Sunday, December 18, 2016

 ಬೈಕಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ಬೈಕಿಗೆ ಕಾರೊಂದು ಡಿಕ್ಕಿಯಾಗಿ ದಂಪತಿಗಳು ಗಾಯಗೊಂಡ ಘಟನೆ ಗೋಣಿಕೊಪ್ಪ ಠಾಣಾ ಸರಹದ್ದಿನ ಕಮಟೆ- ಬಾಳಾಜಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-12-2016 ರಂದು ವಿರಾಜಪೇಟೆ ತಾಲೋಕು ಪೊನ್ನಪ್ಪಸಂತೆ ಗ್ರಾಮದ ನಿವಾಸಿಗಳಾದ ಶ್ರೀಮತಿ ಮೈಮುನಾ ಮತ್ತು ಅವರ ಪತಿ ಮುಸ್ತಾಫಾ ರವರು ಮೋಟಾರ್ ಸೈಕಲ್ ನಲ್ಲಿ ಬಾಳೆಲೆ ಕಡೆಯಿಂದ ಬರುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಬಂದ ಎಂಹೆಚ್-11-ಎಕೆ-8888 ರ ಸ್ವಿಟ್ ಕಾರಿನ ಚಾಲಕ ಸದರಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮುಸ್ತಾಫಾ ರವರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿಹೊಡೆದ ಪರಿಣಾಮ ಬೈಕ್ ಸಮೇತವಾಗಿ ಬಿದ್ದ ಶ್ರೀಮತಿ ಮೈಮುನಾ ಹಾಗು ಸವಾರ ಮುಸ್ತಾಪಾರವರು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿರಾಜಪೇಟೆ ನಗರ ಠಾಣಾಧಿಕಾರಿಯಾದ ಶ್ರೀ ಜಿ.ಕೆ. ಸುಬ್ರಮಣ್ಯ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 17-12-2016 ರಂದು 22-00 ಗಂಟೆಗೆ ಸಿಬ್ಬಂದಿಯೊಂದಿಗೆ ವಿರಾಜಪೇಟೆ ಕಾವೇರಿ ಕಾಲೇಜು ಬಳಿ ವ್ಯಕ್ತಿಯೊಬ್ಬರು ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹೆಚ್ಚಿ ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಾಗದ ವಿಚಾರದಲ್ಲಿ ಜಗಳ, ಹಲ್ಲೆ:
      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುರ್ನಾಡು ಗ್ರಾಮದ ನಿವಾಸಿ ಹೆಚ್.ಆರ್. ರವಿ ಎಂಬವರು ಖರೀದಿಸಿದ ಜಾಗದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಲ್ಲಿ ದಿನಾಂಕ 17-12-2016 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಪೂಜಾ ವಿಧಿಗಳನ್ನು ಮಾಡುತ್ತಿರುವಾಗ್ಗೆ ಅದೇ ಗ್ರಾಮದ ನಿವಾಸಿಗಳಾದ ಸ್ಮಿತ, ಗ್ರೇಸಿ ಹಾಗು ನೇತ್ರ ಎಂಬವರು ಅಲ್ಲಿಗೆ ಬಂದು ಸದರಿ ಜಾಗವು ತಮಗೆ ಸೇರಬೇಕು ಎಂದು ಜಗಳ ಮಾಡಿ ಫಿರ್ಯಾದಿ ರವಿಯವರ ತಾಯಿ ನೀಲಮ್ಮನವರ ದಾರಿ ತಡೆದು ಹಲ್ಲೆ ನಡೆಸಿ, ಫಿರ್ಯಾದಿ ಹೆಚ್.ಆರ್. ರವಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ಮಹಿಳೆ ಮೇಲೆ ಹಲ್ಲೆ:

      ಮಹಿಳೆಯೊಬ್ಬರ ಮೇಲೆ ಐದು ಮಂದಿ ವಿನಾಕಾರಣ ಹಲ್ಲೆ ನಡೆಸಿದ ಘಟನೆ  ಮೂರ್ನಾಡು ಗ್ರಾಮದಲ್ಲಿ ನಡೆದಿದೆ  ಮಡಿಕೇರಿ ತಾಲೋಕು ಮುರ್ನಾಡು ಗ್ರಾಮದ ನಿವಾಸಿ ಶ್ರೀಮತಿ ನೇತ್ರ ಎಂಬವರು ದಿನಾಂಕ 17-12-2016 ರಂದು ಮುರ್ನಾಡು ಗ್ರಾಮದಲ್ಲಿರುವ ತಮಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸಲು ಜಾಗವನ್ನು ಸ್ವಚ್ಚ ಮಾಡುತ್ತಿದ್ದ ಸಮಯದಲ್ಲಿ ಮುರ್ನಾಡು ಗಾಂಧಿನಗರ ನಿವಾಸಿಗಳಾದ ರವಿ, ರಾಮ, ನೀಲಮ್ಮ, ಹೊನ್ನಮ್ಮ, ಪಾರ್ವತಿ ಮತ್ತು ಪಟ್ಟು ಎಂಬವರು ಫಿರ್ಯಾದಿಯೊಂದಿಗೆ ಜಗಳ ಮಾಡಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ:

      ವ್ಯಕ್ತಿಯೊಬ್ಬರು ಅಕ್ರಮವಾಗಿ ಮರಳನ್ನು ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 17-12-2016 ರಂದು ವ್ಯಕ್ತಿಯೊಬ್ಬರು ಪಿಕ್ ಅಪ್ ವಾಹನ ಸಂಖ್ಯೆಕೆಎ-12-ಬಿ-2389ರಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಮಾರಾಟ ಮಾಡುದ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿದ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀ ಎಸ್.ಶಿವಪ್ರಕಾಶ್ ನೇತೃತ್ವದ ತಂಡ  ಅಕ್ರಮ ಮರಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.