Wednesday, December 28, 2016

ಶಾಲಾ ವಾಹನಕ್ಕೆ ಬೈಕ್ ಡಿಕ್ಕಿ:

     ಶಾಲಾ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ವಿರಾಜಪೇಟೆ ಸಮೀಪದ ಪೊದ್ದಮಾನಿ ಎಂಬಲ್ಲಿ ನಡೆದಿದೆ. ದಿನಾಂಕ 26-12-2016 ರಂದು ಟಿ.ಆರ್. ಚಂದ್ರ ಎಂಬವರು ತಮ್ಮ ಬಾಪ್ತು ಶಾಲಾ ವಾಹನವನ್ನು ಚಾಲಾಯಿಸಿಕೊಂಡು ವಿರಾಜಪೇಟೆ ನಗರದ ಕಡೆಯಿಂದ ಹೋಗುತ್ತಿದ್ದಾಗ ಪೊದ್ದಮಾನಿ ಎಂಬಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶಾಲಾ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಬೈಕ್ ಸವಾರ ರಸ್ತೆ ಬದಿಯ ತೋಡಿನಲ್ಲಿ ಬಿದ್ದು ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಿಷನ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ:

      ಕುಟ್ಟ ಠಾಣಾ ಸರಹದ್ದಿನ ಕೆ.ಬಾಡಗ ಗ್ರಾಮದಲ್ಲಿ ವಾಸವಾಗಿರುವ ನವೀನ್ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಜೇನುಕುರುಬರ ದಾಸ ಎಂಬವರ ಪತ್ನಿ ಶ್ರೀಮತಿ ಜಾನು ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 27-12-2016 ರಂದು ಅವರ ವಾಸದ ಮನೆಯ ಬಳಿ ಇರುವ ಕೆ.ಕೆ. ಉತ್ತಪ್ಪ ಎಂಬವರಿಗೆ ಸೇರಿದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜೇನುಕುರುಬರ ದಾಸ ರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

      ಮಡಿಕೇರಿ ನಗರದ ಭಗವತಿನಗರ ನಿವಾಸಿ ಟಿ.ಜಿ. ಸಂದೇಶ ಎಂಬವರು ದಿನಾಂಕ 27-12-2016 ರಂದು ತಮ್ಮ ಬಾಪ್ತು ಕೆಎ12-ಹೆಚ್-9895 ಮೋಟಾರ್ ಸೈಕಲಿನಲ್ಲಿ ಮಡಿಕೇರಿಯಿಂದ ಶ್ರೀಮಂಗಲಕ್ಕೆ ಹೋಗಲು ಗೋಣಿಕೊಪ್ಪದ ಮಾರ್ಗವಾಗಿ ಹೋಗುತ್ತಿದ್ದಾಗ ಗೋಣಿಕೊಪ್ಪ ಕೈಕೇರಿ ಗ್ರಾಮದ ಭಗವತಿ ದೇವಸ್ಥಾನದ ಬಳಿ ತಲುಪುವಾಗ್ಗೆ ಸಮಯ 05-15 ಗಂಟೆಯಲ್ಲಿ ಕೆಎ-12-ಎನ್-4185 ರ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂದೇಶ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಸಂದೇಶ್ ರವರು ಮೋಟಾರ್ ಸೈಕಲ್ ಸಮೇತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.