Tuesday, December 13, 2016

ಕಾರಿಗೆ ಬಸ್ಸು ಡಿಕ್ಕಿ

             ಕಾರಿಗೆ ಬಸ್ಸು ಡಿಕ್ಕಿಯಾದ ಪ್ರಕರಣ ಮಡಿಕೇರಿ ಮೈಸೂರು ರಸ್ತೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ನಡೆದಿದೆ. ದಿನಾಂಕ 12-12-2016 ರಂದು ಮಡಿಕೇರಿ ನಗರದ ನಿವಾಸಿ ಪಾಲಾಕ್ಷ ಎಂಬುವವರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಮಡಿಕೇರಿಯಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ಸುಂಟಿಕೊಪ್ಪದ ಗದ್ದೆಹಳ್ಳ ಎಂಬಲ್ಲಿಗೆ ತಲುಪುವಾಗ್ಗೆ ಕುಶಾಲನಗರದ ಕಡೆಯಿಂದ ಬಂದ ಪಿವೈ-01-ಸಿಜಿ-8341 ರ ದುರ್ಗಾಂಭ ಬಸ್ಸನ್ನು ಅದರ ಚಾಲಕ ಬಾಬು ಜಗನ್ನಾಥ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು, ಈ ಬಗ್ಗೆ ಪಾಲಾಕ್ಷ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಾಚಾರಿಗೆ  ಬೈಕು ಡಿಕ್ಕಿ

            ದಿನಾಂಕ 12/12/2016 ರಂದು ಪಾಲಿಬೆಟ್ಟದ ನಿವಾಸಿ ಚಂದ್ರರವರು ಮಗಳ ಮನೆ ಅರುವತೋಕ್ಲು ಗ್ರಾಮಕ್ಕೆ ಬಂದಿದ್ದು ಸಂಜೆ ಚಂದ್ರ ಮತ್ತು ಅವರ ಮಗಳು ಅಳಿಯ ಗೋಪಿರವರ ಕಾರಿನಲ್ಲಿ ಗೋಣಿಕೊಪ್ಪ ನಗರಕ್ಕೆ ಬಂದು ಜೋಡುಬೀಟಿ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತೆಗೆದುಕೊಳ್ಳಲು ರಸ್ತೆಯಲ್ಲಿ ಕಾರು ನಿಲ್ಲಿಸಿ ಕಾರಿನಿಂದ ಇಳಿದು ರಸ್ತೆ ದಾಟಿ ನ್ಯಾಯಬೆಲೆ ಅಂಗಡಿಯ ಮುಂಭಾಗ ಹೋಗುತ್ತಿರುವಾಗ ಪೊನ್ನಂಪೇಟೆ ಕಡೆಯಿಂದ ಗೋಣಿಕೊಪ್ಪದ ಕಡೆಗೆ ಕೆಎ-09-8045 ರ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಂದ್ರ ಹಾಗೂ ಅವರ ಮಗಳು ತಂಗಳಿಗೂ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.   

 ಕರು ಕಳವು

              ದಿನಾಂಕ 02.12.2016 ರಂದು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ನಿವಾಸಿ ಉಮೇಶ ಎಂಬುವವರು ಎಂದಿನಂತೆ ತಮ್ಮ ಹಸು ಹಾಗೂ ಕರುವನ್ನು ಮನೆಯ ಹತ್ತಿರ ಮೇಯಲು ಬಿಟ್ಟಿದ್ದು ಸಂಜೆ 5 ಗಂಟೆಗೆ ಹಸು ಮಾತ್ರ ವಾಪಾಸ್ಸು ಮನೆಗೆ ಬಂದಿದ್ದು ಸುಮಾರು ಅಂದಾಜು ರೂ 15,000 ಬೆಲೆ ಬಾಳುವ ಒಂದು ಕರು ಮನೆಗೆ ಬಾರದೇ ಇದ್ದು ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಹಾಗೂ ಅವರ ಮನೆಯ ಸುತ್ತಮುತ್ತಲೂ ಹಲವು ಹಸು ಕರುಗಳು ಕಾಣೆಯಾಗಿದ್ದು ತಮ್ಮ ಕರುವನ್ನು ಸಹಾ ಯಾರೋ ಕಳವು ಮಾಡಿರಬಹುದಾಗಿ ಸಂಶಯಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವ್ಯಕ್ತಿಯ ಆತ್ಮ ಹತ್ಯೆ

               ಮರಂದೋಡ ಗ್ರಾಮದ ನಿವಾಸಿ ಬಾರಿಕೆ ಮಹೇಶ್ ಕುಮಾರ್ ಎಂಬವರ ಕಾಫಿ ತೋಟದಲ್ಲಿ ಒಂದು ವಾರದ ಹಿಂದಿನಿಂದ ಕೇರಳದ ಪಾಂಡಿಕಾಡ್ ವಾಸಿ ಅನೂಪ್ ಎಂಬಾತನು ಕೂಲಿ ಕೆಲಸ ಮಾಡಿಕೊಂಡು ಮಹೇಶ್ರವರ ಲೈನು ಮನೆಯಲ್ಲಿ ವಾಸವಿದ್ದಿರುವುದಾಗಿದೆ. ದಿನಾಂಕ 10-12-2016 ರಂದು ಬೆಳಿಗ್ಗೆ 7-00 ಗಂಟೆಗೆ ಮಹೇಶ್ ರವರು ಅನೂಪ್‌ನನ್ನು ಕರೆದಾಗ ಬಾಗಿಲನ್ನು ತೆಗೆಯದೆ ಇದ್ದು ನಂತರ ಬಾಗಿಲು ತಳ್ಳಿದಾಗ ಲೈನು ಮನೆಯ ಮೇಲ್ಚಾವಣಿಯ ಕಬ್ಬಿಣದ ರಾಡ್‌ಗೆ ಅನೂಪನು ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದ್ದು ಆತನ ಸಂಬಂಧಿಕರಿಗೆ ವಿಷಯ ತಿಳಿಸಿರುವುದಾಗಿ ನೀಡಿದ ದೂರಿನ ಮೇರೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.