Thursday, December 15, 2016

ವ್ಯಕ್ತಿಯ ಆಕಸ್ಮಿಕ ಸಾವು
                      ದಿನಾಂಕ 13/12/2016ರಂದು ಸಂಜೆ ತಾವಳಗೇರಿ ಶ್ರೀಮಂಗಲ ಬಳಿಯ ನಿವಾಸಿ ರಾಮು ಎಂಬವರು ಬೆಳ್ಳೂರು ಗ್ರಾಮದಿಂದ ಮನೆಗೆ ನಡೆದುಕೊಂಡು ಬರುತ್ತಿರುವಾಗ ದಾರಿ ಮಧ್ಯೆ ಕೆಸರಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿಗೆ  ಬೈಕ್ ಡಿಕ್ಕಿ, ಸಾವು
                      ದಿನಾಂಕ 13/12/2016ರಂದು ಕುಶಾಲನಗರ ಬಳಿಯ ಕುಶಾಲನಗರ ಬಳಿಯ ಕೂಡ್ಲೂರು ನಿವಾಸಿ ಮಂಜುನಾಥ ಎಂಬವರು ಅವರ ಲಾರಿ ಸಂಖ್ಯೆ ಕೆಎ-02-ಸಿ-8399ರ ಲಾರಿಯಲ್ಲಿ ಕಾಫಿ ತುಂಬಿಸಿಕೊಂಡು ಕೂಡ್ಲೂರುವಿನಿಂದ ಮಂಗಳೂರು ಕಡೆಗೆ ಹೋಗುತ್ತಿರುವಾಗ ಮಡಿಕೇರಿ ರಸ್ತೆಯ ಆನೆಕಾಡು ಬಳಿ ಕೆಎ-12-ಎಲ್‌-0144ರ ಮೋಟಾರು ಬೈಕನ್ನು ಅದರ ಚಾಲಕ ಮಣಿ ಎಂಬವರು ಚಾಲಿಸುತ್ತಿದ್ದು ಬೈಕ್‌ ಲಾರಿಯ ಹಿಂಬದಿಗೆ ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ಮಣಿಯವರನ್ನು ಮಂಜುನಾಥ ಮತ್ತು ಇತರರು ಸೇರಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಗಾಯಾಳು ಮಣಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನದಿಗೆ ತ್ಯಾಜ್ಯ ನೀರು 
                  ದಿನಾಂಕ 06/12/2016ರಂದು ಕುಶಾಲನಗರ ಪಟ್ಟಣ ಪಂಚಾಯತ್  ಮುಖ್ಯಾಧಿಕಾರಿ ಶ್ರೀಧರ ಹಾಗೂ ಆರೋಗ್ಯಾಧಿಕಾರಿಗಳು ಮತ್ತು ಇನ್ನಿತರೆ ಅಧಿಕಾರಿಗಳೊಂದಿಗೆ ಕುಶಾಲನಗರದ ಪಟ್ಟಣದಲ್ಲಿರುವ  ಪ್ಲಾಂಟರ್ಸ್‌ ಇನ್‌, ಕ್ಯಾರವಾನ್‌, ಕನ್ನಿಕಾ ಇಂಟರ್‌ ನ್ಯಾಷನಲ್‌, ಕ್ಯಾಸ್ಟ್ಯ ಹೋಟೆಲ್ ಮತ್ತು ಪರಂಪರಾ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಎಲ್ಲಾ ಹೋಟೆಲುಗಳ ಶೌಚಾಲಯ ಮತ್ತು ಇತರೆ ಮಲಿನ ನೀರನ್ನು ನೇರವಾಗಿ ಮಳೆ ನೀರು ಹರಿಯುವ ಚರಂಡಿಗೆ ಬಿಟ್ಟಿದ್ದು ಆ ಚರಂಡಿಯ ಮೂಲಕ ನೀರು ಕಾವೇರಿ ಹೊಳೆ ಸೇರಿ ನದಿ ನೀರು ಕಲುಷಿತವಾಗಿರುವುದಲ್ಲದೆ ನೀರು ಕುಡಿಯುವ ಜಾನುವಾರು ಮತ್ತು ಇತರೆ ಜಲಚರಗಳಿಗೆ ಮಾರಕವಾಗಿ ಪರಿಣಮಿಸಿರುವುದಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀಧರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಸಾವು
                      ದಿನಾಂಕ 14/12/2016ರಂದು ಪಿರಿಯಾಪಟ್ಟಣ ಬಳಿಯ ಆರನಹಳ್ಳಿ ನಿವಾಸಿ ಎ.ಕೆ.ನಾರಾಯಣ ಎಂಬವರು ಸಿದ್ದಾಪುರ ನಗರದ ಮುಸ್ತಫಾ ಎಂಬವರ ಅಂಗಡಿಯ ಮುಂದೆ ಕುಸಿದು ಬಿದ್ದು ಸಾವಿಗೀಡಾಗಿದ್ದು, ಮೃತ ನಾರಾಯಣರವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಅನಾರೋಗ್ಯದಿಂದ ಸಾವಿಗೀಡಾಗಿರಬಹುದಾಗಿ ಮೋಹನ್‌ ಕುಮಾರ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.