಗಿ ಹೋಗುತ್ತಿದ್ದಾಗ ಗೋಣಿಕೊಪ್ಪ ಕೈಕೇರಿ ಗ್ರಾಮದ ಭಗವತಿ ದೇವಸ್ಥಾನದ ಬಳಿ ತಲುಪುವಾಗ್ಗೆ ಸಮಯ 05-15 ಗಂಟೆಯಲ್ಲಿ ಕೆಎ-12-ಎನ್-4185 ರ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂದೇಶ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಂದೇಶ್ ರವರು ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, December 27, 2016

ಗಂಡಸು ಕಾಣೆ ಪ್ರಕರಣ
                        ದಿನಾಂಕ 23-12-2016 ರಂದು ಬೆಳಿಗ್ಗೆ ಕುಶಾಲನಗರ ಬಳಿಯ ಕೂಡ್ಲೂರು ನಿವಾಸಿ ಜಗದೀಶ್‌ ಎಂಬವರು  ಮನೆಯ ಪಕ್ಕದಲ್ಲಿರುವ ವಸತಿ ಶಾಲೆಗೆ ಅಡಿಗೆ ಕೆಲಸಕ್ಕೆಂದು ಹೋಗಿದ್ದು ಇದುವರೆಗೂ ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಜಗದೀಶ್‌ರವರ ಪತ್ನಿ ವಿದ್ಯಾರಾಣಿ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಆತ್ಮಹತ್ಯೆ 
                     ದಿನಾಂಕ 26-12-2016 ರಂದು ನಾಪೋಕ್ಲು ನಿವಾಸಿ ಮಿನ್ನಂಡ ಪೂವಯ್ಯ ಎಂಬವರುನಾಪೋಕ್ಲು ಸಂತೆಗೆ  ಹೋಗಿ ಮನೆಗೆ ಬಂದು ಪತ್ನಿ ಜೊತೆ ಮಾತನಾಡಿ ಮನೆಯ ಮುಂದಿನ ಬೇಲಿಯ ಹತ್ತಿರ ಕುಳಿತುಕೊಂಡಿದ್ದ್ದು, ಸ್ವಲ್ಪ ಹೊತ್ತಿನಲ್ಲಿ ಪತ್ನಿ ಪಾರ್ವತಿಯವರು ಹೋಗಿ ನೋಡಿದಾಗ ಪೂವಯ್ಯ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದು. ವಿಷದ ಘಾಟು ವಾಸನೆ ಬರುತ್ತಿದ್ದು. ಆತಂಕಗೊಂಡು ಪಕ್ಕದ ಮನೆಯವರಿಗೆ ತಿಳಿಸಿ ನಾಪೋಕ್ಲು ನಂದಿನಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿಯೂ, ಪತಿ ಪೂವಯ್ಯನವರು ಯಾವುದೋ ವಿಷಯಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಿದ ದೂರಿನ ಮೇರೆಗೆ ನಾಫೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. .

Monday, December 26, 2016

ವಾಹನ ಅಫಘಾತ ಪ್ರಕರಣ
                       ದಿನಾಂಕ 25.12.2016 ರಂದು ಬೆಳಿಗ್ಗೆ ಬೆಂಗಳೂರು ನಿವಾಸಿ ಎಸ್‌.ಕೆ.ದಾಸ್‌ ಎಂಬವರು ಅವರ ಕಾರ್ ನಂ ಕೆಎ 04 ಎಂ.ಎಂ 9382 ರಲ್ಲಿ ಚಾಲಕ ಮುರುಳಿ ಎಂಬವರ ಚಾಲನೆಯಲ್ಲಿ ಮಡಿಕೇರಿಯಿಂದ ಸೋಮವಾರಪೇಟೆ ಕಡೆಗೆ ಬರಲು ಕುಸುಬೂರು ಗ್ರಾಮದಲ್ಲಿ ಬರುತ್ತಿರುವಾಗ ಹಿಂಬದಿಯಿಂದ ಬಂದ ಕೆಎ12 ಕೆ 7952 ರ ಬೈಕ್ ಚಾಲಕ ಕಾರಿನಿಂದ ಮುಂದೆ ಹೋಗಲು ಪ್ರಯತ್ನಿಸಿ, ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲನೆ ಮಾಡಿ ಕಾರಿನ ಬಲಬದಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿರುತ್ತದಲ್ಲದೆ ಬೈಕ್ ಚಾಲಕನಿಗೆ ಗಾಯವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಫಘಾತ
                    ದಿನಾಂಕ 25-12-16 ರಂದು ಸುಂಟಿಕೊಪ್ಪ ಬಳಿಯ ಗರಗಂದೂರು ಗ್ರಾಮದ ವಸಂತ ಎಂಬವರು ಸುಂಟಿಕೊಪ್ಪ ಸಂತೆಯಲ್ಲಿ ದಿನಸಿ ಸಾಮಾನು ಖರೀದಿಸಿ ತನ್ನ ಮನೆಗೆ ಹೋಗಲು ಪರಿಚಯದ ಬಾಲಕೃಷ್ಣ ಎಂಬವರೊಂದಿಗೆ ಬಾಲಕೃಷ್ಣರವರ ಸ್ಕೂಟರ್ ನಂ ಕೆಎ 12 ಎಲ್ 6813 ರಲ್ಲಿ ಹೋಗುತ್ತಿರುವಾಗ ಪನ್ಯ ಎಸ್ಟೇಟ್ ಬಳಿ ಮಾದಾಪುರ ಕಡೆಯಿಂದ ಕೆಎ-21-ಎಂ-4254ರ ಒಂದು ಆಲ್ಟೋ ಕಾರನ್ನು ಅದರ ಚಾಲಕ ಹನೀಫ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಬಾಲಕೃಷ್ಣ ರವರ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬಾಲಕೃಷ್ಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸ ತನಿಖೆ ಕೈಗೊಂಡಿದ್ದಾರೆ.

Sunday, December 25, 2016

ಪಾದಾಚಾರಿಗೆ ಪಿಕ್ ಅಪ್ ಜೀಪು ಡಿಕ್ಕಿ

             ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಹಳ್ಳಿಗಟ್ಟು ಎಂಬಲ್ಲಿ ಪಾದಾಚಾರಿಗೆ ಪಿಕ್ ಅಪ್ ಜೀಪು ಡಿಕ್ಕಿಪಡಿಸಿ ಪಾದಾಚಾರಿ ಗಾಯಗೊಂಡ ಬಗ್ಗೆ ವರದಿಯಾಗಿದೆ. ದಿನಾಂಕ 23-12-2016 ರಂದು CIT ಇಂಜನಿಯರಿಂಗ್ ಕಾಲೇಜ್ ಹಳ್ಳಿಗಟ್ಟುವಿನಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಶಂಕರ್ ಲಿಂಗೇಗೌಡ ಲಂಕೇಶ್ ಮತ್ತು ಸಾಗರ್ ರವರೊಂದಿಗೆ ಹಾಸ್ಟೆಲ್ ನಲ್ಲಿ ಊಟ ಮಾಡಿ ಕಾಲೇಜ್ ನ ಮುಂಭಾಗದ ಅಂಗಡಿಗೆ ಐಸ್ ಕ್ರೀಮ್ ತಿನ್ನಲು ಹೋಗಿ ವಾಪಸ್ಸು ಪೊನ್ನಂಪೇಟೆ ಕಡೆಹೋಗುವ ರಸ್ತೆಯಲ್ಲಿ 3 ಜನರು ನಡೆದುಕೊಂಡು ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಪಿಕ್ ಆಪ್ ಜೀಪನ್ನು ಅದರ ಚಾಲಕ ಅತೀ ವೇಗ ಅಜಾಗರುಕತೆಯಿಂದ ಓಡಿಸಿಕೊಂಡು ಹೋಗಿ ಜೊತೆಯಲ್ಲಿದ್ದ ಸಾಗರ್ ರವರಿಗೆ ಡಿಕ್ಕಿ ಪಡಿಸಿದ್ದು, ಸಾಗರ್ ರವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು, ನಂತರ ಚಿಕಿತ್ಸೆಯ ಬಗ್ಗೆ ಮೈಸೂರಿನ ಆಪೋಲೊ ಆಸ್ಪತ್ರೆಗೆ ದಾಖಲು ಪಡಿಸಿ ದಿನಾಂಕ 24-12-2016 ರಂದು ಶಂಕರಲಿಂಗೇಗೌಡರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.       

ಕೆರೆಗೆ ಜಾರಿ ಬಿದ್ದು ಮಹಿಳೆಯ ಸಾವು

          ವಿರಾಜಪೇಟೆ ತಾಲೂಕಿನ ಸುಳುಗೋಡು ಎಂಬಲ್ಲಿ ಮಹಿಳೆಯೊಬ್ಬರು ಕೆರೆಗೆ ಜಾರಿಬಿದ್ದು ಮೃತಪಟ್ಟಿರುವ ಘಟನೆ ನಡೆದಿರುತ್ತದೆ. ಸುಳುಗೋಡು ಗ್ರಾಮದ ಕಳ್ಳಿಚಂಡ ಕಟ್ಟಿ ಬೆಳ್ಳಿಯಪ್ಪನವರ ಲೈನ್ ಮನೆಯಲ್ಲಿ ವಾಸವಿರುವ ಪಣಿಎರವರ ಚುಬ್ಬಿ ಎಂಬುವವರ ತಂಗಿ ದೇವಿಯವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 13-12-2016 ರಂದು ಹುತ್ತರಿ ಹಬ್ಬದ ಸಂಬಂದ ದೇವಿಯು ಚುಬ್ಬಿರವರ ಮನೆಗೆ ಬಂದಿದ್ದು, ದಿನಾಂಕ 22-12-2016 ರಂದು ಸಂಜೆ ಸಮಯ ದೇವಿಯು ಗದ್ದೆಯ ಕಡೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿದಾಗ ಪತ್ತೆಯಾಗದೇ ಇದ್ದು, ದಿನಾಂಕ 24-12-2016 ರಂದು ಬೆಳಿಗ್ಗೆ ಕಟ್ಟಿ ಬೆಳ್ಳಿಯಪ್ಪನವರು ಗದ್ದೆಗೆ ಹೋಗುತ್ತಿದ್ದಾಗ ಅವರ ಕೆರೆಯಲ್ಲಿ ಒಂದು ಮೃತದೇಹವು ತೇಲಾಡುತ್ತಿದ್ದುದ್ದನ್ನು ಕಂಡು ಚುಬ್ಬಿರವರಿಗೆ ತಿಳಿಸಿದಾಗ, ನೋಡಲಾಗಿ ಅದು ಅವರ ತಂಗಿ ದೇವಿಯವರ ಮೃತದೇಹವಾಗಿದ್ದು, ದೇವಿಯು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಕೆರೆಯ ಪಕ್ಕ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು, ಮೃತ ಶರೀರದ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಪಣಿಎರವರ ಚುಬ್ಬಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ವಿಷ ಕುಡಿದು ವ್ಯಕ್ತಿಯ ಆತ್ಮಹತ್ಯೆ

           ಜೀವನದಲ್ಲಿ ಜಿಪುಪ್ಸೆಗೊಂಡು ವ್ಯಕ್ತಿಯೊಬ್ಬ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಲಕನೂರು ಎಂಬಲ್ಲಿ ನಡೆದಿದೆ. ಯಲಕನೂರು ಗ್ರಾಮದ ವಾಸಿ 52 ವರ್ಷ ಪ್ರಾಯ ಸುರೇಶ ಎಂಬುವವರು ದಿನಾಂಕ 23-12-2016 ರಂದು ರಾತ್ರಿ ಊಟ ಮಾಡಿ ಮಲಗಿದ್ದು ದಿನಾಂಕ 24-12-2016 ರಂದು ಬೆಳಿಗ್ಗೆ ವೇಳೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥರಾದವರನ್ನು ಅವರ ಪತ್ನಿ ನಾಗಮ್ಮರವರು ಚಿಕಿತ್ಸೆಯ ಬಗ್ಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಸಮಯ ಅಂದಾಜು 10-00 ಎ.ಎಂ ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಈ ಬಗ್ಗೆ ಮೃತರ ತಮ್ಮ ಮಂಜಪ್ಪರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Saturday, December 24, 2016

ಪತ್ನಿ ಮೇಲೆ ಪತಿಯಿಂದ ಹಲ್ಲೆ:
     ರಾತ್ರಿ ತಡವಾಗಿ ಮನೆಗೆ ಬಂದ ವಿಚಾರವನ್ನು ಪ್ರಶ್ನಿಸಿದ ಪತ್ನಿ ಮೇಲೆ ಆಕೆಯ ಪತಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮದಲ್ಲಿ ನಡೆದಿದೆ. ಅರುವತ್ತೋಕ್ಲು ಗ್ರಾಮದ ನಿವಾಸಿ ಕಿಶೋರ್ ಎಂಬವರು  ದಿನಾಂಕ 23-12-2016 ರಂದು ರಾತ್ರಿ ತಡವಾಗಿ ಮನೆಗೆ ಹೋದ ಬಗ್ಗೆ ಆತನ ಪತ್ನಿ ಶ್ರೀಮತಿ ವಿ.ಎಸ್. ಲಕ್ಷ್ಮಿ ವಿಚಾರಿಸಿದ್ದು ಇದರಿಂದ ಕೋಪಗೊಂಡ ಕಿಶೋರ್ ಪತ್ನಿ ಲಕ್ಷ್ಮಿಯ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಾರೋಗ್ಯದಿಂದ ವ್ಯಕ್ತಿಯ ಸಾವು:
      ಕೇರಳ ಮೂಲದ ವ್ಯಕ್ತಿಯೋರ್ವ ಇಟ್ಟಿಗೆ ಕುಯ್ಯಲು ತನ್ನ ಸ್ನೇಹಿತರೊಂದಿಗೆ ಪೊನ್ನಂಪೇಟೆ ಠಾಣಾ ಸರಹದ್ದಿನ ಮತ್ತೂರು ಗ್ರಾಮಕ್ಕೆ ಬಂದಿದ್ದು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.  ಕೇರಳ ರಾಜ್ಯದ ಪುತ್ತಂವೀಡ್ ತೋಟಮುಕ್ಕುಬಯಲ ಗ್ರಾಮದ ವ್ಯಕ್ತಿ 35 ವರ್ಷ ಪ್ರಾಯದ ಸುನಿಲ್ ಎಂಬಾತ ತನ್ನ ಸ್ನೇಹಿತರೊಂದಿಗೆ ಕೆಲವು ದಿವಸಗಳ ಹಿಂದೆ ಮತ್ತೂರು ಗ್ರಾಮಕ್ಕೆ  ಬಂದು ಕೆಲಸ ಮಾಡಿಕೊಂಡಿದ್ದು, ಆತ ಅನಾರೋಗ್ಯಕ್ಕೆ ತುತ್ತಾಗಿದ್ದು ದಿನಾಂಕ 23-12-2016 ರಂದು ತಾನು ವಾವವಿದ್ದ ಮನೆಯಲ್ಲಿ ಸಾವನಪ್ಪಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಿ.ಟಿ. ವಾಹನಕ್ಕೆ ಬಸ್ ಡಿಕ್ಕಿ:
     ಚಲಿಸುತ್ತಿದ್ದ ಟಿ.ಟಿ. ವಾಹನಕ್ಕೆ ಹಿಂಬದಿಯಿಂದ ಬಂದ ಬಸ್ಸೊಂದು ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ಇದ್ದ ಎರಡು ವಾಹನಗಳು ಜಖಂಗೊಂಡ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಹುದಿಕೇರಿಯಲ್ಲಿ ಸಂಭವಿಸಿದೆ.  ದಿನಾಂಕ 23-12-2016 ರಂದು ಬೆಂಗಳೂರಿನ ನಿವಾಸಿ ಗುಂಡು ಎಂಬವರು ಟಿ.ಟಿ. ವಾಹನದಲ್ಲಿ ಪ್ರವಾಸಕ್ಕೆ ಬಂದು ಪ್ರವಾಸಿಗರನ್ನು ಇರ್ಪು ಪಾಲ್ಸ್ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಹುದಿಕೇರಿ ಎಂಬಲ್ಲಿ ಹಿಂಬದಿಯಿಂದ ಬಂದ ಬಸ್ಸು ಸದರಿ ಟಿ.ಟಿ. ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಟಿ.ಟಿ. ವಾಹನ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ವಾಹನಗಳಿಗೂ ಡಿಕ್ಕಿ ಸಂಭವಿಸಿ ವಾಹನಗಳು ಜಖಂ ಗೊಂಡಿದ್ದು ಅಲ್ಲದೆ ಟಿ.ಟಿ. ವಾಹನದಲ್ಲಿದ್ದ ನಾಲ್ಕು ಜನ ಪ್ರಯಾಣಿಕರು ಗಾಯಗೊಂಡಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.  
ಅಕ್ರಮ ಮರಳು ಸಾಗಾಟ ಪತ್ತೆ:
      ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ  ವ್ಯಕ್ತಿಯನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  ದಿನಾಂಕ 23-12-2016 ರಂದು ಆರೋಪಿಗಳಾದ ಮಹಮ್ಮದ್ ನಸೀಬ್ ಮತ್ತು ಎಂ.ಟಿ. ಲೋಕೇಶ್ ಎಂಬವರು ಅಕ್ರಮವಾಗಿ ಸ್ವರಾಜ್ ಮಜ್ದಾ ಲಾರಿಯಲ್ಲಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಶ್ರೀ ಎನ್. ಕುಮಾರ ಆರಾದ್ಯ ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ಆರೋಪಿಗಳನ್ನು ಲಾರಿ ಸಮೇತ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.
ಮೋಟಾರ್ ಸೈಕಲಿಗೆ ಲಾರಿ ಡಿಕ್ಕಿ ಸವಾರನ ದುರ್ಮರಣ:
      ದಿನಾಂಕ 23-12-2016 ರಂದು  ಮಡಿಕೇರಿ ತಾಲೋಕು ಪಾರಾಣೆ ಗ್ರಾಮದ ನಿವಾಸಿ ಅಪ್ಪನೆರವಂಡ ಸಿದ್ದು ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಶ್ರೀಮತಿ ಜ್ಯೋತಿ ರವರ ಪತಿ ಮಧುಗೌಡ ಎಂಬವರು ಮೋಟಾರ್ ಸೈಕಲಿನಲ್ಲಿ ವಿರಾಜಪೇಟೆ ನಗರದ ಚಿಕ್ಕಪೇಟೆ ಎಂಬಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾಗಿ ಬೈಕ್ ಸವಾರ ಮಧುಗೌಡ ಸ್ಥಳದಲ್ಲೇ ಸಾವನಪ್ಪಿದ್ದು, ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.  

Friday, December 23, 2016

ವ್ಯಕ್ತಿ ಆತ್ಮಹತ್ಯೆ
                   ದಿನಾಂಕ 21/12/2016ರಂದು ಸಿದ್ದಾಪುರದಲ್ಲಿ ಕೆಪಿಟಿಸಿಎಲ್‌ ಕಚೇರಿಯಲ್ಲಿ ಕಿರಿಯ ಮಾರ್ಗದಾಳು ಕೆಲಸ ನಿರ್ವಹಿಸಿಕೊಂಡಿರುವ ದೇವರಾಜ್‌ ಯಲ್ಲಪ್ಪ ಗುರಮ್ಮನವರ ಎಂಬವರು ಸಿದ್ದಾಪುರದ ಅವರ ವಸತಿ  ಗೃಹದಲ್ಲಿ ಫ್ಯಾನಿನ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮೃತ ದೇವರಾಜರವರು ಸುಮಾರು ಒಂದು ವರ್ಷದಿಂದ ಸಿದ್ದಾಪುರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದೀಪಾವಳಿ ರಜೆಗೆ ಮನೆಗೆ ಹೋದಾಗ ಸಿದ್ದಾಪುರದ ಚೆಸ್ಕಾಂ ಕಿರಿಯ ಇಂಜಿನಿಯರ್‌ ದಿಲೀಪ್‌ ಕುಮಾರ್‌ರವರು ಕರ್ತವ್ಯದಲ್ಲಿ ಕಿರುಕುಳ ನೀಡುವ ಕುರಿತು ಅವರ ತಂದೆಯವರಲ್ಲಿ ಹೇಳಿರುವುದಾಗಿ ದೇವರಾಜ್‌ರವರ ತಂದೆ ಯಲ್ಲಪ್ಪ ಗುರಮ್ಮನವರ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್‌ ಡಿಕ್ಕಿ
                       ದಿನಾಂಕ 22/12/2016ರಂದು ಮಡಿಕೇರಿ ನಗರದ ಆರ್ಮಿ ಕ್ಯಾಂಟೀನ್‌ ಬಳಿಯ ರಸ್ತೆಯಲ್ಲಿ ಜಿಲ್ಲಾ ಪೊಲಿಸ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ರಾಜೇಶ್‌ ಎಂಬವರು ಅವರ ಬೈಕು ಸಂಖ್ಯೆ ಕೆಎ-12-ಹೆಚ್‌-5881ರಲ್ಲಿ ಮನೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-12-ಕೆ-415ರ ಮೋಟಾರು ಸೈಕಲನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜೇಶ್‌ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಾಜೇಶ್‌ರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ  ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕು  ಡಿಕ್ಕಿ
                     ದಿನಾಂಕ 21/12/2016ರಂದು ವಿರಾಜಪೇಟೆ ಬಳಿಯ ಕಲ್ಲುಬಾಣೆ ನಿವಾಸಿ ಇ.ವಿ.ಶಬೀರ್‌ ಎಂಬವರು ಅವರ ಅಣ್ಣನ ಇನೋವಾ ಕಾರು ಸಂಖ್ಯೆ ಕೆಎ-03-ಎಂಇ-4840ರಲ್ಲಿ ವಿರಾಜಪೇಟೆ ಕಡೆಗೆ ಬರುತ್ತಿರುವಾಗ ಮಗ್ಗುಲ ಗ್ರಾಮದ ಬಳಿ ಎದುರುಗಡೆಯಿಂದ ಕೆಎ-12-ಕೆ-7346ರ ಮೋಟಾರು ಬೈಕನ್ನು ಅದರ ಚಾಲಕ ಮನ್ಸೂರ್‌ ಎಂಬವರು ಬೈಕಿನಲ್ಲಿ ಇನ್ನೂ ಇಬ್ಬರನ್ನು ಕೂರಿಸಿಕೊಂಡು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಬೀರ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೂವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

Thursday, December 22, 2016

 ದೇವಾಲಯದ ಕಾಣಿಕೆ ಹುಂಡಿ ಕಳವು:

ದೇವಾಲಯದ ಬೀಗ ಮುರಿದು ಕಾಣಿಕೆ ಹುಂಡಿ ಕಳ್ಳತನ ಮಾಡಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ನೇಗಳ್ಳಿ ಕರ್ಕಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-12-2016 ರಂದು ರಾತ್ರಿ ಯಾರೋ ಕಳ್ಳರು ಸೋಮವಾರಪೇಟೆ ತಾಲೋಕು ನೇಗಳ್ಳಿ ಕರ್ಕಳ್ಳಿ ಗ್ರಾಮದಲ್ಲಿರುವ ಕನ್ನಂಬಾಡಿ ಅಮ್ಮ ದೇವಸ್ಥಾನದ ಬೀಗವನ್ನು ಮುರಿದು ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿಕೊಂಡು ಹೋಗಿ ದೇವಾಲಯದ ಹತ್ತಿರ ಸದರಿ ಹುಂಡಿಯನ್ನು ಒಡೆದುಹಾಕಿ ಅದರಲ್ಲಿದ್ದ 15,000 ರೂ.ಗಳನ್ನು ತೆಗೆದುಕೊಂಡು ಹೋಗಿರುವುದಾಗಿ ದೇವಾಲಯದ ಅಧ್ಯಕ್ಷರಾದ ಎನ್.ಎಂ. ದಿವಾಕರ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೈಕ್ ಡಿಕ್ಕಿ, ಇಬ್ಬರಿಗೆ ಗಾಯ:
     ಕಾರಿಗೆ ಬೈಕೊಂದು ಡಿಕ್ಕಿಯಾದ ಪರಿಣಾಮವಾಗಿ ಇಬ್ಬರು ಗಾಯಗೊಂಡು ಎರಡೂವಾಹನಗಳು ಜಖಂಗೊಂಡಿರುವ ಬಗ್ಗೆ ವಿರಾಜಪೇಟೆ ನಗರ ಹತ್ತಿರದ ಚಿಕ್ಕಪೇಟೆಯಲ್ಲಿ ನಡೆದಿದೆ. ದಿನಾಂಕ 21-12-2016 ರಂದು ವಿರಾಜಪೇಟೆ ನಗರ ನಿವಾಸಿ ಮನೋಜ್ ಮುತ್ತಣ್ಣ ಎಂಬವರ ಪುತ್ರ ವಿನಿತ್ ತನ್ನ ಬಾಪ್ತು ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ದುಡುಕಿನಿಂದ ಚಲಾಯಿಸಿ ಎದುರುಗಡೆಯಿಂದ ಬರುತ್ತಿದ್ದ ಫಿರ್ಯಾದಿ ಪಿ.ಇ. ನಾಸಿರ್ ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ನಾಸಿರ್ ಹಾಗು ಬೈಕ್ ಸವಾರ ವಿನಿತ್ ರವರು ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂ ಗೊಂಡಿದ್ದು, ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ತೋಟದಿಂದ ಅಡಿಕೆ ಕಳುವಿಗೆ ಯತ್ನ:

     ಅಡಿಕೆ ತೋಟದಿಂದ ಇಬ್ಬರು ವ್ಯಕ್ತಿಗಳು ಅಡಿಕೆ ಕಳ್ಳತನಕ್ಕೆ ಯತ್ನಿಸಿದ ಘಟನೆ ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 21-12-2016 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮ ನಿವಾಸಿ ಬಿ.ಆರ್. ಶ್ರೀಪತಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ರುವ ಅಡಿಕೆ ಮರಗಳಿಂದ ಇಬ್ಬರು ವ್ಯಕ್ತಿಗಳು ಅಡಿಕೆ ಮರದಿಂದ ಅಡಿಕೆಯನ್ನು ಕಳ್ಳತನ ಮಾಡುತ್ತಿದ್ದಾಗ ಫಿರ್ಯಾದಿ ಬಿ.ಆರ್. ಶ್ರೀಪತಿರವರು ಕಂಡು ಸ್ಥಳಕ್ಕೆ ಹೋದಾಗ ಅಡಿಕೆ ಮರದ ಕೆಳಗೆ ಚೀಲವನ್ನು ಹಿಡಿದು ನಿಂತಿದ್ದ ವ್ಯಕ್ತಿ ಫಿರ್ಯಾದಿಯನ್ನು ನೋಡಿ ಓಡಿಹೋಗಿದ್ದು, ಅಡಿಕೆ ಮರವೇರಿ ಕಡಿಕೆ ತೆಗೆಯುತ್ತಿದ್ದ ವ್ಯಕ್ತಿಯನ್ನು ಹಿಡಿಯಲು ಪ್ರಯತ್ನಿಸಿದಾಗ ಆತ ಕೂಡಾ ತಪ್ಪಿಸಿಕೊಂಡು ಹೋಗಿರುವುದಾಗಿಯು, ಕೋತೂರು ಗ್ರಾಮದ ಲಕ್ಕುಂದ ಪೈಸಾರಿಯಲ್ಲಿ ವಾಸವಾಗಿರುವ ಪಿ. ಮಣಿ ಮತ್ತು ಜೆ. ರವಿ ಎಂಬವರುಗಳು ಈ ಕಳ್ಳತನ ಮಾಡಿರುವ ಗುಮಾನಿ ಇದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, December 21, 2016

ವ್ಯಕ್ತಿ ಆತ್ಮಹತ್ಯೆ
                          ದಿನಾಂಕ 20/12/2016ರಂದು ಕಡಗದಾಳು ನಿವಾಸಿ ಬಿದ್ದಪ್ಪ ಎಂಬವರ ತಂದೆ ಅಯ್ಯಪ್ಪ ಎಂಬವರು ಕಡಗದಾಳು ಬಳಿ ಚಾಮುಂಡೇಶ್ವರಿ ದೇವಸ್ಥಾನದ ಬಳಿ ವಿಷ ಸೇವಿಸಿ ಅಸ್ವಸ್ಥರಾಗಿ ಬಿದ್ದಿದ್ದು, ಅವರನ್ನು ಕೂಡಲೇ ಚಿಕಿತ್ಸೆಗಾಗಿ ಮಡಿಕೇರಿಯ  ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ವ್ಯಕ್ತಿಯ ಮೇಲೆ ಹಲ್ಲೆ
                            ದಿನಾಂಕ 19/12/2016ರಂದು ಗೋಣಿಕೊಪ್ಪ ಬಳಿಯ ಚೆನ್ನಂಗೊಲ್ಲಿ ಪೈಸಾರಿ ನಿವಾಸಿ ಅಖಿಲೇಶ್‌ ರವರ ಮನೆಯ ಮುಂದಿನ ಪ್ರದೀಪ್‌ರವರ ಬೇಲಿಯನ್ನು ಹರೀಶ್‌ ಮತ್ತು ದಿನೇಶ್‌ ಎಂಬವರು ಕಡಿಯುತ್ತಿದ್ದುದನ್ನು ಅಖಿಲೇಶ್‌ರವರು ವಿಚಾರಿಸಿದ ಕಾರಣಕ್ಕೆ  ಹರೀಶ್‌ ಹಾಗೂ ದಿನೇಶ್‌ರವರು ಪ್ರದೀಪ್‌ ಮತ್ತು ಅಖಿಲೇಶ್‌ರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಫಘಾತ
                           ದಿನಾಂಕ 18/12/2016ರಂದು ವಿನ್ಸೆಂಟ್‌ ಎಂಬವರು ಅವರ ಸ್ಕೂಟರ್‌ ನಲ್ಲಿ ಪತ್ನಿ ಜೆಸ್ಸಿಯವರೊಂದಿಗೆ ವಿರಾಜಪೇಟೆ ನಗರದ ಮಲಬಾರ್‌ ರಸ್ತೆಯಲ್ಲಿ ಬರುತ್ತಿದ್ದಾಗ ಕೆಎ-05-ಎಂಸಿ-5046ರ ಆಲ್ಟೋ ಕಾರಿನ ಚಾಲಕ ದಿನೇಶ್‌ ಎಂಬಾತನು ಕಾರನ್ನು ಅಜಾಗರೂಕತೆಯಿಂದ ಹಿಂದಕ್ಕೆ ಚಾಲಿಸಿದ ಪರಿಣಾಮ  ಕಾರು ವಿನ್ಸೆಂಟ್‌ರವರ ಸ್ಕೂಟರ್‌ಗೆ ಡಿಕ್ಕಿಯಾಗಿ ವಿನ್ಸೆಂಟ್‌ರವರಿಗೆ ಗಾಯಗಳಾಗಿರುವುದಾಗಿ   ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ ಪತ್ತೆ
                       ದಿನಾಂಕ 20/12/2016ರಂದು ಸೋಮವಾರಪೇಟೆ ಬಳಿಯ ಶಾಂತಳ್ಳಿ ಮಾರ್ಗವಾಗಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ  ಸೋಮವಾರಪೇಟೆ ಪಿಎಸ್‌ಐ ಶಿವಣ್ಣರವರು ಕಾರ್ಯಾಚರಣೆ ನಡೆಸಿ ಶಾಂತಳ್ಳಿ ಕಡೆಗೆ ಹೋಗುವ ವನಗೂರು ಕೊಪ್ಪ ಜಂಕ್ಷನ್‌ ಬಳಿ ಕೆಎ-12-ಎ-7021ರ ಪಿಕ್‌ಅಪ್‌ ಜೀಪಿನಲ್ಲಿ ಲಿಖಿತ್‌ ಹಾಗೂ ಸಚಿನ್‌ ಎಂಬವರು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮರಳನ್ನು ಮತ್ತು ಜೀಪನ್ನು ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Tuesday, December 20, 2016

 ಕಾಫಿ ತೋಟಕ್ಕೆ ಅಕ್ರಮವಾಗಿ ನುಗ್ಗಿ ಕಾಫಿ ಕಳವು:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಕೆದಕಲ್ ಗ್ರಾಮದ ನಿವಾಸಿ ಎಂ.ಕೆ. ಬಿದ್ದಪ್ಪ ಎಂಬವರ ಕಾಫಿ ತೋಟಕ್ಕೆ ಆರೋಪಿಗಳಾದ ಹಾಲೇರಿ ಗ್ರಾಮದ ಎಂ.ಆರ್. ಗಣಪತಿ ಹಾಗು ಎಂ.ಜಿ.ಸುಬ್ಬಯ್ಯ ಎಂಬವರುಗಳು ದಿನಾಂಕ: 18.12.2016ರಂದು ಸಮಯ 11.00 ಗಂಟೆಗೆ ಅಕ್ರಮ ಪ್ರವೇಶ ಮಾಡಿ ತೋಟದಲ್ಲಿದ್ದ ಕಾಫಿ ಹಣ್ಣುಗಳನ್ನು ಕೊಯ್ದು ಸುಮಾರು 4000 ಕೆಜಿಯಷ್ಟು ಕೊಯ್ದುಗೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:
 
     ತೋಟದ ಬೇಲಿ ಕಡಿಯುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಒಬ್ಬಾತನ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಚೆನ್ನಂಗೊಲ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-12-2016 ರಂದು ಸಮಯ 23.30 ಗಂಟಗೆ ಗೋಣಿಕೊಪ್ಪ ಚೆನ್ನಂಗೊಲ್ಲಿ ಪೈಸಾರಿಯ ಅಖಿಲೇಶ್ ಕೆ. ಎಂಬವರ ಮನೆಯ ಮುಂದಿನ ರಸ್ತೆಯಲ್ಲಿ ಪ್ರದೀಫ್‌ರವರ ಮನೆಯ ಬೇಲಿಯನ್ನು ಕಡಿಯುತ್ತಿದ್ದ ವಿಚಾರದಲ್ಲಿ ಪ್ರದೀಫ್‌‌ ಮತ್ತು ಹರೀಶ್‌‌ ರವರುಗಳ ನಡುವೆ ಜಗಳ ವಾಗಿ ಹರೀಶ ಕತ್ತಿಯಿಂದ ಪ್ರದೀಪ್ ರವರ ಮೇಲೆ ಹಲ್ಲೆನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ತೋಟಕ್ಕೆ ಅಕ್ರಮ ಪ್ರವೇಶ ಕಾಫಿ ಕಳವು:

     ವ್ಯಕ್ತಿಯೊಬ್ಬರ ಕಾಫಿ ತೋಟಕ್ಕೆ 20 ರಿಂದ 25 ಮಂದಿ ಇದ್ದ ತಂಡ ನುಗ್ಗಿ ಕಾಫಿ ಕುಯ್ದುಕೊಂಡು ಹೋದ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಕೆದಕಲ್ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-12-2016 ರಂದು ಕೆದಕಲ್ ಗ್ರಾಮದ ನಿವಾಸಿಗಳಾದ ಬಿದ್ದಪ್ಪ ಎಂಬವರು ಸುಮಾರು 20 ರಿಂದ 25 ಮಂದಿ ಜನರೊಂದಿಗೆ ಅದೇ ಗ್ರಾಮದ ನಿವಾಸಿ ಫಿರ್ಯಾದಿ ಸುಬ್ಬಯ್ಯ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮವಾಗಿ ನುಗ್ಗಿ ಕಾಫಿತೋಟದಿಂದ ಸುಮಾರು 30 ಚೀಲ ಕಾಫಿಯನ್ನು ಕುಯ್ದುಕೊಂಡು ಹೋಗುರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಮನುಷ್ಯ ಕಾಣೆ:
   ವಿರಾಜಪೇಟೆ ತಾಲೋಕು ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ರವಿನಾಯಕ್ ಎಂಬವರ ಸಹೋದರ ಶಿವಕುಮಾರ್ (56) ಎಂಬವರು ದಿನಾಂಕ 10-12-2016 ರಂದು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನೇಣುಬಿಗಿದುಕೊಂಡು ಹುಡುಗಿ ಆತ್ಮಹತ್ಯೆ:

          ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್ ಮಂಗಲ ಗ್ರಾಮದ ನಿವಾಸಿ ಮೋಗೇರ ಪೊನ್ನಪ್ಪ ಎಂಬವರ ಮಗಳು 16 ವರ್ಷ ಪ್ರಾಯದ ಮಂಜುಳ ಎಂಬಾಕೆ ದಿನಾಂಕ 19-12-2016 ರಂದು ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೋಗೇರ ಪೊನ್ನಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, December 19, 2016

ವ್ಯಕ್ತಿಯ ಕೊಲೆ ಯತ್ನ:

          ಆಟೋ ಚಾಲಕನೊಬ್ಬನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಕೊಲೆಗೆ ಯತ್ನಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ.  ವಿರಾಜಪೇಟೆ ತಾಲೋಕು ಕೈಕೇರಿ ಗ್ರಾಮದ ನಿವಾಸಿ ಕೆ.ಆರ್. ಪ್ರಕಾಶ ಎಂಬವರು ಗೋಣಿಕೊಪ್ಪ ನಗರದಲ್ಲಿ ಆಟೋವನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದು ದಿನಾಂಕ 18/12/2016 ರಂದು ಸಂಜೆ 6-00 ಗಂಟೆಗೆ ಗೋಣಿಕೊಪ್ಪ ನಗರದ ಆಟೋ ನಿಲ್ದಾಣದಲ್ಲಿ ತಮ್ಮ ಬಾಪ್ತು ಆಟೋ ರಿಕ್ಷಾವನ್ನು ನಿಲ್ಲಿಸಿಕೊಂಡು ನಿಂತಿರುವಾಗ್ಗೆ ಆರೋಪಿ ಸೆಂದಿಲ್ ಎಂಬಾತ ಅಲ್ಲಿಗೆ ಬಂದು ಅರುವತೋಕ್ಲಿಗೆ ಹೋಗಬೇಕು ನಡಿ ಎಂದು ಹೇಳಿದಾಗ ಪಿರ್ಯಾದಿಯವರು 30 ರೂ ಬಾಡಿಗೆ ಆಗುತ್ತದೆ ಎಂದು ಹೇಳಿದ್ದು ಇದರಿಂದ ಸದರಿ ಆರೋಪಿ ರಿಕ್ಷಾ ಚಾಲಕ ಪ್ರಕಾಶ್ ರವರನ್ನು ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಹಾಕಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಎಡ ಕೆನ್ನಗೆ, ಹೊಟ್ಟೆಯ ಬಾಗಕ್ಕೆ ಒದ್ದು ನೋವುಂಟು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

Sunday, December 18, 2016

 ಬೈಕಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ಬೈಕಿಗೆ ಕಾರೊಂದು ಡಿಕ್ಕಿಯಾಗಿ ದಂಪತಿಗಳು ಗಾಯಗೊಂಡ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಕಮಟೆ- ಬಾಳಾಜಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-12-2016 ರಂದು ವಿರಾಜಪೇಟೆ ತಾಲೋಕು ಪೊನ್ನಪ್ಪಸಂತೆ ಗ್ರಾಮದ ನಿವಾಸಿಗಳಾದ ಶ್ರೀಮತಿ ಮೈಮುನಾ ಮತ್ತು ಅವರ ಪತಿ ಮುಸ್ತಾಫಾ ರವರು ಮೋಟಾರ್ ಸೈಕಲ್ ನಲ್ಲಿ ಬಾಳೆಲೆ ಕಡೆಯಿಂದ ಬರುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಬಂದ ಎಂಹೆಚ್-11-ಎಕೆ-8888 ರ ಸ್ವಿಟ್ ಕಾರಿನ ಚಾಲಕ ಸದರಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಸ್ತಾಫಾ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತವಾಗಿ ಬಿದ್ದ ಶ್ರೀಮತಿ ಮೈಮುನಾ ಹಾಗು ಸವಾರ ಮುಸ್ತಾಪಾರವರು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿರಾಜಪೇಟೆ ನಗರ ಠಾಣಾಧಿಕಾರಿಯಾದ ಶ್ರೀ ಜಿ.ಕೆ. ಸುಬ್ರಮಣ್ಯ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 17-12-2016 ರಂದು 22-00 ಗಂಟೆಗೆ ಸಿಬ್ಬಂದಿಯೊಂದಿಗೆ ವಿರಾಜಪೇಟೆ ಕಾವೇರಿ ಕಾಲೇಜು ಬಳಿ ವ್ಯಕ್ತಿಯೊಬ್ಬರು ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹೆಚ್ಚಿ ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಾಗದ ವಿಚಾರದಲ್ಲಿ ಜಗಳ, ಹಲ್ಲೆ:
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡು ಗ್ರಾಮದ ನಿವಾಸಿ ಹೆಚ್.ಆರ್. ರವಿ ಎಂಬವರು ಖರೀದಿಸಿದ ಜಾಗದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಲ್ಲಿ ದಿನಾಂಕ 17-12-2016 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಪೂಜಾ ವಿಧಿಗಳನ್ನು ಮಾಡುತ್ತಿರುವಾಗ್ಗೆ ಅದೇ ಗ್ರಾಮದ ನಿವಾಸಿಗಳಾದ ಸ್ಮಿತ, ಗ್ರೇಸಿ ಹಾಗು ನೇತ್ರ ಎಂಬವರು ಅಲ್ಲಿಗೆ ಬಂದು ಸದರಿ ಜಾಗವು ತಮಗೆ ಸೇರಬೇಕು ಎಂದು ಜಗಳ ಮಾಡಿ ಫಿರ್ಯಾದಿ ರವಿಯವರ ತಾಯಿ ನೀಲಮ್ಮನವರ ದಾರಿ ತಡೆದು ಹಲ್ಲೆ ನಡೆಸಿ, ಫಿರ್ಯಾದಿ ಹೆಚ್.ಆರ್. ರವಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ಮಹಿಳೆ ಮೇಲೆ ಹಲ್ಲೆ:

      ಮಹಿಳೆಯೊಬ್ಬರ ಮೇಲೆ ಐದು ಮಂದಿ ವಿನಾಕಾರಣ ಹಲ್ಲೆ ನಡೆಸಿದ ಘಟನೆ  ಮೂರ್ನಾಡು ಗ್ರಾಮದಲ್ಲಿ ನಡೆದಿದೆ  ಮಡಿಕೇರಿ ತಾಲೋಕು ಮುರ್ನಾಡು ಗ್ರಾಮದ ನಿವಾಸಿ ಶ್ರೀಮತಿ ನೇತ್ರ ಎಂಬವರು ದಿನಾಂಕ 17-12-2016 ರಂದು ಮುರ್ನಾಡು ಗ್ರಾಮದಲ್ಲಿರುವ ತಮಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಲು ಜಾಗವನ್ನು ಸ್ವಚ್ಚ ಮಾಡುತ್ತಿದ್ದ ಸಮಯದಲ್ಲಿ ಮುರ್ನಾಡು ಗಾಂಧಿನಗರ ನಿವಾಸಿಗಳಾದ ರವಿ, ರಾಮ, ನೀಲಮ್ಮ, ಹೊನ್ನಮ್ಮ, ಪಾರ್ವತಿ ಮತ್ತು ಪಟ್ಟು ಎಂಬವರು ಫಿರ್ಯಾದಿಯೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ:

      ವ್ಯಕ್ತಿಯೊಬ್ಬರು ಅಕ್ರಮವಾಗಿ ಮರಳನ್ನು ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 17-12-2016 ರಂದು ವ್ಯಕ್ತಿಯೊಬ್ಬರು ಪಿಕ್ ಅಪ್ ವಾಹನ ಸಂಖ್ಯೆಕೆಎ-12-ಬಿ-2389ರಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಮಾರಾಟ ಮಾಡುದ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀ ಎಸ್.ಶಿವಪ್ರಕಾಶ್ ನೇತೃತ್ವದ ತಂಡ  ಅಕ್ರಮ ಮರಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.  

Saturday, December 17, 2016

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

      ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ನಾಲಡಿ ಗ್ರಾಮದಲ್ಲಿ ನಡೆದಿದೆ. ನಾಲಡಿ ಗ್ರಾಮದ ನಿವಾಸಿ ಚೋಂದಮ್ಮ ಎಂಬವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13-12-2016 ರಂದು ಕ್ರಿಮಿನಾಶಕ ಪದಾರ್ಥವನ್ನು ಸೇವಿಸಿ ಅಸ್ವಸ್ಥರಾಗಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 15-12-2016 ರಂದು ಮೃತಪಟ್ಟಿರುತ್ತಾರೆಂದು ಫಿರ್ಯಾದಿ ಕುಡಿಯರ ಮುತ್ತಪ್ಪ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

     ಸಿದ್ದಾಪುರ ಠಾಣಾ ಸರಹದ್ದಿನ ಬಾಡಗಬಾಣಂಗಾಲ ಗ್ರಾಮದಲ್ಲಿರುವ ಮಾರ್ ಗ್ರೋವ್ ಕಾಫಿ ತೋಟದಲ್ಲಿ ರೈಟರ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದ ಕೇನೇರ ಪ್ರವೀಣ್ (40) ಎಂಬ ವ್ಯಕ್ತಿಗೆ ಮದ್ಯಪಾನ ಮಾಡುವ ಹವ್ಯಾಸವಿದ್ದು, ವಿಪರೀತ ಸಾಲಮಾಡಿಕೊಂಡು ಜೀವನವನ್ನು ಸಾಗಿಸಲು ಕಷ್ಟಕರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15-12-2016 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಕೆ.ಪಿ. ಇಂದಿರ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿ ವಿಚಾರದಲ್ಲಿ ದ್ವೇಷ, ವ್ಯಕ್ತಿಗೆ ಚೂರಿಯಿಂದ ಇರಿತ:

     ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮತ್ತೊಬ್ಬ ವ್ಯಕ್ತಿ ಚಾಕುವಿನಿಂದ ಇರಿದು ಗಾಯಪಡಿಸಿದ ಘಟನೆ ವಿರಾಜಪೇಟೆ ತಾಲೋಕು ನಲ್ವತ್ತೊಕ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-12-2016 ರಂದು ನಲ್ವತ್ತೊಕ್ಲು ಗ್ರಾಮದ ನಿವಾಸಿ ನಲ್ಲಚಂಡ ಸುನಿಲ್ ಎಂಬವರ ಮೇಲೆ ಅದೇ ಗ್ರಾಮದ ರಾಜಾ ತಮ್ಮಯ್ಯ ಎಂಬವರು ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಚೂರಿಯಿಂದ ಇರಿದು ಗಾಯಪಡಿಸಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದ್ವೇಷದಿಂದ ವ್ಯಕ್ತಿ ಮೇಲೆ ಹಲ್ಲೆ:

      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು ಗ್ರಾಮದಲ್ಲಿ ವಾಸವಾರಿರುವ ಪಣಿಎರವರ ಸಿದ್ದ ಎಂಬವರ ಮೇಲೆ ಅದೇ ಗ್ರಾಮದ ನಿವಾಸಿ ಪಣಿಎರವರ ರಘು ಎಂಬವರು ದ್ವೇಷವನ್ನಿಟ್ಟುಕೊಂಡು ದಿನಾಂಕ 15-12-2016 ರಂದು ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ವೃದ್ದೆ ಆತ್ಮಹತ್ಯೆ:

      ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಳ್ಳುಮಾಡು ಗ್ರಾಮದ ನಿವಾಸಿ ಶ್ರೀಮತಿ ಅಕ್ಕಣಿ ಎಂಬವರ ಚಿಕ್ಕಮ್ಮ ಪ್ರಾಯ 90 ವರ್ಷದ ಶ್ರೀಮತಿ ಕರಂಜಿ ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು ದಿನಾಂಕ 16-12-2016 ರಂದು ತಾನು ವಾಸವಾಗಿದ್ದ ಲೈನುಮನೆಯ ಹತ್ತಿರದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಫಿರ್ಯಾದಿ ಶ್ರೀಮತಿ ಅಕ್ಕಣಿ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Friday, December 16, 2016

ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ:

     ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ನೀರುಗುಂದ ಗ್ರಾಮದಲ್ಲಿ ನಡೆದಿದೆ. ನೀರುಗುಂದ ಗ್ರಾಮದ ನಿವಾಸಿ ಎನ್.ಡಿ. ಕೃಷ್ಣಮೂರ್ತಿ ಎಂಬವರು ದಿನಾಂಕ 14-12-2016 ರಂದು ತನ್ನ ಪತ್ನಿಯೊಂದಿಗೆ ಪತ್ನಿಯ ಸಹೋದರರ ಮನೆಗೆ ಹೋಗಿದ್ದು ಅಲ್ಲಿ ಫಿರ್ಯಾದಿ ಎನ್.ಡಿ. ಕೃಷ್ಣಮೂರ್ತಿ ಹಾಗು ಅವರ ಪತ್ನಿಯ ಸಹೋದರರಾದ ಕೃಷ್ಣ ಮತ್ತು ರಘು ರವರ ನಡುವೆ ಮಾತಿನ ಚಕಮಿಕಿ ನಡೆದು ಸದರಿ ಕೃಷ್ಣ ಹಾಗು ರಘು ರವರು ಕತ್ತಿಯಿಂದ ಫಿರ್ಯಾದಿ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರೆಸ್ಟೋರೆಂಟ್ ಕಟ್ಟಡಕ್ಕೆ ಬಸ್ಸು ಡಿಕ್ಕಿ:

    ಬಸ್ಸೊಂದು ರೆಸ್ಟೋರೆಂಟ್ ಕಟ್ಟಡಕ್ಕೆ ಡಿಕ್ಕಿಯಾಗಿ ಕಟ್ಟಡಕ್ಕೆ ಹಾನಿಯಾಗಿ ಲಕ್ಷಾಂತರ ರೂಪಾಯಿ ಹಣ ನಷ್ಟವಾದ ಘಟನೆ ಕುಶಾಲನಗರದಲ್ಲಿ ಸಂಭವಿಸಿದೆ. ದಿನಾಂಕ 12-12-2016 ರಂದು ಕುಶಾಲನಗರ ಪಟ್ಟಣದಲ್ಲಿರುವ ಹ್ಯಾರೀಸ್ ಹೊಟೇಲ್ ಬಾರ್ ಅಂಡ್ ರೆಸ್ಟೋರೆಂಟ್ ಕಟ್ಟಡದ ಹಿಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಬಸ್ ಕೆಎಲ್-02-ಆರ್ 9547ರ ಬಸ್ಸ್ ನ್ನು ಅದರ ಚಾಲಕ ಮಾರುತಿ ಎಂಬವರು ದುಡುಕಿನಿಂದ ಚಾಲಿಸಿಕೊಂಡು ಬಂದು ರೆಸ್ಟೋರೆಂಟ್ ಕಟ್ಟಡಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಟ್ಟಡದ ಕಾಂಪೌಂಡ್, ಕಿಟಕಿ, ಗೋಡೆ, ಕಬ್ಬಿಣದ ಆಧಾರಸ್ತಂಭ, ಹೋಟೆಲ್ ಗೆ ಅಳವಡಿಸಿದ್ದ ಸಿಸಿ ಕ್ಯಾಮರಾ, ಮೇಲ್ಚಾವಣಿ ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿ ಜಖಂಗೊಂಡಿದ್ದು ಅಂದಾಜು 9 ರಿಂದ 10 ಲಕ್ಷದವರೆಗೆ ನಷ್ಟವಾಗಿರುತ್ತದೆ ಎಂಬುದಾಗಿ ಫಿರ್ಯಾದಿ ಕೃಷ್ಣದರ್ಶನ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪರಸ್ಪರ ಬೈಕ್ ಗಳ ಡಿಕ್ಕಿ:

    ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಎರಡೂ ಬೈಕ್ ಸವಾರರು ಗಾಯಗೊಂಡ ಘಟನೆ ಕುಶಾಲನಗರದ ಹೆಬ್ಬಾಲೆಯಲ್ಲಿ ನಡೆದಿದೆ. ದಿನಾಂಕ 14-12-2016 ರಂದು ಹೆಬ್ಬಾಲೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಕೂಡಿಗೆ ಕಡೆಯಿಂದ ಬಂದ ಮೋಟಾರ್ ಸೈಕಲ್ ಮತ್ತು ಹೆಬ್ಬಾಲೆ ಕಡೆಯಿಂದ ಬಂದ ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಎರಡು ಬೈಕ್ ಗಳ ಸವಾರರಾದ ಲೋಕೇಶ್ ಹಾಗು ಸ್ವಾಮಿಗೌಡ ರವರಿಗೆ ಗಾಯಗಳಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Thursday, December 15, 2016

ವ್ಯಕ್ತಿಯ ಆಕಸ್ಮಿಕ ಸಾವು
                      ದಿನಾಂಕ 13/12/2016ರಂದು ಸಂಜೆ ತಾವಳಗೇರಿ ಶ್ರೀಮಂಗಲ ಬಳಿಯ ನಿವಾಸಿ ರಾಮು ಎಂಬವರು ಬೆಳ್ಳೂರು ಗ್ರಾಮದಿಂದ ಮನೆಗೆ ನಡೆದುಕೊಂಡು ಬರುತ್ತಿರುವಾಗ ದಾರಿ ಮಧ್ಯೆ ಕೆಸರಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿಗೆ  ಬೈಕ್ ಡಿಕ್ಕಿ, ಸಾವು
                      ದಿನಾಂಕ 13/12/2016ರಂದು ಕುಶಾಲನಗರ ಬಳಿಯ ಕುಶಾಲನಗರ ಬಳಿಯ ಕೂಡ್ಲೂರು ನಿವಾಸಿ ಮಂಜುನಾಥ ಎಂಬವರು ಅವರ ಲಾರಿ ಸಂಖ್ಯೆ ಕೆಎ-02-ಸಿ-8399ರ ಲಾರಿಯಲ್ಲಿ ಕಾಫಿ ತುಂಬಿಸಿಕೊಂಡು ಕೂಡ್ಲೂರುವಿನಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಮಡಿಕೇರಿ ರಸ್ತೆಯ ಆನೆಕಾಡು ಬಳಿ ಕೆಎ-12-ಎಲ್‌-0144ರ ಮೋಟಾರು ಬೈಕನ್ನು ಅದರ ಚಾಲಕ ಮಣಿ ಎಂಬವರು ಚಾಲಿಸುತ್ತಿದ್ದು ಬೈಕ್‌ ಲಾರಿಯ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ಮಣಿಯವರನ್ನು ಮಂಜುನಾಥ ಮತ್ತು ಇತರರು ಸೇರಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಗಾಯಾಳು ಮಣಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನದಿಗೆ ತ್ಯಾಜ್ಯ ನೀರು 
                  ದಿನಾಂಕ 06/12/2016ರಂದು ಕುಶಾಲನಗರ ಪಟ್ಟಣ ಪಂಚಾಯತ್  ಮುಖ್ಯಾಧಿಕಾರಿ ಶ್ರೀಧರ ಹಾಗೂ ಆರೋಗ್ಯಾಧಿಕಾರಿಗಳು ಮತ್ತು ಇನ್ನಿತರೆ ಅಧಿಕಾರಿಗಳೊಂದಿಗೆ ಕುಶಾಲನಗರದ ಪಟ್ಟಣದಲ್ಲಿರುವ  ಪ್ಲಾಂಟರ್ಸ್‌ ಇನ್‌, ಕ್ಯಾರವಾನ್‌, ಕನ್ನಿಕಾ ಇಂಟರ್‌ ನ್ಯಾಷನಲ್‌, ಕ್ಯಾಸ್ಟ್ಯ ಹೋಟೆಲ್ ಮತ್ತು ಪರಂಪರಾ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಎಲ್ಲಾ ಹೋಟೆಲುಗಳ ಶೌಚಾಲಯ ಮತ್ತು ಇತರೆ ಮಲಿನ ನೀರನ್ನು ನೇರವಾಗಿ ಮಳೆ ನೀರು ಹರಿಯುವ ಚರಂಡಿಗೆ ಬಿಟ್ಟಿದ್ದು ಆ ಚರಂಡಿಯ ಮೂಲಕ ನೀರು ಕಾವೇರಿ ಹೊಳೆ ಸೇರಿ ನದಿ ನೀರು ಕಲುಷಿತವಾಗಿರುವುದಲ್ಲದೆ ನೀರು ಕುಡಿಯುವ ಜಾನುವಾರು ಮತ್ತು ಇತರೆ ಜಲಚರಗಳಿಗೆ ಮಾರಕವಾಗಿ ಪರಿಣಮಿಸಿರುವುದಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಸಾವು
                      ದಿನಾಂಕ 14/12/2016ರಂದು ಪಿರಿಯಾಪಟ್ಟಣ ಬಳಿಯ ಆರನಹಳ್ಳಿ ನಿವಾಸಿ ಎ.ಕೆ.ನಾರಾಯಣ ಎಂಬವರು ಸಿದ್ದಾಪುರ ನಗರದ ಮುಸ್ತಫಾ ಎಂಬವರ ಅಂಗಡಿಯ ಮುಂದೆ ಕುಸಿದು ಬಿದ್ದು ಸಾವಿಗೀಡಾಗಿದ್ದು, ಮೃತ ನಾರಾಯಣರವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಅನಾರೋಗ್ಯದಿಂದ ಸಾವಿಗೀಡಾಗಿರಬಹುದಾಗಿ ಮೋಹನ್‌ ಕುಮಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, December 14, 2016

ವಿಷ ಸೇವಿಸಿ ವ್ಯಕ್ತಿಯ ಆತ್ಮ ಹತ್ಯೆ

                ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವ ಪ್ರಕರಣ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ವರದಿಯಾಗಿದೆ. ಕೆದಮುಳ್ಳೂರು ಗ್ರಾಮದ ಮೊಹಮ್ಮದ್ ರವರ ಲೈನ್ ಮನೆಯಲ್ಲಿ ವಾಸವಿರುವ ವಿ ಎ ವಾಸು ಎಂಬುವವರು ದಿನಾಂಕ 12-12-2016 ರಂದು ವಿಷ ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಮಡಿಕೇರಿಗೆ ಕರೆದುಕೊಂಡು ಹೋಗುತ್ತಿರುವಾಗ ಸಮಯ 9-30 ಪಿ ಎಂ ಗೆ ಹಾಕತ್ತೂರು ತಲುಪುವಾಗ ಮೃತಪಟ್ಟಿದ್ದು ಈ ಬಗ್ಗೆ ವಾಸುರವರ ಪತಿ ಸುಮರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಗೆ ಬಸ್ಸು ಡಿಕ್ಕಿ

              ದಿನಾಂಕ 13-12-2016 ರಂದು ನಾಪೋಕ್ಲುವಿನ ಪೆರೂರು ಗ್ರಾಮದ ನಿವಾಸಿ ಉದಯರವರು ತನ್ನ ತಾಯಿಯೊಂದಿಗೆ ವಿಜಯಲಕ್ಷ್ಮಿ ಬಸ್ಸಿನಲ್ಲಿ ಮಡಿಕೇರಿಗೆ ಬಂದು ಜಿ.ಟಿ ಸಕಱಲ್ ನಲ್ಲಿ ಇಳಿದು ಸುಂಟಿಕೊಪ್ಪದ ಕಡೆಗೆ ಹೋಗಲು ಅದೇ ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿರುವಾಗ ಬಸ್ಸಿನ ಚಾಲಕ ಉಮೇಶರವರು ಗಮನಿಸದೇ ದುಡುಕಿನಿಂದ ಬಸ್ಸನ್ನು ಮುಂದಕ್ಕೆ ಚಾಲನೆ ಮಾಡಿದ ಪರಿಣಾಮ ಉದಯರವರ ತಾಯಿ ಮಾಯವ್ವರವರಿಗೆ ಡಿಕ್ಕಿಯಾಗಿ ಕಾಲು ಜಜ್ಜಿ ಹೋಗಿದ್ದು ಈ ಬಗ್ಗೆ ಉದಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

              ದಿನಾಂಕ 13-12-2016 ರಂದು ಸುಟಿಕೊಪ್ಪನದ 7 ನೇ ಹೊಸಕೋಟೆ ಗ್ರಾಮದ ನಿವಾಸಿ ಮೂರ್ತಿ ಎಂಬುವವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಂಬಲ್ಲಿಗೆ ಹೋಗಲು ಬೊಲೆರೋ ಜೀಪಿನಲ್ಲಿ ಹೋಗುತ್ತಿರುವಾಗ ಕಾಟಗೇರಿ ಗ್ರಾಮದ ಪ್ರಶಾಂತಿ ಹೋಟೆಲ್ ಬಳಿ ತಲುಪುವಾಗ, ಮಂಗಳೂರು ಕಡೆಯಿಂದ ಒಂದು ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಬೊಲೋರೋ ಜೀಪು ಮಗುಚಿ ಬಿದ್ದಿದ್ದು, ಜೀಪಿನಲ್ಲಿದ್ದವರಿಗೆ ಯಾವುದೇ ಗಾಯನೋವುಂಟಾಗಿರುವುದಿಲ್ಲ, ಈ ಬಗ್ಗೆ ಮೂರ್ತಿರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ

              ದಿನಾಂಕ 13-12-2016 ರಂದು ಪೊನ್ನಂಪೇಟೆ ನಗರದ ನಿವಾಸಿ ಸನೋಶ್ ಎಂಬುವವರು ಅವರ ಬಾಪ್ತು ಆಟೋರಿಕ್ಷಾ ನಂಬರ್ ಕೆಎ-12 ಬಿ 2486 ರಲ್ಲಿ ಚಂದ್ರಶೇಖರ್ ಎಂಬವರನ್ನು ಕೂರಿಸಿಕೊಂಡು ಫಾರೆಸ್ಟ್ ಕಾಲೇಜ್ ಕಡೆಯಿಂದ ಪೊನ್ನಂಪೇಟೆಯ ಕಡೆಗೆ ಬರುತ್ತಿರುವಾಗ್ಗೆ ಕುಂದಾ ರಸ್ತೆಯ ಕಳ್ಳಿಚಂಡ ಕುಶಾಲಪ್ಪ ರವರ ಮನೆಯ ಬಳಿ ತಲುಪುವಾಗ ಎದುರುಗಡೆಯಿಂದ ಕೆಎ-12 ಪಿ-0089 ರ ಪಿಗೋ ಕಾರನ್ನು ಅದರ ಚಾಲಕ ಬೋಪಯ್ಯ ಎಂಬುವವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಹೋಗಿ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋರಿಕ್ಷಾ ಜಖಂಗೊಂಡಿದ್ದು, ಆಟೋದಲ್ಲಿದ್ದ ಚಂದ್ರಶೇಖರ್ ಎಂಬವರಿಗೆ ಪೆಟ್ಟಾಗಿದ್ದು, ಈ ಬಗ್ಗೆ ಆಟೋ ಚಾಲಕ ಸನೋಶ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಸ್ಸಿಗೆ ಕಾರು ಡಿಕ್ಕಿ

             ದಿನಾಂಕ 13-12-2016 ರಂದು ದಕ್ಷಿಣ ಕನ್ನಡ ಜಿಲ್ಲೆಯ ನಿವಾಸಿ ಲತಾರವರು ತನ್ನ ಸ್ನೇಹಿತ ದಿಪಕ್‌ರವರ ಬಾಪ್ತು ಕಾರಿನಲ್ಲಿ ವಿರಾಜಪೇಟೆಯಿಂದ ಗೋಣಿಕೊಪ್ಪಲುವಿಗೆ ಹೋಗುತ್ತಿರುವಾಗ ಹಾತೂರು ಗ್ರಾಮದ ಹತ್ತಿರ ತಲುಪುವಾಗ ಕಾರನ್ನು ಚಾಲನೆ ಮಾಡುತ್ತಿದ್ದು ದೀಪಕ್‌ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಲತಾ ಮತ್ತು ಜೀಪು ಚಾಲಕ ದೀಪಕ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಲತಾರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, December 13, 2016

ಕಾರಿಗೆ ಬಸ್ಸು ಡಿಕ್ಕಿ

             ಕಾರಿಗೆ ಬಸ್ಸು ಡಿಕ್ಕಿಯಾದ ಪ್ರಕರಣ ಮಡಿಕೇರಿ ಮೈಸೂರು ರಸ್ತೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದಿದೆ. ದಿನಾಂಕ 12-12-2016 ರಂದು ಮಡಿಕೇರಿ ನಗರದ ನಿವಾಸಿ ಪಾಲಾಕ್ಷ ಎಂಬುವವರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಮಡಿಕೇರಿಯಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ಸುಂಟಿಕೊಪ್ಪದ ಗದ್ದೆಹಳ್ಳ ಎಂಬಲ್ಲಿಗೆ ತಲುಪುವಾಗ್ಗೆ ಕುಶಾಲನಗರದ ಕಡೆಯಿಂದ ಬಂದ ಪಿವೈ-01-ಸಿಜಿ-8341 ರ ದುರ್ಗಾಂಭ ಬಸ್ಸನ್ನು ಅದರ ಚಾಲಕ ಬಾಬು ಜಗನ್ನಾಥ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು, ಈ ಬಗ್ಗೆ ಪಾಲಾಕ್ಷ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಾಚಾರಿಗೆ  ಬೈಕು ಡಿಕ್ಕಿ

            ದಿನಾಂಕ 12/12/2016 ರಂದು ಪಾಲಿಬೆಟ್ಟದ ನಿವಾಸಿ ಚಂದ್ರರವರು ಮಗಳ ಮನೆ ಅರುವತೋಕ್ಲು ಗ್ರಾಮಕ್ಕೆ ಬಂದಿದ್ದು ಸಂಜೆ ಚಂದ್ರ ಮತ್ತು ಅವರ ಮಗಳು ಅಳಿಯ ಗೋಪಿರವರ ಕಾರಿನಲ್ಲಿ ಗೋಣಿಕೊಪ್ಪ ನಗರಕ್ಕೆ ಬಂದು ಜೋಡುಬೀಟಿ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತೆಗೆದುಕೊಳ್ಳಲು ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾರಿನಿಂದ ಇಳಿದು ರಸ್ತೆ ದಾಟಿ ನ್ಯಾಯಬೆಲೆ ಅಂಗಡಿಯ ಮುಂಭಾಗ ಹೋಗುತ್ತಿರುವಾಗ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಕೆಎ-09-8045 ರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಂದ್ರ ಹಾಗೂ ಅವರ ಮಗಳು ತಂಗಳಿಗೂ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.   

 ಕರು ಕಳವು

              ದಿನಾಂಕ 02.12.2016 ರಂದು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ನಿವಾಸಿ ಉಮೇಶ ಎಂಬುವವರು ಎಂದಿನಂತೆ ತಮ್ಮ ಹಸು ಹಾಗೂ ಕರುವನ್ನು ಮನೆಯ ಹತ್ತಿರ ಮೇಯಲು ಬಿಟ್ಟಿದ್ದು ಸಂಜೆ 5 ಗಂಟೆಗೆ ಹಸು ಮಾತ್ರ ವಾಪಾಸ್ಸು ಮನೆಗೆ ಬಂದಿದ್ದು ಸುಮಾರು ಅಂದಾಜು ರೂ 15,000 ಬೆಲೆ ಬಾಳುವ ಒಂದು ಕರು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಹಾಗೂ ಅವರ ಮನೆಯ ಸುತ್ತಮುತ್ತಲೂ ಹಲವು ಹಸು ಕರುಗಳು ಕಾಣೆಯಾಗಿದ್ದು ತಮ್ಮ ಕರುವನ್ನು ಸಹಾ ಯಾರೋ ಕಳವು ಮಾಡಿರಬಹುದಾಗಿ ಸಂಶಯಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿಯ ಆತ್ಮ ಹತ್ಯೆ

               ಮರಂದೋಡ ಗ್ರಾಮದ ನಿವಾಸಿ ಬಾರಿಕೆ ಮಹೇಶ್ ಕುಮಾರ್ ಎಂಬವರ ಕಾಫಿ ತೋಟದಲ್ಲಿ ಒಂದು ವಾರದ ಹಿಂದಿನಿಂದ ಕೇರಳದ ಪಾಂಡಿಕಾಡ್ ವಾಸಿ ಅನೂಪ್ ಎಂಬಾತನು ಕೂಲಿ ಕೆಲಸ ಮಾಡಿಕೊಂಡು ಮಹೇಶ್ರವರ ಲೈನು ಮನೆಯಲ್ಲಿ ವಾಸವಿದ್ದಿರುವುದಾಗಿದೆ. ದಿನಾಂಕ 10-12-2016 ರಂದು ಬೆಳಿಗ್ಗೆ 7-00 ಗಂಟೆಗೆ ಮಹೇಶ್ ರವರು ಅನೂಪ್‌ನನ್ನು ಕರೆದಾಗ ಬಾಗಿಲನ್ನು ತೆಗೆಯದೆ ಇದ್ದು ನಂತರ ಬಾಗಿಲು ತಳ್ಳಿದಾಗ ಲೈನು ಮನೆಯ ಮೇಲ್ಚಾವಣಿಯ ಕಬ್ಬಿಣದ ರಾಡ್‌ಗೆ ಅನೂಪನು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು ಆತನ ಸಂಬಂಧಿಕರಿಗೆ ವಿಷಯ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.Monday, December 12, 2016

ಬೆಂಕಿ ಆಕಸ್ಮಿಕ, ಮಹಿಳೆ ಸಾವು
                             ದಿನಾಂಕ 06/12/2016ರಂದು ಪೆರುಂಬಾಡಿ ನಿವಾಸಿ ಸುರೇಶ ಎಂಬವರ ಪತ್ನಿ ಸತ್ಯಭಾಮ ಎಂಬವರು ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬಂದು ಅಡುಗೆ ಮಾಡಲೆಂದು ಸೀಮೆಣ್ಣೆ ಸ್ಟವ್‌ನ್ನು ಉರಿಸುವಾಗ ಆಕಸ್ಮಿಕವಾಗಿ ಸ್ಟವ್‌ ಸಿಡಿದು ಸತ್ಯಭಾಮರವರ ಮೈಗೆ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯಿಂದ ಬೆಂದ ಗಾಯಗಳಾದ ಸತ್ಯಭಾಮರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಧರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 11/12/2016ರಂದು ಸತ್ಯಭಾಮರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಸಾಗಾಟ ಪತ್ತೆ
                            ದಿನಾಂಕ 11/12/2016ರಂದು ಮೈತಾಡಿ ಗ್ರಾಮದಿಂದ ಲಾರಿಯಲ್ಲಿ ಮರಗಳನ್ನು ಅಕ್ರಮವಾಘಿ ಕಡಿದು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪಿಎಸ್‌ಐ ನಂಜುಂಡಸ್ವಾಮಿರವರು ಸಿಬ್ಬಂದಿಗಳೊಂದಿಗೆ ಮೈತಾಡಿ ಗ್ರಾಮಕ್ಕೆ ತೆರಳಿ ಕೆಎ-12-ಎ-0511ರ ಲಾರಿಯಲ್ಲಿ ಅಕ್ರಮವಾಗಿ ಸಂಪಿಗೆ ಮರದ ತುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿರುವುದಾಗಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸರಣಿ ವಾಹನ  ಅಪಘಾತ
                           ದಿನಾಂಕ 11/12/2016ರಂದು ಬೆಂಗಳೂರು ನಿವಾಸಿ ಚಿಕ್ಕಂಡ ಚಂಗಪ್ಪ ಎಂಬವರು ಅವರ ಕುಟುಂಬದೊಂದಿಗೆ ಅವರ ಕಾರು ಸಂಖ್ಯೆ ಕೆಎ-19-ಪಿ-3733ರ ಕಾರಿನಲ್ಲಿ ನಾಪೋಕ್ಲುವಿನಿಂದ ಮದುವೆ  ಮುಗಿಸಿ ವಿರಾಜಪೇಟೆ ಮಾರ್ಗವಾಗಿ  ಹೋಗುತ್ತಿರುವಾಗ ಕೊಳತ್ತೋಡು ಬೈಗೋಡು ಬಳಿ ಎದುರುಗಡೆಯಿಂದ ನೋಂದಣಿಯಾಗದ ಹೊಸ ಪಿಕ್‌ ಅಪ್‌ ಜೀಪನ್ನು ಅದರ ಚಾಲಕ ಸುಬ್ರಮಣಿರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂಗಪ್ಪನವರ ಕಾರಿನ ಮುಂಭಾಗದಲ್ಲಿ ಹೋಗುತ್ತಿದ್ದ ಕೆಎ-050-ಪಿ-7982 ರ ಮಾರುತಿ ಕಾರಿಗೆ ಡಿಕ್ಕಿಪಡಿಸಿ ನಂತರ ಪುನಃ ಮುನ್ನುಗ್ಗಿ ಚಂಗಪ್ಪನವರ ಕಾರಿಗೆ ಡಿಕ್ಕಿಪಡಿಸಿ ನಂತರ ಜೀಪು ಚಾಲಕ ಸುಬ್ರಮಣಿರವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬರೆಗೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಚಂಗಪ್ಪನವರ ಪತ್ನಿ ಹಾಗೂ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಕಾರು ಡಿಕ್ಕಿ
                        ದಿನಾಂಕ 11/12/2016ರಂದು ವಿರಾಜಪೇಟೆ ನಿವಾಸಿ ಮೊಯಿನ್ ಕುಟ್ಟಿ ಎಂಬವರು ಅವರ ಕೆಎ-12-1651ರ ಟಾಟಾ 407 ಲಾರಿಯಲ್ಲಿ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಮೈತಾಡಿ ಬಳಿ ಕೆಎ-42-ಎಂ-7256ರ ಕಾರಿನ ಚಾಲಕ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಮೊಯಿನ್ ಕುಟ್ಟಿಯವರ ಲಾರಿಗೆ ಡಿಕ್ಕಿ ಪಡಿಸಿರುವುದಲ್ಲದೆ ಮೊಯೀನ್‌ ಕುಟ್ಟಿಯವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ  ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ
                 ಕೂಡಿಗೆ ನಿವಾಸಿ ಕೆ.ಎಂ.ಅಬ್ದುಲ್‌  ರಜಾಕ್‌ ಎಂಬವರಿಗೆ ಕೂಡಿಗೆ ಗ್ರಾಮದ ನಿವಾಸಿಗಳಾದ ಅಬ್ದುಲ್ಲಾ, ಆಮು, ಅಬ್ಬಾಸ್‌, ಕಲಂದರ್‌, ಮಹಮದ್‌ ಆಲಿ, ಹಸೈನಾರ್‌ ಎಂಬವರು ಸೇರಿಕೊಂಡು ಸುಮಾರು 6 ಸೆಂಟುಗಳ ಜಾಗವನ್ನು ಮಾರಾಟ 7 ಲಕ್ಷ ಹಣವನ್ನು ಪಡೆದುಕೊಂಡು ಆಸ್ತಿಯನ್ನು ಮಾರದೆ ಹಣವನ್ನು ವಾಪಾಸು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, December 11, 2016

ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ

         ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯ ಸರಹದ್ದಿನ ನಿಲುವಾಗಿಲು ಗ್ರಾಮದ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ದಿನಾಂಕ 10-12-2016 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಆದ ವಿಶ್ವನಾಥರವರು ನಿಲುವಾಗಿಲು ಗ್ರಾಮದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವಾಗ ಕೆಎ-14-ಎ-2304 ರ ಟಿಪ್ಪರ್ ಲಾರಿಯಲ್ಲಿ ಮರಳನ್ನು ತುಂಬಿಸಿಕೊಂಡು ಬಂದಿದ್ದು, ಚೆಕ್ ಮಾಡಲಾಗಿ ಪರವಾನಿಗೆಯಲ್ಲಿರುವ ಮಾರ್ಗವು ಬೇರೆಯಾಗಿದ್ದು, ಮಾರ್ಗವನ್ನು ಸರಿಪಡಿಸಿಕೊಂಡು ಬರಲು ಚಾಲಕನಾದ ರವಿರವರಿಗೆ ಹೇಳಿದಾಗ, ದುಡ್ಡುಕೊಟ್ಟು ಮರಳು ತಂದಿರುವುದತ್ತೇನೆಂದು ಹೇಳಿ ವಿಶ್ವನಾಥರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಈ ಬಗ್ಗೆ ವಿಶ್ವನಾಥರವರು ನೀಡಿದ ಪುಕಾರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ

        ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ಸಾರ್ವಜನಿಕ ಬಸ್ಸು ತಂಗುದಾಣದ ಹತ್ತಿರ ಒಬ್ಬ ವ್ಯಕ್ತಿಯು ಕೈಯಲ್ಲಿ ಅಪಾಯಕಾರಿ ಉಪಕರಣನ್ನು ಹಿಡಿದುಕೊಂಡು ಸುತ್ತಾಡಿಕೊಂಡಿರುವುದಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕರಿಗೆ ದಿನಾಂಕ 09-12-2016 ರ ರಾತ್ರಿ ಸಿಕ್ಕಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಅನುಮಾನಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಕಡಗದಾಳು ಗ್ರಾಮದ ವಿಜು ಆಗಿದ್ದು, ಈತನು ಯಾವುದೋ ಕೃತ್ಯ ಎಸಗುವ ಉದ್ದೇಶ ಹೊಂದಿರುವುದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ಆತನ ಮೇಲೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಅಪಘಾತ ಪ್ರಕರಣ

          ದಿನಾಂಕ 10-12-2016 ರಂದು ಮಡಿಕೇರಿಯ ಸಂಪಿಗೆಕಟ್ಟೆಯ ನಿವಾಸಿ ಶ್ರೀನಿವಾಸ್ ಎಂಬುವವರು ತನ್ನ ಪತ್ನಿಯೊಂದಿಗೆ ಮಡಿಕೇರಿಯಿಂದ ಮಂಗಳೂರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಜೋಡುಪಾಲದ ಬಳಿ ಸಮಯ ಬೆಳಿಗ್ಗೆ 8-30 ಗಂಟೆಗೆ ತಲುಪುವಾಗ ಹಿಂದುಗಡೆಯಿಂದ ಬಂದ ಕೆಎ-12-ಎನ್-9362 ರ ಕಾರನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡಿದ್ದು ಈ ಬಗ್ಗೆ ಶ್ರೀನಿವಾಸರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಅಕ್ರಮವಾಗಿ ನದಿಯಿಂದ ಮರಳು ತೆಗೆಯುತ್ತಿದ್ದವರ ಮೇಲೆ ಪ್ರಕರಣ ದಾಖಲು

           ದಿನಾಂಕ 16-09-2016 ರಂದು ನಾಪೋಕ್ಲು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ವೆಂಕಟೇಶ್ ರವರು ಕೊಟ್ಟಮುಡಿ ಕಡೆಗೆ ಹೋಗುತ್ತಿರುವಾಗ ಬೇತು ಗ್ರಾಮದ ಚೆರಿಯಪರಂಬುವಿನ ಸಮೀಪವಿರುವ ಕಾವೇರಿ ಹೊಳೆಯ ದಡದಲ್ಲಿ ಒಂದು ಕಬ್ಬಿಣದ ತೆಪ್ಪ ತೇಲುತ್ತಿದ್ದು ಅದರ ಪಕ್ಕದಲ್ಲೇ ಮರಳು ಇದ್ದು ಈ ಬಗ್ಗೆ ವಿಚಾರಿಸಿದಾಗ ಯಾರು ಮರಳು ತೆಗೆಯುತ್ತಿದ್ದದ್ದು ಎಂದು ತಿಳಿದು ಬಾರದ್ದರಿಂದ ಸ್ವಾದೀನಕ್ಕೆ ತೆಗೆದುಕೊಂಡು ಆರೋಪಿಗಳ ಪತ್ತೆ ಹಚ್ಚಿದಲ್ಲಿ ಪುಲಿಯಂಡ ಮೊಯಿದು, ಪುಲಿಯಂಡ ಜಕ್ರಿಯ ಮತ್ತು ಪುಲಿಯಂಡ ಸಾಕಿಬ್ ಎಂಬುದಾಗಿ ತಿಳಿದು ಬಂದಿದ್ದು, ನಂತರ ನ್ಯಾಯಾಲಯದ ಅನುಮತಿಯನ್ನು ಪಡೆದು ದಿನಾಂಕ 10-12-2016 ರಂದು ಪೊಲೀಸ್ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Saturday, December 10, 2016

ಕ್ಷುಲ್ಲಕ ಕಾರಣಕ್ಕೆ ತಂದೆ ಮೇಲೆ ಮಗನಿಂದ ಹಲ್ಲೆ:
     ವ್ಯಕ್ತಿಯೋರ್ವ ಮದ್ಯಪಾನ ಮಾಡಿ ತನ್ನ ತಂದೆಯ ಮೇಲೆಯೇ ಹಲ್ಲೆನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಗೌಡಳ್ಳಿ ಗ್ರಾಮದಲ್ಲಿ ನಡೆದಿದೆ.  ಗೌಡಳ್ಳಿ ಗ್ರಾಮದಲ್ಲಿ  ಫಿರ್ಯಾದಿ ತಿಮ್ಮಪ್ಪ ಎಂಬವರು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು,  ಅವರ ಮನೆಯ ಇನ್ನೊಂದು ಭಾಗದಲ್ಲಿ  ಅವರ ಹಿರಿಯ ಮಗ ಮಧುಕುಮಾರ್ ಎಂಬವರು ತನ್ನ ಪತ್ನಿ-ಮಕ್ಕಳೊಂದಿಗೆ ವಾಸವಾಗಿರುವುದಾಗಿದೆ.  ದಿನಾಂಕ 9-12-2016 ರಂದು ಫಿರ್ಯಾದಿಯವರು ತನ್ನ ಮನೆಯಲ್ಲಿ ದನಗಳನ್ನು ಕಟ್ಟುತ್ತಿದ್ದು, ಇದೇ ಕಾರಣಕ್ಕೆ ಮಗ  ಮಧುಕುಮಾರ್  ಅಲ್ಲಿಗೆ  ಬಂದು ಅವಾಚ್ಯ ಶಬ್ದಗಳಿಂದ ಬೈದು  ಕಲ್ಲಿನಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ:
     ಪರವಾನಗಿ ಇಲ್ಲದೆ ಮರಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕರ್ತವ್ಯದಲ್ಲಿದ ಪೊಲೀಸ್ ಸಿಬ್ಬಂದಿ ವಿಚಾರಿಸಿದ ಕಾರಣಕ್ಕೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಶನಿವಾರಸಂತೆ ಠಾಣಾ ವ್ಯಾಪ್ತಿಯ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ.  ಶನಿವಾರಸಂತೆ ಠಾಣಾ ಸಿಬ್ಬಂದಿ ಹೆಚ್.ಕೆ. ವಿಶ್ವನಾಥ್ ಎಂಬವರು ನಿಲುವಾಗಿಲು ಚೆಕ್ ಪೋಷ್ಟ್ ನಲ್ಲಿ ಕರ್ತವ್ಯದಲ್ಲಿದ್ದಾಗ  ಅರಕಲಗೂಡು ಕಡೆಯಿಂದ ರವಿ ಎಂಬವರು ಲಾರಿಯಲ್ಲಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ತಡೆದು ನಿಲ್ಲಿಸಿ, ಪರವಾನಗಿಯನ್ನು ಪರಿಶೀಲನೆ ನಡೆಸಿ  ಪರವಾನಗಿಯಲ್ಲಿ ಮಾರ್ಗವು ಬದಲಾಗಿರುವುದನ್ನು ಮನಗಂಡು ಅದನ್ನು ಸರಿಪಡಿಸಲು ಸೂಚಿಸಿದ ಕಾರಣಕ್ಕೆ ಆರೋಪಿ ರವಿರವರು  ಸಿಬ್ಬಂದಿ ಹೆಚ್.ಕೆ. ವಿಶ್ವನಾಥ್ ರವರ ಮೇಲೆ ಹಲ್ಲೆಗೆ ಪ್ರಯತ್ನಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಹತ್ತಿರದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ನಡೆದಿದೆ.  ಸಿದ್ದಾಪುರ ಠಾಣಾ ವ್ಯಾಪ್ತಿಯ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಸುಧೀಶ (33) ಎಂಬವರು ವಾಸವಾಗಿದ್ದು, ಇವರು ವೆಲ್ಡಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಪ್ರತಿದಿನ ಮದ್ಯಪಾನ ಮಾಡುವ ಚಟವನ್ನಿಟ್ಟುಕೊಂಡಿದ್ದ ಇವರು  ಜೀವನದಲ್ಲಿ ಆಸಕ್ತಿ ಕಳೆದುಕೊಂಡು ದಿನಾಂಕ 9-12-2016 ರಂದು ತಾನು ವಾಸವಿರುರ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಪಿ.ಜಿ. ಸುರೇಶ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಿಳೆ ಕಾಣೆ:
     ಕುಶಾಲನಗರ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು ಗ್ರಾಮದ ನಿವಾಸಿ ವಿಶ್ವನಾಥ ಎಂಬವರ ಪತ್ನಿ (36) ಶ್ರೀಮತಿ ಪ್ರಿಯಾ ಎಂಬವರು ದಿನಾಂಕ 5-12-2016 ರಂದು ಮಾದಾಪಟ್ನದಲ್ಲಿರುವ ತನ್ನ ತಾಯಿ ಮನೆಗೆ ಹೋಗಿದ್ದು ದಿನಾಂಕ 7-12-2016 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಸಂಘಕ್ಕೆ ಹೋಗಿ ಬರುವುದಾಗಿ ತಿಳಿಸಿ ತನ್ನ ತಾಯಿ ಮನೆಯಿಂದ ಹೋಗಿದ್ದು ನಂತರ ಮರಳಿ ಮನೆಗೆ ಬಾರದೆ ಕಾಣೆಯಾಗಿತ್ತಾರೆ ಎಂದು ಕಾಣೆಯಾದ ಮಹಿಳೆಯ ಪತಿ ವಿಶ್ವನಾಥ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Friday, December 9, 2016

ಹಲ್ಲೆ ಪ್ರಕರಣ

          ಮಡಿಕೇರಿ ತಾಲೂಕಿನ ಮೇಘತ್ತಾಳು ಗ್ರಾಮದ ನಿವಾಸಿ ದೇವಮ್ಮರವರು ದಿನಾಂಕ 8-12-2016 ರಂದು ಮನೆಯಲ್ಲಿ ಇರುವಾಗ ದೇವಮ್ಮರವರ ತಮ್ಮನ ಪತ್ನಿ ಸವಿತ, ಅವರ ಮಗ ಪ್ರಖ್ಯಾತ್ ಮತ್ತು ಶೀತಲ್ ರವರು ಮನೆಗೆ ಹೋಗಿ ವಿನಾ ಕಾರಣ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ದೇವಮ್ಮರವರು ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಮನೆಗೆ ಅಕ್ರಮ ಪ್ರವೇಶ , ಜೀವ ಬೆದರಿಕೆ 

           ದಿನಾಂಕ 8-12-2016 ರಂದು ಹಾಲೇರಿ ಗ್ರಾಮದ ಬೋಯಿಕೇರಿ ಎಸ್ಟೇಟಿನ ವಾಸದ ಲೈನು ಮನೆಗೆ ಅದೇ ಗ್ರಾಮ ಬಿದ್ದಪ್ಪ ಹಾಗೂ ಇತರ ಆರು ಜನರು ಹೋಗಿ ತೋಟದ ಕಾರ್ಮಿಕರಿಗೆ ಜೀವ ಬೆದರಿಕೆ ಹಾಕಿರುವುದಾಗಿ ಸುಬ್ಬಯ್ಯರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Thursday, December 8, 2016

ಪರಸ್ಪರ ಹಲ್ಲೆ ಪ್ರಕರಣ
                       ದಿನಾಂಕ 07/12/2016ರಂದು ಮಡಿಕೇರಿ ಸಮೀಪದ ಹೆರವನಾಡು ನಿವಾಸಿಗಳಾದ ಶಶಿಕಲಾ ಮತ್ತು ಅವರ ಪತಿ ದಿನೇಶ್‌ರವರು ಪಂಚಾಯಿತಿ ವತಿಯಿಂದ ಮಂಜೂರಾದ ಆಶ್ರಯ ಮನೆಗೆ ಅಡಿಪಾಯ ಹಾಕುತ್ತಿದ್ದಾಗ ದಿನೇಶ್‌ರವರ ತಮ್ಮ ಕಾರ್ಯಪ್ಪ ಮತ್ತು ಸುಮ ಎಂಬವರು ಬಂದು ಅಡಿಪಾಯ ಹಾಕುತ್ತಿದ್ದ ಜಾಗದ ವಿಚಾರವಾಗಿ ಜಗಳವಾಡಿ ಶಶಿಕಲಾ ಮತ್ತು ದಿನೇಶ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಸುಮ ಮತ್ತು ಆಕೆಯ ಪತಿ ಕಾರ್ಯಪ್ಪ ಹಾಗೂ ವಿಜಯ ಎಂಬವರು ಮನೆಯ ಜಾಗದಲ್ಲಿ ಕೆಲಸ ಮಾಡುತ್ತಿರುವಾಗ ಕಾರ್ಯಪ್ಪನವರ ಅಣ್ಣ  ಚಿಟ್ಟಿಯಪ್ಪ ಮತ್ತು ಆತನ ಪತ್ನಿ ಶಶಿಕಲಾರವರು ಅಲ್ಲಿಗೆ ಬಂದು ಸುಮರವರ ಮೇಲೆ ಕೈಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಕಾರು ಡಿಕ್ಕಿ
                    ದಿನಾಂಕ 07/12/2016ರಂದು ಮೈಸೂರಿನ ಮಂಜುನಾಥ್‌ ಎಂಬವರು ಕೆಎ-05-ಎಬಿ-9935ರ ಲಾರಿಯಲ್ಲಿ ಬೆಂಗಳೂರಿನಿಂದ ಪಾರ್ಸೆಲ್‌ಗಳನ್ನು ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿರುವಾಗ ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದ ಸಿಂಕೋನ ಎಸ್ಟೇಟಿನ ಬಳಿಯ ತಿರುವಿನಲ್ಲಿ ಮಡಿಕೇರಿ ಕಡೆಯಿಂದ ಕೆಎ-03-ಎಬಿ-7122 ರ ಕಾರನ್ನು ಅದರ ಚಾಲಕ ಹರೀಶ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿ ಹಾಗೂ ಕಾರಿಗೆ ಹಾನಿಯಾಗಿದ್ದು, ಕಾರಿನಲ್ಲಿದ್ದವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಕಳವು, ಕೊಲೆ ಬೆದರಿಕೆ
                     ದಿನಾಂಕ 28/11/2016ರಂದು ಎಮ್ಮೆಮಾಡು ನಿವಾಸಿ ಕುಂಞಿ ಅಹಮದ್ ಮತ್ತು ಅವರ ಪತ್ನಿಯವರು ಗದ್ದೆಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಮೊಯ್ದು, ಜಮೀಲ ಮತ್ತು ಜೈನಬಾ ಎಂಬವರು ಕುಂಞಿ ಅಹಮದ್‌ರವರಿಗೆ ಸೇರಿದ ಕಾಫಿ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಫಿಯನ್ನು ಕುಯ್ಯತ್ತಿದ್ದುದು ಕಂಡು ಈ ಬಗ್ಗೆ ಅವರನ್ನು ವಿಚಾರಿಸಿದಾಗ ಮೊಯ್ದುರವರು ಕುಂಞಿ ಅಹಮದ್‌ರವರಿಗೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                  ದಿನಾಂಕ 06/12/2016ರಂದು ಪೊನ್ನಂಪೇಟೆ ಬಳಿಯ ನಡಿಕೇರಿ ಗ್ರಾಮದ ನಿವಾಸಿ  ಕಳ್ಳಿಚಂಡ ಅಯ್ಯಪ್ಪ ಎಂಬವರು ಜೀವನ್‌ ಎಂಬವರೊಂದಿಗೆ ಸ್ಕೂಟರ್‌ನಲ್ಲಿ ಪೊನ್ನಂಪೇಟೆ ನಗರದಿಂದ ಹೋಗುತ್ತಿರುವಾಗ ಕಾನೂರು ಜಂಕ್ಷನ್‌ ಬಳಿ ಅವರ ಪತ್ನಿಯ ತಮ್ಮ ಮಾಣಿರ ಸೋಮಣ್ಣ ಎಂಬವರು ಸ್ಕೂಟರ್‌ನ್ನು ತಡೆದು ಚಿಕ್ಕಮಂಡೂರು ಮತ್ತು ನೆಮ್ಮಲೆ ಗ್ರಾಮದಲ್ಲಿನ ಜಾಗದ ವಿಚಾರವಾಗಿ ಜಗಳವಾಡಿ ಅಯ್ಯಪ್ಪನವರಿಗೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದೇಗುಲ ಕಳವು ಯತ್ನ
                       ದಿನಾಂಕ 07/12/2016ರಂದು ಕೆದಮುಳ್ಳೂರು ಗ್ರಾಮದ ನಿವಾಸಿ ಮಾಳೇಟಿರ ಜಪ್ಪು ಎಂಬವರು ಗ್ರಾಮದ ಅಂಗಡಿಗೆಂದು ಹೋಗುತ್ತಿರುವಾಗ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದ ಭಂಡಾರದ ಪೆಟ್ಟಿಗೆಯನ್ನು ಯಾರೋ ಒಬ್ಬ ಕಬ್ಬಿಣದ ರಾಡಿನಿಂದ ಹೊಡೆದು ಒಡೆಯಲು ಯತ್ನಿಸುತ್ತಿದ್ದುದನ್ನು ಕಂಡು ಜಪ್ಪುರವರು ಅರ್ಚಕರ ಸಹಾಯದಿಂದ ಆತನನ್ನು ಹಿಡಿದು ವಿಚಾರಿಸಿದಾಗ ಆತನು ಕೊಟ್ಟೋಳಿ ಗ್ರಾಮದ ನಿವಾಸಿ ಸಂಪತ್‌ ಎಂಬುದಾಗಿ ತಿಳಿಸಿದ್ದು, ದೇವಸ್ಥಾನದ ಭಂಡಾರವನ್ನು ಒಡೆದು ಕಳವು ಮಾಡಲು ಯತ್ನಿಸಿದ ಸಂಪತ್‌ರವರ ವಿರುದ್ದ ನೀಡಿದ ದೂರಿನ ಮೇರೆಗೆ ವಿರಾಜಪೇಟೆ  ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಅಫಘಾತ
                           ದಿನಾಂಕ 29/11/2016ರಂದು ಕುಶಾಲನಗರ ಬಳಿಯ ಕೂಡಿಗೆ ಗ್ರಾಮದ ನಿವಾಸಿ ನಾರಾಯಣ ಎಂಬವರ ಮಗ ವಿನುತ್‌ರವರು ರಮೇಶ್‌ ಎಂಬವರ ಜೊತೆ ಕೆಎ-12-ಆರ್‌-0994ರ ಬೈಕಿನಲ್ಲಿ ಕುಶಾಲನಗರದಿಂದ ಕೂಡಿಗೆ ಕಡೆಗೆ ಹೋಗುತ್ತಿರುವಾಗ ಚಾಲಕ ರಮೇಶ್‌ರವರು ಮುಂದೆ ಹೋಗುತ್ತಿರುವ ಬಸ್ಸನ್ನು ಹಿಂದಿಕ್ಕು ಸಲುವಾಗಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೈಕನ್ನು ಚಾಲಿಸಿ ಎದುರಿನಿಂದ ಬರುತ್ತಿದ್ದ ಕಾರನ್ನು ಕಂಡು ಏಕಾ ಏಕಿ ಬೈಕಿನ ಬ್ರೇಕ್‌ ಹಾಕಿದಾಗ ರಮೇಶರವರ ನಿಯಂತ್ರಣ ತಪ್ಪಿದ ಬೈಕು ರಸ್ತೆಯಲ್ಲಿ ಮಗುಚಿಕೊಂಡ ಪರಿಣಾಮ ವಿನುತ್‌ರವರು ಬೈಕಿನಿಂದ ರಸ್ತೆಯಲ್ಲಿ ಬಿದ್ದ ಪರಿಣಾಮ ತೀವ್ರವಾಘಿ ಗಾಯಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                      ದಿನಾಂಕ 05/12/2016ರಂದು ಸಿದ್ದಾಪುರ ನಿವಾಸಿ ಪ್ರಿನ್ಸ್‌ ಎಂಬವರು ಸಿದ್ದಾಪುರ ನಗರದಮೈಸೂರು ರಸ್ತೆಯಲ್ಲಿರುವಾಗ ಅಲ್ಲಿಗೆ ಬಂದ ಸತೀಶ್‌, ರಂಜಿತ್‌ ಮತ್ತು ರೋಷನ್‌ ಎಂಬವರು ಪ್ರಿನ್ಸ್‌ರವರು ಮನು ಎಂಬವರ ಜೊತೆ ಕಾಫಿ ವ್ಯಾಪಾರಕ್ಕೆ ಹೋಗದ ಕಾರಣಕ್ಕೆ ಜಗಳವಾಡಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, December 7, 2016

ಅಕ್ರಮ ಮರಳು ಸಾಗಾಟ
                        ದಿನಾಂಕ 06/12/2016ರ ಮುಂಜಾನೆ ಮಡಿಕೇರಿ ಸಮೀಪದ ಐಕೊಳ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಸುಳಿವಿನ ಮೇರೆಗೆ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಬಿ.ಆರ್‌.ಪ್ರದೀಪ್‌ ಮತ್ತು ಮಡಿಕೇರಿ ಗ್ರಾಮಾಂತರ ಪಿಎಸ್‌ಐ ಶಿವಪ್ರಕಾಶ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದಾಗ ಮೂರ್ನಾಡು ಕೊಂಡಂಗೇರಿ ರಸ್ತೆಯಲ್ಲಿ ಐಕೊಳ ಕಡೆಯಿಂದ ಕೆಎ-12-ಎ-4716ರ ಮಿನಿಲಾರಿ ಬರುತ್ತಿದ್ದು ಅದನ್ನು ತಡೆದಾಗ ಅದರ ಚಾಲಕ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಓಡಿ ಹೋಗಿದ್ದು, ಸಿಪಿಐ ಮತ್ತು ಪಿಎಸ್‌ಐರವರುಗಳು ಹೋಗಿ ನೋಡಿದಾಗ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದು ಕಂಡು ಬಂದಿರುವುದಾಗಿ ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ವ್ಯಕ್ತಿಯ ಸಾವು
                        ದಿನಾಂಕ 06/12/2016ರಂದು ಮೂರ್ನಾಡು ನಿವಾಸಿ ಸೀನ ಎಂಬವರು ಮೂರ್ನಾಡಿನ ಕೂರ್ಗ್‌ ಮೆಡಿಕಲ್‌ ಅಂಗಡಿಯ ಮುಂದೆ ಬಿದ್ದು ಮೃತಪಟ್ಟಿದ್ದು ಮೃತ ಸೀನರವರು ಅತೀವ ಮದ್ಯ ವ್ಯಸನಿಯಾಗಿದ್ದು ಮೂರ್ಛೆರೋಗ ಇರುವ ಕಾರಣ ಮೃತರಾಗಿರಬಹುದಾಗಿ ಸೀನರವರ ಮಗಳು ಅನಿತಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರಿಮೆಣಸು ಕಳವು 
                     ದಿನಾಂಕ 20/10/2016ರಂದು ಎಮ್ಮೆಮಾಡು ನಿವಾಸಿ ಕೆ.ಪಿವಿನೋದ್‌ ಎಂಬವರು ತೋಟದ ಉಗ್ರಾಣದಲ್ಲಿಟ್ಟಿದ್ದ ಕಾಫಿ ಹಾಗೂ ಕರಿಮೆಣಸನ್ನು ಮಾರಾಟ ಮಾಡಲು ಉಗ್ರಾಣಕ್ಕೆ ಹೋದಾಗ ಉಗ್ರಾಣದ ಬಾಗಿಲಿನ ಬೀಗ ಮುರಿದಿದ್ದು ಒಳಗೆ ಹೋಗಿ ನೋಡಿದಾಗ 4 ಚೀಲ ಕಾಫಿ ಮತ್ತು 1 ಚೀಲ ಕರಿಮೆಣಸು ಕಳುವಾಗಿದ್ದು ಕಂಡು ಬಂದಿದ್ದು ಪೊಲೀಸ್‌ ದೂರು ನೀಡಿರುವುದಿಲ್ಲ. ದಿನಾಂಕ 05/12/2016ರಂದು ಕುಡಿಯರ ಅರುಣ ಮತ್ತು ಅಶೋಕ ಎಂಬವರನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬೇರೆ ಪ್ರಕರಣ ಸಂಬಂಧ ವಿಚಾರಣೆ ಮಾಡುವ ಸಂದರ್ಭದಲ್ಲಿ ಕೆ.ಪಿ.ವಿನೋದ್‌ರವರ ಉಗ್ರಾಣದಿಂದ ಕಾಫಿ ಹಾಗೂ ಕರಿಮೆಣಸು ಕಳವು ಮಾಡಿರುವ ಪ್ರಕರಣವನ್ನು ಒಪ್ಪಿಕೊಂಡಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರ ಕಳವು 
                    ದಿನಾಂಕ 03/12/2016ರಂದು ಪುಲಿಯೇರಿ ನಿವಾಸಿ ಹಂಚಿಬೆಟ್ಟ ತೋಟದ ಮಾಲೀಕ ವಿವಿಯನ್‌ ರಾಡ್ರಿಗಸ್‌ರವರು ಮೈಸೂರಿಗೆ ಹೋಗಿದ್ದು ದಿನಾಂಕ 05/12/2016ರಂದು ಮರಳಿ ಮನೆಗೆ ಬಂದಾಗ ತೋಟದ ಕೆಲಸಗಾರ ಸುಬ್ರಮಣಿರವರು ತೋಟದಲ್ಲಿ ಒಣಗಿ ನಿಂತಿದ್ದ ಸುಮಾರು 45,000 ರೂಪಾಯಿ ಬೆಲೆಯ ಬೀಟೆ ಮರವನ್ನು ಯಾರೋ ಕಳವು ಮಾಡಿರುವ ಬಗ್ಗೆ ತಿಳಿಸಿದ್ದು, ವಿವಯನ್‌ ರಾಡ್ರಿಗಸ್‌ರವರು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                     ದಿನಾಂಕ 05/12/2016ರಂದು ಸೋಮವಾರಪೇಟೆ ಬಳಿಯ ತಲ್ತರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಆನಂದ ಎಂಬವರು ರಾತ್ರಿ ವೇಳೆ ವಿಷ ಸೇವಿಸಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಮೃತರಾಗಿದ್ದು, ಮೃತ ಆನಂದರವರು ಅತೀವ ಮದ್ಯವ್ಯಸನಿಯಾಗಿದ್ದು ಎದೆ ಣೊಡವಿನಿಮದ ಬಳಲುತ್ತಿದ್ದು ಇದರಿಂದಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರ ಸಾಗಾಟ
                ದಿನಾಂಕ 05/12/2016ರಂದು ಬೆಳಗಿನ ಜಾವ ಶನಿವಾರಸಂತೆ ಪಿಎಸ್‌ಐ ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಕೊಡ್ಲಿಪೇಟೆ ಮುಖ್ಯ ರಸ್ತೆಯಲ್ಲಿ ಮಾಗಲು ಗ್ರಾಮದ ಕಡೆಯಿಂದ ಕೆಎ-45-1023ರ ಲಾರಿಯಲ್ಲಿ ಅಕ್ರಮವಾಗಿ ಅನಲ್‌ತಾರಿ ಮತ್ತು ಗೇರು ಮರದ ನಾಟಾಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಮೈಕಲ್‌, ಆದರ್ಶ ಮತ್ತು ತೀರ್ಥರಾಜ ಎಂಬವರನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಲೆಯಲ್ಲಿ ಹಣ ಕಳವು
                    ದಿನಾಂಕ 05/12/2016ರಿಂದ 06/12/2016ರ ನಡುವೆ ರಾತ್ರಿ ವೇಳೆ ಯಾರೋ ಕಳ್ಳರು ಮಾದಾಪುರದ ಸರ್ಕಾರಿ ಪ್ರೌಢ ಶಾಲೆಯ ಬೀಗ ಮುರಿದು ಮುಖ್ಯ ಶಿಕ್ಷಕರ ಕಚೇರಿಯನ್ನು ಪ್ರವೇಶಿಸಿ ಅಲ್ಲಿದ್ದ ಎರಡು ಆಲ್ಮೆರಾಗಳ ಬೀಗ ಒಡೆದು ಒಟ್ಟು ರೂ 2,500/- ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ  


ಶಾಲೆಯಲ್ಲಿ ಹಣ ಕಳವು
                  ದಿನಾಂಕ 05/12/2016ರಿಂದ 06/12/2016ರ ನಡುವೆ ರಾತ್ರಿ ವೇಳೆ ಯಾರೋ ಕಳ್ಳರು ಮಾದಾಪುರದ ಸರ್ಕಾರಿಮಾದರಿ ಪ್ರಾಥಮಿಕ ಶಾಲೆಯ ಬೀಗ ಮುರಿದು ಮುಖ್ಯ ಶಿಕ್ಷಕರ ಕಚೇರಿಯನ್ನು ಪ್ರವೇಶಿಸಿ ಅಲ್ಲಿದ್ದ  ಆಲ್ಮೆರಾಗಳ ಬೀಗ ಒಡೆದು ಒಟ್ಟು ರೂ 3,200/- ಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ  

ಅಂಗಡಿಗೆ ನುಗ್ಗಿದ ಕಾರು
                ದಿನಾಂಕ 06/12/2016ರಂದು ಶಾಂತಳ್ಳಿ ನಿವಾಸಿ ಎಸ್‌.ಜಿ.ಮೇದಪ್ಪ ಎಂಬವರ ಕಾರು ಸಂಖ್ಯೆ ಕೆಎ-12-ಜೆಡ್‌-4344ರ ಚಾಲಕ ಪ್ರತಾಪ್‌ ಎಂಬಾತನು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ಸೋಮವಾರಪೇಟೆ ನಗರದ ಕ್ಲಬ್‌ ರಸ್ತೆಯಲ್ಲಿರುವ ಬೇಕರಿಯೊಂದಕ್ಕೆ ನುಗ್ಗಿ ಬೇಕರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಮಗುಚಿ ವ್ಯಕ್ತಿ ಸಾವು 
                  ದಿನಾಂಕ 05/12/2016ರಂದು ಹುದಿಕೇರಿ ಬಳಿಯ ಬೆಳ್ಳೂರು ನಿವಾಸಿ ಮೊಣ್ಣಪ್ಪ ಎಂಬವರು ಹೈಸೊಡ್ಲೂರು ಗ್ರಾಮದ ಬಳಿ ಅವರ ಕಾರಿನಲ್ಲಿ ಹೋಗುತ್ತಿರುವಾಗ ಮುಂದುಗಡೆ ಕಳ್ಳೇಂಗಡ ಕಾಳಪ್ಪ ಎಂಬವರು ಅವರ ಕೆಎ-12-7416ರ ಮೋಟಾರು ಸೈಕಲನ್ನು ಅತಿ ವೇಗ ಮತ್ತು  ಅಜಾಗರೂಕತೆಯಿಂದ  ಚಾಲಿಸಿದ ಪರಿಣಾಮ ಬೈಕು ರಸ್ತೆಯಲ್ಲಿ  ಮಗುಚಿಕೊಂಡು  ತೀವ್ರವಾಗಿ ಗಾಯಗೊಂಡ  ಕಾಳಪ್ಪನವರನ್ನು ಚಿಕಿತ್ಸೆಗಾಗಿ ಮಡಿಕೇರಿಗೆ ಸಾಗಿಸುತ್ತಿರುವಾಗ ಮೂರ್ನಾಡು ಬಳಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಆಸ್ತಿ ವಿವಾದ ಪರಸ್ಪರ ಹಲ್ಲೆ
                 ದಿನಾಂಕ 06/12/2016ರಂದು ಶ್ರೀಮಂಗಲ ಬಳಿಯ ಬೀರುಗ ಗ್ರಾಮದಲ್ಲಿ ಕಳ್ಳಿಚಂಡ ನಾಚಪ್ಪ ಎಂಬವರು  ಮಾಣಿರ ವಾಸು  ಎಂಬವರಿಂದ ಲೀಸಿಗೆ ಪಡೆದಿದ್ದ ತೋಟದಲ್ಲಿ ಕಾಫಿ ಕುಯ್ಲು ಮಾಡುತ್ತಿರುವಾಗ ಅಲ್ಲಿಗೆ ಮಾಣಿರ ವಿಜಯ ನಂಜಪ್ಪ, ರವಿ, ಸೋಮಣ್ಣ, ವಿಕ್ರಂ, ಧನು ಮತ್ತು ಗಂಗಮ್ಮ ಎಂಬವರು ಬಂದು  ತೋಟದ ಲೀಸ್‌ ವಿಚಾರವಾಗಿ  ಜಗಳವಾಡಿ ತೋಟದಲ್ಲಿ  ಕಾಫಿ ಕುಯ್ಯುತ್ತಿದ್ದ ಕಾರ್ಮಿಕರನ್ನು ಬೆದರಿಸಿ  ಓಡಿಸಿದ್ದು, ಕಳ್ಳಿಚಂಡ ನಾಚಪ್ಪನವರ ಮೇಲೆ ಗುಂಡು ಹಾರಿಸಿರುವುದಾಗಿ ಕಳ್ಳಿಚಂಡ  ನಾಚಪ್ಪನವರು ಶ್ರೀಮಂಗಲ  ಠಾಣೆಯಲ್ಲಿ  ದೂರು ನೀಡಿದ್ದು ಇದೇ ವಿಚಾರಕ್ಕೆ  ಸಂಬಂಧಿಸಿದಂತೆ  ಕಳ್ಳಿಚಂಡ ಸುನಿಲ್‌ ಮತ್ತು ಇತರರು ಸೇರಿಕೊಂಡು  ಮಾಣಿರ ವಿಜಯ ನಂಜಪ್ಪನವರ ಮೇಲೆ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು  ಶ್ರೀಮಂಗಲ ಪೊಲೀಸರು ಎರಡೂ ಪ್ರಕರಣಗಳನ್ನು   ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.  

Tuesday, December 6, 2016

ಬಾಗಿಲು ಮುರಿದು ಚಿನ್ನಾಭರಣ ಮತ್ತು ನಗದು ಕಳವು:

     ಮನೆಯ ಬಾಗಿಲು ಮುರಿದು ಚಿನ್ನಾಭರಣ ಹಾಗು ನಗದನ್ನು ದೋಚಿದ ಪ್ರಕರಣ ಮಡಿಕೇರಿ ನಗರದ ಹೊಡಬಡಾವಣೆಯಿಂದ ವರದಿಯಾಗಿದೆ. ಕೆ.ಬಿ. ಚಿಣ್ಣಪ್ಪ ಎಂಬವರು ಮಡಿಕೇರಿ ನಗರದ ಹೊಡಬಡಾವಣೆಯಲ್ಲಿರುವ ಪಿ.ಡಬ್ಲ್ಯು.ಡಿ. ವಸತಿ ಗೃಹದಲ್ಲಿ ವಾಸವಾಗಿದ್ದು, ದಿನಾಂಕ 3-12-2016 ರಂದು ಸದರಿಯವರು ತನ್ನ ಸಂಸಾರದೊಂದಿಗೆ ಬೆಂಗಳೂರಿಗೆ ಹೋಗಿದ್ದು, ದಿನಾಂಕ 5-12-2016 ರಂದು ಬೆಂಗಳೂರಿನಿಂದ ತಮ್ಮ ಮನೆಗೆ ಮರಳಿ ಬಂದು ನೋಡಿದಾಗಿ ಯಾರೋ ಕಳ್ಳರು ಮನೆಯ ಬಾಗಿಲಿನ ಪತ್ತಿಯನ್ನು ಯಾವುದೋ ಆಯುಧದಿಂದ ಮೀಟಿ ಬಾಗಿಲನ್ನು ತೆರೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ಚಿಕ್ಕ ಚಿನ್ನದ 2 ಉಂಗುರ, ಒಂದು ಬ್ರೇಸ್‌‌ಲೈಟ್, ಒಂದು ಚಿಕ್ಕ ಚೈನ್‌, ಒಂದು ಚಿನ್ನದ ಬ್ರೋಚ್, ಮತ್ತು ಒಂದು ಜೊತೆ ಬೆಳ್ಳಿಯ ಕಾಲು ಚೈನ್, ಇವುಗಳ ಅಂದಾಜು ಮೊತ್ತ 21000/- ಹಾಗೂ ನಗದುರೂ 2500/-  ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು,  ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿ:

     ಕಾರಿಗೆ ಮೋಟಾರ್ ಸೈಕಲ್ ಡಿಕ್ಕಿಯಾಗಿ ಕಾರು ಹಾಗು ಮೋಟಾರ್ ಸೈಕಲ್ ಜಖಂ ಗೊಂಡ ಘಟನೆ ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಕರ್ಣಂಗೇರಿ ಗ್ರಾಮದ ನಿವಾಸಿ ಜನಾರ್ಧನ ಎಂಬವರು ದಿನಾಂಕ 5-12-2016 ರಂದು ಬೆಳಿಗ್ಗೆ 8-45 ಗಂಟೆ ಸಮಯದಲ್ಲಿ ತನ್ನ ಬಾಪ್ಸು ಕಾರಿನಲ್ಲಿ ಬಂದು ಮಡಿಕೇರಿ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆಂಚೆಟ್ಟಿ ಅಂಗಡಿಯ ಬಳಿ ಕಾರನ್ನು ನಿಲ್ಲಿಸಲು ಮುಂದಾದಾಗ ರಾಜಾಸೀಟ್ ಕಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಮತ್ತು ಮೋಟಾರ್ ಸೈಕಲ್ ಗಳೆರಡೂ ಜಖಂಗೊಂಡಿರುತ್ತವೆ. ಈ ಸಂಬಂಧ ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Monday, December 5, 2016

ವ್ಯಕ್ತಿಯ ಮೇಲೆ ಹಲ್ಲೆ
                                 ದಿನಾಂಕ 24/11/2016ರಂದು ನಾಪೋಕ್ಲು ನಗರದಲ್ಲಿ ಚಿನ್ನದ ವ್ಯಾಪಾರಿಯಾಗಿರುವ ನಿವಾಸಿ ಎನ್‌.ವಿ.ಬಾಲಕೃಷ್ಣ ಎಂಬವರು ಅವರ ಸ್ನೇಹಿತ ಸುನಿಲ್‌ ಎಂಬವರೊಂದಿಗೆ ಕೆಲಸದ ನಿಮಿತ್ತ ಮಡಿಕೇರಿಗೆ ಬಂದು ವಾಪಾಸು ನಾಪೋಕ್ಲಿಗೆ ಹೋಗುತ್ತಿರುವಾಗ ಪಾಲೂರು ಬಳಿ ಹಿಂದಿನಿಂದ ನಾಪೋಕ್ಲು ನಿವಾಸಿ ರಾಮಚಂದ್ರ ಎಂಬವರು ಅವರ ಸ್ನೇಹಿತರಾದ ರಾಧಾಕರಷ್ಣ ಮತ್ತು ದಿವ್ಯನ್‌ ಎಂಬವರೊಂದಿಗೆ ಕಾರಿನಲ್ಲಿ ಬಂದು ಬಾಲಕೃಷ್ಣರವರನ್ನು  ಅಡ್ಡ ಹಾಕಿ  ಮಡಿಕೇರಿಯಲ್ಲಿ ಬಾಲಕೃಷ್ಣರವರು ಊಟ ಮಾಡುತ್ತಿದ್ದಾಗ ರಾಮಚಂದ್ರರವರನ್ನು ಕಂಡಿದ್ದರೂ ಕರೆದುಕೊಂಡು ಬಾರದಿರುವ ಬಗ್ಗೆ ಜಗಳವಾಡಿ ಮೂವರೂ ಬಾಲಕೃಷ್ಣರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ  ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಜೂಜಾಟ ಪ್ರಕರಣ 
                                    ದಿನಾಂಕ 04/12/2016ರಂದು ಶನಿವಾರಸಂತೆ ಪಿಎಸ್‌ಐ ಮರಿಸ್ವಾಮಿರವರು ಗಸ್ತಿನಲ್ಲಿರುವಾಗ ವ್ಯಾಪ್ತಿಯ ಬೆಳ್ಳಾರಳ್ಳಿ ಬಳಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಸಿಬ್ಬಂದಿಗಳೊಂದಿಗೆ ಬೆಳ್ಳಾರಳ್ಳಿ  ಗ್ರಾಮದ ಖಾಲಿ ಪೈಸಾರಿ ಜಾಗದಲ್ಲಿ ಧಾಳಿ ನಡೆಸಿದಾಗ ಅಲ್ಲಿ  ಶಿವರಾಜ, ಯೋಗೇಶ, ಕೃಷ್ಣ, ನಿಸಾರ್‌, ವೆಂಕಟಪ್ಪ ಮತ್ತು ವಿಜಿ ಎಂಬವರು ಅಕ್ರಮವಾಗಿ ಇಸ್ಪೇಟು ಎಲೆಗಳನ್ನುಪಯೋಗಿಸಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಇಸ್ಪೇಟು ಎಲೆ ಮತ್ತು  ಜೂಜಾಟದಲ್ಲಿ ಪಣವಾಗಿಟ್ಟಿದ್ದ  ರೂ.2600 ನಗದನ್ನು ವಶಪಡಿಸಿಕೊಂಡು ಎಲ್ಲರನ್ನೂ ಬಂಧಿಸಿ ಶನಿವಾರಸಂತೆ  ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬೈಕು ಡಿಕ್ಕಿ 
                                  ದಿನಾಂಕ 04/12/2016ರಂದು ಮಡಿಕೇರಿ ನಗರದ ಎಫ್‌ ಎಂ ಸಿ ಕಾಲೇಜು ಪ್ರಾಂಸುಪಾಲರಾದ ಪಾರ್ವತಿ ಅಪ್ಪಯ್ಯ ಎಂಬವರು ಅವರ ಪತಿ ಅಪ್ಪಯ್ಯನವರೊಂದಿಗೆ ಅವರ ಚಾಲಕ ಚಾಲಿಸುತ್ತಿದ್ದ ಕಾರಿನಲ್ಲಿ ಮೈಸೂರಿನಿಂದ ಮಡಿಕೇರಿಗೆ ಬರುತ್ತಿರುವಾಗ ನಗರದ ಅರಣ್ಯ ಭವನದ ಬಳಿ ಎದುರುಗಡೆಯಿಂದ ಕೆಎ-53-ಡಬ್ಲ್ಯು-6999ರ ಚಾಲಕ ದಿಲನ್‌ ಎಂಬಾತನು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪಾರ್ವತಿ ಅಪ್ಪಯ್ಯನವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಹಾಗೂ ಬೈಕಿಗೆ ಹಾನಿಯಾಗಿದ್ದು ಬೈಕ್‌ ಸವಾರನಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಲಾಟರಿ ಮಾರಾಟ, ಇಬ್ಬರ ಬಂಧನ
                                  ದಿನಾಂಕ 04/12/2016ರಂದು ಕುಶಾಲನಗರ ಪಟ್ಟಣದ ಜಾಮಿಯಾ ಮಸೀದಿ ಬಳಿ ಇಬ್ಬರು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟುಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳೀವಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆ ಪಿಎಸ್‌ಐ ಪಿ.ಜಗದೀಶ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪಟ್ಟಣದ ಜಾಮಿಯಾ ಮಸೀದಿ ಬಳಿ ಕೇರಳ ರಾಜ್ಯದ ಲಾಟರಿಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬೈಚನಹಳ್ಳಿ ನಿವಾಸಿ ಗೋವಿಂದರಾಜ್‌ ಮತ್ತು ಮಾರ್ಕೆಟ್‌ ನಿವಾಸಿ ಪಿ.ಜೋಸೆಫ್‌ ಎಂಬವರನ್ನು ಬಂಧಿಸಿ ಸುಮಾರು ರೂ. 30,900 ಮೌಲ್ಯದ ಲಾಟರಿ ಟಿಕೆಟುಗಳನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.