Thursday, December 1, 2016

ವ್ಯಕ್ತಿಯ ಮೇಲೆ ಹಲ್ಲೆ
                          ದಿನಾಂಕ 30/11/2016 ರಂದು ವಿರಾಜಪೇಟೆ ಬಳಿಯ ವಿ.ಬಾಡಗ  ಗ್ರಾಮದ  ನಿವಾಸಿ  ಪಣಿ  ಎರವರ ಬೋಜಿ ಎಂಬವರ ಪತಿ ಅಪ್ಪಿ ಎಂಬವರಿಗೆ ಅದೇ ಗ್ರಾಮದ ನಿವಾಸಿ ಪುಟ್ಟ ಎಂಬಾತನು ಗ್ರಾಮದ ಕುಪ್ಪಂಡ ಮೊಣ್ಣಪ್ಪ ಎಂಬವರ ಅಂಗಡಿಯ ಮುಂದೆ ಹಣದ ವಿಚಾರವಾಗಿ ಜಗಳವಾಡಿ ಹಲ್ಲೆ ಮಾಡಿರುವುದಾಗಿ  ನೀಡಿದ  ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಬಸ್‌ ಡಿಕ್ಕಿ, ಇಬ್ಬರ ಸಾವು
                          ದಿನಾಂಕ 30/11/2016ರಂದು ಕುಟ್ಟದ ಹೂವಿನಕಾಡು ತೋಟದಲ್ಲಿ ವಾಸವಿರುವ ಶಿವಶಂಕರ ಮತ್ತು ಆತನ ಸ್ನೇಹಿತ ಸಂತೋಷ ಎಂಬವರು ಅವರ ಪಕ್ಕದ ಮನೆಯ ನಿವಾಸಿ ಸೂರ್ಯಪಾಂಡಿ ಎಂಬವರ ಹೊಸ ನೋಂದಣಿಯಾಗದ ಮೋಟಾರು ಬೈಕನ್ನು ತೆಗೆದುಕೊಂಡು ತೋಲ್ಪಟ್ಟಿ ಕಡೆಗೆ ಹೋಗುತ್ತಿರುವಾಗ ಕುಟ್ಟದ ಹಳೆಯ ಚೆಕ್‌ ಪೋಸ್ಟ್ ಬಳಿ ಕೇರಳದ ಕಡೆಯಿಂದ ಬರುತ್ತಿದ್ದ ಕೆಎಲ್‌-15-8339ರ ಕೇರಳ ಸರ್ಕಾರದ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂತೋಷನು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಸಂತೋಷ ಹಾಗೂ ಶಿವಶಂಕರರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                          ದಿನಾಂಕ 30/11/2016ರಂದು ಮಡಿಕೇರಿ ಬಳಿಯ ಕಟ್ಟೆಮಾಡು ಗ್ರಾಮದ ಪರಂಬು ಪೈಸಾರಿ ನಿವಾಸಿ ಅಬ್ದುಲ್‌ ಲತೀಫ್‌ ಎಂಬವರು ಮತ್ತು ಅವರ ಅಣ್ಣ ತೋಟದಲ್ಲಿ ಕೆಲಸ ಮುಗಿಸಿ ವಾಪಾಸು ಮನೆಗೆ ಹೋಗುತ್ತಿರುವಾಗ ಪರಂಬು ಪೈಸಾರಿಯ ಸುಶೀಲ ಎಂಬವರ ತೋಟದ ಬಳಿ ಅದೇ ಗ್ರಾಮದ ನಿವಾಸಿ ಮಹಮದ್‌ ರಿಯಾಝ್‌ ಎಂಬವರು ಕಾರಿನಲ್ಲಿ ಬಂದು ಅಬ್ದುಲ್‌ ಲತೀಫ್‌ರವರೊಂದಿಗೆ ಲತೀಫ್‌ರವರ ಮಗನ ಮದುವೆ ವಿಚಾರದಲ್ಲಿ ಜಗಳವಾಡಿ ಕಾರಿನಲ್ಲಿದ್ದ ಕಬ್ಬಿಣದ ರಾಡಿನಿಂದ ಅಬ್ದುಲ್‌ ಲತೀಫ್‌ರವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಗನಿಂದ ತಂದೆಯ ಹತ್ಯೆ
                                ಮಡಿಕೇರಿ ಬಳಿಯ ಹೆರವನಾಡು ಗ್ರಾಮದ ನಿವಾಸಿ ಮೇರಿ ಎಂಬವರ ಮಗ ಡೇವಿಡ್‌ ಎಂಬಾತನು ಮೇಕೇರಿ ಗ್ರಾಮದಲ್ಲಿ ವಾಸವಿದ್ದು ಆಗಾಗ್ಗೆ ಹೆರವನಾಡಿಗೆ ತಂದೆ ತಾಯಿಯರನ್ನು ನೋಡಿಕೊಂಡು ಹೋಗುತ್ತಿದ್ದರೆನ್ನಲಾಗಿದೆ. ಅದೇ ರೀತಿ ದಿನಾಂಕ 29/11/2016ರಂದು ಡೇವಿಡ್‌ನು ಹೆರವನಾಡಿನ ತಂದೆಯ ಮನೆಗೆ ಬಂದಿದ್ದು ತಂದೆ ದೊರೆ ರಾಜ್‌ರೊಂದಿಗೆ ಹಣವನ್ನು ಕೇಳಿದ್ದು ತಂದೆ ದೊರೆರಾಜ್‌ ಹಣ ಕೊಡಲು ನಿರಾಕರಿಸಿದರೆಂಬ ಕಾರಣಕ್ಕೆ ಜಗಳ ತೆಗೆದು ಕೊಡಲಿ ಕಾವಿನಿಂದ ತಂದೆಯ ತಲೆಗೆ ಹೊಡೆದು ಗಾಯಗೊಳಿಸಿದ್ದು ನಂತರ ತಾಯಿ ಮೇರಿಯವರಿಗೆ ಕೊಲೆ ಬೆದರಿಕೆ  ಹಾಕಿ ಹೋಗಿದ್ದು ನಂತರ ಗಾಯಾಳು ದೊರೆ ರಾಜ್‌ರವರನ್ನು ತೋಟದ ಮಾಲೀಕರಾದ ರತ್ನಾಕರ ರೈ ರವರ ಸಹಕಾರದೊಂದಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೈಸೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 30/11/2016ರಂದು ದೊರೆ ರಾಜ್‌ರವರು ಮೃತರಾಗಿದ್ದು, ತಂದೆ ದೊರೆ ರಾಜ್‌ರವರನ್ನು ಕೊಡಲಿ ಕಾವಿನಿಂದ ಹೊಡೆದು ಮಗ ಡೇವಿಡ್‌ ಹತ್ಯೆ ಮಾಡಿರುವುದಾಗಿ  ಮೇರಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                          ದಿನಾಂಕ 30/11/2016ರಂದು ಮರಗೋಡು ಬಳಿಯ ಹೊಸ್ಕೇರಿ ನಿವಾಸಿ ಮಂಜುನಾಥ ಎಂಬಾತನು ಮರಗೋಡು ಗ್ರಾಮದ ಮದ್ಯದಂಗಡಿಯ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥನಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಆತನು ಮೃತನಾಗಿದ್ದು, ಮೃತ ಮಂಜುನಾಥನು ವಿಪರೀತ ಮದ್ಯ ವ್ಯಸನಿಯಾಗಿದ್ದು ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.