Friday, December 2, 2016

 ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮ ಹತ್ಯೆ

           ವ್ಯಕ್ತಿಯೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಕರಡ ಗ್ರಾಮದಲ್ಲಿ ವರದಿಯಾಗಿದೆ. ಕರಡ ಗ್ರಾಮದ ಸುಬ್ರಮಣಿಯವರ ತೋಟದ ಲೈನ್ ಮನೆಯಲ್ಲಿ ವಾಸವಿರುವ ಸೋಮಪ್ಪ ರವರ ಮಗ ಸಂಜು ದಿನಾಂಕ 31-11-2016 ರಂದು ರಾತ್ರಿ ಆತನ ಕೋಣೆಯ ಬಾಗಿಲು ಹಾಕಿಕೊಂಡು ಮದ್ಯರಾತ್ರಿವರೆಗೆ ಟಿ.ವಿ. ನೋಡಿಕೊಂಡಿದ್ದು, ದಿನಾಂಕ 01-12-16ರಂದು ಬೆಳಿಗ್ಗೆ 6-00 ಗಂಟೆಗೆ ಸಂಜು ಮಲಗಿದ್ದ ಕೋಣೆಯ ಬಾಗಿಲು ತೆಗೆದು ನೋಡುವಾಗ ಸಂಜು ಸೀರೆಯನ್ನು ಕುತ್ತಿಗೆಗೆ ಕಟ್ಟಿಕೊಂಡು ಕೋಣೆಯ ಕೌಕೋಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಜು ವಿಪರೀತ ಮದ್ಯಪಾನ ಮಾಡುತ್ತಿದ್ದು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಂದೆ ಸೋಮಪ್ಪರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ವಶ 

          ವಿರಾಜಪೇಟೆ ವೃತ್ತ ನಿರೀಕ್ಷಕರಾದ ಕುಮಾರ ಆರಾದ್ಯರವರು ದಿನಾಂಕ 30-11-16 ರಂದು ರಾತ್ರಿ ಗಸ್ತುವಿನಲ್ಲಿರುವಾಗ್ಗೆ ಸಮಯ 11-00 ಗಂಟೆಗೆ ಬಿಟ್ಟಂಗಾಲ ಗ್ರಾಮದ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆಎ.12.ಎ.5041ರ ಈಚರ್ ಲಾರಿಯನ್ನು ತಡೆದು ಚೆಕ್ ಮಾಡಿದಾಗ ಅದರಲ್ಲಿ ಮರಳು ತುಂಬಿದ್ದು, ಈ ಮರಳನ್ನು ಕಂಡಂಗಾಲ ಗ್ರಾಮದ ಕಾಕೇಮಾನಿ ಎಂಬ ಹೊಳೆಯ ಬದಿಯಿಂದ ತಂದಿರುವುದಾಗಿ ತಿಳಿಸಿದ್ದು ಚಾಲಕ ಪಳನಿಸ್ವಾಮಿ ಮತ್ತು ಲಾರಿಯನ್ನು ವಶಕ್ಕೆ ತೆಗೆದುಕೊಂಡು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ 
               ದಿನಾಂಕ 30-11-16 ರಂದು ವಿರಾಜಪೇಟೆಯ ಜೈನರ ಬೀದಿ ನಿವಾಸಿ ಮಹೇಶರವರು ಬಿಟ್ಟಂಗಾಲ ಗ್ರಾಮದ ಪೆಗ್ಗರೆಕಾಡು ಜಂಕ್ಷನ್ ನಿಂದ ಸ್ವಲ್ಪ ಮುಂದೆ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ.01.ಎ.ಎಫ್.4374ರ ಲಾರಿಯನ್ನು ಅದರ ಚಾಲಕನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಹೋಗಿ ಮಹೇಶರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿ ರುವುದಲ್ಲದೆ, ಮಹೇಶರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಹೇಶರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಕ್ರಮವಾಗಿ ಮರಳು ಶೇಖರಣೆ ಮಾಡಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

        ಹುದಿಕೇರಿ ಹೋಬಳಿಯ ಕಂದಾಯ ನಿರೀಕ್ಷಕರಾದ ರಾಧಾಕೃಷ್ಣರವರು ತಮ್ಮ ಸಿಬ್ಬಂದಿಗಳೊಂದಿಗೆ ದಿನಾಂಕ 1.12.2016 ರಂದು ದಾಳಿ ಮಾಡಿ ಬೇಗೂರು ಗ್ರಾಮದ ಮತ್ರಂಡ ಅರಸುರವರ ಕಣದಲ್ಲಿ ದಾಸ್ತಾನು ಮಾಡಿದ ಸುಮಾರು 6 ರಿಂದ 8 ಲೋಡುಗಳಷ್ಟು ಮರಳನ್ನು ಸರ್ಕಾರದ ಪರವಾನಗೆ ಇಲ್ಲದೆ ಸಂಗ್ರಹಿಸಿದ್ದನ್ನು ಪತ್ತೆ ಹಚ್ಚಿ ಸರ್ಕಾರದ ಪರವಾನಗೆ ಇಲ್ಲದೆ ಮರಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ ಮತ್ರಂಡ ಅರಸು ಕಾಳಯ್ಯರವರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಪುಕಾರಿಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಕ್ರಮವಾಗಿ ಹೊಳೆಯ ದಡದಲ್ಲಿ ಮರಳು ಶೇಖರಣೆ

      ಸಿದ್ದಾಪುರ ಪೊಲೀಸ್ ಉಪ ನಿರೀಕ್ಷಕರಾದ ಸಂತೋಶ್ ಕಶ್ಯಪ್‌ರವ ರಿಗೆ ದಿನಾಂಕ 01-12-2016 ಕಾವೇರಿ ಹೊಳೆ ದಡದಲ್ಲಿ ಅಕ್ರಮವಾಗಿ ಮರಳು ತೆಗೆದು ದಡದಲ್ಲಿ ಶೇಖರಿಸಿ ಇಟ್ಟಿದ್ದಿದ್ದುದಾಗಿ ಬಂದ ಮಾಹಿತಿ ಮೇರೆಗೆ ಹಾಲುಗುಂದ ಬಳಿ ಕಾವೇರಿಹೊಳೆಯ ದಡದಲ್ಲಿ ಅಕ್ರಮವಾಗಿ ಅಂದಾಜು 2 ಮಜ್ದಾ ಲಾರಿಯಷ್ಟು ಮರಳನ್ನು ಕದ್ದು ಶೇಖರಿಸಿಟ್ಟಿರುವುದು ಕಂಡು ಬಂದಿದ್ದು ಅಂದಾಜು ಬೆಲೆ 20,000/- ರೂ ಮರಳನ್ನು ವಶಪಡಿಸಿಕೊಂಡು ಸದರಿ ಸ್ಥಳದಲ್ಲಿ ಮರಳನ್ನು ಹಾಗೂ ಮರಳು ತೆಗೆಯಲು ಬಳಸಿದ ಮೂರು ಟ್ಯೂಬ್, ಒಂದು ಕಪ್ಪು ಬಣ್ಣದ ಮತ್ತು ಒಂದು ಹಸಿರು ಬಣ್ಣದ ನೆಟ್ಟುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮನೆ ಕಳವು

     ಕುಶಾಲನಗರ ಬಳಿಯ ಚಿಕ್ಕತ್ತೂರು ನಿವಾಸಿ ಹರಿಪ್ರಸಾದ್ ಎಂಬುವವರು ದಿನಾಂಕ 30-11-2016 ರಂದು ಬೆಳಿಗ್ಗೆ ಮನೆಗೆ ಬೀಗಹಾಕಿ ಟೈಲರಿಂಗ್ ಕೆಲಸಕ್ಕೆಂದು ಕುಶಾಲನಗರಕ್ಕೆ ಹೋಗಿದ್ದು, ಅವರ ಹೆಂಡತಿ ಕೂಡ ಕುಶಾಲನಗರಕ್ಕೆ ಹೋಗಿದ್ದು ಹರಿಪ್ರಸಾದ್‌ರವರು ಎಂದಿನಂತೆ ಕೆಲಸ ಮುಗಿಸಿಕೊಂಡು ರಾತ್ರಿ 1100 ಗಂಟೆಗೆ ಮನೆಗೆ ಬಂದು ನೋಡುವಾಗ ಮನೆಯ ಹಿಂಬಾಗದ ಸ್ನಾನದ ಮನೆಯ ಮೇಲಿನ ಹಂಚನ್ನು ತೆಗೆದು ಯಾರೋ ಮನೆಯೊಳಗೆ ನುಗ್ಗಿ ಮಲಗುವ ರೂಮಿನ ಗಾಡ್ರೇಜ್ ನ್ನು ಮುರಿದು ಗಾಡ್ರೇಜಿನಲ್ಲಿದ್ದ ಸುಮಾರು ರೂ ಒಂದು ಲಕ್ಷಮೌಲ್ಯದ 27 43 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮೋಟಾರು ಸೈಕಲ್ ಅಪಘಾತ

        ಕುಶಾಲನಗರ ಮಡಿಕೇರಿ ಮುಖ್ಯ ರಸ್ತೆಯ ಗುಡ್ಡೆಹೊಸೂರು ಎಂಬಲ್ಲಿ ಗುಡ್ಡೆಹೊಸೂರು ಗ್ರಾಮದ ನಿವಾಸಿ ಅಚ್ಚುತನಂದನ್‌ ರವರು ದಿನಾಂಕ 01-12-2016 ರಂದು ತನ್ನ ಮೋಟಾರು ಸೈಕಲನ್ನು ನಿಲ್ಲಿಸುವಷ್ಟರಲ್ಲಿ ಸುಂಟಿಕೊಪ್ಪ ಕಡೆಯಿಂದ ಕೆ.ಎ-12 ಎಲ್-9070 ರ ಯಮಹ ಮೋಟಾರ್ ಸೈಕಲ್ ನ್ನು ಅದರ ಚಾಲಕ ಅವಿನಾಶ್ ಎಂಬುವವರು ಅತೀ ವೇಗ ಹಾಗೂ ದುಡುಕಿನಿಂದ ಚಾಲಿಸಿಕೊಂಡು ಬಂದು ಅಚ್ಚುತ ನಂದನ್ ರವರಿಗೆ ಹಾಗೂ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಚ್ಚುತ ನಂದನ್ ರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಅಚ್ಚುತನಂದನ್‌ ರವರ ಅಣ್ಣ ಬಾಲಕೃಷ್ಣ ರವರು ನೀಡಿದ ದೂರಿಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.